ಕುಮಾರಸಂಭವಮ್

ಕುಮಾರಸಂಭವಮ್ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಮಹಾಕಾವ್ಯ. ೧೭ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯವು ಕಾರ್ತಿಕೇಯನ ಜನ್ಮವೃತ್ತಾಂತವನ್ನೂ, ತಾರಕಾಸುರ ವಧೆಯನ್ನೂ ವರ್ಣಿಸುತ್ತದೆ. ಎಂಟು ಸರ್ಗಗಳನ್ನು ಕಾಳಿದಾಸನು ಬರೆದಿರುವನೆಂದೂ, ಒಂಭತ್ತನೆಯದು ಆನಂತರದ ಕಾಲದಲ್ಲಿ ಸೇರ್ಪಡೆಯಾಗಿರಬಹುದೆಂದೂ ಹೇಳುತ್ತಾರೆ.