ಕೆ. ಕೆ. ಹೆಬ್ಬಾರ್‌

ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌

ಅಂತಾರಾಷ್ಟ್ರೀಯ ಮಟ್ಟದ ಕಲಾವಿದ-ಕೆ.ಕೆ.ಹೆಬ್ಬಾರ್
ಹೆಸರುಕಟ್ಟಿನಗಿರಿ ಕೃಷ್ಣ ಹೆಬ್ಬಾರ್
ಸಾವು ೧೯೯೬
ರಾಷ್ಟ್ರೀಯತೆ ಭಾರತೀಯ
ಕ್ಷೇತ್ರ ಚಿತ್ರಕಲೆ,
ತರಬೇತಿ Académie Julian
ಜೆ. ಜೆ. ಸ್ಕೂಲ್ ಆಫ಼್ ಆರ್ಟ್ಸ್
ಕೃತಿಗಳು 'ಮುಂಬಯಿನ ಜೆಹಾಂಗೀರ್ ಆರ್ಟ್ ಗ್ಯಾಲರಿ', ಪ್ರಾರಂಭಿಸುವಲ್ಲಿ ಕೆ.ಕೆ.ಹೆಬ್ಬಾರರ ಪಾತ್ರ ಅಮೋಘವಾದುದು.
ಪುರಸ್ಕಾರಗಳು ಪದ್ಮಭೂಷಣ
ಪದ್ಮಶ್ರೀ
Fellowship of the Lalit Kala Akademi

ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌ (ಜನನ: ೧೯೧೧; ನಿಧನ: ೧೯೯೬)[] (ಕೆ. ಕೆ. ಹೆಬ್ಬಾರ್‌ ಎಂದು ಚಿರಪರಿಚಿತ) ಒಬ್ಬ ಖ್ಯಾತ ಚಿತ್ರಕಲಾವಿದರಾಗಿದ್ದರು. ಭಾರತ ದೇಶವೇ ಅವರ ಎಲ್ಲಾ ಚಿತ್ರಕಲೆಗಳಲ್ಲಿ ಪ್ರಧಾನ ವಿಷಯವಾಗಿತ್ತು.[]

ಆರಂಭಿಕ ಜೀವನ

[ಬದಲಾಯಿಸಿ]

ಕೃಷ್ಣ ಹೆಬ್ಬಾರ್‌ ೧೯೧೧ರಲ್ಲಿ[] ಭಾರತ ದೇಶದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಟ್ಟಿಂಗೇರಿಯಲ್ಲಿ ವಾಸವಾಗಿದ್ದ ತುಳು ಭಾಷಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಮ್ಮ ತಂದೆಯವರು ಆಗೊಮ್ಮೆ ಈಗೊಮ್ಮೆ ಗಣೇಶ ವಿಗ್ರಹಗಳನ್ನು ನಿರ್ಮಿಸುತ್ತಿದ್ದನ್ನು ಗಮನಿಸುತ್ತಿದ್ದ ಬಾಲಕ ಕೃಷ್ಣ ಹೆಬ್ಬಾರ್‌ ಆಗಿನಿಂದಲೇ ಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕಲಾವಿದರ ಕುಟುಂಬದಲ್ಲಿ ಜನಿಸಿದ ಕೃಷ್ಣ ಕಲೆಯಲ್ಲಿ ಆಸಕ್ತರಾದ ಹೆಬ್ಬಾರ್‌, ೧೯೪೦ರಿಂದ ೧೯೪೫ರ ತನಕ ಮುಂಬಯಿಯ ಜೆಜೆ ಸ್ಕೂಲ್‌ ಆಫ್‌ ಆರ್ಟ್ಸ್‌ನಲ್ಲಿ ಕಲೆಯ ವಿಧ್ಯುಕ್ತ ವ್ಯಾಸಂಗ ಮಾಡಿದರು. ನಂತರ, ಅವರು ಪ್ಯಾರಿಸ್‌ನಲ್ಲಿ ಅಕಾಡೆಮೀ ಜೂಲಿಯನ್‌ನಲ್ಲಿ ಕಲಾ ವ್ಯಾಸಂಗ ಮಾಡಿದರು.

ವೃತ್ತಿಜೀವನ

[ಬದಲಾಯಿಸಿ]

ಹೆಬ್ಬಾರ್‌ರ ಆರಂಭಕಾಲಿಕ ಕಲಾಕೃತಿಗಳನ್ನು ಕೇರಳ ಹಂತ ಎನ್ನಲಾಗಿತ್ತು, ಏಕೆಂದರೆ, ಅವರ ಕಲೆಯಲ್ಲಿ ಮಲಬಾರ್‌ ಮತ್ತು ತುಳುನಾಡು ವಲಯಗಳ ನಿರಂತರ ಶ್ರೇಣಿಯನ್ನು ಆಗಾಗ್ಗೆ ವಿವರಿಸಲಾಗುತ್ತಿತ್ತು. ಆನಂತರ ಅವರು ತಮ್ಮ ಕಲೆಯಲ್ಲಿ ಇತರೆ ವಿಷಯಗಳೊಂದಿಗೆ ಪ್ರಯೋಗ ನಡೆಸಿದರು. ಇವರ ಕಲಾಕೃತಿಗಳು ಪಾಲ್‌ ಗಾಗ್ವಿನ್‌ ಮತ್ತು ಅಮೃತಾ ಷರ್‌-ಗಿಲ್‌ರ ಕಲಾಕೃತಿಗಳಿಂದ ಪ್ರೇರಿತವಾಗಿದ್ದವು. ಆಗ ೧೯೬೫ರಲ್ಲಿ ಲಂಡನ್‌ ಮತ್ತು ಬ್ರಸೆಲ್ಸ್‌ನಲ್ಲಿ ನಡೆದ ಆರ್ಟ್‌ ನೌ ಇನ್‌ ಇಂಡಿಯಾ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ತಮ್ಮ ಚಿತ್ರಕಲೆಗಳ ಮೂಲಕ ಅಂತರರಾಷ್ಟ್ರೀಯ ಅಭಿಮಾನಿಗಳನ್ನು ಗಳಿಸಿಕೊಂಡಂತಾಯಿತು. ಇಂದು ಹೆಬ್ಬಾರ್‌ರ ಕಲಾಕೃತಿಗಳನ್ನು ಭಾರತೀಯ ಕಲಾ ಇತಿಹಾಸದಲ್ಲಿ ಬಹಳಷ್ಟು ಪ್ರಭಾವಿ ಎಂದು ಪರಿಗಣಿಸಲಾಗಿದೆ.[] ವೆನಿಸ್‌ ಬಯೆನ್ನೇಲ್‌, ಸಾವೊ ಪಾಲೊ ಆರ್ಟ್‌ ಬಯೆನ್ನಿಯಲ್‌ ಹಾಗೂ ಟೊಕಿಯೊ ಬಯೆನ್ನೇಲ್‌ ಸೇರಿದಂತೆ ವಿಭಿನ್ನ ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಹೆಬ್ಬಾರ್‌ ಭಾಗವಹಿಸಿದರು.

(Jehangir Art Gallery)

[ಬದಲಾಯಿಸಿ]

ಮುಂಬಯಿನಗರದಲ್ಲಿ ಸ್ಥಾಪಿಸಲ್ಪಟ್ಟಿರುವ ವಿಶ್ವ ವಿಖ್ಯಾತ-ಕಲಾ ಪ್ರದರ್ಶನ ಕೇಂದ್ರ (Jehangir Art Gallery)[] ಯ ಕಲ್ಪನೆಯನ್ನು ಕನ್ನಡದ ಕಲಾವಿದ ಕೆ.ಕೆ.ಹೆಬ್ಬಾರ್ ಹಾಗೂ ಪ್ರಖ್ಯಾತ ವಿಜ್ಞಾನಿ ಮತ್ತು ಕಲಾವಿದ ಡಾ. ಹೋಮಿ ಭಾಭಾರವರ ಪ್ರಯತ್ನದಿಂದಾಗಿ ಸಾಧ್ಯವಾಯಿತು. ಸರ್ ಕವಾಸ್ ಜಿ ಜೆಹಾಂಗೀರ್, ಈ ಕಲಾನಿಲಯಕ್ಕೆ ಆರ್ಥಿಕ ನೆರವನ್ನು ಕೊಡಲು ವಾಗ್ದಾನಮಾಡಿದರು. ಹಾಗಾಗಿ ೧೯೫೨ ರಲ್ಲಿ 'ಜೆಹಾಂಗೀರ್ ಆರ್ಟ್ ಗ್ಯಾಲರಿ',[] ಮುಂಬಯಿನ ಕೋಟೆ ಪ್ರದೇಶದಲ್ಲಿ ರೂಪುಗೊಂಡಿತು. ಈ ಜನಪ್ರಿಯ ಕಲಾಮಂದಿರದ ನಿರ್ವಣೆಯನ್ನು 'ಮುಂಬಯಿ ಆರ್ಟ್ ಸೊಸೈಟಿ'ಯವರು ವಹಿಸಿಕೊಂಡರು. 'ಕಾಲಾಘೋಡ' ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಈ ಪ್ರತಿಷ್ಠಿತ ಮಹಾ ಪ್ರದರ್ಶನ ತಾಣದಲ್ಲಿ ತಮ್ಮ ಕಲೆಯ ಪರಿಚಯಮಾಡಲು ಭಾರತದ ಎಲ್ಲಾ ರಾಜ್ಯಗಳಿಂದ ಕಲಾವಿದರು, ಶಿಲ್ಪಿಗಳು ಮುಂಬಯಿಗೆ ಬರುತ್ತಾರೆ. ಬೇಡಿಕೆ ಅತಿಯಾಗಿದ್ದು, ಕೆಲವೊಮ್ಮೆ, ಕೆಲವು ವರ್ಷಗಳು ಕಾಯಬೇಕಾಗುತ್ತದೆ.

ಪ್ರಶಸ್ತಿಗಳು

[ಬದಲಾಯಿಸಿ]

ತಮ್ಮ ಜೀವನದುದ್ದಕ್ಕೂ ಹೆಬ್ಬಾರ್‌ ಹಲವು ಪ್ರಶಸ್ತಿಗಳನ್ನು ಗಳಿಸಿದರು. ಇದರಲ್ಲಿ ಭಾರತದ ನಾಲ್ಕನೆಯ ಹಾಗೂ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ (ಕ್ರಮವಾಗಿ)

  • 'ಪದ್ಮಶ್ರೀ'
  • 'ಪದ್ಮ ಭೂಷಣ'
  • 'ಅಕ್ಯಾಡಮಿ ಆಫ್‌ ಫೈನ್‌ ಆರ್ಟ್ಸ್‌' (ಕೊಲ್ಕತ್ತಾ),
  • 'ದಿ ಮುಂಬಯಿ ಆರ್ಟ್‌ ಸೊಸೈಟಿ ಪ್ರಶಸ್ತಿ‌',
  • 'ಮುಂಬಯಿ ಸ್ಟೇಟ್‌ ಪ್ರಶಸ್ತಿ'‌,
  • 'ಲಲಿತ್‌ ಕಲಾ ಅಕಾಡೆಮಿ ಪ್ರಶಸ್ತಿ‌',
  • 'ವರ್ಣಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿ',
  • 'ಮೈಸೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಡಾಕ್ಟರೆಟ್‌',
  • 'ಸೋವಿಯತ್‌ ಲ್ಯಾಂಡ್ ನೆಹ್ರೂ ಪ್ರಶಸ್ತಿ' ಸಹ ದೊರಕಿದವು.

ಆಕರಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2010-01-14. Retrieved 2011-03-11.
  2. "ಆರ್ಕೈವ್ ನಕಲು". Archived from the original on 2009-06-24. Retrieved 2011-03-11.
  3. "ಆರ್ಕೈವ್ ನಕಲು". Archived from the original on 2016-03-03. Retrieved 2011-03-11.
  4. "ಕನ್ನಡ ಮತ್ತು ಸಂಸ್ಕೃತಿ ಇಲಾಖೆ,". Archived from the original on 2016-09-11. Retrieved 2016-06-15.
  5. "'Jehangir Art Gallery'". Archived from the original on 2016-06-20. Retrieved 2016-06-15.
  6. "Terrace Art Gallery for Photographers". Archived from the original on 2016-06-20. Retrieved 2016-06-15.