ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಮಹಾರಾಷ್ಟ್ರ |
ವಿವರಗಳು | |
ನಮೂನೆ | ಕರಿ |
ಮುಖ್ಯ ಘಟಕಾಂಶ(ಗಳು) | ಚಿಕನ್ ಕರಿ, ವಡೆ (ಅಕ್ಕಿ ಅಥವಾ ಬೇರೆ ಹಿಟ್ಟು), ಈರುಳ್ಳಿಗಳು, ನಿಂಬೆ ರಸ, ಸೋಲ್ ಕಢಿ (ತೆಂಗಿನ ಹಾಲು) |
ಕೋಂಬಡಿ ವಡೆ ಭಾರತದ ಮಹಾರಾಷ್ಟ್ರ ರಾಜ್ಯದ ಕೊಂಕಣ ಪ್ರದೇಶದ ಸ್ಥಳೀಯ ಭಕ್ಷ್ಯವಾಗಿದೆ. ಈ ಭಕ್ಷ್ಯದಲ್ಲಿ ಸಾಂಪ್ರದಾಯಿಕ (ಮೂಳೆಗಳೊಂದಿಗೆ ಚಿಕನ್ ತುಂಡುಗಳನ್ನು ಒಳಗೊಂಡಂತೆ) ಚಿಕನ್ ಕರಿ, ವಡೆ (ಅಕ್ಕಿ ಹಿಟ್ಟಿನಿಂದ, ಮತ್ತು ಸಾಂದರ್ಭಿಕವಾಗಿ ಗೋಧಿ ಮತ್ತು ರಾಗಿ ಹಿಟ್ಟಿನಿಂದ ಮಾಡಿದ ತುಪ್ಪುಳಿನಂತಿರುವ ಕರಿದ ಪಣಿಯಾರಗಳು), ಈರುಳ್ಳಿ, ನಿಂಬೆ ರಸ ಮತ್ತು ಸೋಲ್ ಕಢಿ (ತೆಂಗಿನ ಹಾಲಿನಿಂದ ತಯಾರಿಸಿದ ಗ್ರೇವಿ). ಈ ಖಾದ್ಯವನ್ನು ಪ್ರಮುಖವಾಗಿ "ಗಟಹಾರಿ (ದೀಪ ಅಮಾವಾಸ್ಯೆ)", "ಗೌರಿ ಒವಾಸೆ", "ದೇವ್ ದೀಪಾವಳಿ" ಮತ್ತು "ಶಿಮ್ಗಾ" ಸಂದರ್ಭದಲ್ಲಿ ಕೊಂಕಣದ ರಾಯಗಡ, ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಈ ಖಾದ್ಯವು ವರ್ಷವಿಡೀ ಮುಂಬೈ ಸೇರಿದಂತೆ ವಿಶೇಷವಾಗಿ ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಲಭ್ಯವಿರುತ್ತದೆ.[೧][೨][೩]