ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ (ಕನ್ನಡ:ಕೃಷ್ಣಸ್ವಾಮಿ ಕಸ್ತೂರಿರಂಗನ್) ಅವರು ಕರ್ನಾಟಕದ ಬೆಂಗಳೂರಿನಲ್ಲಿ ನೆಲಸಿರುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು ೨೦೦೩ ರವರೆಗೆ ೯ ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ (ರಾಜ್ಯ ಸಭೆ,೨೦೦೩-೨೦೦೯ಯ) ಸದಸ್ಯರಾಗಿದ್ದರು. ಇವರು ಇದೀಗ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ[೧][೨].ಹಾಗೆಯೇ ಇವರು ಏಪ್ರಿಲ್ ೨೦೦೪ ರಿಂದ ಬೆಂಗಳೂರಿನಲ್ಲಿರುವ ಸುಧಾರಿತ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ. ಇವರು ಭಾರತ ಸರ್ಕಾರದಿಂದ ಮೂರು ನಾಗರಿಕ ಪ್ರಶಸ್ತಿಯ ಸ್ವೀಕೃತರಾಗಿದ್ದಾರೆ: ಪದ್ಮಶ್ರೀ (೧೯೮೨), ಪದ್ಮಭೂಷಣ (೧೯೯೨) ಮತ್ತು ಪದ್ಮ ವಿಭೂಷಣ (೨೦೦೦).
ಡಾ. ಕಸ್ತೂರಿರಂಗನ್ ಅವರು ೨೦೦೩ ರ ಆಗಸ್ಟ್ ೨೭ ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ ೯ ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-೨) ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (ಐಆರ್ಎಸ್-೧ಎ ಮತ್ತು ೧ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು.
ಇವರ ನಾಯಕತ್ವದಲ್ಲಿ, ಭಾರತದ ಹೆಸರಾಂತ ಉಡಾವಣಾ ವಾಹನಗಳಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ ಉಡಾವಣೆ ಮತ್ತು ಕಾರ್ಯನಿರ್ವಹಣೆಯನ್ನು ಒಳಗೊಂಡು ಹಲವು ಪ್ರಮುಖ ಸಾಧನೆಗಳನ್ನು ಕೈಗೊಳ್ಳಲಾಗಿದೆ. ಜಿಎಸ್ಎಲ್‌ವಿ, ಜಿಎಸ್ಎಲ್‌ವಿಎಂಕೆ-III ಯ ಸುಧಾರಿತ ಆವೃತ್ತಿಯ ಮತ್ತು ಅದರ ಸಂಪೂರ್ಣ ವಿನ್ಯಾಸಗಳ ವ್ಯಾಖ್ಯಾನಗಳ ಅಧ್ಯಯನಗಳು ಸಹ ಪೂರ್ಣಗೊಳಿಸಲಾಯಿತು. ಹೆಚ್ಚಿನದಾಗಿ, ಅವರು ವಿಶ್ವದ ಅತ್ಯನ್ನತ ನಾಗರಿಕ ದೂರ ಗ್ರಾಹಿ ಉಪಗ್ರಹಗಳಾದ ಐಆರ್ಎಸ್ -೧ಸಿ ಮತ್ತು ೧ಡಿ ಗಳ ಅಭಿವೃದ್ಧಿ ಮತ್ತು ಉಡಾವಣೆಯ ಮೇಲ್ವಿಚಾರಣೆ ವಹಿಸಿದ್ದಲ್ಲದೇ, ಹೊಸ ಯುಗದ ಇನ್ಸಾಟ್ ಸಂವಹನ ಉಪಗ್ರಹಗಳು ಜೊತೆಗೆ ಸಾಗರ ವೀಕ್ಷಣೆ ಉಪಗ್ರಹಗಳಾದ ಐಆರ್ಎಸ್ -ಪಿ೩/ಪಿ೪ ರ ಸಫಲವಾಗಿಸುವಿಕೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ಅವರು ಚಂದ್ರಾಯಣ-Iರ ಅರ್ಥನಿರೂಪಣೆಗೆ ಕಾರಣವಾದ ವಿಸ್ತ್ರೃತ ಅಧ್ಯಯನಗಳ ಮೂಲಕ ಭಾರತವು ಗ್ರಹಗಳ ಅನ್ವೇಷಣೆಯ ಯುಗಕ್ಕೆ ಪ್ರವೇಶಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪ್ರಯತ್ನಗಳು ಭಾರತವನ್ನು ಉತ್ಕೃಷ್ಟ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯ ರಾಷ್ಟ್ರವಾಗಿ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಕೇವಲ ೬ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತು. ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಆಸಕ್ತಿಯಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಮತ್ತು ಆಪ್ಟಿಕಲ್ ಖಗೋಳ ವಿಜ್ಞಾನದಲ್ಲಿನ ಸಂಶೋಧನೆಯೂ ಒಳಗೊಂಡಿದೆ. ಭಾರತದ ಹೆಚ್ಚು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಆಧಾರಿತ ಅಧಿಕ ಸಾಮರ್ಥ್ಯದ ಖಗೋಳ ವಿಜ್ಞಾನ ವೀಕ್ಷಕ ಮತ್ತು ಸಂಬಂಧಿತ ಚಟುವಟಿಕೆಗಳ ಪ್ರಾರಂಭಿಸುವಿಕೆಯು ಕೂಡ ಅವರ ನಾಯಕತ್ವದಲ್ಲಿ ಪ್ರಮುಖ ಸಾಧನೆಗಳಾಗಿವೆ. ಅವರು ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕೆಳಮಟ್ಟದ ವಾತಾವರಣದಲ್ಲಿ ಕಾಸ್ಮಿಕ್ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳಲ್ಲಿ ವಿಸ್ತ್ರೃತ ಮತ್ತು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.
ಡಾ. ಕಸ್ತೂರಿರಂಗನ್ ಅವರು ವಿಜ್ಞಾನದಲ್ಲಿ ವಿಶೇಷ ಪದವಿಯನ್ನು ಪಡೆದರು ಮತ್ತು ಬಾಂಬೆವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದರು. ಇವರು ಫಿಸಿಕಲ್ ರಿಸರ್ಜ್ ಲ್ಯಾಬೋರೇಟರಿ ಅಹಮದಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಾ ೧೯೭೧ ರಲ್ಲಿ ಎಕ್ಸ್‌ಪರಿಮೆಂಟಲ್ ಹೈ ಎನರ್ಜಿಯಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.
ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಸಂಶೋಧನ ಆಸಕ್ತಿಗಳಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಖಗೋಳ ವಿಜ್ಞಾನ ಹಾಗೂ ಆಪ್ಟಿಕಲ್ ಖಗೋಳ ವಿಜ್ಞಾನಗಳು ಸೇರಿದೆ. ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವಯಿಸುವಿಕೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ೨೨೪ ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಡಾ. ಕಸ್ತೂರಿರಂಗನ್ ಅವರು ಭಾರತದೊಳಗೆ ಮತ್ತು ವಿದೇಶಗಳೆರಡರಲ್ಲೂ ಹಲವು ಪ್ರಮುಖ ವಿಜ್ಞಾನ ಅಕಾಡಮೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿದ್ದಾರೆ.
ಡಾ. ಕಸ್ತೂರಿ ರಂಗನ್ ಅವರು ಕೆಳಗೆ ನೀಡಿರುವ ೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ:
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (೧೯೯೪), ಆಂಧ್ರ ವಿಶ್ವವಿದ್ಯಾನಿಲಯ (೧೯೯೫), ಎಸ್.ವಿ.ವಿಶ್ವವಿದ್ಯಾನಿಲಯ, ತಿರುಪತಿ (೧೯೯೬), ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ, ಅನಂತಪುರ (೧೯೯೮), ಅಣ್ಣಾ ವಿಶ್ವವಿದ್ಯಾನಿಲಯ, ಚೆನ್ನೈ (೧೯೯೮), ರೂರ್ಕಿ ವಿಶ್ವವಿದ್ಯಾನಿಲಯ, ರೂರ್ಕಿ (೧೯೯೯), ಐಐಟಿ, ಬಾಂಬೆ (೨೦೦೦), ಛತ್ರಪತಿ ಸಾಹೂ ಜೀ ಮಹಾರಾಜ್ ವಿಶ್ವವಿದ್ಯಾನಿಲಯ, ಕಾನ್‌ಪುರ (೨೦೦೦), ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ, ಅಮೃತಸರ (೨೦೦೧), ಕಲ್ಕತ್ತಾ ವಿಶ್ವವಿದ್ಯಾನಿಲಯ, ಕಲ್ಕತ್ತಾ (೨೦೦೨), ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಐಜಿಎನ್‌ಓಯೂ), ನವದೆಹಲಿ (೨೦೦೩), ಪಂಜಾಬ್ ವಿಶ್ವವಿದ್ಯಾನಿಲಯ, ಚಂಡೀಗಢ (೨೦೦೩), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ (೨೦೦೪), ಅಳಗಪ್ಪ ವಿಶ್ವವಿದ್ಯಾನಿಲಯ, ಕಾರೈಕುಡಿ (೨೦೦೬), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು (೨೦೦೭); ಎಸ್ಆರ್ಎಮ್ ವಿಶ್ವವಿದ್ಯಾನಿಲಯ, ಚೆನ್ನೈ (೨೦೦೮)
ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಅದರ ಅನ್ವಯಗಳ ಕ್ಷೇತ್ರಗಳಲ್ಲಿ ೨೪೪ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ರಾಷ್ಟ್ರದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ೬೦ ಘಟಿಕೋತ್ಸವ ಭಾಷಣಗಳನ್ನು ಮಾಡಿದ್ದಾರೆ ಮತ್ತು ೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.
ಇವರು ಸುಮಾರು ೩೦೯ ಸಾರ್ವಜನಿಕ ಮತ್ತು ಸ್ಮಾರಕ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಇತ್ತೀಚಿನ ಉಪನ್ಯಾಸಗಳಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಎಂ.ಎನ್.ಸಾಹಾ ಸ್ಮಾರಕ ಉಪನ್ಯಾಸ; ರಾಯಲ್ ಸೊಸೈಟಿ ಆಫ್ ಲಂಡನ್ನಲ್ಲಿ ಜೆ.ಸಿ.ಬೋಸ್ ಸ್ಮಾರಕ ಉಪನ್ಯಾಸ; ಮೂರನೇ ದರ್ಬಾರಿ ಸೇತ್ ಸ್ಮಾರಕ ಉಪನ್ಯಾಸ, ನವದೆಹಲಿ; ಆಸ್ಟ್ರೇಲಿಯನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಕ್ಯಾನ್‌ಬೆರಾದಲ್ಲಿ ಕೆ.ಆರ್.ನಾರಾಯಣನ್ ಉಪನ್ಯಾಸ; ೨೮ ನೇ ವಿಕ್ರಮ್ ಸಾರಾಭಾಯಿ ಸ್ಮಾರಕ ಉಪನ್ಯಾಸ, ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಅಹಮದಾಬಾದ್; ದೆಹಲಿ ವಿಶ್ವವಿದ್ಯಾನಿಲಯದ, ದೆಹಲಿಯಲ್ಲಿ ಪ್ರೊ. ಡಿ.ಎಸ್. ಕೊಥಾರಿ ಸ್ಮಾರಕ ಉಪನ್ಯಾಸ; ಕರ್ನಾಟಕ ರಾಜ್ಯೋತ್ಸವ ವಿಸ್ತರಣೆ ಉಪನ್ಯಾಸ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿನ ಸಂಸ್ಥೆ, ಬೆಂಗಳೂರು; ಶ್ರೀ ಆರ್ಥರ್ ಸಿ ಕ್ಲಾರ್ಕ್ ಅವರ ಮೊದಲ ಸ್ಮಾರಕ ಉಪನ್ಯಾಸ, ಎಸಿಸಿಐಎಮ್‌ಟಿ, ಕೊಲಂಬೋ ಇವುಗಳು ಸೇರಿವೆ. ಅತೀ ಇತ್ತೀಚೆಗೆ, ಇವರು ಇಂಟರ್‌ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಶನ್ ಮತ್ತು ಯುನೆಸ್ಕೋ ಇವುಗಳು ಸ್ಪುಟ್ನಿಕ್ ಉಡಾವಣೆಯ ೫೦ ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ಮನುಕುಲದ ಸೇವೆಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಸಂಭಾವ್ಯತೆ: ಮುಂದಿನ ೫೦ ವರ್ಷಗಳು’ ಎಂಬ ಕುರಿತಾಗಿನ ಪ್ರಮುಖ ಭಾಷಣವನ್ನು ಮಾಡಿದ ಏಕೈಕ ಏಷ್ಯಾದ ವ್ಯಕ್ತಿ ಮತ್ತು ನಾಲ್ಕು ಜಾಗತಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಹಾರ್ಡ್ ಎಕ್ಸ್-ರೇ ಎಮಿಶನ್ ಫ್ರೊಮ್ ಹೆಚ್ಇಆರ್ X-೧ ಡಿ.ಪಿ. ಶರ್ಮಾ, ಎ.ಕೆ. ಜೈನ್, ಕೆ. ಕಸ್ತೂರಿರಂಗನ್, ಯು.ಬಿ. ಜಯಂತಿ, ಯು.ಆರ್. ರಾವ್ ಅವರಿಂದ (ನೇಚರ್, ಸಂ.೨೪೬, ಸಂ.೧೫೫, ಪು. ೧೦೭-೧೦೮,೧೯೭೩)
ಎಕ್ಸ್-ರೇ ಅಬ್ಸರ್ವೇಶನ್ಸ್ ಆಫ್ GX ೧೭ + ೨ ಎಂಡ್ GX ೯ + ೯ ಫ್ರೊಮ್ ಆರ್ಯಭಟ ಕೆ. ಕಸ್ತೂರಿರಂಗನ್, ಯು.ಆರ್.ರಾವ್, ಡಿ.ಪಿ. ಶರ್ಮಾ, ಎಮ್.ಎಸ್.ರಾಧಾ ಅವರಿಂದ (ನೇಚರ್, ಸಂ.೨೬೦, ಸಂ. ೫೫೪೮, ಪು. ೨೨೬-೨೨೭, ೧೯೭೬)
ದಿ ಆರ್ಯಭಟ ಪ್ರಾಜೆಕ್ಟ್ ಯು.ಆರ್.ರಾವ್ ಮತ್ತು ಕೆ.ಕಸ್ತೂರಿರಂಗನ್ ಅವರಿಂದ (೧೯೭೯)
ಸ್ಪೇಸ್ - ಇನ್ ಪರ್ಸ್ಯೂಟ್ ಆಫ್ ನ್ಯೂ ಹಾರಿಜಿನ್ಸ್ (ಎ ಫೆಸ್ಟ್ಶ್ರಿಫ್ಟ್ ಫಾರ್ ಪ್ರೊ ಯು ಆರ್ ರಾವ್) ಆರ್.ಕೆ ವರ್ಮಾ, ಕೆ. ಕಸ್ತೂರಿರಂಗನ್, ಯು.ಎಸ್. ಶ್ರೀವಾಸ್ತವ ಮತ್ತು ಬಿ.ಹೆಚ್. ಸುಬ್ಬರಾಯ ಅವರಿಂದ (೧೯೯೨)
ರೋಲ್ ಆಫ್ ಡೆವಲಪಿಂಗ್ ಕಂಟ್ರೀಸ್ ಇನ್ ಗ್ರೌಂಡ್ ಬೇಸ್ಡ್ ಎಕ್ಸ್ಪರಿಮೆಂಟ್ಸ್ ಇನ್ ಸಪೋರ್ಟ್ ಆಫ್ ಸ್ಪೇಸ್ ಅಬ್ಸರ್ವೇಶನ್ಸ್ ಫಾರ್ ಗ್ಲೋಬಲ್ ಎಂಡ್ ರೀಜನಲ್ ಸ್ಟಡೀಸ್ ಕೆ. ಕಸ್ತೂರಿರಂಗನ್ ಮತ್ತು ಆರ್ ಆರ್ ಡೇನಿಯಲ್ ಅವರಿಂದ ಸಂಪಾದಿಸಲ್ಪಟ್ಟಿದೆ (ಸಿಓಎಸ್‌ಪಿಎಆರ್ ಬಾಹ್ಯಾಕಾಶ ವಿಜ್ಞಾನದಲ್ಲಿ ನಿಯತಕಾಲಿತ ಸುಧಾರಣೆಗಳು, ೧೯೯೬)
ದಿ ಜಿಯೋಸೆಂಟ್ರಿಕ್ ಪ್ಲಾನೆಟ್ಸ್ ಕೆ.ಕಸ್ತೂರಿರಂಗನ್ ಮತ್ತು ಆರ್ ಕೆ ಕೊಚ್ಚಾರ್ ಅವರಿಂದ
ಹ್ಯೂಮನ್ ಕನೆಕ್ಟಿವಿಟಿ ಥ್ರೂ ಸ್ಪೇಸ್ (ಆಹಾರ ಆರ್ಥಿಕ ವ್ಯವಸ್ಥೆ ಮತ್ತು ಆರೋಗ್ಯವನ್ನು ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನ)
ಪ್ರಾಬ್ಲೆಮ್ಸ್ ಆಫ್ ಸ್ಪೇಸ್ ಸೈನ್ಸ್ ರಿಸರ್ಚ್: ಎಜುಕೇಶನ್ ಎಂಡ್ ದಿ ರೋಲ್ ಆಫ್ ಟೀಚರ್ಸ್ ಕೆ. ಕಸ್ತೂರಿರಂಗನ್, ಜೆ ಎಲ್ ಫೆಲ್ಲಸ್, ಎಸ್ ಸಿ ಚಕ್ರವರ್ತಿ, ಆರ್ ಎಸ್ ಯಂಗ್ ಮತ್ತು ಎಂ ಜೆ ರೈಕ್ರಾಫ್ಟ್ ಅವರಿಂದ ಸಂಪಾದಿಸಲ್ಪಟ್ಟಿದೆ. (ಸಿಓಎಸ್‌ಪಿಎಆರ್ ಬಾಹ್ಯಾಕಾಶ ವಿಜ್ಞಾನದಲ್ಲಿ ನಿಯತಕಾಲಿಕ ಸುಧಾರಣೆಗಳು, ೧೯೯೭)
ಇಂಡಿಯಾಸ್ ಸ್ಪೇಸ್ ಎಫರ್ಟ್ಸ್ – ಅಚೀವಿಂಗ್ ಗ್ರೇಟ್ ಹೈಟ್ಸ್ ಕೆ. ಕಸ್ತೂರಿರಂಗನ್ ಅವರಿಂದ. (‘ವಿಶನ್ ೨೧ ಸೆಂಚುರಿ’ ವಿದ್ಯಾ ಪ್ರಕಾಶಕರು, ಮಂಗಳೂರು ಇವರಿಂದ ಪ್ರಕಾಶಿಸಲ್ಪಟ್ಟಿದೆ, ೨೦೦೦)
ಡೆವಲೆಪ್ಮೆಂಟ್ಸ್ ಇನ್ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ಕೆ. ಕಸ್ತೂರಿರಂಗನ್ ಅವರಿಂದ. (ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಇವರ ನಿಯತಕಾಲಿಕ ‘ ಟೆಕ್ನೋರಮಾ’, ಆಗಸ್ಟ್ ೨೦೦೦ ಬೇಸಿಗೆ ಸಂಚಿಕೆ)
ಸ್ಪೇಸ್ ಸೈನ್ಸಸ್ ಇನ್ ಇಂಡಿಯಾ – ಟೂ ರೀಸೆಂಟ್ ಇನಿಷಿಯೇಟಿವ್ಸ್ ಕೆ. ಕಸ್ತೂರಿರಂಗನ್ ಅವರಿಂದ. ಸರ್ ಜೆ.ಸಿ.ಬೋಸ್ ಸ್ಮಾರಕ ಉಪನ್ಯಾಸ, ರಾಯಲ್ ಸೊಸೈಟಿ, ಲಂಡನ್ನಲ್ಲಿ, ೨೦೦೪ (ಇಸ್ರೋ ಪ್ರಕಟಣೆ ಘಟಕ,ಇಸ್ರೋ ಕೇಂದ್ರ ಕಚೇರಿ, ಬೆಂಗಳೂರು ಇವರಿಂದ ಪ್ರಕಟಿತ)
ಎ ನ್ಯೂ ಸ್ಪೇಸ್-ಬೇಸ್ಡ್ ಅಬ್ಸರ್ವೇಶನ್ ಟು ಎಕ್ಸ್ಪ್ಲೋರ್ ದಿ ಯೂನಿವರ್ಸ್ ಕೆ. ಕಸ್ತೂರಿರಂಗನ್ ಅವರಿಂದ. (ಐಎನ್ಎಇ ಅವರ ವಾರ್ಷಿಕ ನಿಯತಕಾಲಿತ, ಸಂ. II, ಡಿಸೆ ೨೦೦೫)
ಆನ್ ಕೊಯಲಿಷನ್ ಗವರ್ನ್ಮೆಂಟ್ಸ್ ಕೆ. ಕಸ್ತೂರಿರಂಗನ್ ಅವರಿಂದ. (ಸಂವಿಧಾನ ಮತ್ತು ಪಾರ್ಲಿಮೆಂಟರಿ ಅಧ್ಯಯನದ ನಿಯತಕಾಲಿಕ, ಸಂ. ೪೧, ಸಂಖ್ಯೆಗಳು. ೩-೪, ಜುಲೈ-ಡಿಸೆ. ೨೦೦೭, ಪು. ೨೦೮-೨೧೦)
ಸ್ಪೇಸ್ ಓಡಿಸ್ಸಿ: ಎ ಡೌನ್ ಟು ಅರ್ಥ್ ಪರ್ಸ್ಪೆಕ್ಟಿವ್ ಕೆ. ಕಸ್ತೂರಿರಂಗನ್ ಅವರಿಂದ. ಮೊದಲ ಸರ್ ಆರ್ಥರ್ ಸಿ ಕ್ಲಾರ್ಕ್ ಸ್ಮಾರಕ ಉಪನ್ಯಾಸ, ಕೊಲಂಬೋದ ಆರ್ಥರ್ ಸಿ ಕ್ಲಾರ್ಕ್ ಇನ್‌ಸ್ಟಿಟ್ಯೂಟ್ ಫಾರ್ ಮಾಡರ್ನ್ ಟೆಕ್ನಾಲಜೀಸ್ (ಎಸಿಸಿಐಎಮ್‌ಟಿ)ಯ ಬಂಡಾರನಾಯಕೆ ಸ್ಮಾರಕ ಅಂತರಾಷ್ಟ್ರೀಯ ಸಭಾಂಗಣದಲ್ಲಿ ನೀಡಿದ ಭಾಷಣ, ೧೯ ಮಾರ್ಚ್ ೨೦೦೯, ಪ್ರಕಟಣೆಗಳು ಮತ್ತು ಸಾರ್ವಜನಿಕ ಸಂಬಂಧಗಳ ಘಟಕ, ಇಸ್ರೋ ಕೇಂದ್ರಕಚೇರಿ ಇವರಿಂದ ಪ್ರಕಟಿತ, ೨೦೦೯