Killing Veerappan | |
---|---|
ಚಿತ್ರ:Killing Veerappan Shooting Started Poster 2015.jpg | |
ನಿರ್ದೇಶನ | ರಾಮ್ ಗೋಪಾಲ ವರ್ಮ |
ನಿರ್ಮಾಪಕ | ಬಿ ವಿ ಮಂಜುನಾಥ್ ಬಿ ಎಸ್ ಸುಧೀಂದ್ರ |
ಲೇಖಕ | ರಾಮ್ ಗೋಪಾಲ್ ವರ್ಮ |
ಚಿತ್ರಕಥೆ | ರಾಮ್ ಗೋಪಾಲ್ ವರ್ಮ |
ಕಥೆ | ರಾಮ್ ಗೋಪಾಲ್ ವರ್ಮ |
ಆಧಾರ | Operation Cocoon |
ಪಾತ್ರವರ್ಗ |
|
ಸಂಗೀತ | ರವಿ ಶಂಕರ್ |
ಛಾಯಾಗ್ರಹಣ | ರಾಮ್ಮಿ |
ಸಂಕಲನ | ಅನ್ವರ್ ಅಲಿ |
ಸ್ಟುಡಿಯೋ | ZED3 Pictures |
ವಿತರಕರು | G. R. Pictures |
ಬಿಡುಗಡೆಯಾಗಿದ್ದು |
|
ಅವಧಿ | ೧೫೧ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | est. ₹೨೦ ಕೋಟಿ (ಯುಎಸ್$೪.೪೪ ದಶಲಕ್ಷ)10 days[೧] |
ಕಿಲ್ಲಿಂಗ್ ವೀರಪ್ಪನ್ ರಾಮ್ ಗೋಪಾಲ ವರ್ಮ ಬರೆದು ನಿರ್ದೇಶಿಸಿದ ೨೦೧೬ ರ ಭಾರತದ ಕನ್ನಡ ಭಾಷೆಯ ಸಾಕ್ಷ್ಯಚಿತ್ರರೂಪಕದ ಚಲನಚಿತ್ರವಾಗಿದೆ. ಈ ಚಿತ್ರವು ಕಾಡುಗಳ್ಳ ವೀರಪ್ಪನ್ ನನ್ನು ಹಿಡಿಯಲು ಅಥವ ಕೊಲ್ಲಲು ನಡೆಸಿದ ಆಪರೇಷನ್ ಕೊಕೂನ್ನ ಸಮಯದಲ್ಲಿ ನಡೆದ ಘಟನೆಗಳ ಆಧಾರಿತವಾಗಿದೆ. ಪ್ರಧಾನ ಪಾತ್ರವೊಂದರಲ್ಲಿ ಶಿವರಾಜ್‍ಕುಮಾರ್ (ನಟ) ನಟಿಸಿದ್ದಾರೆ, ಈ ಪಾತ್ರವು ಆಗಿನ ಪೊಲೀಸ್ ಅಧೀಕ್ಷಕ ಆಪರೇಷನ್ ಕೊಕೂನ್ನ ರೂವಾರಿ ಎನ ಕೆ ಸೆಂತಮಾರೈ ಕಣ್ಣನ್ರಿಂದ ಪ್ರೆರಿತವಾಗಿದೆ.
ಜನವರಿ ೧, ೨೦೧೬ ರಂದು ಈ ಚಿತ್ರದ ಕನ್ನಡ ಆವೃತ್ತಿಯು ೨೦೦ರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಾಂತ ಬಿಡುಗಡೆಯಾಯಿತು.ಚಿತ್ರದ ಬಿಡುಗಡೆಯ ನಂತರ ವಿಮರ್ಶಕರು ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಚಿತ್ರಕಥೆ, ನಟನೆಯನ್ನು ಶ್ಲಾಘಿಸಿದರು.ತೆಲುಗು ಆವೃತ್ತಿ ೭ ಜನವರಿ ೨೦೧೬ ರಂದು ಬಿಡುಗಡೆಯಾಯಿತು