ಕೊಂಡಜ್ಜಿ ಕೆರೆ

ಕೊಂಡಜ್ಜಿ ಕೆರೆಯು ದಾವಣಗೆರೆ ಯಿಂದ ೧೩ ಕಿ.ಮೀ ದೂರದಲ್ಲಿದೆ ಹಾಗು ಹರಿಹರ ದಿಂದ ಕೂಡ ೧೩ ಕಿ.ಮೀ ದೂರದಲ್ಲಿದೆ. ಇದನ್ನು ಕೊಂಡಜ್ಜಿ ಎಂಬ ಗ್ರಾಮದ ಬಳಿ ನಿರ್ಮಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಎರಡು ಗುಡ್ಡಗಳ ನಡುವೆ ಕಟ್ಟೆ ಕಟ್ಟಿ ವಿಶಾಲವಾದ ಕೆರೆ ನಿರ್ಮಿಸಲಾಗಿದೆ. ಬಯಲುಸೀಮೆಯ ನಿಸರ್ಗ ರಮಣೀಯ ತಾಣವಾದ ಕೊಂಡಜ್ಜಿಯಲ್ಲಿ ಕೆರೆಯ ಪರಿಸರ ಆಹ್ಲಾದಕರವಾಗಿದೆ. ಕೆರೆಯಲ್ಲಿ ಸರಕಾರದ ವತಿಯಿಂದ ದೋಣಿ ವಿಹಾರಕ್ಕೆ ಅನುಕೂಲವಿದೆ. ಕೆರೆಯ ಬಲಬಾಗಕ್ಕೆ ವಿಶಾಲವಾದ ಅರಣ್ಯ ಪ್ರದೇಶವಿದೆ ಹಾಗು ಇಲ್ಲಿ ಅರಣ್ಯ ಇಲಾಖೆಯವರು ಅತಿಥಿ ಗೃಹ ನಿರ್ಮಿಸಿದ್ದಾರೆ. ಈ ಕಾಡಿನಲ್ಲಿ ಅನೆಕ ಬಗೆಯ ಪ್ರಾಣಿ, ಪಕ್ಷಿಗಳು ಇವೆ. ಅದರಲ್ಲು ಇದು ಪಕ್ಷಿ ಪ್ರಿಯರಿಗೆ ಅತ್ಯಂತ ಪ್ರೀತಿ ಪಾತ್ರವಾದ ಸ್ಠಳ. ಕೆರೆಯಲ್ಲಿ ಮೀನುಗಾರಿಕೆಯನ್ನು ಕೂಡ ಮಾಡುತ್ತಾರೆ.

ಇದು ಪ್ರಮುಖ ಸ್ಕೌಟ್ ಮತ್ತು ಗೈಡ್ ತರಬೇತಿ ಕೇಂದ್ರ.

ಉಲ್ಲೇಖಗಳು

[ಬದಲಾಯಿಸಿ]