ಕಿರಾಲುಬೋಗಿ | |
---|---|
Conservation status | |
ಕಿರಾಲುಬೋಗಿ
| |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | H. parviflora
|
Binomial name | |
ಹೋಪಿಯ ಪರ್ವಿಫ್ಲೋರ(ಕಿರಾಲು ಬೋಗಿ) |
ಕಿರಾಲುಬೋಗಿ (Hopea Parviflora)ಬೃಹತ್ ಪ್ರಮಾಣದ ಅಂದವಾದ ನಿತ್ಯಹರಿದ್ವರ್ಣ ಮರ.ಇದು ವಿಶ್ವದಲ್ಲಿ ವಿನಾಶದ ಅಂಚಿನಲ್ಲಿರುವ ಮರವೆಂದು ಪರಿಗಣಿತವಾಗಿದೆ.ಕರ್ನಾಟಕದಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಇದು ಡಿಪ್ಟೆರೊಕಾರ್ಪಸಿಯೆ(Dipterocarpaceae)ಕುಟುಂಬದಲ್ಲಿದೆ.ಹೋಪಿಯ ಪರ್ವಿಫ್ಲೋರ (Hopea parviflora) ಇದರ ಸಸ್ಯಶಾಸ್ಟ್ರೀಯ ಹೆಸರು. ಕನ್ನಡದಲ್ಲಿ ಕರ್ಮರ,ಬೋವು ಎಂದೂ ಕರೆಯುತ್ತಾರೆ.ತುಳುವಿನಲ್ಲಿ ಕಿರಾಲ್ ಬೋಗಿ ಅಥವಾ ಚಿರ್ಪು (/ ಉರಿಪ್ಪು) ಎಂದು ಕರೆಯುತ್ತಾರೆ.
ಸುಮಾರು ೩೬ ಮೀಟರ್ ಗಳಿಗಿಂತಲೂ ಹೆಚ್ಚು ಎತ್ತರ ಬೆಳೆದು,ನೇರ ಕಾಂಡವೇ ೨೦ ಮೀ.ಗಳಿಗಿಂತಲೂ ಎತ್ತರವಿರುತ್ತದೆ.ಉಜ್ವಲ ಹಸಿರು ಬಣ್ಣದ ಎಲೆಗಳೊಂದಿಗೆ ರಥಅಕಾರದಲ್ಲಿ ಸುಂದರವಾಗಿ ಬೆಳೆಯುವುದು.ದಾರುವು ನಸುಹಳದಿ ಬಣ್ಣವಿದ್ದು,ಗಡುಸಾಗಿರುತ್ತದೆ.ಗೆದ್ದಲು ಹಿಡಿಯುವುದು ಕಡಿಮೆ.ಬಹುಕಾಲ ಬಾಳಿಕೆ ಬರುತ್ತದೆ.ಕಾಂಡದಲ್ಲಿ ಅಂಟು ದೊರೆಯುತ್ತದೆ.ಮರದ ಬೊಡ್ಡೆಯ ಸುತ್ತಳತೆ ಸುಮಾರು 18' ಇರುವುದುಂಟು. ಬರಿಯ ಬೊಡ್ಡೆಯೇ 50'-60' ಎತ್ತರ ಇರುತ್ತದೆ. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಯಾಗಿವೆ. ಹೂಗಳು ಚಿಕ್ಕವು; ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ; ಇವುಗಳ ಬಣ್ಣ ನಸುಹಳದಿ. ಹೂಗಳಿಗೆ ಕೊಂಚ ಸುವಾಸನೆಯೂ ಇದೆ. ಹೂಬಿಡುವ ಕಾಲ ಜನವರಿ-ಫೆಬ್ರವರಿ ತಿಂಗಳುಗಳು. ಫಲ ಒಂದೇ ಬೀಜವುಳ್ಳ ನಟ್ ಮಾದರಿಯದು. ಇದಕ್ಕೆ ಎರಡು ರೆಕ್ಕೆಗಳಿವೆ. ಗಾಳಿಯಿಂದಾಗುವ ಫಲಪ್ರಾಸಾರಕ್ಕೆ ಇವು ಸಹಾಯಕ. ಕಿರಲುಬೋಗಿಯ ಚೌಬೀನೆ ಮಾಸಲು, ಬೂದು ಮಿಶ್ರ ಕಂದುಬಣ್ಣದ್ದು; ಸಾಧಾರಣಮಟ್ಟಿಗೆ ಹದಗೊಳ್ಳತ್ತದೆ; ಗಡುಸಾಗಿದ್ದು ಬಾಳಿಕೆ ಬರುವುದು. ಆದರೆ ಕೊಯ್ತುಕ್ಕೆ ಸ್ವಲ್ಪ ಕಷ್ಟ. ಹಸಿಮರವನ್ನು ಕೊಯ್ದು ನೆರಳಿನಲ್ಲಿ ಆರಲು ಇಡಬೇಕು.
ಗೃಹ ನಿರ್ಮಾಣಕ್ಕೆ,ದೋಣಿ ಕಟ್ಟಲು,ದೇವಸ್ಥಾನ-ಮಂದಿರಗಳ ನಿರ್ಮಾಣಕ್ಕೆ ವಿಷೇಶವಾಗಿ ಬಳಸಲ್ಪಡುವುದು. ಈ ಮರಕ್ಕೆ ಗೆದ್ದಲು ಹತ್ತುವುದಿಲ್ಲವಾದ್ದರಿಂದ ದೋಣಿಗಳಿಗೆ, ರೈಲ್ವೆ ಸ್ಲೀಪರುಗಳಿಗೆ ಹೆಚ್ಚಾಗಿ ಬಳಸುವರು. ಇದರ ಮರ ಚೆನ್ನಾಗಿ ಮೆರಗು ತೆಗೆದುಕೊಳ್ಳಬಲ್ಲುದಾದರೂ ಹತ್ತರಿ ಹಿಡಿದು ನಯಮಾಡುವುದು ಕಷ್ಟ. ಮನೆಕಟ್ಟಲು ಇದನ್ನು ತೊಲೆ, ಸರ, ಕಂಬ ಇತ್ಯಾದಿಗಳಿಗೆ ಬಳಸುವರು. ಅಂಗಡಿಮುಂಗಟ್ಟುಗಳಿಗೂ ಪೆಟ್ಟಿಗೆ, ಬೀರು, ಬ್ರಷ್ಷುಗಳ ಹಿಡಿ ಮುಂತಾದವುಗಳಿಗೂ ಉಪಯೋಗಿಸುವುದುಂಟು. ಕೆಲಸಕ್ಕಾಗದ ಭಾಗಗಳನ್ನು ಒಳ್ಳೆಸೌದೆಯಾಗಿ ಬಳಸುತ್ತಾರೆ.
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ