ಕೆ. ನಾರಾಯಣ್ | |
---|---|
ಸಂಸತ್ ಸದಸ್ಯ, ರಾಜ್ಯಸಭಾ ಸದಸ್ಯ
| |
ಹಾಲಿ | |
ಅಧಿಕಾರ ಸ್ವೀಕಾರ ೨೪ ನವೆಂಬರ್ ೨೦೨೦ | |
ಪೂರ್ವಾಧಿಕಾರಿ | ಅಶೋಕ್ ಗಸ್ತಿ |
ಮತಕ್ಷೇತ್ರ | ಕರ್ನಾಟಕ |
ವೈಯಕ್ತಿಕ ಮಾಹಿತಿ | |
ಜನನ | ಕೊರಗಪ್ಪ ನಾರಾಯಣ ೧೨ ಜೂನ್ ೧೯೫೨[೧] ಮಂಗಳೂರು, ಕರ್ನಾಟಕ, ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ವಾಸಸ್ಥಾನ | ಬೆಂಗಳೂರು, ಕರ್ನಾಟಕ |
ವೃತ್ತಿ | ಉದ್ಯಮಿ, ಪತ್ರಕರ್ತ, ರಾಜಕಾರಣಿ |
ಕೊರಗಪ್ಪ ನಾರಾಯಣ್ ಒಬ್ಬ ಭಾರತೀಯ ಉದ್ಯಮಿ, ಪತ್ರಕರ್ತ ಮತ್ತು ರಾಜಕಾರಣಿ. ಅವರು ೨೦೨೦ ರ ನವೆಂಬರ್ ೨೪ ರಿಂದ ಕರ್ನಾಟಕ ರಾಜ್ಯಸಭೆಯ ಪ್ರಸ್ತುತ ಸಂಸತ್ ಸದಸ್ಯರಾಗಿದ್ದಾರೆ.[೨]ಇವರು ಮಾಸಿಕ ಸಂಸ್ಕೃತ ನಿಯತಕಾಲಿಕವಾದ ಸಂವಾದ ಸಂದೇಶದ ಸ್ಥಾಪಕರಾಗಿದ್ದಾರೆ. ನಾರಾಯಣ್ ಅವರು ತುಳು ಭಾಷೆಯ ತುಳುವೆರೆ ಕೇದಿಗೆ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.[೩][೪]
ಇವರು ಸ್ಪ್ಯಾನ್ ಮುದ್ರಣದ ಮಾಲೀಕರಾಗಿದ್ದಾರೆ ಮತ್ತು ಕರ್ನಾಟಕದ ಭಾರತೀಯ ಜನತಾ ಪಕ್ಷದ ನೇಕಾರ ಪ್ರಕೋಷ್ಠದ (ನೇಕಾರರ ಕೋಶ) ಮಾಜಿ ಸಹ-ಸಂಚಾಲಕರಾಗಿದ್ದಾರೆ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆ ಉಪಚುನಾವಣೆ ಬಿಜೆಪಿಯ ಅಭ್ಯರ್ಥಿಯಾಗಿಯೂ ನಾರಾಯಣ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.[೫][೬]
ಕೊರಗಪ್ಪ ನಾರಾಯಣ್ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರ್ಣಗೊಳಿಸಿದರು ಮತ್ತು ೧೯೭೧ ರಲ್ಲಿ ಬೆಂಗಳೂರಿಗೆ ತೆರಳಿದರು.[೭] ಇವರು ದೇವಾಂಗ ಸಮುದಾಯಕ್ಕೆ ಸೇರಿದವರು.
ಇವರು ತುಳುವರ ಕೇದಿಗೆ ಎಂಬ ತುಳು ನಿಯತಕಾಲಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
೧೯೯೪ ರಲ್ಲಿ ಇವರು ಸಂವಾದ ಸಂದೇಶ ಎಂಬ ಮಾಸಿಕ ಸಂಸ್ಕೃತ ನಿಯತಕಾಲಿಕವನ್ನು ಪ್ರಾರಂಭಿಸಿದರು. ಇವರು ಸ್ಪ್ಯಾನ್ ಮುದ್ರಣ ಎಂಬ ಕಂಪನಿಯನ್ನು ಸ್ಥಾಪಿಸಿದರು. ಇವರು ತಮ್ಮ ಪ್ರಕಟಣೆಗಳ ಮೂಲಕ ಸಂಸ್ಕೃತ ಭಾಷೆಯನ್ನು ಉತ್ತೇಜಿಸುವಲ್ಲಿ ಸಕ್ರಿಯರಾಗಿದ್ದಾರೆ.[೮]
ಕೊರಗಪ್ಪ ನಾರಾಯಣ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಾಗವಾಗಿದ್ದರು ಮತ್ತು ನಂತರದಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದರು. ಅವರು ಭಾರತೀಯ ಜನತಾ ಪಕ್ಷದ, ಕರ್ನಾಟಕ ಘಟಕದ ನೇಕಾರರ ಘಟಕದ ಸಹ-ಸಂಚಾಲಕರಾಗಿದ್ದಾರೆ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.[೯][೧೦]
೨೦೨೦ರಲ್ಲಿ, ಅಶೋಕ್ ಗಸ್ತಿ ಅವರ ನಿಧನದಿಂದಾಗಿ ಖಾಲಿಯಾಗಿದ್ದ ಸ್ಥಾನವನ್ನು ಭರ್ತಿ ಮಾಡಲು ರಾಜ್ಯಸಭೆ ಉಪಚುನಾವಣೆಗೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಯಿತು.[೧೧]