ಕುಂಭಾಶಿ (ಆನೆಗುಡ್ಡೆ) ಭಾರತದ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ.[೧] ಇದು ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುವ ಮಾರ್ಗದಲ್ಲಿದೆ.
ಕುಂಭಾಶಿಯಲ್ಲಿರುವ ಶ್ರೀ ಮಹಾ ಗಣಪತಿಯು ಉಡುಪಿ ಜಿಲ್ಲೆಯ ಅತ್ಯಂತ ಪ್ರಸಿದ್ಧವಾದ ಗಣೇಶನ ದೇವಾಲಯಗಳಲ್ಲಿ ಒಂದಾಗಿದೆ. ಕರಾವಳಿ ಕರ್ನಾಟಕದ ಏಳು "ಮುಕ್ತಿ ಸ್ಥಳ"ಗಳಲ್ಲಿ ( ಪರಶುರಾಮ ಕ್ಷೇತ್ರ) ಕುಂಭಾಶಿಯೂ ಒಂದಾಗಿದೆ. [೨]