ಕೆಂಪುದಾಳೆ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | S. urens
|
Binomial name | |
Sterculia urens Roxb.[೧]
| |
Synonyms[೧] | |
|
ಕೆಂಪುದಾಳೆ ಸ್ಟಕ್ರ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಪರ್ಣಪಾತಿ ಮರ.
ಸ್ಟಕ್ರ್ಯೂಲಿಯ ಯುರೆನ್ಸ್ ಎಂಬುದು ಇದರ ಶಾಸ್ತ್ರೀಯನಾಮ.
ಭಾರತದಲ್ಲಿ ಇದು ಕರ್ಣಾಟಕ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಕಲ್ಲುಬಂಡೆ ಹೆಚ್ಚಾಗಿರುವ ಬೆಟ್ಟಗಳೂ ಬಯಲು ಕಾಡುಗಳೂ ಇದರ ಸಮೃದ್ಧ ಬೆಳೆವಣಿಗೆಗೆ ಉತ್ತಮ ಸ್ಥಳಗಳು.ಸುಮಾರು 400 and 800 metres (1,300 and 2,600 ft) ಎತ್ತರದಲ್ಲಿ ಬೆಳೆಯುತ್ತದೆ.[೨]
ಈ ಮರದ ವೈಶಿಷ್ಟ್ಯವೆಂದರೆ ಇದರ ಹಳದಿ ಮಿಶ್ರಿತ ಬೂದು ಬಣ್ಣದ ತೊಗಟೆ ತೆಳ್ಳನೆಯ ಕಾಗದದಂತೆ ಸುಲಿದು ಬರುವುದು. ನವೆಂಬರ್-ಮೇ ತಿಂಗಳವರೆಗೆ ಎಲೆ ಇಲ್ಲದೆ ಬಿಳಿಯ ಬಣ್ಣದ ಕಾಂಡ, ರೆಂಬೆಗಳು ಮಾತ್ರ ಪ್ರಮುಖವಾಗಿ ಕಾಣುತ್ತವೆ.
ಈ ಮರದಿಂದ ಔಷಧಿಗೆ ಉಪಯುಕ್ತವಾದ ಕಟೀರಾ ಎಂಬ ಅಂಟು ಸಿಗುತ್ತದೆ. ಇದನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸುವುದುಂಟು. ಒಳ ತೊಗಟೆಯಿಂದ ಹಗ್ಗ ಮಾಡಲು ಬಳಸುವ ಒಳ್ಳೆಯ ನಾರು ಸಿಗುತ್ತದೆ. ಕೆಂಪುದಾಳೆಯ ಚೌಬೀನೆಯನ್ನು ಆಟದ ಸಾಮಾನುಗಳ ತಯಾರಿಕೆಗೆ ಬಳಸುತ್ತಾರೆ. ಅಭಾವ ಕಾಲದಲ್ಲಿ ಇದರ ಎಲೆಯನ್ನು ದನಗಳ ಮೇವಾಗಿ ಉಪಯೋಗಿಸುವುದಿದೆ. ಈ ಹೂವು ಸುಂದರವಾಗಿದೆ . ಇದು ಬಿಳಿ ಬಣ್ಣದ ದಳಗಳನ್ನು ಹೊಂದಿದೆ .