ಕಲ್ಬಾಗಿ | |
---|---|
Bark of Albizia chinensis | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | A. chinensis
|
Binomial name | |
Albizia chinensis |
ಕಲ್ಬಾಗಿ ಕಾಲಕಾಲಕ್ಕೆ ಉದುರಿ ಹೋಗುವ ಎಲೆಗಳನ್ನು ಪಡೆದ ಅಗಲವಾಗಿ ಹರಡುವ ತುದಿಯುಳ್ಳ ದೊಡ್ಡ ಮರ.
ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ಆಲ್ಬಿಜಿûಯ ಚೈನೆನ್ಸಿಸ್ ಎಂಬ ಹೆಸರಿದೆ.ಹೊಟ್ಟೆ ಬಾಗೆ ಪರ್ಯಾಯನಾಮ.
ಸಾಧಾರಣವಾಗಿ ೩೦" ಎತ್ತರ ಹಾಗೂ ೮" ವ್ಯಾಸವುಳ್ಳ ಸ್ತಂಭಾಕಾರದ ಕಾಂಡವಿದೆ. ಈ ಮರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ೪,೦೦೦" ಎತ್ತರದವರೆಗೂ ಕಂಡುಬರುತ್ತದೆ. ಹಾಗೆಯೇ ಬಂಗಾಳ,ಅಸ್ಸಾಂ, ದಕ್ಷಿಣ ಭಾರತದ, ಅಂಡಮಾನ್, ನಿಕೋಬಾರ್ ದ್ವೀಪಗಳು, ಮಯನ್ಮಾರ್, ಶ್ರೀಲಂಕಗಳಲ್ಲೂ ಸಾಮಾನ್ಯವಾಗಿದೆ.
ಕಾಫಿ ಮತ್ತು ಟೀ ತೋಟಗಳಲ್ಲಿ ಇದನ್ನು ಒಂದು ಅತ್ಯುತ್ತಮ ನೆರಳಿನ ಮರವಾಗಿ ಬೆಳೆಸುತ್ತಾರೆ. ಬಹುಶಃ ಇದರ ಒಣ ಎಲೆಗಳು ಟೀ ಗಿಡಗಳಿಗೆ ಬಹಳ ಉತ್ತಮ ಗೊಬ್ಬರವೂ ಹೌದು. ಇದರ ಚೌಬೀನೆ ಇತರ ಆಲ್ಬಿಜಿûಯಗಳಂತೆಯೆ ಇದ್ದರೂ ಬಣ್ಣದಲ್ಲಿ ಹೆಚ್ಚು ಗಾಢವಾದುದೂ ಒಳ್ಳೆಯ ಹೊಳಪಿನಿಂದ ಕೂಡಿದುದೂ ಮೃದುವಾದುದೂ ಆಗಿದೆ. ಇದರ ಒಣಭಾರ ಘನ ಅಡಿಗೆ ಸು. ೨೨-೪೬ ಪೌಂ. ಆದರೆ ಇದು ಬೇಗನೆ ಕೀಟಗಳ ಆಕ್ರಮಣಕ್ಕೆ ಗುರಿಯಾಗುತ್ತದೆ. ಆದರೂ ಪೆಟ್ಟಿಗೆ, ಹಲಗೆ, ತೋಡು ದೋಣಿ, ಬಾವಿಯ ಚೌಕಟ್ಟುಗಳು, ಪೀಠೋಪಕರಣಗಳು, ಗಾಡಿಚಕ್ರ, ಮರದ ಗಂಟೆಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಬಂಗಾಳದಲ್ಲಿ ಚಹಪೆಟ್ಟೆಗೆಗಳನ್ನು ಮಾಡುವುದಕ್ಕೂ ಇದ್ದಲಿನ ತಯಾರಿಕೆಯಲ್ಲೂ ಬಳಸುತ್ತಾರೆ. ಕೆಲವೆಡೆ ಸೌದೆಯಾಗಿಯೂ ಉಪಯೋಗದಲ್ಲಿದೆ. ಕಲ್ಬಾಗಿಯ ಕಾಂಡದಿಂದ ಪಡೆಯಲಾಗುವ ಒಂದು ತರದ ಅಂಟನ್ನು ನೇಪಾಳಿಗಳು ಡ್ಯಾಘ್ನೆ ಎಂಬ ಕಾಗದಕ್ಕೆ ಹೊಳಪು ಕೊಡಲು ಉಪಯೋಗಿಸುತ್ತಾರೆ. ಇದರ ತರಗೆಲೆಗಳು, ರೆಂಬೆಗಳು ದನಕರುಗಳಿಗೆ ಆಹಾರ. ತೊಗಟೆಯ ಕಷಾಯ ಕಜ್ಜಿ ಮೊದಲಾದ ಚರ್ಮರೋಗಗಳಿಗೆ ಔಷಧಿ