ಕಿರಿಕ್ ಪಾರ್ಟಿ | |
---|---|
ನಿರ್ದೇಶನ | ರಿಶಬ್ ಶೆಟ್ಟಿ |
ನಿರ್ಮಾಪಕ | ಜಿ.ಎಸ್. ಗುಪ್ತಾ ರಕ್ಷಿತ್ ಶೆಟ್ಟಿ |
ಲೇಖಕ | The Seven Odds,ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ, ಅಭಿಜಿತ್ ಮಹೇಶ್, ಧನಂಜಯ್ ರಾಜನ್, ಚಂದ್ರಜಿತ್ ಪಿ.ಬಿ.
|
ಪಾತ್ರವರ್ಗ | ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಅರವಿಂದ್ ಐಯ್ಯರ್, ಧನಂಜಯ್ ರಂಜನ್, ಪ್ರಮೋದ್ ಶೆಟ್ಟಿ (ನಟ), ಅಚ್ಯುತ್ ಕುಮಾರ್
|
ಸಂಗೀತ | ಬಿ.ಅಜನೀಶ್ ಲೋಕನಾಥ್ |
ಛಾಯಾಗ್ರಹಣ | ಕರಮ್ ಚವ್ಲಾ |
ಸಂಕಲನ | ಸಚಿನ್ |
ಸ್ಟುಡಿಯೋ | ಪರಮವಾಹ ಸ್ಟುಡಿಯೋಸ್ |
ವಿತರಕರು | ಜಯಣ್ಣಾ ಫಿಲ್ಮ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | ೧೬೫ ನಿಮಿಷಗಳು[೧] |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹4 ಕೋಟಿ[೨] |
ಬಾಕ್ಸ್ ಆಫೀಸ್ | ₹50 ಕೋಟಿ[೩][೪] |
ಕಿರಿಕ್ ಪಾರ್ಟಿ ೨೦೧೬ರಲ್ಲಿ ಬಿಡುಗಡೆಯಾದ ಕಾಲೇಜು ಕ್ಯಾಂಪಸ್ ಪ್ರಣಯ, ಹಾಸ್ಯ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ರಿಶಬ್ ಶೆಟ್ಟಿ ನಿರ್ದೇಶಿಸಿದ್ದಾರೆ ಮತ್ತು ಜಿ.ಎಸ್. ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಅರವಿಂದ್ ಐಯ್ಯರ್, ಧನಂಜಯ್ ರಂಜನ್ ಮತ್ತು ಪ್ರಮೋದ್ ಶೆಟ್ಟಿಯವರ ಪ್ರಮುಖ ತಾರಾಂಗಣವಿದೆ. ರಕ್ಷಿತ್ ಶೆಟ್ಟಿ ಸೇರಿ ದಿ ಸೆವೆನ್ ಓಡ್ಸ್ ತಂಡ ಈ ಚಿತ್ರ ಕಥೆಯನ್ನು ರಚಿಸಿದ್ದಾರೆ.[೫] ಈ ಚಲನಚಿತ್ರ ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.
ಈ ಚಿತ್ರವು ರಿಶಬ್ ಶೆಟ್ಟಿ ರಿಕ್ಕಿ ಚಿತ್ರದ ನಂತರ ನಿರ್ದೇಶಿಸಿದ ಎರಡನೇಯ ಚಲನಚಿತ್ರ. ಈ ಚಿತ್ರಕ್ಕೆ ಸಂಗೀತ ನೀಡಿದವರು ಬಿ.ಅಜನೀಶ್ ಲೋಕನಾಥ್, ಕಲಾ ನಿರ್ದೇಶನ ವರದರಾಜ್ ಕಾಮತ್, ಸಾಹಸ ನಿರ್ದೇಶನ ರವಿ ವರ್ಮಾ. ಚಿತ್ರದ ಛಾಯಾಗ್ರಹಣವನ್ನು ೨೧ ಎಪ್ರಿಲ್ ೨೦೧೬ ರಂದು, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನದಲ್ಲಿ ಪ್ರಾರಂಭಿಸಲಾಯಿತು. ಕಿರಿಕ್ ಪಾರ್ಟಿ ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ. ಈ ಚಿತ್ರವು ೧೫ ಚಿತ್ರಮಂದಿರಗಳಲ್ಲಿ ೧೫೦ ದಿನ ಫುಲ್ಲ್ ಹೌಜ್ ಪ್ರದರ್ಶನ ಕಂಡು ೩೬೫ ದಿನಗಳ ಪ್ರದರ್ಶನವಾಗಿದೆ.
ಕಿರಿಕ್ ಪಾರ್ಟಿ ತುಂಟ ವಿದ್ಯಾಥಿಗಳ ಕಥೆಯಾಗಿದೆ. ನಾಯಕ ಕರ್ಣ(ರಕ್ಷಿತ್ ಶೆಟ್ಟಿ), ಈ ಗುಂಪಿನಲ್ಲಿನವರು ಇತ್ತೀಚಿಗಷ್ಟೇ ಕಾಲೇಜಿಗೆ ಸೇರಿದ್ದಾರೆ. ಕಾಲೇಜು ಜೀವನದಲ್ಲಿ ಆಗುವ ಹಾಸ್ಯಮಯ ಘಟನೆಯನ್ನು ಇಲ್ಲಿ ಚಿತ್ರಿಸಲಾಗಿದೆ. ಕರ್ಣ ನಾಯಕನಾಗಿ ತನ್ನ ಗುಂಪಿನವರಾದ ಮಂಜು, ಲೋಕಿ, ಅಲೆಕ್ಸಾಂಡರ್ ಮಾಡುವ ತುಂಟಾಟವನ್ನು ತೋರಿಸಲಾಗಿದೆ. ಪ್ರಥಮ ವರ್ಷದಲ್ಲಿ, ತೃತೀಯ ವರ್ಷದ ಹುಡುಗಿ ಸಾನ್ವಿ ಮೇಲೆ ಮೋಹ ಚಿಗುರುತ್ತದೆ. ದ್ವಿತೀಯ ಅರ್ಧದಲ್ಲಿ ಆರ್ಯಾ, ಪ್ರಥಮ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕರ್ಣನ ಮೇಲೆ ಪ್ರೀತಿ ಚಿಗುರುತ್ತದೆ. ಅಂತ್ಯದಲ್ಲಿ ಇಬ್ಬರೂ ಇಬ್ಬರನ್ನು ಪ್ರೀತಿಸುತ್ತಾರೆ. ತುಂಟತನ ಮಾಡುತ್ತಾ ತನ್ನ ಜವಾಬ್ದಾರಿಯನ್ನು ಕಲಿಯುವ ತುಂಟ ಹುಡುಗರ ಕಾಲೇಜು ಜೀವನ ಈ ಚಿತ್ರದಲ್ಲಿ ತೋರಿಸಲಾಗಿದೆ.