ಕ್ಯಾಂಡಲಿಮ್ ಉತ್ತರ ಗೋವಾದಲ್ಲಿರುವ ಒಂದು ಗಣತಿ ಪಟ್ಟಣವಾಗಿದ್ದು ಗೋವಾ ರಾಜ್ಯದ ಬಾರ್ಡೇಜ಼್ ತಾಲ್ಲೂಕಿನಲ್ಲಿ ಸ್ಥಿತವಾಗಿದೆ. ಇದು ಕಲಂಗೂಟ್ ಬೀಚ್‍ನ ಸ್ವಲ್ಪ ದಕ್ಷಿಣಕ್ಕೆ ಸ್ಥಿತವಾಗಿದ್ದು ಪ್ರವಾಸಿ ಸ್ಥಳವಾಗಿದೆ. ಇದು ಗೋವಾದ ಇತರ ಬೀಚ್‍ಗಳಿಗಿಂತ ಕಡಿಮೆ ಕಿಕ್ಕಿರಿದಿದ್ದು ಹೆಚ್ಚು ಉತ್ತಮವಾಗಿ ಯೋಜಿತಗೊಂಡಿದೆ.
ಕ್ಯಾಂಡಲಿಮ್ ಗೋವಾದ ರಾಜಧಾನಿ ಪಣಜಿಯಿಂದ ೧೫ ಕಿ.ಮೀ ದೂರದಲ್ಲಿದೆ. ಅಗುವಾಡಾ ಕೋಟೆಯಿಂದ ಆರಂಭವಾಗಿ ಅಂತ್ಯದಲ್ಲಿ ಕಲಂಗೂಟ್ ಬೀಚ್‍ನೊಂದಿಗೆ ವಿಲೀನಗೊಳ್ಳುವ ಇದು ರಾಜ್ಯದಲ್ಲಿನ ಅತ್ಯಂತ ಉದ್ದದ ಬೀಚ್‍ಗಳಲ್ಲಿ ಒಂದಾಗಿದೆ. ಬೀಚ್ ಸ್ವತಃ ಬಹಳ ಶಾಂತವಾಗಿದೆ. ಕೆಲವೊಮ್ಮೆ ವಿರಾಮ ಪಡೆಯಲು ಪುಣೆಯ ರಜನೀಶ್ ಆಶ್ರಮದಿಂದ ಪ್ರವಾಸಿಗಳು ಇಲ್ಲಿ ಬರುತ್ತಾರೆ.
ಮುಖ್ಯ ಕ್ಯಾಂಡಲಿಮ್-ಕಲಂಗೂಟ್ ರಸ್ತೆಯು ಅಂಗಡಿಗಳು ಮತ್ತು ಹೊಟೇಲುಗಳಿಂದ ತುಂಬಿದೆ. ಆದರೆ ಬೀಚ್ ಎದುರಿನ ಪ್ರದೇಶವು ಕೆಲವು ಜಲ ಚಟುವಟಿಕೆಗಳ ಹೊರತಾಗಿ ಯಾವುದೇ ವಾಣಿಜ್ಯ ಚಟುವಟಿಕೆಯಿಂದ ಮುಕ್ತವಾಗಿದೆ. ಬೀಚ್ ಸುತ್ತಲಿನ ಪ್ರದೇಶವನ್ನು ರೆಸಾರ್ಟ್ ಮುಕ್ತವೆಂದು ಕರೆಯಬಹುದು ಏಕೆಂದರೆ ಇಲ್ಲಿ ಯಾವುದೇ ರೆಸಾರ್ಟ್‌ಗಳಿಲ್ಲ. ಆದರೆ, ಬೀಚ್‍ನಲ್ಲಿ ಸಾಕಷ್ಟು ಸಂಖ್ಯೆಯ ತಂಗುದಾಣಗಳಿವೆ.
{{cite book}}
: Invalid |ref=harv
(help){{cite book}}
: Invalid |ref=harv
(help){{cite book}}
: Invalid |ref=harv
(help){{cite book}}
: Invalid |ref=harv
(help).