ಕೇ ಆಡ್ಸ್‌ಹೆಡ್ | |
---|---|
ಜನನ | ಚೀತಮ್ ಹಿಲ್, ಮ್ಯಾಂಚೆಸ್ಟರ್, ಇಂಗ್ಲೆಂಡ್ | ೧೦ ಮೇ ೧೯೫೪
ರಾಷ್ಟ್ರೀಯತೆ | ಬ್ರಿಟಿಷ್ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ |
ಪ್ರಕಾರ/ಶೈಲಿ | ಕವಯಿತ್ರಿ , ನಾಟಕಗಾರ್ತಿ, ರಂಗಕರ್ಮಿ, ನಟಿ, ನಿರ್ಮಾಪಕಿ |
ಕೇ ಆಡ್ಸ್‌ಹೆಡ್ (ಜನನ ೧೦ ಮೇ ೧೯೫೪) ಒಬ್ಬ ಕವಯಿತ್ರಿ, ನಾಟಕಗಾರ್ತಿ, ರಂಗಕರ್ಮಿ, ನಟಿ, ನಿರ್ಮಾಪಕಿ.
ಆಡ್ಸ್‌ಹೆಡ್ ಮ್ಯಾಂಚೆಸ್ಟರ್‌ನ ಚೀತಮ್ ಹಿಲ್‌ನಲ್ಲಿ ಜನಿಸಿದರು. ಸ್ಟ್ರೆಟ್‌ಫೋರ್ಡ್‌ಗೆ ತೆರಳಿದ ಅವರು ಸ್ಟ್ರೆಟ್‌ಫೋರ್ಡ್ ಗರ್ಲ್ಸ್ ಗ್ರಾಮರ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಸ್ಟ್ರೆಟ್‌ಫೋರ್ಡ್ ಚಿಲ್ಡ್ರನ್ಸ್ ರಂಗಭೂಮಿಯಲ್ಲಿ ಬಾಲನಟಿಯಾಗಿದ್ದರು. ಅವರು ರಾಡಾದಲ್ಲಿ ನಟಿಯಾಗಿ ತರಬೇತಿ ಪಡೆದರು. ಅಲ್ಲಿ ಅವರು ಅತ್ಯುತ್ತಮ ಪ್ರತಿಭೆಗಾಗಿ ಎಮಿಲಿ ಲಿಟ್ಲರ್ ಪ್ರಶಸ್ತಿ ಮತ್ತು ವೇದಿಕೆ-ಹೋರಾಟದಲ್ಲಿ ವೈಯಕ್ತಿಕ ಕೌಶಲ್ಯಕ್ಕಾಗಿ ಬ್ರಿಯಾನ್ ಮೊಸ್ಲೆ ಪ್ರಶಸ್ತಿಯನ್ನು ಗೆದ್ದರು. ಅವರು ೧೯೭೫ ರಲ್ಲಿ ಪದವಿ ಪೂರ್ಣಗೊಳಿಸಿದರು.
ಬಿಬಿಸಿ ಕ್ಲಾಸಿಕ್ ಸರಣಿ ವುಥರಿಂಗ್ ಹೈಟ್ಸ್‌ನಲ್ಲಿ ಕ್ಯಾಥಿ, ಹೌಂಡ್ ಆಫ್ ದಿ ಬಾಸ್ಕರ್‌ವಿಲ್ಲೆಸ್‌ನಲ್ಲಿ ಬೆರಿಲ್ ಸ್ಟೇಪಲ್ಟನ್, ಮೈಕ್ ಲೀ ಅವರ ಬಿಬಿಸಿ ಟಿವಿ ಚಲನಚಿತ್ರ ಕಿಸ್ ಆಫ್ ಡೆತ್‌ನಲ್ಲಿ ಲಿಂಡಾ ಮತ್ತು ನಾಲ್ಕು ಸ್ವೀಕಾರಾರ್ಹ ಲೆವೆಲ್ಸ್ ಚಲನಚಿತ್ರದಲ್ಲಿ ಮತ್ತು ಟಿವಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.[೧]
ಅವರ ಪ್ರದರ್ಶನಗಳು ಹೀಗಿವೆ - ರಾಯಲ್ ನ್ಯಾಶನಲ್ ಥಿಯೇಟರ್ನಲ್ಲಿ ನಡೆದ ಥಿ ಮತ್ತು ಮಿ ನಲ್ಲಿ ಮಾಲ್ ಗ್ರೋಮರ್,[೨]ಹಾರ್ಲೆಕ್ವಿನಡೆಯಲ್ಲಿ ಮುರಿಯಲ್.[೩] ಸರ್ ರಿಚರ್ಡ್ ಐರ್ ನಿರ್ದೇಶಿಸಿದ ಟಚ್ಡ್[೪] ನಲ್ಲಿ ಬೆಟ್ಟಿ, ವೈಟ್ ಸೂಟ್ ಬ್ಲೂಸ್ನಲ್ಲಿ ಕ್ಲಾರಾ ಟ್ವೈನ್ ಪಾತ್ರಕ್ಕಾಗಿ ಹಾಡಿದರು. ಟ್ರಂಪ್ ಅಪೊಲೊ ಪ್ರೊಡಕ್ಷನ್ಸ್ ನ ದಿ ನ್ಯಾಶನಲ್ ವೈಡ್ ಟುರ್ ಅಮಾಡಿಯಸನಲ್ಲಿ ಕೀತ್ ಮಿಚೆಲ್ ಜೊತೆ ಕಾಂಟ್ ಸ್ಟನ್ಜಿ ಯಾಗಿ ಅದರ ಒಂಬತ್ತು-ತಿಂಗಳ ಪ್ರವಾಸವನ್ನು ರಿಚ್ಮಂಡ್ ಥಿಯೇಟರ್ನಲ್ಲಿ ಕೊನೆಗೊಳಿಸಿದರು.[೫] ಕೇವ್ಬ್ರಿಡ್ಜ್ ಥಿಯೇಟರ್ ಕಂಪೆನಿಯ ಮಹಾಕಾವ್ಯ ಐದು ಗಂಟೆಗಳ ನಿರ್ಮಾಣದಲ್ಲಿ ಬ್ಯಾಕ್ ಟು ಮೆಥುಲಹ್ಹ್ ಕಲ್ಮಿನೆಟಿಂಗ್ ಶಾ ಥಿಯೇಟರ್ನಲ್ಲಿ ಈವ್, ಝೂ, ಸ್ಯಾವಿ ಮತ್ತು ನ್ಯೂಲಿ-ಬಾರ್ನ್ ಪಾತ್ರದಲ್ಲಿ ಅಭಿನಯಿಸಿದರು. ಮರ್ಮೆಡ್ ಥಿಯೇಟರ್ನಲ್ಲಿ ನಡೆದ ಟ್ರಾಫರ್ಡ್ ಟಾಂಜಿಯಲ್ಲಿ ತಾನ್ಜಿ ಪಾತ್ರಕ್ಕಾಗಿ ಕುಸ್ತಿಯಾಡಲು ಕಲಿತುಕೊಂಡರು ಮತ್ತು ಲಿರಿಕ್ ಹ್ಯಾಮರ್ಸ್ಮಿತ್ ನ ಮುಖ್ಯ ಮನೆಯಲ್ಲಿ ನಡೆದ ಜ್ಯೂಸಿ ಬೈಟ್ಸ್ ನಲ್ಲಿ ಲಿಜ್ ಯಾಗಿ ಅಭಿನಯಿಸಿದರು.[೬]
೧೯೮೦ ಮತ್ತು ೧೯೯೦ ರ ದಶಕದಲ್ಲಿ ಕೇ ಆಡ್‌ಹೆಡ್ ಫ್ರಿಂಜ್ ಮತ್ತು ಪ್ರಾಯೋಗಿಕ ರಂಗಭೂಮಿ ನಿರ್ಮಾಣದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ದಿ ಬಿಲ್, ಡಿಕ್ ಟರ್ಪಿನ್, ವಿಕ್ಟೋರಿಯಾ ವುಡ್: ಆಸ್ ಸೀನ್ ಆನ್ ಟಿವಿ, ಓವರ್ ಟು ಪಾಮ್, ವಿಕ್ಟೋರಿಯಾ ವುಡ್ಸ್‌ನ ಸಂಚಿಕೆ ಸೇರಿದಂತೆ ದೂರದರ್ಶನದ ಹಲವಾರು ಕಾರ್ಯಕ್ರಮಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ನಾಟಿಂಗ್ಹ್ಯಾಮ್ ಪ್ಲೇಹೌಸ್‌ನಲ್ಲಿ ಟ್ವೆಲ್ಫ್ತ್ ನೈಟ್‌ನಲ್ಲಿ ವಿಯೋಲಾ ಪಾತ್ರವನ್ನು ಒಳಗೊಂಡಂತೆ ಪ್ರಾದೇಶಿಕ ಮತ್ತು ರೆಪರ್ಟರಿ ಕಂಪನಿಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ದಿ ಮ್ಯಾನ್ ಇನ್ ದಿ ಮೂನ್‌ನಲ್ಲಿ ಎರಿಕ್ ಓವರ್‌ಮಿಯರ್ ಅವರ ಆನ್ ದಿ ವರ್ಜ್, ಹೋವರ್ಡ್ ಬಾರ್ಕರ್ ಅವರ ದಿ ಪಾಸಿಬಿಲಿಟೀಸ್, ಕ್ಯಾರಿಲ್ ಚರ್ಚಿಲ್ ಅವರ ಫೆನ್ ಮತ್ತು ಡೇವಿಡ್ ಎಡ್ಗರ್ ಅವರ ಎಂಟರ್‌ಟೈನಿಂಗ್ ಸ್ಟ್ರೇಂಜರ್ಸ್ ಸೇರಿದಂತೆ ದಿ ಲಿರಿಕ್ ಹ್ಯಾಮರ್‌ಸ್ಮಿತ್ ಸ್ಟುಡಿಯೋದಲ್ಲಿ ಆಡ್‌ಹೆಡ್ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವರು ದಿ ಬುಷ್‌ನಲ್ಲಿ[೭] ಬೋನ್ಸ್, ದಿ ಸಿಂಗಿಂಗ್ ಸ್ಟೋನ್ಸ್ ಅಟ್ ದಿ ಆರ್ಕೋಲಾ[೮] ಮತ್ತು ಥಿಯೇಟರ್ ೫೦೩ ನಲ್ಲಿ ಆಕ್ಟ್ಸ್ ಆಫ್ ಡಿಫೈಯನ್ಸ್ ಬರೆದು ನಿರ್ದೇಶಿಸಿದ್ದಾರೆ. ಅವರು ದಿ ಎನ್‌ಕ್ವೈರಿ ಮತ್ತು ದಿ ಲಂಡನ್ ಸಮ್ಮರ್ (ಎರಡು ಕಿರುಚಿತ್ರಗಳು) ಮತ್ತು ಯಾರಾದರೂ ಗುರುತಿಸಿದರೆ ಈ ಯುವ ಜನರನ್ನು ರೌಂಡ್‌ಹೌಸ್ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಿದರು ಮತ್ತು ನಿರ್ದೇಶಿಸಿದರು.
೧೯೯೯ ರಲ್ಲಿ ಲುಸಿಂಡಾ ಗೇನ್ ಅವರೊಂದಿಗೆ ಸೇರಿ ಮಾಮಾ ಕ್ವಿಲ್ಲಾ ಎಂಬ ನಾಟಕ ಕಂಪನಿಯನ್ನು ಸಹ ಸ್ಥಾಪಿಸಿದರು. ಅವರು ಟ್ರಾವರ್ಸ್ ಮತ್ತು ಬುಷ್‌ನಲ್ಲಿ ದಿ ಬೋಗಸ್ ವುಮನ್[೯], ಬುಷ್ ಥಿಯೇಟರ್‌ನಲ್ಲಿ ಬೈಟ್ಸ್[೧೦] ಮತ್ತು ಬೋನ್ಸ್ ಅನ್ನು ಹೇಮಾರ್ಕೆಟ್, ಲೀಸೆಸ್ಟರ್ ಮತ್ತು ಬುಷ್ ನಿರ್ಮಿಸಿದ್ದಾರೆ.[೧೧] ಬೋಗಸ್ ವುಮನ್, ಬೈಟ್ಸ್ ಮತ್ತು ಬೋನ್ಸ್ ಅನ್ನು ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಯಿತು ಮತ್ತು ಎಲ್ಲವನ್ನೂ ಒಬೆರಾನ್ ಬುಕ್ಸ್ ಪ್ರಕಟಿಸಿದೆ.
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
೧೯೮೩ | ಅಸೆಪ್ಟ್ಎಬಲ್ ಲೆವೆಲ್ಸ್ | ಸುಯಿ | |
೧೯೮೫ | ಆಪರೇಷನ್ ಜೂಲಿ | 'ಸ್ವಾನ್' | ಟಿವಿ ಚಲನಚಿತ್ರ |
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
೧೯೭೭ | ಪ್ಲೇ ಫ಼ಾರ್ ಟುಡೆ | ಲಿಂಡಾ | ಸಂಚಿಕೆ: "ದಿ ಕಿಸ್ ಆಫ್ ಡೆತ್" |
೧೯೭೮ | ವುಥರಿಂಗ್ ಹೈಟ್ಸ್ | ಕ್ಯಾಥರೀನ್ 'ಕ್ಯಾಥಿ' ಅರ್ನ್‌ಶಾ | ಕಿರುಸರಣಿ |
೧೯೮೨ | ಡಿಕ್ ಟರ್ಪಿನ್ | ಜುಲ್ಸ್ಕಾ | ಸಂಚಿಕೆ: "ದಿ ಸೀಕ್ರೆಟ್ ಫೋಕ್" |
ಪ್ಲೇ ಫ಼ಾರ್ ಟುಡೆ | ಹೋಟೆಲ್ ವೈಟ್ರೆಸ್ | ಸಂಚಿಕೆ: "ಸಾಫ್ಟ್ ಟಾರ್ಗೆಟ್ಸ್" | |
ದಿ ಹೌಂಡ್ ಆಫ್ ದಿ ಬಾಸ್ಕರ್ವಿಲ್ಲೆಸ್ | ಬೆರಿಲ್ ಸ್ಟೇಪಲ್ಟನ್ | ೩ ಸಂಚಿಕೆಗಳು | |
೧೯೮೫ | ವಿಕ್ಟೋರಿಯಾ ವುಡ್ | ಫ್ರೆಡಾ | ೧ ಸಂಚಿಕೆಗಳು |
೧೯೮೮ | ದಿ ಬಿಲ್ | ಜೋನ್ನಾ ಮಾನ್ಸಿನಿ | ಸಂಚಿಕೆ: "ಟ್ರಬಲ್ & ಸ್ಟ್ರಿಫ್ಫ್" |
೧೯೮೯ | ವಿಕ್ಟೋರಿಯಾ ವುಡ್ | ಲೋರೆನ್ ಸ್ಪೆನ್ಸ್ | ಸಂಚಿಕೆ: "ಓವರ್ ಟು ಪಾಮ್" |
೧೯೯೦ | ಒನ್ ಫ಼ುಟ್ ಇನ್ ದಿ ಗ್ರೇವ್ | ಕೀಪ್ ಪಿಟ್ ಇನ್ಸ್ಟ್ರಕ್ಟ್ರೆಸ್ | ಸಂಚಿಕೆ: "ದಿ ಬಿಗ್ ಸ್ಲೀಪ್" |
೧೯೯೨ | ಎ ಬಿಟ್ ಫ್ರೈ & ಲಾರಿ | ಸಾರಾ/ಶ್ರೀಮತಿ. ಮೆಡ್ಲಿಕಾಟ್ | ೧ ಸಂಚಿಕೆ |
೧೯೯೩ | ದಿ ಬಿಲ್ | ಮಾರ್ಗರೇಟ್ ರೇಗಿಸ್ | ಸಂಚಿಕೆ: "ನೋ ಪ್ಲೇಸ್ ಲೈಕ್ ಹೋಮ್" |
೧೯೯೪ | ಮದರ್ಸ್ ರುಯೆನ್ | ವೆಂಡಿ ವ್ಯಾಟ್ಸನ್ | ಸೀರಿಸ್ ರೆಗ್ಯುಲರ್ |
೧೯೯೭ | ಕ್ರೈಮ್ ಟ್ರಾವೆಲರ್ | ಲಿನ್ಡ | ಸಂಚಿಕೆ: "ಎ ಡೆತ್ ಇನ್ ದಿ ಫ್ಯಾಮಿಲಿ" |
೧೯೯೭-೧೯೯೯ | ಫ್ಯಾಮಿಲಿ ಅಪೆರ್ | ಬಾರ್ಬರಾ ಫ್ಲೆಚರ್ | ಸರಣಿ ನಿಯಮಿತ |
೨೦೦೦ | ಡಿನ್ನರ್ಲೇಡೀಸ್ | ಕ್ರಿಸ್ಟಿನ್ | ಸಂಚಿಕೆ: "ಕ್ರಿಸ್ಟಿನ್" |
ಎಫ಼್.ಒ.ಎಮ್.ಒ. - ೨೦೧೩ - ಮಾಮಾ ಕ್ವಿಲ್ಲಾ ಪ್ರೊಡಕ್ಷನ್ಸ್ / ಬ್ರಾಡ್ವೇ ರಂಗಭೂಮಿ, ಬಾರ್ಕಿಂಗ್