![]() | ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (April 21,2015) |
Konakuppakatil Gopinathan Balakrishnan | |
---|---|
![]() Justice K. G. Balakrishnan | |
ಭಾರತದ ಮೂವತ್ತೇಳನೆಯ ಮುಖ್ಯ ನ್ಯಾಯಧೀಶ | |
In office January 14, 2007 – 12 May 2010 | |
Appointed by | ಎ.ಪಿ.ಜೆ. ಅಬ್ದುಲ್ ಕಲಾಂ |
Preceded by | Y. K. Sabharwal |
Succeeded by | Sarosh Homi Kapadia |
Personal details | |
Spouse | ಶ್ರೀಮತಿ ನಿರ್ಮಲಾ ಬಾಲಕೃಷ್ಣನ್ |
ಕೊನಕುಪ್ಪಕಾಟಿಲ್ ಗೋಪಿನಾಥನ್ ಬಾಲಕೃಷ್ಣನ್ (ಮಲಯಾಳಂ:കൊനകുപ്പക്കാട്ടില് ഗോപിനാഥന് ബാലകൃഷ്ണന്, ಜನನ. ೧೨ ಮೇ ೧೯೪೫) ಭಾರತದ ಮೂವತ್ತೇಳನೆಯ ಮುಖ್ಯ ನ್ಯಾಯಧೀಶರಾಗಿದ್ದರು. ಕೆ. ಜಿ. ಬಾಲಕೃಷ್ಣನ್ ಎಂದೇ ಪರಿಚಿತರು.
ಕೆ. ಜಿ. ಬಾಲಕೃಷ್ಣನ್ ಅವರು ಪುಲಯ ದಲಿತ ಕುಟುಂಬದಲ್ಲಿ ತಿರುವಾಂಕೂರ್ನ ವೈಕೊಮ್ ಬಳಿಯ ಥಲಯೊಪರಂಬುನಲ್ಲಿ ಜನಿಸಿದರು.
ಅವರ ತಂದೆಯವರು ವೈಕೊಮ್ ಮುನ್ಸಿಫ್ ಕೋರ್ಟ್‌ನಲ್ಲಿ ಕ್ಲರ್ಕ್ ಆಗಿದ್ದರು ಅವರ ಪ್ರಾಥಮಿಕ ಶಿಕ್ಷಣವನ್ನು ಥಲಯೊಪರಾಂಬುನಲ್ಲಿ ಮುಗಿಸಿ, ವೈಕೊಮ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಂದಿನ ವ್ಯಾಸಂಗ ಮಾಡಿದರು. ಆನಂತರ, ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಮತ್ತು ಸರ್ಕಾರಿ ಕಾನೂನು ಕಾಲೇಜು, ಎರ್ನಾಕುಲಂನಲ್ಲಿ ಬಿ.ಎಲ್. ಪದವಿಯನ್ನು ೧೯೭೧ ರಲ್ಲಿ ಪಡೆದುಕೊಂಡರು ಮತ್ತು ವೈಕೊಮ್‌ನ ಮುನ್ಸಿಫ್ ನ್ಯಾಯಾಲಯದಲ್ಲಿ ತಮ್ಮ ಉದ್ಯೋಗ ಪ್ರಾರಂಭಿಸಿದರು.
ಕೆ. ಜಿ. ಬಾಲಕೃಷ್ಣನ್ ಅವರು ನಿರ್ಮಲಾ ಎಂಬುವವರನ್ನು ವಿವಾಹವಾದರು ಹಾಗೂ ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ಅವರು ಕೆ.ಜಿ.ಸೋನಿ ಮತ್ತು ರಾಣಿ.[೪]
ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ರೈಟ್ ಟು ಇನ್ಫಾರ್ಮೇಶನ್ ಆಕ್ಟ್‌ನ ನಿಯಮಗಳ ವ್ಯಾಪ್ತಿಯಿಂದ ಭಾರತದ ಮುಖ್ಯ ನ್ಯಾಯಾಧೀಶರ ಕಛೇರಿಯನ್ನು ಹೊರತರಲು ಪ್ರಯತ್ನಿಸಿದರು.[೬] ಸಿಜೆಐ ಕಛೇರಿಯನ್ನು ಆರ್‌ಟಿಐ ಆಕ್ಟ್ ಜವಾಬ್ಧಾರಿಯಡಿ ತರುವಂತಹ ತೀರ್ಪನ್ನು ದೆಹಲಿ ಹೈಕೋರ್ಟ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಎದುರಿನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಆದೇಶ ನೀಡಿದರು.[೭] ರೈಟ್ ಟು ಪ್ರೈವೆಸಿಯಲ್ಲಿ ಆರ್‌ಟಿಐ ಆಕ್ಟ್‌ನ ತಿದ್ದುಪಡಿ ಮಾಡುವ ಸಲುವಾಗಿ ಅವರು ಮಾತನಾಡಿದರು.[೮]
ಭಾರತದ ಮುಖ್ಯ ನ್ಯಾಯಾದೀಶರಾದ ಕೆ.ಜಿ.ಬಾಲಕೃಷ್ಣನ್ ಅವರು ಅತ್ಯಾಚಾರಕ್ಕೆ ಒಳಗಾದವರು ಬಲವಂತಕ್ಕಾಗಿ ಏನೂ ಮಾಡಬೇಕಿಲ್ಲ, ದೋಷಿಯನ್ನು ಮದುವೆಯಾಗುವುದು ಅಥವಾ ಮಗುವಿಗೆ ಜನ್ಮ ನೀಡುವುದು ಇದೆಲ್ಲವೂ ಅವರ ಇಷ್ಟದಂತೆ ಮಾಡುವ ಸ್ವಾತಂತ್ರ್ಯ ಸಿಗಬೇಕೆಂದು ಹೇಳಿದರು.[೯] ವಕೀಲರು ಹಾಗೂ ಮಹಿಳಾ ಹಕ್ಕು ಹೋರಾಟಗಾರರು ಕೆಲವು ಮೀಸಲಾತಿಗಳನ್ನು ಕೋರಿದರು.[೧೦]
ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ಇಂಟರ್‌ನೆಟ್‌ನಲ್ಲಿ ಅಶ್ಲೀಲಕರ ಚಿತ್ರಗಳು ಹಾಗೂ ಪದಗಳನ್ನು ಪ್ರಕಟಪಡಿಸುವ ವೆಬ್‌ಸೈಟ್‌ಗಳನ್ನು ತಡೆಯಬೇಕೆಂದು ಹೇಳಿದರು.[೧೧] ವೆಬ್‌ನಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ವಿರೋಧವ್ಯಕ್ತಪಡಿಸಿ ನಿಲುವುಗಳನ್ನು ಹೇಳುವುದನ್ನು ತೆಗೆದು ಹಾಕಬೇಕೆಂದು ಕೂಡಾ ತೀರ್ಪನ್ನು ನೀಡಿದ್ದರು.[೧೨]
ಸುಯೊ ಮೊಟು ದೂರಿನಂತೆ ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ಕಾಸರಗೋಡಿಗೆ ಭೇಟಿ ನೀಡಿದರು, ಆರೋಗ್ಯಕ್ಕೆ ಅತಿಯಾದ ಹಾನಿಕಾರಕ ಎಂಡೋಸಲ್ಫಾನ್ ಬಳಸಿದ್ದು ಮಾನವ ಹಕ್ಕುಗಳ ದುರುಪಯೋಗ ಮಾಡಿದಂತೆ ಎಂದು ಅವರು ಅಭಿಪ್ರಾಯ ಪಟ್ಟರು ನಂತರ ಇದಕ್ಕೆ ತುತ್ತಾದವರಿಗೆ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಸೂಚಿಸಿದರು.[೧೩]