ಕೊಪ್ಪ

ಕೊಪ್ಪ

ಕೊಪ್ಪ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಮಗಳೂರು
ನಿರ್ದೇಶಾಂಕಗಳು 13.55° N 75.35° E
ವಿಸ್ತಾರ
 - ಎತ್ತರ
 km²
 - 763 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
19226
 - /ಚದರ ಕಿ.ಮಿ.

ಕೊಪ್ಪ ಪಟ್ಟಣ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕೊಪೇಶ್ವರ ಸ್ವಾಮಿಯ ದೇವಾಲಯವು ಕೊಪ್ಪದಲ್ಲಿ ಇರುವ ಕಾರಣ ಈ ಪ್ರಾಂತ್ಯಕ್ಕೆ ಕೊಪ್ಪ ಎಂಬ ಹೆಸರು ಬಂತೆಂದು ಹೇಳುತ್ತಾರೆ. ಆದರೆ ಇಂದಿನ ಕೊಪ್ಪಕ್ಕೂ ಆಗಿನ ಪ್ರತೀತಿಗೂ ಸಂಬಂಧವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ. ಶಾಲಾ ಕಾಲೇಜುಗಳು, ಆಯುರ್ವೇದ ಕಾಲೇಜು, ಆಸ್ಪತ್ರೆ, ಇತ್ಯಾದಿ ಇತ್ಯಾದಿ ಎಲ್ಲಾ ನಾಗರಿಕ ಸೌಲಭ್ಯಗಳನ್ನೂ ಹೊಂದಿದೆ. ಮಲೆನಾಡಿನ ಮಧ್ಯದ, ಪ್ರಕೃತಿ ಸೌಂದರ್ಯ ಯಥೇಚ್ಛವಾಗಿರುವ ಈ ಊರಿಗೆ "ಕರ್ನಾಟಕಕಾಶ್ಮೀರ" ಎಂದೂ ಅನ್ನುವುದುಂಟು.

ಕಾರ್ಮಿಕರೇ ಒಂದುಗೂಡಿ ಸಹಕಾರಿ ಪದ್ಧತಿಯಲ್ಲಿ ಸಾರಿಗೆ ಬಸ್ಸುಗಳನ್ನು "ಸಹಕಾರ ಸಾರಿಗೆ" ಎಂಬ ಹೆಸರಿನಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಅಪರೂಪದ ಪ್ರಯತ್ನ ಈ ಊರಿನಲ್ಲಿ ನೋಡಸಿಗುತ್ತದೆ.


ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ತಾಲೂಕಿನ ಪ್ರಮುಖ ಊರುಗಳು

[ಬದಲಾಯಿಸಿ]

'

ಹೆಚ್ಚಿನ ಮಾಹಿತಿಗಳು

[ಬದಲಾಯಿಸಿ]

ಈ ಸ್ಥಳಕ್ಕೆ ಕೊಪ್ಪ ಎಂದು ಹೆಸರು ಬರಲು ಕಾರಣ ಈ ಊರಿನ "ಕೋಪದ ವೀರಭದ್ರ ಸ್ವಾಮಿ". ಬಹಳ ವರ್ಷಗಳಿಂದ ಇಲ್ಲಿನ ನಿವಾಸಿಗಳು ಭಕ್ತಿಯಿಂದ ಈ ದೇವಸ್ಥಾನಕ್ಕೆನಡೆದುಕೊಳ್ಳುತ್ತಾ ಬಂದಿದ್ದಾರೆ. ಚೈತ್ರಮಾಸದ ಹುಣ್ನಿಮೆಯಂದು ನಡೆಯುವ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಇದೇ ಸಮಯದಲ್ಲಿ ಹರಕೆ ಇತ್ಯಾದಿ ಆಚರಣೆಗಳು ನಡೆಯುತ್ತವೆ.

ಶೈಕ್ಷಣಿಕ ಮಾಹಿತಿ

[ಬದಲಾಯಿಸಿ]

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿವೆ. Jnanavahini English Medium High School , ಶ್ರೀ ವೆಂಕಟೇಶ್ವ ರ ವಿದ್ಯಾಮಂದಿರ , ಶ್ರಿ ಶಾರದ ವಿದ್ಯಾ ಮಂದಿರ,ಹಾಗೂ ಇನ್ನಿತರ ಅನೇಕ ಶಾಲೆಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನೀಡುತ್ತಿವೆ.

ಪದವಿಪೂರ್ವಾನಂತರ ವಿದ್ಯಾಭ್ಯಾಸಕ್ಕೆ ತಾಲ್ಲೂಕಿನಲ್ಲಿ "ಪ್ರಥಮದರ್ಜೆ ಕಾಲೇಜು (ಬಾಳಗಡಿ)" ಹಾಗೂ "ಆರೂರು ಲಕ್ಷ್ಮೀನಾರಾಯಣರಾವ್ ಸ್ಮಾರಕ ಆಯುರ್ವೇದ ಮಹಾವಿದ್ಯಾಲಯ" ಇದ್ದು ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿವೆ.

ಸರ್ಕಾರದಿಂದ ವೃತ್ತಿಪರ ಶಿಕ್ಷಣಕೇಂದ್ರ ಹೊಸ ವ್ಯವಸ್ಥೆಗಳೊಂದಿಗೆ ನಡೆಯುತ್ತಿದ್ದು ಕೈಗಾರಿಕಾ ತರಬೇತಿ ನೀಡಲಾಗುತ್ತಿದೆ.

ಸಂಸ್ಕೃತ ಹಾಗೂ ವೇದಪಾಠ ಅಭ್ಯಾಸಕ್ಕಾಗಿ ಹರಿಹರಪುರದ ಶ್ರೀಮಠದ ಚಿತ್ರಕೂಟದಲ್ಲಿ ವ್ಯವಸ್ಥಿತ ಗುರುಕುಲವಿದ್ದು ನಾನಾ ಪ್ರದೇಶಗಳಿಂದ ಆಸಕ್ತರು ವಿದ್ಯಾಭ್ಯಾಸ ಮಾಡಲು ಬರುತ್ತಾರೆ.