ಕಾಕ್ಲೋಸ್ಪರ್ಮಮ್ ಫ್ರೇಸೆರಿ ಎಂಬುದು ಬಿಕ್ಸೇಸಿ ಕುಟುಂಬಕ್ಕೆ ಸೇರಿದ ಒಂದು ಮರವಾಗಿದ್ದು, ಹತ್ತಿ ಮರ, ಕಪೋಕ್ ಪೊದೆ ಮತ್ತು ಕಪೋಕ್ ಮರ ಎಂಬ ಸಾಮಾನ್ಯ ಹೆಸರುಗಳನ್ನು ಹೊಂದಿದೆ. ಇದು ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಿಂದ ಉತ್ತರ ಪ್ರದೇಶದ ಉತ್ತರ ಭಾಗಗಳವರೆಗೆ ಹಾಗೂ ವಾಯುವ್ಯ ಆಸ್ಟ್ರೇಲಿಯಾಕ್ಕೆ ಸ್ಥಳೀಯವಾಗಿದೆ.
ಕೋಕ್ಲೋಸ್ಪರ್ಮಮ್ ಫ್ರೇಸೆರಿಯು ಎಲೆಯುದುರುವ ಪೊದೆ ಅಥವಾ ಸಣ್ಣ ಮರವಾಗಿದ್ದು, ೭ ಮೀ ಎತ್ತರಕ್ಕೆ ಬೆಳೆಯುತ್ತದೆ. ಇದು ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ಹೂಬಿಡುತ್ತದೆ. ಇದರ ಹೂಬಿಡುವಿಕೆಯು ಟರ್ಮಿನಲ್ ಪಾನಿಕಲ್[೧] ಆಗಿರುತ್ತದೆ. ಇದರ ಹೂವುಗಳು ಅಸಮಾನವಾಗಿರುತ್ತವೆ ಮತ್ತು ಎರಡು ಸುರುಳಿಗಳಲ್ಲಿ ಐದು ಸೆಪಲ್‌ಗಳನ್ನು ಹೊಂದಿರುತ್ತವೆ.[೨] ಹೊರಗಿನ ಎರಡು ಸೆಪಲ್‌ಗಳು ಒಳಗಿನ ಮೂರು ಸೆಪಲ್‌ಗಳಿಗಿಂತ ಚಿಕ್ಕದಾಗಿರುತ್ತವೆ ಮತ್ತು ಇದು ಹಲವಾರು ಕೇಸರಗಳನ್ನು ಹೊಂದಿರುತ್ತದೆ. ಸಸ್ಯಕ್ಕೆ ಎಲೆಗಳಿಲ್ಲದಿದ್ದಾಗ ಹೂವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದು ಜೂನ್‌ನಿಂದ ಮಾರ್ಚ್‌ವರೆಗೆ ಹಣ್ಣುಗಳನ್ನು ನೀಡುತ್ತದೆ. ಇದರ ಹಣ್ಣು ೩ ರಿಂದ ೫ ಕವಾಟಗಳನ್ನು ಹೊಂದಿರುವ ಮರದ ಕ್ಯಾಪ್ಸೂಲ್ ಆಗಿದೆ. ಬೀಜಗಳು ಮೃದುವಾದ, "ಹತ್ತಿ" ದಾರಗಳಿಂದ ಸುತ್ತುವರೆದಿವೆ. ಇದು ಕಪೋಕ್ ಮರ ಎಂಬ ಸಾಮಾನ್ಯ ಹೆಸರಿಗೆ ಕಾರಣವಾಗುತ್ತದೆ. [೩]
ಫ್ರೆಂಚ್‌ನ ಸಸ್ಯಶಾಸ್ತ್ರಜ್ಞರಾದ ಜೂಲ್ಸ್ ಎಮಿಲ್ ಪ್ಲಾನ್ಚಾನ್ ಅವರು ೧೮೪೭ ರಲ್ಲಿ, ಆಸ್ಟ್ರೇಲಿಯಾದ ಉತ್ತರ ಕರಾವಳಿಯ ಮೆಲ್ವಿಲ್ಲೆ ದ್ವೀಪದಿಂದ ಈ ಜಾತಿ ಮರವನ್ನು ವಿವರಿಸಿದ್ದಾರೆ.[೪] ಎರಡು ಉಪಜಾತಿಗಳನ್ನು ಗುರುತಿಸಲಾಗಿದೆ: ಮುಖ್ಯವಾಗಿ ಕ್ಯಾಥರೀನ್‌ನಿಂದ ಮೆಲ್ವಿಲ್ಲೆ ದ್ವೀಪದವರೆಗೆ ಕಂಡುಬರುವ ಉಪಜಾತಿ ಫ್ರೇಸೆರಿ, ನಯವಾದ ಎಲೆಗಳು ಮತ್ತು ೨ ಮಿಮೀ ಉದ್ದದ ತೊಟ್ಟೆಲೆಗಳನ್ನು ಹೊಂದಿದೆ ಮತ್ತು ಕ್ಯಾಥರೀನ್ ಪಶ್ಚಿಮದಿಂದ ಆರ್ಡ್ ನದಿಯವರೆಗೆ ಉಪಜಾತಿಯ ಹೆಟೆರೊನೆಮಮ್, ನುಣುಪಾದ ಎಲೆಗಳು ಮತ್ತು ೪೦-೫೮ ಮಿಮೀ. ಉದ್ದದ ತೊಟ್ಟೆಲೆಗಳನ್ನು ಹೊಂದಿದೆ.[೫]
ಇದು ಮಧ್ಯ ಕಿಂಬರ್ಲಿ, ಡಾಂಪಿಯರ್ಲ್ಯಾಂಡ್, ಗಲ್ಫ್ ಫಾಲ್ ಮತ್ತು ಅಪ್ಲ್ಯಾಂಡ್ಸ್, ಉತ್ತರ ಕಿಂಬರ್ಲಿ, ಆರ್ಡ್ ವಿಕ್ಟೋರಿಯಾ ಮೈದಾನ, ಪೈನ್ ಕ್ರೀಕ್, ಉತ್ತರ ಪ್ರಾಂತ್ಯದ ವಿಕ್ಟೋರಿಯಾ ಬೊನಪಾರ್ಟೆ ಹಾಗೂ ಪಶ್ಚಿಮ ಆಸ್ಟ್ರೇಲಿಯಾದ ವಿಕ್ಟೋರಿಯಾ ಬೋನಪಾರ್ಟೆಯ ಜೈವಿಕ ಪ್ರದೇಶಗಳಲ್ಲಿ ಕಂಡುಬರುತ್ತದೆ.[೬]
ಕೋಕ್ಲೋಸ್ಪರ್ಮಮ್ ಫ್ರೇಸೆರಿಯು ತೆರೆದ ನೀಲಗಿರಿ ಕಾಡುಗಳಲ್ಲಿ ಮರಳು, ಜಲ್ಲಿಕಲ್ಲು ಮಣ್ಣು ಮತ್ತು ಭಾರವಾದ ಜೇಡಿಮಣ್ಣು ಸೇರಿದಂತೆ ವಿವಿಧ ಮಣ್ಣಿನಲ್ಲಿ ಬೆಳೆಯುತ್ತದೆ. [೭]
ಉತ್ತರ ಆಸ್ಟ್ರೇಲಿಯಾದ ಸ್ಥಳೀಯ ಜನರು ಹಸಿ ಅಥವಾ ಬೇಯಿಸಿದ ಹೂವುಗಳನ್ನು ಮತ್ತು ಎಳೆಯ ಸಸ್ಯಗಳ ಬೇರುಗಳನ್ನು ತಿನ್ನುತ್ತಿದ್ದರು. ಅವರು ಬೀಜಗಳಿಂದ ಬರುವ ಫ್ಲಫ್ ಅನ್ನು ದೇಹದ ಅಲಂಕಾರವಾಗಿಯೂ ಬಳಸುತ್ತಿದ್ದರು. [೮]
ಈ ಸಸ್ಯವು ಜವೊಯಿನ್ ಜನರ "ಕ್ಯಾಲೆಂಡರ್" ಸಸ್ಯವಾಗಿದೆ: ಸಿಹಿನೀರಿನ ಮೊಸಳೆಗಳು ಮೊಟ್ಟೆಗಳನ್ನು ಇಡುವಾಗ ಹೂಬಿಡುವಿಕೆಯು ಅವುಗಳನ್ನು ಸಂಗ್ರಹಿಸುವ ಸಮಯವನ್ನು ಸೂಚಿಸುತ್ತದೆ. [೯]
{{cite book}}
: CS1 maint: bot: original URL status unknown (link)