ಕೀರ್ತನೆ

ಕೀರ್ತನೆ ಭಾರತದ ಭಕ್ತಿ ಸಂಪ್ರದಾಯಗಳಲ್ಲಿ ನಡೆಸಲಾಗುವ ಒಂದು ಕರೆ ಮತ್ತು ಪ್ರತಿಕ್ರಿಯೆ ಪಠಣ. ಕೀರ್ತನೆ ನಡೆಸುವ ವ್ಯಕ್ತಿಯನ್ನು ಕೀರ್ತನಕಾರನೆಂದು ಕರೆಯಲಾಗುತ್ತದೆ. ಕೀರ್ತನೆಯ ಆಚರಣೆಯು ಹಾರ್ಮೋನಿಯಂ, ತಬಲಾ, ಮೃದಂಗ, ಕರತಾಳಗಳಂತಹ ವಾದ್ಯಗಳು ಜೊತೆಗೂಡಿರುವ ಶ್ಲೋಕಗಳು ಅಥವಾ ಮಂತ್ರಗಳ ಪಠಣವನ್ನು ಒಳಗೊಳ್ಳುತ್ತದೆ.