Kollegal
ಕೊಳ್ಳೇಗಾಲ | |
---|---|
city | |
Nickname(s): Silk City, ರೇಷ್ಮೆ ನಗರಿ | |
Country | India |
State | ಕರ್ನಾಟಕ |
District | Chamarajanagar district |
Area | |
• Total | ೨೭.೪೭ km೨ (೧೦.೬೧ sq mi) |
Elevation | ೫೮೭ m (೧,೯೨೬ ft) |
Population (2001) | |
• Total | ೫೨,೬೦೭ |
• ಸಾಂದ್ರತೆ | ೧,೯೧೫.೦೭/km೨ (೪,೯೬೦�೦/sq mi) |
Languages | |
• Official | Kannada |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
PIN | 571 440 |
Telephone code | 08224 |
ವಾಹನ ನೋಂದಣಿ | KA-10 |
ಜಾಲತಾಣ | [<span%20class="url"> |
ಕೊಳ್ಳೇಗಾಲ
ಕೊಳ್ಳೇಗಾಲ | |
---|---|
town | |
Population (2001) | |
• Total | ೫೨,೬೦೭ |
ಕೊಳ್ಳೇಗಾಲ ದಕ್ಷಿಣ ಭಾರತದಲ್ಲಿರುವ ಕರ್ನಾಟಕ ರಾಜ್ಯದ ಚಾಮರಾಜನಗರದ ಜಿಲ್ಲೆಯ ಪ್ರಮುಖ ತಾಲೂಕು. ಕೊಳ್ಳೇಗಾಲವು ಇಲ್ಲಿಯ ರೇಷ್ಮೆಉದ್ಯಮಕ್ಕೆ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಉದ್ಯಮವು ರಾಜ್ಯಾದ್ಯಂತ ರೇಷ್ಮೆ ವ್ಯಾಪಾರಿಗಳನ್ನು ಆಕರ್ಷಿಸುತ್ತದೆ.
ಕರ್ನಾಟಕದ ದೊಡ್ಡ ತಾಲ್ಲೂಕುಗಳಲ್ಲಿ ಇದು ಒಂದಾಗಿದೆ. ಮುಂಚೆ ಇದೇ ಅತೀ ದೊಡ್ಡ ತಾಲ್ಲೂಕಾಗಿತ್ತು. ಕೊಳ್ಳೇಗಾಲ ತಾಲ್ಲೂಕನ್ನು ವಿಭಾಗ ಮಾಡಿ, ಚಾಮರಾಜನಗರ ಜಿಲ್ಲೆಯ ಹೊಸ ತಾಲ್ಲೂಕನ್ನು ಮಾಡಿ, ಅದಕ್ಕೆ ಹನೂರು ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಗಿದೆ. ಕೊಳ್ಳೇಗಾಲ ಪಟ್ಟಣದ ಜನಸಂಖ್ಯೆ ೨೦೦೫ರಲ್ಲಿ ಅಂದಾಜಿನ ಪ್ರಕಾರ ೫೫,೪೩೨. ಕೊಳ್ಳೇಗಾಲ , ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ದಕ್ಷಿಣದ ಮೂಲೆಯಲ್ಲಿರುವ ಪಟ್ಟಣ . ಕೊಳ್ಳೇಗಾಲವು ರೇಷ್ಮೆ ನೂಲು ಮತ್ತು ರೇಷ್ಮೆ ನೇಯ್ಗೆಗೆ ಹೆಸರುವಾಸಿಯಾಗಿದೆ . ಕರ್ನಾಟಕದ ಅಧಿಕೃತ ಭಾಷೆಯಾದ ಕನ್ನಡ ಮತ್ತು ತಮಿಳು ಎರಡನ್ನೂ ಅಲ್ಲಿ ಮಾತನಾಡುತ್ತಾರೆ, ಕೊಳ್ಳೇಗಾಲವು ತಮಿಳು ಮಾತನಾಡುವ ಪ್ರದೇಶಗಳಿಗೆ ಹತ್ತಿರದಲ್ಲಿದೆ ಮತ್ತು 1956 ರ ಮೊದಲು ಇದು ಮದ್ರಾಸ್ ರಾಜ್ಯದ ಭಾಗವಾಗಿತ್ತು. ಬುಡಕಟ್ಟು ಗುಂಪುಗಳು ಪಟ್ಟಣದ ಸುತ್ತಲೂ ದೊಡ್ಡ ಪ್ರಮಾಣದ ಭೂಮಿ ಮತ್ತು ಅರಣ್ಯವನ್ನು ಆಕ್ರಮಿಸಿಕೊಂಡಿವೆ. . ಪಾಪ್ (2001) 52,607.[೧] ಕೊಳ್ಳೇಗಾಲ ಈ ಭಾಗದ ಪಿಯುಸಿ ಶಿಕ್ಷಣ ಕೇಂದ್ರವಾಗಿದೆ.
ಗಂಧದಕಳ್ಳ ಹಾಗೂ ದಂತಚೋರನಾಗಿದ್ದ ವೀರಪ್ಪನ್ ಕೊಳ್ಳೇಗಾಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ. ಬಹಳಷ್ಟು ಜನ ಪ್ರವಾಸಿಗರು ಕೊಳ್ಳೇಗಾಲವನ್ನು ಭೇಟಿ ಮಾಡುತ್ತಾರೆ. ಮಲೆ ಮಹದೇಶ್ವರ ಬೆಟ್ಟ, ಮತ್ತು ಇದರ ಹತ್ತಿರವಿರುವ ಹೊಗೆನ್ಕಲ್ ಜಲಪಾತ ಹಾಗೂ ಶಿವನ ಸಮುದ್ರದ (ಬ್ಲಫ್ ಎಂದು ಕೂಡ ಕರೆಯಲ್ಪಡುವ) ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕೆಲವು ಜನಪ್ರಿಯ ಸ್ಥಳಗಳು. ಬಿಳಿಗಿರಿ ರಂಗನ ಬೆಟ್ಟ (ಬಿ.ಆರ್. ಹಿಲ್ಸ್, ಎಂದು ಕರೆಯಲಾಗುವ) ಕೊಳ್ಳೇಗಾಲ ಪಟ್ಟಣದಿಂದ ಕೇವಲ ೩೦ ಕಿ.ಮೀ. ದೂರದಲ್ಲಿದೆ. ಈ ಬೆಟ್ಟಕ್ಕೆ ಹೋಗುವ ಪ್ರಯಾಣ, ಒಂದು ರೋಮಾಂಚಕ ಅನುಭವ ಕೊಡುತ್ತದೆ. ಈ ಬೆಟ್ಟದ ಮೇಲಿಂದ ನೀವು ಕಾಣುವ ಚಿತ್ರಣವು ಬಹಳ ಅನುರೂಪವಾಗಿದ್ದು, ನಿಮ್ಮ ಜೀವನ ಪರ್ಯಂತ ನೀವು ಇದನ್ನು ಮರೆಯುವುದಿಲ್ಲ. ಮರಳಿನಲ್ಲಿರುವ ತಲಕಾಡಿನ ದೇವಸ್ಥಾನಗಳು ಕೂಡ ಬಹಳ ಜನಪ್ರಿಯ. ಈ ತಾಲೂಕಿನ ಹಲವಾರು ಗ್ರಾಮಗಳು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವುದರಿಂದ ಭಾಷಾ ಸಾಮರಸ್ಯವನ್ನು ಕಾಣಬಹುದಾಗಿದೆ. ಇಲ್ಲಿನ ಹಲವಾರು ಗ್ರಾಮಸ್ಥರು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡಬಲ್ಲರು.
[೨]
ಕೊಳ್ಳೇಗಾಲವು 12°09′N 77°07′E / 12.15°N 77.12°E ರಲ್ಲಿ ಸ್ಥಿತವಾಗಿದೆ[೩]. ಅದು ಸರಾಸರಿಯಾಗಿ ೫೮೮ ಮೀಟರ್ (೧೯೨೯ ಅಡಿ) ಯಷ್ಟು ಸರಾಸರಿ ಎತ್ತರವನ್ನು (ಎಲಿವೇಷನ್) ಹೊಂದಿದೆ. ಇದು ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಕಾರಣ ಈ ಪಟ್ಟಣವು ಮಿಶ್ರವಾದ ಮೇಲ್ಮೈ ಲಕ್ಷಣಗಳ ತವರಾಗಿದೆ. ವಿವಿಧ ಬಗೆಯ ಪಕ್ಷಿಗಳು ವರ್ಷ ಪೂರ್ತಿ ಇಲ್ಲಿರುವ ಸುಂದರವಾದ ಕೆರೆಗಳಲ್ಲಿ ವಾಸಿಸುತ್ತದೆ. ತಾಪಮಾನ ಹದವಾಗಿದೆ. ಭೂಕಂಪ, ಪ್ರವಾಹದಂತಹ ಇತರೆ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳು ಇಲ್ಲಿ ಸಂಭವಸುವುದಿಲ್ಲ. ಆದುದರಿಂದ ಕೊಳ್ಳೇಗಾಲವು ಭೌಗೋಳಿಕವಾಗಿ,ಬಹಳ ಸುರಕ್ಷಿತವಾದ ಪ್ರದೇಶ.
As of 2001[update] ಭಾರತ ಜನಗಣತಿ GRIndia ಯ ಪ್ರಕಾರ, ಕೊಳ್ಳೇಗಾಲದ ಜನಸಂಖ್ಯೆ ೫೨,೪೫೦. ಒಟ್ಟು ಜನಸಂಖ್ಯೆಯಲ್ಲಿ ೫೧% ಪುರುಷರೂ ಮತ್ತು ೪೯% ಮಹಿಳೆಯರೂ ಇದ್ದಾರೆ. ಕೊಳ್ಳೇಗಾಲದ ಸರಾಸರಿ ಸಾಕ್ಷರತೆ ಪ್ರಮಾಣ ೬೯%, ಇದು ರಾಷ್ಟ್ರದ ಸರಾಸರಿ ಸಾಕ್ಷರತೆಯ ಪ್ರಮಾಣವಾದ ೫೯.೫% ಗಿಂತ ಜಾಸ್ತಿಯಿದೆ. ಪುರುಷರ ಸಾಕ್ಷರತೆ : ೭೪%, ಮಹಿಳಾ ಸಾಕ್ಷರ ಪ್ರಮಾಣ: ೬೪%. ಕೊಳ್ಳೇಗಾಲದ ಜನಸಂಖ್ಯೆಯ ೧೦% ರಷ್ಟು ಆರು ವರ್ಷ ಅಥವಾ ಅದಕ್ಕಿಂತ ಕೆಳೆಗಡೆ ಇದ್ದಾರೆ. ಕೊಳ್ಳೇಗಾಲದ ಜನತೆ ಮೈಸೂರು, ಬೆಂಗಳೂರಿನಲ್ಲಿ ಮಾತನಾಡುವ ಕನ್ನಡಕ್ಕಿಂತ ಭಿನ್ನವಾದ ಶೈಲಿಯಲ್ಲಿ ಮಾತನಾಡುತ್ತದೆ. ಕನ್ನಡದ ಈ ವಿಶಿಷ್ಠವಾದ ಶೈಲಿಯಲ್ಲಿ ಸ್ನೇಹಿತರೊಂದಿಗೆ ಮಾತಾನಾಡುವಾಗ 'ಡಾ' ಎಂದು ಸೇರಿಸಲಾಗುತ್ತದೆ. ಕೊಳ್ಳೇಗಾಲದ ಭಾಗದಲ್ಲಿ ಮಾತನಾಡುವ ಕನ್ನಡವನ್ನು ೨೦೦೫ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ್ ಆಭಿನಯದ ಜೋಗಿ ಚಿತ್ರದಲ್ಲಿ ಬಳಸಲಾಗಿದೆ.[೪]