ಕೌಶಲ್ಯ ಅಣೆಕಟ್ಟು | |
---|---|
ಚಿತ್ರ:Kaushalya dam, Pinjor, district panchkula, Haryana, India.JPG | |
ಸ್ಥಳ | ಪಿಂಜೋರ್, ಹರಿಯಾಣ |
ಕೌಶಲ್ಯ ಅಣೆಕಟ್ಟು ಭಾರತದ ಹರಿಯಾಣ ರಾಜ್ಯದ ಪಿಂಜೋರ್‌ನಲ್ಲಿ ಘಗ್ಗರ್-ಹಕ್ರಾ ನದಿಯ [೧] (ಪ್ರಾಚೀನ ಸರಸ್ವತಿ ನದಿಯ ಆಧುನಿಕ ಅವಶೇಷ ) ಉಪನದಿಯಾಗಿರುವ ಕೌಶಲ್ಯ ನದಿಯ ಮೇಲೆ ಭೂಮಿ ತುಂಬುವ ಒಡ್ಡು ಅಣೆಕಟ್ಟಾಗಿದೆ. ಇದನ್ನು ೨೦೦೮ ಮತ್ತು ೨೦೧೨ ರ ನಡುವೆ ನೀರಿನ ಪೂರೈಕೆಯ ಪ್ರಾಥಮಿಕ ಉದ್ದೇಶದಿಂದ ನಿರ್ಮಿಸಲಾಯಿತು.[೨]
ಕೌಶಲ್ಯ ಬ್ಯಾರೇಜ್ ಮತ್ತು ಕೌಶಲ್ಯ ನದಿಯ ಮೇಲಿನ ಅಣೆಕಟ್ಟು ಚಂಡೀಗಢದಿಂದ ೨೧ಕಿ.ಮೀ.,[೩] ಪಂಚಕುಲ ನಗರದಿಂದ ಹಾಗೂ ಪಂಚಕುಲ ಬಳಿಯ ಖೋಲ್ ಹಿ-ರೈತನ್ ವನ್ಯಜೀವಿ ಅಭಯಾರಣ್ಯದಿಂದ ೧೨ಕಿ.ಮೀ.,[೪] ಪಿಂಜೋರ್ ನಗರದಿಂದ ೫ಕಿ.ಮೀ.,[೫] ಮತ್ತು ಪಿಂಜೋರ್ ಬಳಿಯ ಬಿರ್ ಶಿಕರ್ಗಾ ವನ್ಯಜೀವಿ ಅಭಯಾರಣ್ಯದಿಂದ ೧೩ಕಿ.ಮೀ. ದೂರವಿದೆ.
ಘಗ್ಗರ್ ನದಿಯ ಮೇಲೆ ಅಣೆಕಟ್ಟು ನಿರ್ಮಿಸುವ ಮೊದಲ ಯೋಜನೆಯು ೧೯ನೇ ಶತಮಾನದ ಮಧ್ಯಭಾಗದಲ್ಲಿ ಅಂಬಾಲಾ ಕಂಟೋನ್ಮೆಂಟ್‌ಗೆ ಕುಡಿಯುವ ನೀರನ್ನು ಒದಗಿಸಲು ಮೊದಲು ಪ್ರಸ್ತಾಪಿಸಿತು.[೬]
ಚಂಡೀಗಢಕ್ಕೆ ನೀರು ಒದಗಿಸಲು ಮತ್ತು ಭಾರತದ ಪಂಜಾಬ್‌ನಲ್ಲಿ ಪ್ರವಾಹವನ್ನು ನಿಯಂತ್ರಿಸಲು ಚಂಡಿಮಂದಿರದ ಬಳಿ ಗುಮ್ತಾಲಾದಲ್ಲಿ ಘಗ್ಗರ್ ನದಿಗೆ ಅಣೆಕಟ್ಟು ನಿರ್ಮಿಸಲು ೧೯೬೦ ರ ದಶಕದಲ್ಲಿ ಪ್ರಸ್ತಾವನೆಯನ್ನು ಮರುಪರಿಶೀಲಿಸಲಾಯಿತು. ಈ ಯೋಜನೆಯನ್ನು ೧೯೯೯ ರಲ್ಲಿ ಕೈಬಿಡಲಾಯಿತು. ಏಕೆಂದರೆ ಇದರಿಂದ ೪೦೦೦ ಎಕರೆ (೧೬೦೦ಹೆಕ್ಟೇರ್) ಯಷ್ಟು ಭೂಮಿ ಮುಳುಗುತ್ತದೆ ಹಾಗೂ ಇದು ಹೆಚ್ಚಿನ ಸಂಖ್ಯೆಯ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.[೨]
೨೦೦೫ ರಲ್ಲಿ, ಘಗ್ಗರ್ ನದಿಯ ಉಪನದಿಗಳ ಮೇಲೆ ಸಣ್ಣ ಅಣೆಕಟ್ಟುಗಳ ಸರಣಿಯನ್ನು ನಿರ್ಮಿಸುವ ಪರಿಷ್ಕೃತ ಯೋಜನೆಯನ್ನು ಹರಿಯಾಣ ಸರ್ಕಾರವು ಅನುಮೋದಿಸಿತು ಮತ್ತು ಕೌಶಲ್ಯ ಅಣೆಕಟ್ಟಿನ ನಿರ್ಮಾಣವು ೨೦೦೮ ರಲ್ಲಿ ಪ್ರಾರಂಭವಾಗಿ, ೨೦೧೨ ರಲ್ಲಿ ಪೂರ್ಣಗೊಂಡಿತು.[೨][೬]
ಹರಿಯಾಣ ಸರ್ಕಾರವು ನಿರ್ಮಿಸಿದ ಕೌಶಲ್ಯ ಅಣೆಕಟ್ಟು ೭೦೦ ಮೀ (೨೩೦೦ಫೀಟ್) ಉದ್ದ ಮತ್ತು ೩೪ಮೀ (೧೧೨ಫೀಟ್) ಎತ್ತರದ ಮಣ್ಣು ತುಂಬಿದ ಅಣೆಕಟ್ಟಾಗಿದೆ.[೬] ಡಿಸೆಂಬರ್ ೨೦೦೫ರಲ್ಲಿ ಹರ್ಯಾಣ ಸರ್ಕಾರವು ರೂ ೫೧.೩೭ ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುಮೋದನೆ ನೀಡಿತು.[೭]
ಇದು ಅನೇಕ ಅಳಿವಿನಂಚಿನಲ್ಲಿರುವ ವಲಸೆ ಹಕ್ಕಿಗಳಿಗೆ ನೆಲೆಯಾಗಿರುವ ಪ್ರಮುಖ ಜೌಗು ಪ್ರದೇಶವಾಗಿದೆ.[೮]