ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಕಾಕಿನಾಡ, ಆಂಧ್ರ ಪ್ರದೇಶ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಗೋಧಿ ಹಿಟ್ಟು, ಸಕ್ಕರೆ, ತುಪ್ಪ |
ಪ್ರಭೇದಗಳು | ಗೊಟ್ಟಂ ಕಾಜಾ, ಮಡತ ಕಾಜಾ |
ಕಾಕಿನಾಡಾ ಕಾಜಾ 1891 ರಲ್ಲಿ ಭಾರತದ ಆಂಧ್ರಪ್ರದೇಶ ರಾಜ್ಯದ ಕಾಕಿನಾಡಾ ನಗರದಿಂದ ಹುಟ್ಟಿಕೊಂಡ ಒಂದು ಸಿಹಿ ತಿನಿಸಾಗಿದೆ. ಇದು ಖಾಜಾ ಎಂದು ಸಾಮಾನ್ಯವಾಗಿ ಪರಿಚಿತವಾಗಿರುವ ತಿನಿಸಿನಿಂದ ಭಿನ್ನವಾಗಿದೆ. ಇದು ಮುಚ್ಚಿದ ಕೊಳವೆಯನ್ನು ಹೋಲುತ್ತದೆ. ಕೊಳವೆನ್ನು ತೆಲುಗಿನಲ್ಲಿ ಗೊಟ್ಟಂ ಎಂದು ಕರೆಯಲಾಗುತ್ತದೆ. ಹಾಗಾಗಿ ಇದನ್ನು ಗೊಟ್ಟಂ ಕಾಜಾ ಎಂದು ಕರೆಯಲಾಯಿತು.[೧] ಇದು ತನ್ನದೇ ಆದ ಪಾಕವಿಧಾನವನ್ನು ಹೊಂದಿದೆ. ಇದು ಇಡೀ ದಕ್ಷಿಣ ಭಾರತದಲ್ಲಿ ಪ್ರಮುಖ ಪ್ರಸಿದ್ಧ ಸಿಹಿತಿನಿಸಾಗಿದೆ.
ಆಗಸ್ಟ್ 2018 ರ ವೇಳೆಗೆ, ಆಂಧ್ರ ಪ್ರದೇಶ ಸರ್ಕಾರವು ಈ ಸಿಹಿತಿಂಡಿಗಾಗಿ ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಲಾಗಿದೆ.[೨]
ಮೈದಾ, ಸಕ್ಕರೆ ಮತ್ತು ಖಾದ್ಯ ತೈಲಗಳು ಕಾಜಾದ ಮುಖ್ಯ ಪದಾರ್ಥಗಳಾಗಿವೆ.
ಮೊದಲಿಗೆ, ಗೋಧಿ ಹಿಟ್ಟು, ಖೋವಾ ಮತ್ತು ಎಣ್ಣೆಯಿಂದ ಪೇಸ್ಟ್ ಅನ್ನು ಮಾಡಿಕೊಳ್ಳಲಾಗುತ್ತದೆ. ನಂತರ ಅದನ್ನು ಗರಿಗರಿಯಾಗುವವರೆಗೆ ಕರಿಯಲಾಗುತ್ತದೆ. ಸಕ್ಕರೆ ಪಾಕವನ್ನು ತಯಾರಿಸಲಾಗುತ್ತದೆ. ನಂತರ ಪಾಕವನ್ನು ಹೀರಿಕೊಳ್ಳುವವರೆಗೆ ಗರಿಗರಿಯಾದ ಪೇಸ್ಟ್ರಿಗಳನ್ನು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ.
ಕಾಜಾಗಳ ಎರಡು ಸುಪ್ರಸಿದ್ಧ ವಿಧಗಳೆಂದರೆ ಮಡತ ಕಾಜಾ ಮತ್ತು ಗೊಟ್ಟಂ ಕಾಜಾ. ಮಡತ ಕಾಜಾಗಳನ್ನು ಪೇಸ್ಟ್ರಿಯ ಸುತ್ತಲ್ಪಟ್ಟ ಪಟ್ಟಿಗಳಿಂದ ತಯಾರಿಸಲಾಗುತ್ತದೆ, ಆದರೆ ಗೊಟ್ಟಮ್ ಕಾಜಾಗಳನ್ನು ಪೇಸ್ಟ್ರಿಯ ಉರುಳೆಗಳಿಂದ ತಯಾರಿಸಲಾಗುತ್ತದೆ. ಗೊಟ್ಟಮ್ ಕಾಜಾಗಳು ಹೊರಭಾಗದಲ್ಲಿ ಒಣಗಿದ್ದು ಒಳಭಾಗದಲ್ಲಿ ರಸಭರಿತವಾಗಿರುತ್ತವೆ ಮತ್ತು ಸಕ್ಕರೆ ಪಾಕದಿಂದ ತುಂಬಿರುತ್ತವೆ. ಬಾಯಿಗೆ ಹಾಕಿಕೊಂಡ ಕೂಡಲೇ ಕರಗುತ್ತವೆ. ಮತ್ತೊಂದೆಡೆ, ಮಡತ ಕಾಜಾಗಳು ಎಲ್ಲ ಕಡೆ ಒಂದೇ ವಿನ್ಯಾಸವನ್ನು ಹೊಂದಿರುತ್ತವೆ ಮತ್ತು ಕೆಲವು ಗಂಟೆಗಳಿಗಿಂತ ಹೆಚ್ಚು ಕಾಲ ಇರಿಸಿದರೆ ಬಹುತೇಕ ಒಣಗುತ್ತವೆ.