Cameron White | ||||
![]() | ||||
![]() | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | Cameron Leon White | |||
ಅಡ್ಡಹೆಸರು | Whitey, Bear, Bundy | |||
ಹುಟ್ಟು | 8 18 1983 | |||
Bairnsdale, Victoria, Australia | ||||
ಎತ್ತರ | 1.87 m (6 ft 1+1⁄2 in) | |||
ಪಾತ್ರ | Batsman | |||
ಬ್ಯಾಟಿಂಗ್ ಶೈಲಿ | Right-hand | |||
ಬೌಲಿಂಗ್ ಶೈಲಿ | Legbreak googly | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 402) | 9 October 2008: v India | |||
ODI ಪಾದಾರ್ಪಣೆ (cap 152) | 5 October 2005: v ICC World XI | |||
ಕೊನೆಯ ODI ಪಂದ್ಯ | 6 February 2011: v England | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
1999–present | Victoria | |||
2007-2010 | Royal Challengers Bangalore | |||
2006–2007 | Somerset | |||
2011-present | Deccan Chargers | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ODI | FC | List A | |
ಪಂದ್ಯಗಳು | 4 | 79 | 113 | 193 |
ಒಟ್ಟು ರನ್ನುಗಳು | 146 | 1,947 | 6,933 | 5,018 |
ಬ್ಯಾಟಿಂಗ್ ಸರಾಸರಿ | 29.20 | 36.73 | 42.01 | 35.58 |
೧೦೦/೫೦ | 0/0 | 2/11 | 16/32 | 6/31 |
ಅತೀ ಹೆಚ್ಚು ರನ್ನುಗಳು | 46 | 105 | 260* | 126* |
ಬೌಲ್ ಮಾಡಿದ ಚೆಂಡುಗಳು | 558 | 325 | 11,820 | 3,712 |
ವಿಕೆಟ್ಗಳು | 5 | 12 | 172 | 92 |
ಬೌಲಿಂಗ್ ಸರಾಸರಿ | 68.40 | 28.75 | 40.37 | 35.78 |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | 2 | 0 |
೧೦ ವಿಕೆಟುಗಳು ಪಂದ್ಯದಲ್ಲಿ | 0 | n/a | 1 | n/a |
ಶ್ರೇಷ್ಠ ಬೌಲಿಂಗ್ | 2/71 | 3/5 | 6/66 | 4/15 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 1/– | 36/– | 107/– | 86/– |
ದಿನಾಂಕ 16 February, 2011 ವರೆಗೆ. |
ಕ್ಯಾಮೆರಾನ್ ಲಿಯೋನ್ ವೈಟ್ (ಬೈರ್ನ್ಸ್ ಡೇಲ್, ವಿಕ್ಟೋರಿಯಾದಲ್ಲಿ ೧೮ ಆಗಸ್ಟ್ ೧೯೮೩ರಲ್ಲಿ ಜನನ) ಒಬ್ಬ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರ, ಹಾಗು ಹಾಲಿ ಆಸ್ಟ್ರೇಲಿಯನ್ ಟ್ವೆಂಟಿ೨೦ ನಾಯಕ. ಈತ ಮಧ್ಯಮ ಕ್ರಮಾಂಕದ ಒಬ್ಬ ಬಲಿಷ್ಠ ಬ್ಯಾಟ್ಸ್‌ಮನ್ ಹಾಗು ರೈಟ್-ಆರ್ಮ್ ಲೆಗ್-ಸ್ಪಿನ್ ಬೌಲರ್, ವೈಟ್, ೨೦೦೦–೦೧ರ ಕ್ರೀಡಾಋತುವಿನಲ್ಲಿ ವಿಕ್ಟೋರಿಯನ್ ಬುಶ್ ರೇಂಜರ್ಸ್ ಪರ ಒಬ್ಬ ಬೌಲಿಂಗ್ ಆಲ್-ರೌಂಡರ್ ಆಗಿ ಆಡುವುದರ ಮೂಲಕ ಫಸ್ಟ್-ಕ್ಲಾಸ್ ಕ್ರಿಕೆಟ್ ನಲ್ಲಿ ತಮ್ಮ ಪ್ರಥಮ ಪ್ರದರ್ಶನ ನೀಡಿದರು. ಆರಂಭದಲ್ಲಿ ಇವರನ್ನು ವಿಕ್ಟೋರಿಯಾ ತಂಡದ ಅವರ ಸಹ ಆಟಗಾರ ಶೇನ್ ವಾರ್ನೆಗೆ ಹೋಲಿಸಲಾಗುತ್ತಿದ್ದರೂ, ವೈಟ್ ರ ಶೈಲಿಯು ಸಾಂದರ್ಭಿಕವಾಗಿ ಬೌಲಿಂಗ್ ಮಾಡುತ್ತಿದ್ದ ಬ್ಯಾಟ್ಸ್‌ಮನ್ ಆಂಡ್ರ್ಯೂ ಸೈಮಂಡ್ಸ್ ರ ಮಾದರಿಯನ್ನು ನಿಕಟವಾಗಿ ಹೋಲುತ್ತಿತ್ತು.
ಹೀಗೆ ೨೦೦೩–೦೪ರಲ್ಲಿ ತಮ್ಮ ೨೦ನೇ ವಯಸ್ಸಿನಲ್ಲಿ ಏಕದಿನ ಪಂದ್ಯಾವಳಿಗೆ ನಾಯಕತ್ವ ವಹಿಸಿಕೊಂಡ ನಂತರ ವಿಕ್ಟೋರಿಯಾ ತಂಡದ ಸಾರಥ್ಯ ವಹಿಸಿದ ಅತ್ಯಂತ ಕಿರಿಯ ವಯಸ್ಸಿನ ನಾಯಕರೆನಿಸಿಕೊಂಡರು, ಹಾಗು ಕ್ರೀಡಾಋತುವಿನ ನಂತರ ಫಸ್ಟ್-ಕ್ಲಾಸ್ ಕ್ರಿಕೆಟ್ ನಾಯಕತ್ವ ವಹಿಸಿಕೊಂಡರು. ಆಗ ೨೦೦೫ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮನ್ನಣೆ ಪಡೆದರಾದರೂ, ವೈಟ್ ತಂಡದಿಂದ ಒಳಗೂ-ಹೊರಗೂ ಸ್ಥಾನವನ್ನು ಪಡೆಯುತ್ತಿದ್ದರು, ಏಕೆಂದರೆ ಆಯ್ಕೆ ಸಮಿತಿ ಹಾಗು ರಾಷ್ಟ್ರೀಯ ನಾಯಕ ರಿಕಿ ಪಾಂಟಿಂಗ್, ವೈಟ್ ತಮ್ಮ ಬೌಲಿಂಗ್ ನ್ನು ಸುಧಾರಣೆ ಮಾಡಿಕೊಂಡು, ಮುಂಚೂಣಿ ಸ್ಪಿನ್ನರ್ ಆಗಿ ಆಡಬೇಕೆಂದು ಆಶಿಸಿದ್ದರು. ಚಳಿಗಾಲದಲ್ಲಿ ಇಂಗ್ಲಿಷ್ ಕೌಂಟಿ ತಂಡ ಸೊಮರ್ಸೆಟ್ ಪರ ನೀಡಿದ ಯಶಸ್ವಿ ಪ್ರದರ್ಶನವು, ವೈಟ್ ರಿಗೆ ತಂಡದಲ್ಲಿ ಸ್ಥಾನ ನೀಡಬೇಕೆಂಬ ಆಯ್ಕೆ ಸಮಿತಿಯ ಉತ್ತೇಜನಕ್ಕೆ ನೆರವು ನೀಡಿತು. ನಂತರ ೨೦೦೮ರಲ್ಲಿ ನಡೆದ ನಾಲ್ಕು ಟೆಸ್ಟ್ ಪಂದ್ಯಾವಳಿಗಳನ್ನು ಒಳಗೊಂಡಂತೆ ಮತ್ತಷ್ಟು ಅಂತರರಾಷ್ಟ್ರೀಯ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಲಿಲ್ಲ, ವೈಟ್ ಅಂತಿಮವಾಗಿ ೨೦೦೯ರಲ್ಲಿ ಸರಣಿಯಾಗಿ ನೀಡಿದ ಉತ್ತಮ ಪ್ರದರ್ಶನಗಳ ನಂತರ ಏಕ-ದಿನ ಪಂದ್ಯಾವಳಿಗಳಿಗೆ ಖಾಯಂ ಸ್ಥಾನ ಪಡೆದುಕೊಂಡರು.
ವೈಟ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ವಿಕ್ಟೋರಿಯಾದಲ್ಲಿ ಯುವ ತಂಡದ ಪರ ಆಡುವ ಮೂಲಕ ಆರಂಭಿಸಿದರು, ಅಂಡರ್-೧೭ನಲ್ಲಿ ಕಾಮನ್ವೆಲ್ತ್ ಬ್ಯಾಂಕ್ ಪರ, ಹಾಗು ನಂತರದಲ್ಲಿ ಅಂಡರ್-೧೯ನಲ್ಲಿ ಚ್ಯಾಂಪಿಯನ್ ಶಿಪ್ ಸರಣಿಯಲ್ಲಿ ಆಡಿದರು. ಈ ಪಂದ್ಯಾವಳಿಗಳಲ್ಲಿ ಬ್ಯಾಟಿಂಗ್ ಹಾಗು ಬೌಲಿಂಗ್ ಎರಡರಲ್ಲೂ ತಮ್ಮ ಕೌಶಲ ಪ್ರದರ್ಶಿಸಿದರು, ಎರಡು ಕ್ರೀಡಾಋತುವಿನಲ್ಲಿ ಅವರು ಒಂದು ಶತಕ, ಎರಡು ಅರ್ಧ-ಶತಕಗಳು ಹಾಗು ಹತ್ತು ಪಂದ್ಯಗಳಲ್ಲಿ ೧೭ ವಿಕೆಟ್ ಗಳನ್ನು ಗಳಿಸಿದರು. ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಮೂರನೇ ಅಥವಾ ನಾಲ್ಕನೇ ಬದಲಾವಣೆಯಲ್ಲಿ ಬೌಲಿಂಗ್ ಮಾಡುತ್ತಿದ್ದರು. ಮಾರ್ಚ್ ೨೦೦೧ರಲ್ಲಿ ತಮ್ಮ ೧೭ನೇ ವಯಸ್ಸಿನಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧ ಆಡುವ ಮೂಲಕ ಫಸ್ಟ್-ಕ್ಲಾಸ್ ನಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಿದರು. ಒಂಬತ್ತನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ, ವೈಟ್, ಪಂದ್ಯದ ಬ್ಯಾಟಿಂಗ್ ಇನ್ನಿಂಗ್ಸ್ ನಲ್ಲಿ ಕೇವಲ ೧೧ ರನ್ ಗಳನ್ನು ಗಳಿಸಿದರು, ಹಾಗು ಬದಲಾದ ಮೂರನೇ ಬೌಲರ್ ಆಗಿ ೪/೬೫[note ೧] ನ್ನು ಪಡೆದರು.[೧] ಅವರು ಶ್ರೀಲಂಕಾ ವಿರುದ್ಧ ಎರಡು ಆರಂಭಿಕ ಟೆಸ್ಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಅಂಡರ್-೧೯ ಕ್ರಿಕೆಟ್ ತಂಡದ ಪರವಾಗಿ ಆಡುವ ಮೊದಲು ಆ ಕ್ರೀಡಾಋತುವಿನಲ್ಲಿ ಒಂದು ಫಸ್ಟ್-ಕ್ಲಾಸ್ ಪ್ರದರ್ಶನ ನೀಡಿದರು.
ನ್ಯೂಜಿಲೆಂಡ್ ಪ್ರವಾಸದಲ್ಲಿ ಅವರು ಆಸ್ಟ್ರೇಲಿಯಾ ಕ್ರಿಕೆಟ್ ಅಕ್ಯಾಡೆಮಿ ತಂಡದ ನಾಯಕತ್ವ ವಹಿಸಿಕೊಂಡು, ಮೂರು-ದಿನದ ಎರಡು ಪಂದ್ಯಾವಳಿಗಳಲ್ಲಿ ಡ್ರಾ ಮಾಡಿಕೊಂಡ ನಂತರ ನಾಲ್ಕು ಏಕ-ದಿನ ಪಂದ್ಯ ಸರಣಿಯಲ್ಲಿ ೩-೧ ಅಂಕಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದರು. ಇದಾದ ನಂತರ, ಅವರು ವಿಕ್ಟೋರಿಯಾ ತಂಡದ ಪರ ಲಿಸ್ಟ್ Aನಲ್ಲಿ ಪ್ರಥಮ ಪ್ರದರ್ಶನ ನೀಡಿದರು, ಆದರೆ ಮಳೆಯ ಕಾರಣದಿಂದಾಗಿ ಪಂದ್ಯವು ೪೨.೧ ಓವರ್ ಗಳಿಗೆ ಮೊಟಕುಗೊಂಡಿತು, ಪಂದ್ಯದಲ್ಲಿ ವೈಟ್ ಗೆ ಆಡಲು ಅವಕಾಶ ಸಿಗಲಿಲ್ಲ.[೨] ವೈಟ್, ಸೌತ್ ಆಸ್ಟ್ರೇಲಿಯಾ ವಿರುದ್ಧ ನಡೆದ ಪುರಾ ಕಪ್ ಪಂದ್ಯಾವಳಿಯಲ್ಲಿ ಏಳನೇ ಸ್ಥಾನದಲ್ಲಿ ಆಡುವುದರೊಂದಿಗೆ ೯೧ ರನ್ ಗಳನ್ನು ಹಾಗು ಎರಡು ವಿಕೆಟ್ ಗಳನ್ನು ಗಳಿಸಿದ ಕೆಲ ದಿನಗಳ ನಂತರ ಮೊದಲ ಸೀನಿಯರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಳಿಸಿದರು.[೩] ಅವರನ್ನು ಶ್ರೀಲಂಕಾದಲ್ಲಿ ನಡೆದ ೨೦೦೨ ಅಂಡರ್-೧೯ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಸೆಣೆಸಲು ಆಸ್ಟ್ರೇಲಿಯಾ ಅಂಡರ್-೧೯ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು,[೪] ಹಾಗು ಅಂತಿಮ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಏಳು ವಿಕೆಟ್ ಗಳ ಮೂಲಕ ಮಣಿಸುವುದರೊಂದಿಗೆ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದರು. ವೈಟ್, ೪೨೩ ರನ್ ಗಳನ್ನು ಗಳಿಸುವ ಮೂಲಕ ಪಂದ್ಯಾವಳಿಯ ಅಗ್ರ ರನ್ ಗಳನ್ನು ಗಳಿಸಿದ ಹಿರಿಮೆಗೆ ಪಾತ್ರರಾದರು, ಜೊತೆಗೆ ಇದರಲ್ಲಿ ನಾಲ್ಕು ಅಗ್ರ ಬ್ಯಾಟ್ಸ್‌ಮನ್ ಗಳಲ್ಲಿ ಇಬ್ಬರು ಆಸ್ಟ್ರೇಲಿಯನ್ ಆಗಿದ್ದರು.[೫]
ಅಂಡರ್-೧೯ ವರ್ಲ್ಡ್ ಕಪ್ ನಲ್ಲಿ ಯಶಸ್ವಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ಸಹ, ವಿಕ್ಟೋರಿಯಾ ತಂಡವು ವೈಟ್ ರಿಗೆ ಒಬ್ಬ ಬೌಲಿಂಗ್ ಆಲ್-ರೌಂಡರ್ ಆಗೇ ತಂಡದಲ್ಲಿ ಸ್ಥಾನ ನೀಡುತ್ತಿತ್ತು, ಈ ನಿರ್ಧಾರಕ್ಕೆ ೨೦೦೨–೦೩ರ ಕ್ರೀಡಾ ಋತುವಿನಲ್ಲಿ ೧೩ ಫಸ್ಟ್-ಕ್ಲಾಸ್ ಇನ್ನಿಂಗ್ಸ್ ನಲ್ಲಿ ವೈಟ್ ಕೇವಲ ೫೦ ರನ್ ಗಳನ್ನು ಗಳಿಸಿ, ೨೮ ವಿಕೆಟ್ ಗಳನ್ನು ಕಬಳಿಸಿದ ಕಾರಣವು ಪುಷ್ಟಿ ನೀಡುತ್ತಿತ್ತು. ಕ್ರೀಡಾಋತುವಿನ ತಮ್ಮ ಕಡೆಯ ಪಂದ್ಯದಲ್ಲಿ, ಅವರು ತಮ್ಮ ಮೊದಲ ಐದು ಹಾಗು ಹತ್ತು-ವಿಕೆಟ್ ಗಳನ್ನು ಗಳಿಸಿದರು, ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟರ್ನ್-ಆಸ್ಟ್ರೇಲಿಯಾ ವಿರುದ್ಧ ೬/೬೬ ಗಳಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ವಿಕ್ಟೋರಿಯಾ ತಂಡದ ಪರ ಹತ್ತು ವಿಕೆಟ್ ಗಳ ಜಯ ಗಳಿಸಲು ೪/೭೦ಗಳನ್ನು ಗಳಿಸಿದರು.[೬]
ಅದರ ಮುಂದಿನ ಕ್ರೀಡಾಋತುವಿನಲ್ಲಿ ವಿಕ್ಟೋರಿಯಾ ತಂಡದ ಪರ ING ಕಪ್ ಗಾಗಿ ಡಾರ್ರೆನ್ ಬೆರ್ರಿ ಹಾಗು ಶೇನ್ ವಾರ್ನೆಯ ನಡುವೆ ನಾಯಕತ್ವದ ಹಂಚಿಕೆಯಾದಾಗ, ವಿಕ್ಟೋರಿಯಾ ತಂಡದ ಆಯ್ಕೆ ಸಮಿತಿಯು, ವೈಟ್ ರನ್ನು ೨೦೦೩–೦೪ರ ಕ್ರೀಡಾಋತುವಿಗಾಗಿ ನಾಯಕನನ್ನಾಗಿ ಆಯ್ಕೆ ಮಾಡಿತು. ಕೇವಲ ೨೦ ವರ್ಷ ವಯಸ್ಸಿನ ವೈಟ್, ವಿಕ್ಟೋರಿಯಾ ತಂಡದ ಪರ ಅದರ ೧೫೨-ವರ್ಷ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನ ನಾಯಕರೆನಿಸಿಕೊಂಡರು. ಅವರ ತರಬೇತುದಾರ, ಡೇವಿಡ್ ಹೂಕ್ಸ್, "ವೈಟ್, ಅತ್ಯಂತ ಕಿರಿಯ ವಯಸ್ಸಿನಲ್ಲಿ ತಂಡದ ನಾಯಕತ್ವದ ಬಗ್ಗೆ ಯಶಸ್ವಿ ಗ್ರಹಣಶಕ್ತಿಯನ್ನು ಹೊಂದಿದ್ದಾರೆ" ಎಂದು ಅಭಿಪ್ರಾಯಪಡುತ್ತಾರೆ.[೭] ಈ ನಿರ್ಣಯಕ್ಕೆ ಅಂಡರ್-೧೯ ವರ್ಲ್ಡ್ ಕಪ್ ನ ಅವಧಿಯ ವರದಿಗಳು ಬೆಂಬಲಿಸಿದವು, ಅವರು ತಮ್ಮ ತಂಡವನ್ನು "ಸಾಮರ್ಥ್ಯ, ನಿಯಂತ್ರಣ ಹಾಗು ತಮ್ಮ ವಯಸ್ಸಿಗೂ ಮೀರಿದ ಪರಿಪಕ್ವತೆಯಿಂದ" ಮುನ್ನಡೆಸಿದರು.[೭] ೨೦೦೩–೦೪ರ ಕ್ರೀಡಾ ಋತುವಿನಲ್ಲಿ, ಅಭ್ಯಾಸ ಪಂದ್ಯದ ವೇಳೆ ಬೆರಳಿಗೆ ಉಂಟಾದ ಪೆಟ್ಟಿನಿಂದಾಗಿ ನಾಯಕ ಬೆರ್ರಿಯ ಬದಲಿಗೆ ಫಸ್ಟ್-ಕ್ಲಾಸ್ ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಕೇಳಿಕೊಳ್ಳಲಾಯಿತು.[೮] ನಾಯಕತ್ವ ವಹಿಸಿಕೊಂಡು ING ಕಪ್ ನಲ್ಲಿ ಒಂದು ಗೆಲುವು ಹಾಗು ಒಂದು ಸೋಲನ್ನು ಅನುಭವಿಸಿದ ನಂತರ, ಪುರಾ ಕಪ್ ಪಂದ್ಯಾವಳಿಯ ನಾಯಕನಾಗಿ ತಮ್ಮ ಪ್ರಥಮ ಪ್ರದರ್ಶನದಲ್ಲಿ ವೈಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು, ವಿಕ್ಟೋರಿಯಾ ತಂಡದ ಪರವಾಗಿ ಆರು ವಿಕೆಟ್ ಗಳಿಸುವ ಮೂಲಕ ಕ್ವೀನ್ಸ್ ಲ್ಯಾಂಡ್ ಪರ ತಂಡವು ಐದು ವಿಕೆಟ್ ಗಳ ಜಯ ಸಾಧಿಸಿತು.[೯]
ವೈಟ್ ರಿಗೆ ಡಿಸೆಂಬರ್ ೨೦೦೩ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡುವ ಅವಕಾಶ ನೀಡಲಾಯಿತು. ವಿಕ್ಟೋರಿಯಾ ತಂಡವು ಕೈಗೊಂಡ ಪ್ರವಾಸ ಪಂದ್ಯದಲ್ಲಿ ಭಾರತ ತಂಡದ ನಾಲ್ಕು ವಿಕೆಟ್ ಗಳನ್ನು ಕಬಳಿಸಿದ ನಂತರ, ಪ್ರವಾಸ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಆಸ್ಟ್ರೇಲಿಯಾ A ಪರವಾಗಿ ಆಡಲು ವೈಟ್ ರನ್ನು ಆಯ್ಕೆ ಮಾಡಲಾಯಿತು. ಇವರು ಆಸ್ಟ್ರೇಲಿಯನ್ ತಂಡದ ಪರವಾಗಿ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರು, ತಂಡದಲ್ಲಿ ವಿಕ್ಟೋರಿಯಾ ತಂಡದ ಸಹ ಆಟಗಾರ ಬ್ರ್ಯಾಡ್ ಹಾಡ್ಜ್ ಸಹ ಇದ್ದರು, ಹಾಗು ತಂಡಕ್ಕೆ ಮೈಕಲ್ ಹಸ್ಸಿ ನಾಯಕರಾಗಿದ್ದರು.ತಮ್ಮ ಎರಡು ಇನ್ನಿಂಗ್ಸ್ ನಲ್ಲಿ ಕೇವಲ ೨೦ ರನ್ ಗಳಿಸಿ ಹಾಗು ಯಾವುದೇ ವಿಕೆಟ್ ಪಡೆಯದ ಕಾರಣ, ವೈಟ್ ಭಾರತೀಯರ ಮೇಲೆ ಹೇಳಿಕೊಳ್ಳುವಂತಹ ಪ್ರಭಾವ ಬೀರಲಿಲ್ಲ.[೧೦] ವೈಟ್, ೫೦-ಓವರ್ ಗಳ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸುವ ಸಲುವಾಗಿ A ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡು, ಪಂದ್ಯಾವಳಿಯಲ್ಲಿ ಎರಡು ವಿಕೆಟ್ ಗಳನ್ನು ಗಳಿಸಿದರು.
ಹೀಗೆ ೨೦೦೩–೦೪ರ ಕ್ರೀಡಾಋತುವಿನಲ್ಲಿ ಫಸ್ಟ್-ಕ್ಲಾಸ್ ಕ್ರಿಕೆಟ್ ನಲ್ಲಿ ವೈಟ್ ರ ಬ್ಯಾಟಿಂಗ್ ಗಮನಾರ್ಹ ಸುಧಾರಣೆ ಕಂಡಿತು, ಆದರೆ ಅವರ ಬಲಗಾಲಿನ ಕೆಲವು ಮೂಳೆಕಟ್ಟುಗಳು ಗಾಯಗೊಂಡ ಕಾರಣ, ೨೦೦೩-೦೪ ಕ್ರೀಡಾಋತುವಿನಿಂದ ಹೊರಬೀಳಬೇಕಾಯಿತು. ಮೊದಲ ಬಾರಿಗೆ ಹದಿನೆಂಟು ಇನ್ನಿಂಗ್ಸ್ ನಲ್ಲಿ ೩೦ ರನ್ ಗಳಿಗಿಂತಲೂ ಅಧಿಕ ಐದು ಅರ್ಧ-ಶತಕಗಳನ್ನು ಬಾರಿಸಿದ್ದ ಕಾರಣಕ್ಕೆ ಆ ಕ್ರೀಡಾಋತುವು ಸರಾಸರಿ ಯಶಸ್ಸು ಗಳಿಸಿತು. ಕ್ರೀಡಾಋತುವಿನಲ್ಲಿ ಅವರು ೩೦ ವಿಕೆಟ್ ಗಳನ್ನೂ ಸಹ ಗಳಿಸಿದರು.ಅವರ ವೃತ್ತಿಜೀವನದಲ್ಲಿ ಈವರೆಗೂ ನಡೆದ ಕ್ರೀಡಾಋತುಗಳಲ್ಲಿ ಗಳಿಸಿದ ಅತ್ಯಧಿಕ ವಿಕೆಟ್ ಗಳಿಕೆ ಇದಾಗಿತ್ತು, ಆದಾಗ್ಯೂ ಅವರು ಹಿಂದಿನ ಕ್ರೀಡಾಋತುವಿನಲ್ಲಿ ಗಳಿಸಿದ ೩೫ ವಿಕೆಟ್ ಗಳಿಗೆ ಹೋಲಿಸಿದರೆ ಅವರ ಸರಾಸರಿ ಗಳಿಕೆಯು ಕುಂಠಿತವಾಗಿತ್ತು.[೧೧] ಇನ್ನಿಂಗ್ಸ್ ನಲ್ಲಿ ಅವರು ನೀಡಿದ ಕೆಲ ಪ್ರದರ್ಶನಗಳು ಮುಂದಿನ ಅವರ ಭವಿಷ್ಯವನ್ನು ಸೂಚಿಸಿದವು, ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ೬೫ ಬಾಲುಗಳಿಗೆ ೫೮ ರನ್ ಗಳು,[೧೨] ಹಾಗು ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ೯೭ ಬಾಲುಗಳಿಗೆ ೭೫ ರನ್, ೭ ಬೌಂಡರಿ ಹಾಗು ೩ ಸಿಕ್ಸರ್ ಗಳನ್ನು ಒಳಗೊಂಡ ಒಂದು ಇನ್ನಿಂಗ್ಸ್,[೧೩] ಎಲ್ಲವೂ ನಂತರದಲ್ಲಿ ಕ್ರೀಡೆಯ ಟ್ವೆಂಟಿ೨೦ ಶೈಲಿಯಲ್ಲಿ ವೈಟ್ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅನುಕೂಲ ಮಾಡಿಕೊಟ್ಟಿತು.
ವೈಟ್ ರ ಆಟದ ಶೈಲಿಯಲ್ಲಿ ಈ ಬದಲಾವಣೆಗಳು, ಹಾಗು ಸ್ಟುವರ್ಟ್ ಮ್ಯಾಕ್ಗಿಲ್ ಗೆ ಉಂಟಾದ ಪೆಟ್ಟಿನಿಂದಾಗಿ, ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದ್ದ ೧೩-ಮಂದಿ ಆಸ್ಟ್ರೇಲಿಯನ್ ಟೆಸ್ಟ್ ತಂಡದಲ್ಲಿ ವೈಟ್ ರ ಹೆಸರು ಸೇರ್ಪಡೆಗೊಂಡಿತ್ತು. ಆಸ್ಟ್ರೇಲಿಯನ್ ಆಯ್ಕೆ ಸಮಿತಿಯು ಪ್ರವಾಸದಲ್ಲಿ ಇಬ್ಬರು ಸ್ಪಿನ್ನರ್ ಗಳನ್ನು ಕರೆದೊಯ್ಯಲು ನಿರ್ಧರಿಸಿದಾಗ, ಮ್ಯಾಕ್ಗಿಲ್ ರ ಪೆಟ್ಟು, "ಭವಿಷ್ಯದ ದೃಷ್ಟಿಕೋನದಿಂದ" ವೈಟ್ ರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿತು.[೧೪] ಜಿಂಬಾಬ್ವೆ A ವಿರುದ್ಧದ ಪ್ರವಾಸ ಪಂದ್ಯದಲ್ಲಿ ವೈಟ್ ಒಂದು ವಿಕೆಟ್ ಗಳಿಸಿದರು, ಆದರೆ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಹಾಗು ಅವರ ಬಂಡೆದ್ದ ಆಟಗಾರರ ನಡುವೆ ಭುಗಿಲೆದ್ದ ವಿವಾದದಿಂದಾಗಿ ಎರಡು-ಪಂದ್ಯಗಳ ಸರಣಿಯನ್ನು ರದ್ದುಪಡಿಸಲಾಯಿತು, ಇದರಿಂದಾಗಿ ಟೆಸ್ಟ್ ಪಂದ್ಯದಲ್ಲಿ ಪ್ರಥಮ ಪ್ರದರ್ಶನ ನೀಡಲು ಅವರಿಗೆ ಅವಕಾಶ ದೊರೆಯಲಿಲ್ಲ. ವೈಟ್, "ಎಲ್ಲವೂ ಹೇಗೆ ನಡೆಯುತ್ತದೆ ಹಾಗು ಹೇಗೆ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಾವಳಿಯನ್ನು ಆಡಲಾಗುತ್ತದೆ ಎಂಬುದನ್ನು ನೋಡಲು ಈ ನಿರ್ಣಯದಿಂದಾಗಿ ತಮಗೆ ಅವಕಾಶ ವಂಚನೆಯಾಯಿತೆಂದು ವಿವರಿಸುತ್ತಾರೆ.[೧೫]
೨೦೦೩–೦೪ರಲ್ಲಿ ಕ್ವೀನ್ಸ್ ಲ್ಯಾಂಡ್ ವಿರುದ್ಧ ಅಂತಿಮ ಪಂದ್ಯದಲ್ಲಿ ೩೨೧ ರನ್ ಗಳ ಜಯದೊಂದಿಗೆ ಕ್ರೀಡಾಋತುವು, ಪುರಾ ಕಪ್ ನ್ನು ತನ್ನ ಮುಡಿಗೇರಿಸಿಕೊಂಡಿತು, ಇದರಲ್ಲಿ ವೈಟ್ ಅರ್ಧ-ಶತಕ ಗಳಿಸುವುದರ ಜೊತೆಗೆ ಎದುರಾಳಿ ತಂಡದ ಐದು ವಿಕೆಟ್ ಗಳನ್ನು ಕಬಳಿಸಿದ್ದರು. ಈ ವಿಜಯದ ನಂತರ ವಿಕ್ಟೋರಿಯಾ ತಂಡದ ನಾಯಕ ಬೆರ್ರಿ ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿಯಾದರು, ಹಾಗು ೨೦೦೪–೦೫ರ ಕ್ರೀಡಾಋತುವಿಗಾಗಿ ಅವರ ಬದಲಿಗೆ ವೈಟ್ ರನ್ನು ನಾಯಕನೆಂದು ಘೋಷಿಸಲಾಯಿತು. ಈ ನೇಮಕದಿಂದ ಸಂತುಷ್ಟರಾದ ವೈಟ್, ನಾಯಕತ್ವವು "ತಮ್ಮಲ್ಲಿರುವ ಸಾಮರ್ಥ್ಯವನ್ನು ಮತ್ತಷ್ಟು ಹೊರತರುವುದರ ಜೊತೆಗೆ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸಲಾಗಿದೆ" ಎಂದು ಹೇಳಿದರು.[೧೬] ಡಿಸೆಂಬರ್ ೨೦೦೪ರಲ್ಲಿ, ಫಸ್ಟ್-ಕ್ಲಾಸ್ ಕ್ರಿಕೆಟ್ ನಲ್ಲಿ ವೈಟ್ ತಮ್ಮ ಮೊದಲ ಶತಕವನ್ನು ಗಳಿಸಿದರು, ಇದರಲ್ಲಿ ವಿಕ್ಟೋರಿಯಾ ತಂಡವು ಕ್ವೀನ್ಸ್ ಲ್ಯಾಂಡ್ ವಿರುದ್ಧ ೧೧೯ ರನ್ ಗಳನ್ನು ಗಳಿಸಿದ್ದಕ್ಕಾಗಿ ಫಾಲೋ-ಆನ್(ನಿರ್ದಿಷ್ಟ ಸಂಖ್ಯೆಯ ರನ್ನುಗಳನ್ನು ಮಾಡದಿರುವುದರಿಂದ ಎದುರಾಳಿಗಳು ಮತ್ತೆ ಬ್ಯಾಟ್ ಮಾಡುವುದು) ಮಾಡಲು ನಿರ್ಬಂಧಿಸಲಾಯಿತು. ಅವರು ಇಯಾನ್ ಹಾರ್ವೆಯೊಂದಿಗೆ ಜೊತೆಗೂಡಿ ಕಲೆ ಹಾಕಿದ ೨೦೫ ರನ್ ಗಳು, ವಿಕ್ಟೋರಿಯಾ ತಂಡದಲ್ಲಿ ಏಳನೇ-ವಿಕೆಟ್ ಜೊತೆಯಾಟವೆಂದು ದಾಖಲೆ ಮಾಡಿತು,[೧೭] ಹಾಗು ಆರಂಭಿಕ ಆಟಗಾರ ಜೇಸನ್ ಅರ್ನ್ಬರ್ಜರ್ ರ ಅಜೇಯ ೧೫೨ ರನ್ ಗಳು ವಿಕ್ಟೋರಿಯಾ ತಂಡಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ ಚೇತರಿಸಿಕೊಂಡು ಒಟ್ಟಾರೆಯಾಗಿ ೫೦೮/೮ ಗಳಿಸಿ ಆಟದ ಮುಕ್ತಾಯ ಘೋಷಿಸಲು ನೆರವಾಯಿತು. ಒಂದು ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ಕ್ವೀನ್ಸ್ ಲ್ಯಾಂಡ್ ತಂಡವು ಕೇವಲ ೧೬೯ ರನ್ ಗಳಿಗೆ ಆಲ್ ಔಟ್ ಆಯಿತು, ಇದು ವಿಕ್ಟೋರಿಯಾ ತಂಡದ "ಗಮನಾರ್ಹ ಪ್ರದರ್ಶನವೆಂಬ" [೧೮] ಹೆಗ್ಗಳಿಕೆಗೆ ಪಾತ್ರವಾಯಿತು.[೧೯]
ಅವರ ವೃತ್ತಿಜೀವನದ ಆರಂಭದಲ್ಲಿ, ವಿಕ್ಟೋರಿಯಾ ತಂಡದ ಅವರ ಸಹ ಆಟಗಾರ ಶೇನ್ ವಾರ್ನೆಯೊಂದಿಗೆ ಸಾಮ್ಯವನ್ನು ನಿರೂಪಿಸಲಾಯಿತು; ಇಬ್ಬರೂ ಆಟಗಾರರು ಗೌರವರ್ಣೀಯರಾಗಿರುವುದರ ಜೊತೆಗೆ ಇಬ್ಬರು ಲೆಗ್-ಸ್ಪಿನ್ನರ್ ಗಳಾಗಿದ್ದರು.[೨೦] ಆದರೆ ವಾರ್ನೆ ಚೆಂಡನ್ನು ತ್ವರಿತ ಗತಿಯಲ್ಲಿ ತಿರುಗಿಸುತ್ತಿದ್ದ ಮಾದರಿ ಗಮನಿಸಿದರೆ ಇವರಿಗೆ ತಿರುಗಿಸುವ ಸಾಮರ್ಥ್ಯವಿಲ್ಲದ್ದು ಸ್ಪಷ್ಟವಾಗಿ ಕಂಡುಬಂತು, ಬದಲಿಯಾಗಿ ಅವರ ಶೈಲಿಯು ಅನಿಲ್ ಕುಂಬ್ಳೆಯ ಬೌಲಿಂಗ್ ಶೈಲಿಯನ್ನು ನೆನಪಿಸುತ್ತದೆಂದು ವಿವರಿಸಲಾಯಿತು.[೨೧] ಆದರೆ ೨೦೦೪–೦೫ರ ಕ್ರೀಡಾಋತುವಿನ ಮಧ್ಯಭಾಗದಲ್ಲಿ, ವೈಟ್ ಆಸ್ಟ್ರೇಲಿಯಾ A ಪರವಾಗಿ ನಾಲ್ಕು ಪಂದ್ಯಗಳನ್ನು ಪ್ರವಾಸಿ ವೆಸ್ಟ್ ಇಂಡಿಯನ್ಸ್ ಹಾಗು ಪಾಕಿಸ್ತಾನಿಗಳ ವಿರುದ್ಧ ಆಡಿದರು. ೫೦-ಓವರ್ ಗಳ ಮೂರು ಪಂದ್ಯಗಳಲ್ಲಿ ಅವರು ಎರಡು ಅರ್ಧ-ಶತಕಗಳನ್ನು ಹಾಗು ಒಂದು ಡಕ್ ನ್ನು(ಸೊನ್ನೆ ರನ್) ಗಳಿಸಿದರು, ಹಾಗು ಟ್ವೆಂಟಿ೨೦ ಕ್ರಿಕೆಟ್ ನ ಅವರ ಮೊದಲ ಅನುಭವವು ೧೫೦ಕ್ಕೂ ಮೇಲ್ಪಟ್ಟ ಸ್ಟ್ರೈಕ್ ರೇಟ್(ಪ್ರತಿ ಚೆಂಡಿಗೂ ರನ್ ಗಳಿಸುವ ಪ್ರಮಾಣ) ನೊಂದಿಗೆ ಅಜೇಯ ೫೮ ರನ್ ಗಳನ್ನು ಸಂಪಾದಿಸುವಂತೆ ಮಾಡಿತು.[೨೨] ವಿಕ್ಟೋರಿಯಾ ತಂಡವು ಪುರಾ ಕಪ್ ಗಾಗಲೀ ಅಥವಾ ING ಕಪ್ ಅಂತಿಮ ಪಂದ್ಯಗಳಿಗಾಗಲೀ ಅರ್ಹತೆ ಗಳಿಸಲಿಲ್ಲ, ಆದರೆ ವೈಟ್ ರಲ್ಲಿ ಮತ್ತೊಮ್ಮೆ ಮಹತ್ವದ ಸುಧಾರಣೆ ಕಂಡುಬಂದವು; ಅವರ ಫಸ್ಟ್-ಕ್ಲಾಸ್ ಸರಾಸರಿಗಳು ಹಿಂದಿನ ಕ್ರೀಡಾಋತುಗಳ ಮಾದರಿಯಲ್ಲೇ ಕಂಡುಬಂದಿತು, ಆದರೆ ೩೦ ರನ್ ಗಳನ್ನು ಗಳಿಸುವ ಮಾದರಿಯನ್ನು ಮೀರಿ ಏಕ-ದಿನ ಕ್ರಿಕೆಟ್ ನಲ್ಲಿ ಉತ್ತಮ ಬ್ಯಾಟಿಂಗ್ ಸರಾಸರಿಯನ್ನು ಪ್ರದರ್ಶಿಸುವ ಮೂಲಕ ತಮ್ಮ ಹಿಂದಿನ ಕ್ರೀಡಾಋತುವಿನ ಸರಾಸರಿಯನ್ನು ದುಪ್ಪಟ್ಟುಗೊಳಿಸಿದರು.[೨೩]
ಜನವರಿ ೨೦೦೫ರಲ್ಲಿ ಆಸ್ಟ್ರೇಲಿಯಾ A ತಂಡದಲ್ಲಿ ಅವರ ಪರಿಣಾಮಕಾರಿ ಫಾರ್ಮ್ ನ ನಂತರ, ವೈಟ್ ರನ್ನು ಅದೇ ವರ್ಷ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದ ಪಾಕಿಸ್ತಾನ್ ವಿರುದ್ಧದ ಪ್ರವಾಸ ಪಂದ್ಯಾವಳಿಗೆ ಆಸ್ಟ್ರೇಲಿಯಾ A ಪರ ಆಡಲು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ನಾಲ್ಕು ವಿಕೆಟ್ ಗಳನ್ನು ಕಬಳಿಸುವುದರ ಜೊತೆಗೆ ನಾಲ್ಕು-ದಿನಗಳ ಎರಡು ಪಂದ್ಯಗಳಲ್ಲಿ ಸರಾಸರಿ ೩೫.೫೦ ಬ್ಯಾಟಿಂಗ್ ಪ್ರದರ್ಶನ ನೀಡಿ, ವೈಟ್ ತರುವಾಯದ ಏಕ-ದಿನ ಪಂದ್ಯಾವಳಿಗಳಲ್ಲಿ ಮಿಂಚಿದರು. ಮೊದಲ ಪಂದ್ಯದಲ್ಲಿ ಆಡುವ ಅವಕಾಶ ದೊರೆಯದಿದ್ದರೂ, ಅವರು ಎರಡನೇ ಪಂದ್ಯದಲ್ಲಿ ೧೦೬ ರನ್ ಗಳನ್ನು ಗಳಿಸಿ ಔಟ್ ಆಗದೆ ಉಳಿದರು. ಅಲ್ಲದೇ ಮೂರನೇ ಪಂದ್ಯದಲ್ಲಿ ೫೯ ರನ್ ಗಳನ್ನು ಗಳಿಸಿ ಔಟ್ ಆಗದೆ ಉಳಿದರು, ಜೊತೆಗೆ ಕೊನೆಯ ವಿಕೆಟ್ ನ್ನೂ ಸಹ ಕಬಳಿಸಿದರು.[೨೪][೨೫] ಭಾರಿ-ಹೊಡೆತಗಳ ಆಲ್-ರೌಂಡರ್ ಆಗಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ ನಂತರ, ೨೦೦೫ ICC ಸೂಪರ್ ಸೀರಿಸ್ ನಲ್ಲಿ ICC ವರ್ಲ್ಡ್ XI[[ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಥಮ ಪ್ರದರ್ಶನ ನೀಡಲು ವೈಟ್ ಗೆ ಅವಕಾಶ ನೀಡಲಾಯಿತು. ವರ್ಲ್ಡ್ XI ತಂಡದ ನಾಯಕರಾಗಿದ್ದ ಶಾನ್ ಪೊಲ್ಲಾಕ್, ತಮ್ಮ ತಂಡದ ಬ್ಯಾಟ್ಸ್‌ಮನ್ ಈ ಯುವ ಲೆಗ್-ಸ್ಪಿನ್ನರ್ ರನ್ನು ಗುರಿಯಾಗಿಸಿಕೊಂಡಿದ್ದಾರೆಂದು ಹೇಳಿದರು, ಆದರೆ ಆಸ್ಟ್ರೇಲಿಯನ್ ನಾಯಕ ರಿಕಿ ಪಾಂಟಿಂಗ್, "ತಮ್ಮ ವಿರುದ್ಧ ವಿಕ್ಟೋರಿಯಾ ತಂಡದಲ್ಲಿ ಸಮರ್ಥ ಪ್ರದರ್ಶನ ನೀಡಿದ್ದರಿಂದ" ವೈಟ್ ಗೆ ಬೌಲಿಂಗ್ ಮಾಡಲು ಅವಕಾಶ ನೀಡುವುದಾಗಿ ಹೇಳಿದರು.[೨೬]]] ಮೊದಲ ಎರಡು ಪಂದ್ಯಗಳಲ್ಲಿ ಅವರನ್ನು ಸೂಪರ್ ಸಬ್ ಎಂದು ಘೋಷಿಸಲಾಗಿತ್ತು, ಅವರು ಕೇವಲ ICC ವರ್ಲ್ಡ್ XI ಇನ್ನಿಂಗ್ಸ್ ನ ಅವಧಿಯಲ್ಲಿ ಮಾತ್ರ ಮೈದಾನಕ್ಕಿಳಿಯುತ್ತಿದ್ದ ಕಾರಣದಿಂದಾಗಿ, ಬ್ಯಾಟಿಂಗ್ ಮಾಡಲು ಅವಕಾಶ ದೊರೆಯಲಿಲ್ಲ. ಅವರು ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡಲಿಲ್ಲ, ಹಾಗು ಎರಡನೇ ಪಂದ್ಯದಲ್ಲಿ ವಿಕೆಟ್ ಪಡೆಯದೇ ಮೂರು ಓವರ್ ಗಳ ಬೌಲಿಂಗ್ ಮಾಡಿದರು. ಪಂದ್ಯಗಳ ಅಧಿಕೃತ ಸ್ಥಾನಮಾನಗಳಿಗೆ ಸಂಬಂಧಿಸಿದಂತೆ ಭುಗಿಲೆದ್ದ ವಿವಾದಗಳ ಹೊರತಾಗಿಯೂ, ಸೂಪರ್ ಸಬ್ ಆಗಿ ಈ ಎರಡೂ ಪ್ರದರ್ಶನಗಳು ವೈಟ್ ರ ಮೊದಲ ಎರಡು ಏಕ ದಿನ ಅಂತರರಾಷ್ಟ್ರೀಯ (ODI) ಪ್ರದರ್ಶನಗಳೆಂದು ಮಹತ್ವ ಪಡೆದಿವೆ. ಅವರು ತಮ್ಮ ಮೂರನೇ ಪಂದ್ಯವನ್ನು ಆರಂಭಿಸುತ್ತರಾದರೂ, ಆಸ್ಟ್ರೇಲಿಯಾ ತಂಡವು ೨೯೩/೫ಕ್ಕೆ ತಮ್ಮ ಇನ್ನಿಂಗ್ಸ್ ನ್ನು ಪೂರ್ಣಗೊಳಿಸಿತು, ಮತ್ತೊಮ್ಮೆ ವೈಟ್ ಗೆ ಬ್ಯಾಟಿಂಗ್ ಮಾಡುವ ಅವಕಾಶವಾಗಲೀ ಅಥವಾ ಮುಂದಿನ ICC ವರ್ಲ್ಡ್ XIನ ಇನ್ನಿಂಗ್ಸ್ ನಲ್ಲಿ ಬೌಲ್ ಮಾಡುವ ಅವಕಾಶವಾಗಲೀ ದೊರೆಯಲಿಲ್ಲ.[೨೭]
ಚಾಪ್ಪೆಲ್-ಹಾಡ್ಲೀ ಟ್ರೋಫಿಯ ಮೊದಲ ODIನಲ್ಲಿ ವೈಟ್ ರನ್ನು ಮತ್ತೊಮ್ಮೆ ಬೌಲಿಂಗ್ ಸೂಪರ್ ಸಬ್ ಎಂದು ಆಯ್ಕೆ ಮಾಡಲಾಯಿತು, ಅವರು ನ್ಯೂಜಿಲೆಂಡ್ ಇನ್ನಿಂಗ್ಸ್ ನ ಆರಂಭದಲ್ಲಿ ಕಾಟಿಚ್ ರ ಸ್ಥಾನವನ್ನು ಆಕ್ರಮಿಸಿಕೊಂಡರು. ಅವರು ನಾಲ್ಕು ರನ್ ಗಳನ್ನು ನೀಡಿ ವಿಕೆಟ್ ಪಡೆಯದೇ ಒಂದು ಓವರ್ ಗೆ ಬೌಲಿಂಗ್ ಮಾಡಿದರು.[೨೮] ಎರಡನೇ ಪಂದ್ಯಕ್ಕೆ ಅನುಪಸ್ಥಿತರಾಗಿ, ವೈಟ್ ಮೂರನೇ ಪಂದ್ಯಕ್ಕೆ ಹಿಂದಿರುಗಿದರು, ಆ ಪಂದ್ಯದಲ್ಲಿ ಅವರಿಗೆ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಿತು. ಅವರು ಕ್ರಿಸ್ ಮಾರ್ಟಿನ್ ರ ಮೊದಲ ಚೆಂಡಿಗೆ ಗೋಲ್ಡನ್ ಡಕ್ ಆಗಿ ಔಟ್ ಆದರು. ನ್ಯೂಜಿಲೆಂಡ್ ನ ಇನ್ನಿಂಗ್ಸ್ ನಲ್ಲಿ, ಹಮೀಶ್ ಮಾರ್ಷಲ್ ಗೆ ಬೌಲಿಂಗ್ ಮಾಡುವ ಮೂಲಕ ಸೀನಿಯರ್ ವಿಭಾಗದಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ವಿಕೆಟ್ ಗಳಿಸಿದರು.[೨೯]
ಆಗ ೨೦೦೫-೦೬ರಲ್ಲಿ ಮೊದಲ ಬಾರಿಗೆ ಟ್ವೆಂಟಿ೨೦ ಕ್ರಿಕೆಟ್ ನ್ನು ಆಸ್ಟ್ರೇಲಿಯಾದಲ್ಲಿ ಆಡಲಾಯಿತು, ಹಾಗು ವೈಟ್ ತಮ್ಮ ವಿಕ್ಟೋರಿಯಾ ತಂಡದೊಂದಿಗೆ ಹೊಸ ಶೈಲಿಗೆ ಬಹಳ ಬೇಗನೆ ಹೊಂದಿಕೊಂಡರು. ವೈಟ್, ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ೩೨ ಬಾಲ್ ಗಳಲ್ಲಿ ೪೫ ರನ್ ಗಳನ್ನು ಗಳಿಸುವುದರ ಜೊತೆಗೆ ಒಂದು ವಿಕೆಟ್ ನ್ನು ಪಡೆಯುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.[೩೦] ಎರಡನೇ ಪಂದ್ಯದಲ್ಲಿ ಎರಡು ವಿಕೆಟ್ ಗಳನ್ನು ಪಡೆದರು, ಹಾಗು ಎರಡನೇ ವಿಜಯವು ವಿಕ್ಟೋರಿಯಾ ತಂಡಕ್ಕೆ ಅಂತಿಮ ಸುತ್ತಿಗೆ ಸ್ಥಾನ ಕಲ್ಪಿಸಿಕೊಟ್ಟಿತು.[೩೧] ಅಂತಿಮ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ತಂಡವನ್ನು ಎದುರಿಸಿತು, ಇದರಲ್ಲಿ ವೈಟ್ ೧೬ ಬಾಲ್ ಗೆ ೪೬ ರನ್ ಗಳನ್ನು ಗಳಿಸಿದರು, ಹೆಚ್ಚೂಕಡಿಮೆ ಒಂದು ಬಾಲ್ ಗೆ ಮೂರು ರನ್ ಗಳಂತೆ ಗಳಿಸಿದರು. ಅದರ ಮುಂದಿನ ಇನ್ನಿಂಗ್ಸ್ ನಲ್ಲಿ ಅವರು ೩/೮ ಗಳಿಸಿದರು, ಇದರಿಂದ ನ್ಯೂ ಸೌತ್ ವೇಲ್ಸ್ ತಂಡವು ಕೇವಲ ೧೪೦ ರನ್ ಗಳನ್ನು ಗಳಿಸಲು ಸಾಧ್ಯವಾಯಿತು, ಇದು ವಿಕ್ಟೋರಿಯಾ ತಂಡಕ್ಕೆ ಚ್ಯಾಂಪಿಯನ್ ಶಿಪ್ ಪಟ್ಟ ಗಿಟ್ಟಿಸಿಕೊಟ್ಟಿತು.[೩೨] ವೈಟ್ ೯೯ ರನ್ ಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು, ಬ್ರಾಡ್ ಹಾಡ್ಜ್ ರ ನಂತರ ಅಧಿಕ ರನ್ ಗಳಿಸಿದ ಎರಡನೇ ಆಟಗಾರ,[೩೩] ಹಾಗು ಶೇನ್ ಹಾರ್ವುಡ್ ನ ನಂತರ ೬ ವಿಕೆಟ್ ಗಳನ್ನು ಗಳಿಸಿ ಅವರ ದಾಖಲೆಯನ್ನು ಸಮನಾಗಿಸಿದರು,[೩೪] ಈ ಇಬ್ಬರು ಆಟಗಾರರು ವಿಕ್ಟೋರಿಯಾ ತಂಡದಲ್ಲಿ ಅವರ ಸಹ ಆಟಗಾರರಾಗಿದ್ದರು.
ಏಪ್ರಿಲ್ ೨೦೦೬ರಲ್ಲಿ, ಕೌಂಟಿ ಚ್ಯಾಂಪಿಯನ್ ಶಿಪ್ ನ ಮೊದಲ ಪಂದ್ಯಕ್ಕಾಗಿ ವೈಟ್, ಇಂಗ್ಲಿಷ್ ಕೌಂಟಿ ತಂಡ ಸೊಮರ್ಸೆಟ್ ಗೆ ಸೇರ್ಪಡೆಯಾದರು. ಸೊಮರ್ಸೆಟ್ ತಂಡವು ಗ್ಲೌಸೆಸ್ಟರ್ ಶೈರ್ ತಂಡದಿಂದ ಬಲವಂತವಾಗಿ ಫಾಲೋ-ಆನ್ ಗೆ ಒಳಪಟ್ಟಿತು, ವೈಟ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ೨೨೮ ಬಾಲ್ ಗಳಲ್ಲಿ ೧೭೨ ರನ್ ಗಳನ್ನು ಗಳಿಸಿದರು, ಹಾಗು ಅಂತಿಮವಾಗಿ ಅವರ ವಿಕ್ಟೋರಿಯಾ ತಂಡದ ಅವರ ಮಾಜಿ ಸಹ ಆಟಗಾರ ಇಯಾನ್ ಹಾರ್ವೆಯ ಬೌಲಿಂಗ್ ನಲ್ಲಿ ಔಟಾದರು. ಈ ಇನ್ನಿಂಗ್ಸ್ ನ ಹೊರತಾಗಿಯೂ, ಸೊಮರ್ಸೆಟ್ ತಂಡವು ಒಟ್ಟಾರೆಯಾಗಿ ಕೇವಲ ೨೮೭ ರನ್ ಗಳನ್ನು ಗಳಿಸಲು ಸಾಧ್ಯವಾಯಿತು, ಹಾಗು ಪಂದ್ಯವನ್ನು ಒಂದು ಇನ್ನಿಂಗ್ಸ್ ಹಾಗು ಏಳು ರನ್ ಗಳಿಂದ ಸೋತಿತು.[೩೫] ಎರಡು ವಾರಗಳ ನಂತರ, ಮೇ ೧ರಂದು, ಕ್ರಿಕೆಟ್ ಆಸ್ಟ್ರೇಲಿಯಾ, ಜೇಮ್ಸ್ ಹೋಪ್ಸ್ ಹಾಗು ಮಿಕ್ ಲೆವಿಸ್ ರ ಒಪ್ಪಂದಗಳನ್ನು ಒಳಗೊಂಡಂತೆ ಕ್ಯಾಮೆರಾನ್ ವೈಟ್ ರ ರಾಷ್ಟ್ರೀಯ ಒಪ್ಪಂದವನ್ನು ಮುಂದಿನ ೧೨ ತಿಂಗಳ ಕಾಲ ನವೀಕರಿಸುವುದಿಲ್ಲವೆಂದು ಘೋಷಿಸಿತು.[೩೬] ಸೊಮರ್ಸೆಟ್ ನ ನಾಯಕ ಇಯಾನ್ ಬ್ಲ್ಯಾಕ್ವೆಲ್ ಭುಜಕ್ಕಾದ ಪೆಟ್ಟಿನಿಂದ ಮೂರು ತಿಂಗಳ ಕಾಲ ಪಂದ್ಯದಿಂದ ಹೊರಗುಳಿಯಬೇಕಾದಾಗ, ವೈಟ್ ರನ್ನು ಅವರ ಬದಲಿ ಆಟಗಾರನೆಂದು ಘೋಷಿಸಲಾಯಿತು.[೩೭] ಆಸ್ಟ್ರೇಲಿಯಾ ಅಂಡರ್-೧೯ ತಂಡದ ಜೊತೆಯಲ್ಲಿ ವಿಕ್ಟೋರಿಯಾ ತಂಡದ ನಾಯಕತ್ವದ ಜವಾಬ್ದಾರಿಯು ಹೆಗಲೇರಿದಾಗ, ಅವರ ಆಟದಲ್ಲಿ ಸುಧಾರಣೆಯಾಗುವ ಲಕ್ಷಣ ಕಂಡುಬಂದಿತು. ೫೦-ಓವರ್ ಗಳ ಚೆಲ್ಟನ್ಹ್ಯಾಮ್ & ಗ್ಲೌಸೆಸ್ಟರ್ ಟ್ರೋಫಿ ಪಂದ್ಯಾವಳಿಯಲ್ಲಿ ಗ್ಲಾಮಾರ್ಗನ್ ವಿರುದ್ಧ ೧೦೯*[note ೨] ರನ್ ಗಳ ನಂತರ ವೋರ್ಸೆಸ್ಟರ್ ಶೈರ್ ವಿರುದ್ಧದ ಕೌಂಟಿ ಚ್ಯಾಂಪಿಯನ್ ಶಿಪ್ ನಲ್ಲಿ ೧೩೧* ರನ್ ಗಳನ್ನು ಗಳಿಸಿದರು, ಪ್ರವಾಸಿ ಶ್ರೀಲಂಕನ್ನರ ವಿರುದ್ಧ ಅರ್ಧ-ಶತಕ ಹಾಗು ನಂತರದಲ್ಲಿ ಸರ್ರಿ ತಂಡದ ವಿರುದ್ಧ ಎರಡನೇ ಇನ್ನಿಂಗ್ಸ್ ನಲ್ಲಿ ೧೦೮ ರನ್ ಗಳು, ಎಲ್ಲವನ್ನು ಜೂನ್ ತಿಂಗಳ ಮೊದಲ ಭಾಗದಲ್ಲಿ ಗಳಿಸಿದರು.
ಅತ್ಯಂತ ಕಡಿಮೆ ಓವರ್ ಗಳ ಟ್ವೆಂಟಿ೨೦ ಕಪ್ ಶೈಲಿಯು, ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೈಟ್ ಗೆ ಮತ್ತೊಂದು ಅವಕಾಶ ನೀಡಿತು. ಪಂದ್ಯಾವಳಿಯಲ್ಲಿ ವೈಟ್ ಗೆ ಅವರ ಸೊಮರ್ಸೆಟ್ ತಂಡದ ಅವರ ಸಹ ಆಟಗಾರ ಆಸ್ಟ್ರೇಲಿಯನ್ ಜಸ್ಟಿನ್ ಲ್ಯಾಂಗರ್ ಜೊತೆಗೂಡುತ್ತಾರೆ, ಹಾಗು ಜೋಡಿಯು ಪಂದ್ಯಾವಳಿಯಲ್ಲಿ ಸೊಮರ್ಸೆಟ್ ನ ಆರಂಭಿಕ ಪಂದ್ಯದಲ್ಲಿ ಮಿಂಚುತ್ತದೆ. ಇನ್ನಿಂಗ್ಸ್ ನ್ನು ಆರಂಭಿಸಿ, ಲಾಂಗರ್ ೪೬ ಬಾಲ್ ಗಳಿಗೆ ೯೦ ರನ್ ಗಳನ್ನು ಗಳಿಸಿ, ವೈಟ್ ರ ೧೧೬* ರನ್ ಗಳ ದಾಖಲೆಯನ್ನು ಸರಿಗಟ್ಟುತ್ತಾರೆ, ಈ ಮೊತ್ತವನ್ನು ಒಂದು ಬಾಲ್ ಗೆ ಎರಡು ರನ್ ಗಳಂತೆ ಗಳಿಸಿ ಕಲೆ ಹಾಕುತ್ತಾರೆ. ಈ ಶತಕವು, ಟ್ವೆಂಟಿ೨೦ ಕ್ರಿಕೆಟ್ ನಲ್ಲಿ ವೈಟ್ ರ ಮೊದಲ ಶತಕವಾಗಿದೆ, ಹಾಗು ಗ್ಲೌಸೆಸ್ಟರ್ ಶೈರ್ ನ ಹತ್ತನೇ ವಿಕೆಟ್ ನ್ನು ಗಳಿಸುವ ಮೂಲಕ ೧೧೭ ರನ್ ಗಳ ಜಯದೊಂದಿಗೆ ಉತ್ತಮ ಪ್ರದರ್ಶನ ನೀಡಿ ಜಯವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ.[೩೮] ಕೇವಲ ಎರಡು ವಾರಗಳ ನಂತರ, ಈ ದಾಖಲೆಯನ್ನು ವೈಟ್ ಮುರಿಯುತ್ತಾರೆ, ವೋರ್ಸೆಸ್ಟರ್ ಶೈರ್ ವಿರುದ್ಧ ೧೧೪* ರನ್ ಗಳನ್ನು ಗಳಿಸುವುದರೊಂದಿಗೆ ಆವರೆಗೂ ಟ್ವೆಂಟಿ೨೦ ಕ್ರಿಕೆಟ್ ನಲ್ಲಿ ಜಂಟಿಯಾಗಿ ಕಲೆ ಹಾಕಿದ ಅತ್ಯಧಿಕ ಮೊತ್ತ ಇದಾಗಿದೆ.[೩೯] ಒಟ್ಟು ೭೦ ಬಾಲ್ ಗಳಲ್ಲಿ ಅವರು ಕಲೆ ಹಾಕಿದ ರನ್ ಗಳು, ಟ್ವೆಂಟಿ೨೦ ಕ್ರಿಕೆಟ್ ನಲ್ಲಿ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿತು, ಈ ದಾಖಲೆಯು ಎರಡು ವರ್ಷಗಳ ಕಾಲ ಬ್ರೆಂಡನ್ ಮ್ಯಾಕ್ಕಲಂ ಮುರಿಯುವವರೆಗೂ ಹಾಗೆ ಉಳಿದಿತ್ತು.[೪೦] ಪ್ರಮುಖ ಬ್ಯಾಟಿಂಗ್ ಸರಾಸರಿಯೊಂದಿಗೆ ಅವರು ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು, ಹಾಗು ಅವರ ೪೦೩ ರನ್ ಗಳು ಅವರ ತಂಡದ ಸಹ ಆಟಗಾರ ಲಾಂಗರ್ ರ ೪೬೪ ರನ್ ಗಳು ಹಾಗು ಲೈಸೆಸ್ಟರ್ ಶೈರ್ ಬ್ಯಾಟ್ಸ್‌ಮನ್ ಹಿಲ್ಟನ್ ಏಕರ್ಮನ್ ರ ೪೦೯ ರನ್ ಗಳಿಗಿಂತ ಹಿಂದಿನ ಸ್ಥಾನದಲ್ಲಿತು.[೪೧]
ಆಗಸ್ಟ್ ನಲ್ಲಿ, ಸೊಮರ್ಸೆಟ್ ತಂಡದ ಕುಸಿತದೊಂದಿಗೆ, ವೈಟ್, ಕೌಂಟಿ ಚ್ಯಾಂಪಿಯನ್ ಶಿಪ್ ನಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದರು, ಆದರೆ ಇದ್ಯಾವುದೂ ಅವರ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ. ಮೊದಲಿಗೆ, ಅವರು ಎಸೆಕ್ಸ್ ತಂಡದ ವಿರುದ್ಧ ೧೧೧ ರನ್ ಗಳನ್ನು ಬಾರಿಸಿದರು,[೪೨] ಹಾಗು ಒಂದು ವಾರದ ನಂತರ, ಸೊಮರ್ಸೆಟ್ ತಂಡದ ಇನ್ನಿಂಗ್ಸ್ ನ ಕೊನೆಯಲ್ಲಿ ೨೬೦ ರನ್ ಗಳನ್ನು ಗಳಿಸಿ ಔಟಾಗದೆ ಉಳಿಯುವ ಮೂಲಕ ಫಸ್ಟ್-ಕ್ಲಾಸ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ ನಲ್ಲಿ ವೈಯಕ್ತಿಕವಾಗಿ ಅತ್ಯಧಿಕ ರನ್ ಗಳನ್ನು ಗಳಿಸಿದರು. ಇವೆಲ್ಲದರ ಹೊರತಾಗಿಯೂ ಡರ್ಬೀಶೈರ್ ತಂಡವು ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ತವರಿನಲ್ಲಿ ವಿಜಯ ಗಳಿಸಿತು.[೪೩] ಕೌಂಟಿ ಚ್ಯಾಂಪಿಯನ್ ಶಿಪ್ ನ ಎರಡನೇ ವಿಭಾಗದಲ್ಲಿ ಸೊಮರ್ಸೆಟ್ ಕೊನೆಯ ಸ್ಥಾನ ಗಳಿಸಿದ್ದರ ಹೊರತಾಗಿಯೂ, ವೈಟ್, ಆ ಹಂತದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಯಶಸ್ವಿ ಕ್ರೀಡಾಋತುವನ್ನು ಹೊಂದಿದರು. ಅತ್ಯಧಿಕ ರನ್ ಗಳನ್ನು ಗಳಿಸುವುದರ ಜೊತೆಯಲ್ಲಿ, ಫಸ್ಟ್-ಕ್ಲಾಸ್ ಕ್ರಿಕೆಟ್ ನಲ್ಲಿ ಐದು ಶತಕಗಳನ್ನು ಬಾರಿಸಿದರು, ಅವರ ಬ್ಯಾಟಿಂಗ್ ಸರಾಸರಿಯು ೬೦ರಷ್ಟಿದ್ದರೆ, ಹಾಗು ಏಕ-ದಿನ ಬ್ಯಾಟಿಂಗ್ ಸರಾಸರಿಯು ೪೦ಕ್ಕೆ ಅಧಿಕಗೊಂಡಿತು.
೨೦೦೬-೦೭ರಲ್ಲಿ ನಡೆದ ಪುರಾ ಕಪ್ ನಲ್ಲಿ ತಾಸ್ಮೇನಿಯಾ ವಿರುದ್ಧ ಗಳಿಸಿದ ೧೫೦* ರನ್ ಗಳು ಆಸ್ಟ್ರೇಲಿಯಾದ ಸ್ವದೇಶಿ ಕ್ರೀಡಾಋತುವನ್ನು ಪ್ರತಿನಿಧಿಸಿತು; ಹಾಗು ಫೋರ್ಡ್ ರೇಂಜರ್ ಕಪ್ ನಲ್ಲಿ(ಈ ಹಿಂದೆ ING ಕಪ್ ಎಂದು ಪರಿಚಿತವಾಗಿತ್ತು)ನ್ಯೂ ಸೌತ್ ವೇಲ್ಸ್ ವಿರುದ್ಧ ಗಳಿಸಿದ ೧೨೬* ರನ್ ಗಳಿಂದಾಗಿ ಆಸ್ಟ್ರೇಲಿಯಾ ಏಕ-ದಿನ ತಂಡಕ್ಕೆ ವೈಟ್ ರಿಗೆ ಮತ್ತೊಮ್ಮೆ ಸ್ಥಾನ ನೀಡಲಾಯಿತು. ಆಯ್ಕೆ ಸಮಿತಿಯ ಮುಖ್ಯಸ್ಥ, ಆಂಡ್ರ್ಯೂ ಹಿಲ್ಡಿಚ್, ತಂಡಕ್ಕೆ ಅವರ ಸೇರ್ಪಡೆಯನ್ನು ಈ ರೀತಿ ವಿವರಿಸುತ್ತಾರೆ, "ಬ್ಯಾಟಿಂಗ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವುದರ ಜೊತೆಗೆ [ಅವರು] ಬೌಲಿಂಗ್ ನಲ್ಲಿ ಕೆಲವು ಅಸಾಧಾರಣ ಪ್ರದರ್ಶನಗಳನ್ನು ತೋರಿದ್ದಾರೆ" ಎಂದು ಶ್ಲಾಘಿಸಿದರು.[೪೪] ಆಸ್ಟ್ರೇಲಿಯನ್ ದಿನಪತ್ರಿಕೆ ದಿ ಏಜ್ ಗೆ ನೀಡಿದ ಸಂದರ್ಶನದಲ್ಲಿ, ವೈಟ್, ಅಂತರರಾಷ್ಟ್ರೀಯ ತಂಡಕ್ಕೆ ಅವರ ಹಿಂದಿರುಗುವಿಕೆಯಿಂದ ತಮಗುಂಟಾದ ಸಮಾಧಾನವನ್ನು ಸ್ಪಷ್ಟವಾಗಿ ಘೋಷಿಸುತ್ತಾರೆ, "ನಾನು ತಂಡದಲ್ಲಿ ಇರುವವರೆಗೂ ನನ್ನನ್ನು ಒಬ್ಬ ಬ್ಯಾಟಿಂಗ್ ಆಲ್ ರೌಂಡರ್ ಆಗಿ ಅಥವಾ ಒಬ್ಬ ಬೌಲಿಂಗ್ ಆಲ್ ರೌಂಡರ್ ಆಗಿ, ಅಥವಾ ಕೇವಲ ಬ್ಯಾಟ್ಸ್‌ಮನ್ ಅಥವಾ ಬೌಲರ್ ಆಗಿ ಆಯ್ಕೆ ಮಾಡುವುದರ ಬಗ್ಗೆ ನನಗೆ ಚಿಂತೆಯಿಲ್ಲ."[೪೫] ಇಂಗ್ಲೆಂಡ್ ವಿರುದ್ಧದ ಒಂದು ಅಂತರರಾಷ್ಟ್ರೀಯ ಟ್ವೆಂಟಿ೨೦ ಪಂದ್ಯದಲ್ಲಿ ೨೦ ಬಾಲ್ ಗಳಲ್ಲಿ ೪೦* ರನ್ ಗಳನ್ನು ಹಾಗು ೧/೧೧ ವಿಕೆಟ್ ಗಳಿಸಿದ್ದಕ್ಕಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.[೪೬] ಅವರ ಮುಂದಿನ ಬ್ಯಾಟಿಂಗ್ ಇನ್ನಿಂಗ್ಸ್ ನಲ್ಲಿ, ವೈಟ್, ನ್ಯೂಜಿಲೆಂಡ್ ವಿರುದ್ಧ ಮೂರು ಸಿಕ್ಸರ್ ಗಳನ್ನು ಒಳಗೊಂಡಂತೆ ೪೫ ರನ್ ಗಳಿಸಿದರು, ಇದು ಕ್ರಿಕೆಟ್ ಬಾಲ್ ನ್ನು ಎದುರಿಸುವ ಅವರ ರೀತಿಗೆ ತಂಡದ ಸಹ ಆಟಗಾರ ಆಂಡ್ರ್ಯೂ ಸೈಮಂಡ್ಸ್ ರ ಪ್ರಶಂಸೆಗೆ ಪಾತ್ರವಾಯಿತು, "ಬಾಲ್ ಮತ್ತೊಂದು ತುದಿಗೆ ಹೋಗುತ್ತಿರುವಾಗ, ಓಡಿ ರನ್ ಗಳಿಸಲು ನನಗೆ ಹೆಚ್ಚು ಸುಲಭವಾಗುತ್ತದೆ" ಎಂದು ಅವರು ಹೇಳುತ್ತಾರೆ.[೪೭] ಬ್ಯಾಟಿಂಗ್ ನಲ್ಲಿ ಅವರು ಉತ್ತಮ ಫಾರ್ಮ್ ಹೊಂದಿದ್ದರ ಹೊರತಾಗಿಯೂ, ವೈಟ್ ರ ಬೌಲಿಂಗ್ ಬಹುತೇಕ ನಿಷ್ಪರಿಣಾಮಕಾರಿ ಎನಿಸಿತು. ಈ ಕಾರಣ, ಹಾಗು ಬ್ರಾಡ್ ಹಾಡ್ಜ್ ರ ಸುಧಾರಿತ ಫಾರ್ಮ್ ನಿಂದ ಹಾಗು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಬ್ರಾಡ್ ಹಾಗ್ ಹಾಗು ಶೇನ್ ವ್ಯಾಟ್ಸನ್ ರ ಆಯ್ಕೆಯಿಂದಾಗಿ,[೪೮] ಕಾಮನ್ವೆಲ್ತ್ ಬ್ಯಾಂಕ್ ಸರಣಿಯ ಅಂತಿಮ ಪಂದ್ಯದಲ್ಲಿ ಇವರನ್ನು ತಂಡದಿಂದ ಕೈಬಿಡಲಾಯಿತು, ಹಾಗು ವರ್ಲ್ಡ್ ಕಪ್ ತಂಡದಿಂದ ಹೊರಗುಳಿದರು.[೪೯]
ವರ್ಲ್ಡ್ ಕಪ್ ತಂಡದಲ್ಲಿ ಆಯ್ಕೆಗೊಳ್ಳದಿದ್ದರೂ, ವೈಟ್, ನ್ಯೂಜಿಲೆಂಡ್ ವಿರುದ್ಧ ಚ್ಯಾಪಲ್-ಹಾಡ್ಲೀ ಟ್ರೋಫಿಯ ಎಲ್ಲ ಮೂರು ODIಗಳಲ್ಲಿ ಆಡಿದರು. ಇದಕ್ಕೆ ಕಾರಣ ಮುಂಬರುವ ವರ್ಲ್ಡ್ ಕಪ್ ನಲ್ಲಿ ಆಡುವ ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡುವುದು, ಅಥವಾ ಆಟಗಾರರಿಗೆ ಉಂಟಾಗಿದ್ದ ಗಾಯಗಳು ಕಾರಣವಾಗಿತ್ತು. ಸರಣಿಯ ಅವಧಿಯಲ್ಲಿ ತಂಡದ ತಾತ್ಕಾಲಿಕ ನಾಯಕ ಮೈಕಲ್ ಹಸ್ಸಿ ಮೂರು ಓವರ್ ಗಳಿಗೆ ಬೌಲ್ ಮಾಡುವಂತೆ ಇವರಿಗೆ ಆದೇಶಿಸುತ್ತಾರೆ, ಅತ್ಯಂತ ದುಬಾರಿ ಆಟಗಾರ ಎನಿಸಿದ ಎರಡನೇ ಪಂದ್ಯದಲ್ಲಿ, ಬಹುತೇಕ ಒಂದು ಓವರ್ ಗೆ ೧೦ ರನ್ ಗಳನ್ನು ನೀಡಿ ಆಟ ಗೆಲ್ಲಲು ಎದುರಾಳಿಗೆ ಅವಕಾಶ ಮಾಡಿಕೊಟ್ಟರು. ಆ ಪಂದ್ಯದಲ್ಲಿ ಅವರು ಬಹಳ ಬೇಗನೆ ೪೨* ರನ್ ಗಳನ್ನು ಗಳಿಸಿದರು, ಇದರಲ್ಲಿ ಮೂರು ಸಿಕ್ಸರ್ ಗಳನ್ನು ಒಳಗೊಂಡಂತೆ ಆರು ಬೌಂಡರಿಗಳನ್ನು ಹೊಡೆದರು.[೫೦] ಇತರ ಎರಡು ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ, ಎರಡೂ ಪಂದ್ಯಗಳಲ್ಲಿ ಅವರು ೧೩ ರನ್ ಗಳನ್ನು ಗಳಿಸಿದರು.
ಫೋರ್ಡ್ ರೇಂಜರ್ ಕಪ್ ಅಂತಿಮ ಪಂದ್ಯದಲ್ಲಿ ತಮ್ಮ ತಂಡದ ನಾಯಕತ್ವ ವಹಿಸಿಕೊಳ್ಳಲು ವೈಟ್ ವಿಕ್ಟೋರಿಯಾ ತಂಡಕ್ಕೆ ಹಿಂದಿರುಗುತ್ತಾರೆ, ಆ ಪಂದ್ಯದಲ್ಲಿ ೨೧ ರನ್ ಗಳೊಂದಿಗೆ ಕ್ವೀನ್ಸ್ ಲ್ಯಾಂಡ್ ತಂಡದ ಎದುರು ಸೋಲನ್ನು ಅನುಭವಿಸಿದರು.[೫೧] ಎರಡು ಪುರಾ ಕಪ್ ಪಂದ್ಯಗಳಲ್ಲಿ ಒಂದೆರಡು ವಿಕೆಟ್ ಗಳನ್ನು ಹಾಗು ೯೬ ರನ್ ಗಳನ್ನು ಗಳಿಸಿದರು, ಹಾಗು ಇಂಗ್ಲೆಂಡ್ ನಲ್ಲಿ ನಡೆಯಲಿದ್ದ ತಮ್ಮ ಮೊದಲ ಪಂದ್ಯಕ್ಕೆ ಮುಂಚೆ ಒಂದು ತಿಂಗಳ ವಿಶ್ರಾಂತಿಯ ನಂತರ, ಎರಡನೇ ಕ್ರೀಡಾಋತುವಿಗಾಗಿ ಸೊಮರ್ಸೆಟ್ ಗೆ ಹಿಂದಿರುಗಿದರು. ಅವರು ಶೀಘ್ರದಲ್ಲೇ ರನ್ ಗಳನ್ನು ಗಳಿಸಲು ಕಾತರರಾಗಿದ್ದರು, ಸೊಮರ್ಸೆಟ್ ವಿರುದ್ಧದ ಮಿಡಲ್ಸೆಕ್ಸ್ ಪಂದ್ಯದಲ್ಲಿ ಎಂಟು ಶತಕನಾಯಕರಲ್ಲಿ ಇವರು ಸಹ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯನ್ ತಂಡದ ಅವರ ಸಹ ಆಟಗಾರ ಲಾಂಗರ್ ಕೂಡ ಸೊಮರ್ಸೆಟ್ ತಂಡಕ್ಕೆ ಹಿಂದಿರುಗಿ ೩೧೫ ರನ್ ಗಳನ್ನು ಗಳಿಸಿದರು, ಹಾಗು ವೈಟ್ ೧೧೪ ರನ್ ಗಳನ್ನು ಕಲೆ ಹಾಕಿದರು, ಅಂತಿಮವಾಗಿ ಸೊಮರ್ಸೆಟ್ ತಂಡವು ೮೫೦/೭ ಗಳಿಸಿ ಆಟದ ಮುಕ್ತಾಯ ಘೋಷಿಸಿತು.[೫೨] ಆ ತಿಂಗಳು ಮುಗಿಯುವುದರೊಳಗಾಗಿ ವೈಟ್ ಮತ್ತೆ ಮೂರು ಅರ್ಧ-ಶತಕಗಳನ್ನು ಬಾರಿಸಿದರು, ಹಾಗು ಮೇ ತಿಂಗಳ ಮೊದಲ ಪಂದ್ಯದಲ್ಲಿ, ಡರ್ಬಿಶೈರ್ ವಿರುದ್ಧ ಸೊಮರ್ಸೆಟ್ ತಂಡದ ನಾಲ್ಕು ಆಸ್ಟ್ರೇಲಿಯನ್ನರಲ್ಲಿ ಮೂರು ಅಂಕಿಯ ರನ್ ಗಳನ್ನು ಗಳಿಸಿದವರಲ್ಲಿ ಇವರೂ ಸಹ ಒಬ್ಬರು.[೫೩] ಗ್ಲೌಸೆಸ್ಟರ್ ಶೈರ್ ವಿರುದ್ಧದ ಪಂದ್ಯದಲ್ಲಿ, ಅವರು ಮತ್ತೊಮ್ಮೆ ತಮ್ಮ ತಂಡದ ಎಲ್ಲ ಆಟಗಾರರು ಔಟಾದ ನಂತರವೂ ಶಾಂತವಾಗಿ ಆಡುವುದರೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು, ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಸೊಮರ್ಸೆಟ್ ತಂಡವು ೨೪೧ ರನ್ ಗಳನ್ನು ಗಳಿಸಿತು. ತಂಡದಲ್ಲಿ ೫೦ ರನ್ ಗಳನ್ನು ಬಾರಿಸಿದ ಮತ್ತೊಬ್ಬ ಆಟಗಾರನೆಂದರೆ ಜೇಮ್ಸ್ ಹಿಲ್ಡ್ರೆಥ್.[೫೪] ಎರಡನೇ ಬಾರಿಗೆ ಕೌಂಟಿ ಚ್ಯಾಂಪಿಯನ್ ಶಿಪ್ ನಲ್ಲಿ ವೈಟ್ ೧,೦೦೦ ರನ್ ಗಳನ್ನು ದಾಟಿದರು, ಹಾಗು ಡಿವಿಷನ್ ಟುನಿಂದ ಸೊಮರ್ಸೆಟ್ ತಂಡದ ಸುಧಾರಣೆಯಿಂದ ೭೦ ಬ್ಯಾಟಿಂಗ್ ಸರಾಸರಿಯನ್ನು ಕಂಡಿತು, ಹಿಂದಿನ ಕ್ರೀಡಾಋತುವಿನಲ್ಲಿ ವಿಭಾಗದ ಕಡೆಯ ಸ್ಥಾನದಲ್ಲಿದ್ದ ತಂಡವು, ಪಂದ್ಯಾವಳಿಯ ಕೊನೆಯ ಸ್ಥಾನವನ್ನು 'ಗೆಲ್ಲುವ' ಮೂಲಕ ಅನಿರೀಕ್ಷಿತ ಬದಲಾವಣೆ ಪಡೆಯಿತು. ಕ್ರೀಡಾಋತುವು ವೈಟ್ ರ ಬೌಲಿಂಗ್ ನಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆಯನ್ನೂ ಕಂಡಿತು, ಸರಾಸರಿ ೩೨.೭೫ರಲ್ಲಿ ಅವರು ಗಳಿಸಿದ ೨೦ ಫಸ್ಟ್-ಕ್ಲಾಸ್ ವಿಕೆಟ್ ಗಳು, ಸ್ವದೇಶೀ ಕ್ರೀಡಾಋತುವಿನ ಅತ್ಯುತ್ತಮ ಸಾಧನೆಯೆನಿಸಿತು. ಕ್ರೀಡಾಋತುವಿನಲ್ಲಿ ಪರಿಣಾಮಕಾರಿ ಪ್ರದರ್ಶನ ತೋರಿದ್ದರ ಹೊರತಾಗಿಯೂ, ೨೦೦೮ರ ಕ್ರೀಡಾಋತುವಿನಲ್ಲಿ ಇಂಗ್ಲಿಷ್ ಕೌಂಟಿಗಳು ಕೇವಲ ಏಕೈಕ ವಿದೇಶಿ ಆಟಗಾರನಿಗೆ ಅವಕಾಶ ನೀಡುತ್ತಿದ್ದ ಕಾರಣದಿಂದಾಗಿ, ಕೌಂಟಿ ಜೊತೆಗಿನ ವೈಟ್ ರ ಒಪ್ಪಂದವು ನವೀಕರಣಗೊಳ್ಳಲಿಲ್ಲ, ಸೊಮರ್ಸೆಟ್ ತಂಡವು ಜಸ್ಟಿನ್ ಲಾಂಗರ್ ರನ್ನೇ ನಾಯಕನನ್ನಾಗಿ ಉಳಿಸಿಕೊಂಡಿತು. ಸೊಮರ್ಸೆಟ್ ತಂಡದ ಕ್ರಿಕೆಟ್ ನಿರ್ದೇಶಕ, ಬ್ರಿಯನ್ ರೋಸ್, ವೈಟ್ ಗೆ ಅಭಿನಂದಿಸುತ್ತಾ, "ಒಬ್ಬನೇ ಒಬ್ಬ ವಿದೇಶಿ ಆಟಗಾರನಿಗೆ ಹೊಸ ನಾಯಕತ್ವ ನೀಡುವ ಆಯ್ಕೆಯು ಬಹಳ ಕಷ್ಟಕರವಾಗಿತ್ತು ಏಕೆಂದರೆ ಕ್ಯಾಮೆರಾನ್ ನಮ್ಮ ತಂಡಕ್ಕಾಗಿ ಮಹತ್ತರ ಸಾಧನೆ ಮಾಡಿದ್ದಾರೆ."[೫೫]
ಇದೆ ಫಾರ್ಮ್ ನಲ್ಲಿ ವೈಟ್ ಮತ್ತೊಮ್ಮೆ ಆಸ್ಟ್ರೇಲಿಯಾ A ತಂಡದೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದರು, ಆದರೆ ಕೇವಲ ಎರಡು ವಿಕೆಟ್ ಗಳಿಂದ ಸರಣಿಯನ್ನು ಪೂರ್ಣಗೊಳಿಸಿದರು, ಎರಡೂ ವಿಕೆಟ್ ಗಳನ್ನು ಫಸ್ಟ್-ಕ್ಲಾಸ್ ಪಂದ್ಯಗಳಲ್ಲಿ ಪಡೆಯುವುದರ ಜೊತೆಗೆ ಸಾಕಷ್ಟು ರನ್ ಗಳನ್ನು ಕಲೆ ಹಾಕಿದರು.[೫೬][೫೭] ಆಸ್ಟ್ರೇಲಿಯನ್ ಸ್ವದೇಶೀ ಕ್ರೀಡಾಋತುವಿಗೆ ಪ್ರವೇಶಿಸಿದ ಎರಡು ತಿಂಗಳ ನಂತರ, ಕ್ವೀನ್ಸ್ ಲ್ಯಾಂಡ್ ನ ಬೌಲರ್ ಲೀ ಕಾರ್ಸೇಲ್ಡಿನೆ ಯೊಂದಿಗೆ ಡಿಕ್ಕಿ ಹೊಡೆದು ಗಾಯಗೊಂಡ ಪರಿಣಾಮವಾಗಿ ವೈಟ್ ತಂಡದಿಂದ ಹೊರಬಿದ್ದರು, ಹಾಗು ಪಂದ್ಯದ ನಂತರ ಅವರ ಕಾಲಿನ ಅಸ್ಥಿಭಂಗವಾಗಿರುವುದನ್ನು ಪ್ರಕಟಿಸಲಾಗುತ್ತದೆ.[೫೮] ಕ್ರೀಡಾಋತುವಿನ ಆರಂಭದಿಂದಲೂ ಗಾಯದ ಸಮಸ್ಯೆ ಅವರನ್ನು ಕಾಡುತ್ತಿರುತ್ತದೆ, ಹಾಗು ಈ ಅಪ್ಪಳಿಕೆಯು ಸಂಪೂರ್ಣ ವಿಶ್ರಾಂತಿಗೆ ತೆರಳುವಂತೆ ಮಾಡುತ್ತದೆ, ಇದರಿಂದಾಗಿ ವೈಟ್ ಆರು ವಾರಗಳ ಕಾಲ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಆ ವರ್ಷದ ಬೇಸಿಗೆಯಲ್ಲಿ ರಾಷ್ಟ್ರೀಯ ತಂಡದ ಪರವಾಗಿ ಆಡಬೇಕಿದ್ದ ವೈಟ್, ಗಾಯದ ಸಮಸ್ಯೆಯಿಂದಾಗಿ ಆಡುವುದು ಕಷ್ಟಕರವೆಂದು ಸೂಚಿಸಿದರು.[೫೯] ಅವರು ಜನವರಿ ತಿಂಗಳ ಆರಂಭದಲ್ಲಿ ತಂಡಕ್ಕೆ ಮರಳಿ, ಟ್ವೆಂಟಿ೨೦ ಪಂದ್ಯಾವಳಿಯ ಕಡೆ ಮೂರು ಪಂದ್ಯಗಳಲ್ಲಿ ಭಾಗಿಯಾದರು, ಇದರಲ್ಲಿ ೩೨ ರನ್ ಗಳಿಂದ ಜಯಗಳಿಸಿದ ವಿಕ್ಟೋರಿಯಾ ತಂಡದ ಅಂತಿಮ ಪಂದ್ಯವೂ ಸಹ ಸೇರಿದೆ, ಆದಾಗ್ಯೂ ವೈಟ್, ಎಂಟು ಬಾಲ್ ಗಳಲ್ಲಿ ಕೇವಲ ಒಂದು ರನ್ ಗಳಿಸಲು ಮಾತ್ರ ಸಾಧ್ಯವಾಯಿತು.[೬೦] ನಂತರದ ಎರಡನೇ ಕ್ರೀಡಾಋತುವಿನಲ್ಲಿ, ವೈಟ್ ರನ್ನು ಪ್ರೈಮ್ ಮಿನಿಸ್ಟರ್'ಸ್ XI ತಂಡಕ್ಕೆ ನಾಯಕನೆಂದು ಘೋಷಿಸಲಾಗುತ್ತದೆ, ಹಾಗು ಅವರು ೫೦-ಓವರ್ ಗಳ ಪಂದ್ಯದಲ್ಲಿ ಎರಡು ಶ್ರೀಲಂಕನ್ ವಿಕೆಟ್ ಗಳನ್ನು ಕಬಳಿಸಿದರು.[೬೧] ಪುರಾ ಕಪ್ ಹಾಗು ಫೋರ್ಡ್ ರೇಂಜರ್ ಕಪ್ ಅಂತಿಮ ಪಂದ್ಯಗಳೆರಡಕ್ಕೂ ವೈಟ್ ವಿಕ್ಟೋರಿಯಾ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದರು, ಆದರೆ ಕ್ರಮವಾಗಿ ನ್ಯೂ ಸೌತ್ ವೇಲ್ಸ್ ಹಾಗು ತಾಸ್ಮೇನಿಯಾ ತಂಡದ ವಿರುದ್ಧ ಎರಡೂ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್(IPL) ನ ಆರಂಭಿಕ ಕ್ರೀಡಾಋತುವಿನ ಹರಾಜಿನಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಬಹುತೇಕ ವಿಶ್ವದ ಕ್ರಿಕೆಟಿಂಗ್ ಕಲಿಗಳು ಹರಾಜಾದರು. ಒಪ್ಪಂದದ ಮೇರೆಗೆ ಹದಿಮೂರು ಆಸ್ಟ್ರೇಲಿಯನ್ ಆಟಗಾರರು ಹರಾಜಾಗುತ್ತಾರೆ, ಇದು ರಾಷ್ಟ್ರೀಯ ಒಪ್ಪಂದಗಳ ಮೌಲ್ಯವನ್ನು ಸುತ್ತುವರಿದ ಗೋಪ್ಯತೆಗೆ ಸ್ಪಷ್ಟವಾಗಿ ವಿರುದ್ಧವಾಗಿರುತ್ತದೆ. ವೈಟ್ ರನ್ನು ಅಂತಿಮವಾಗಿ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ತಂಡವು $೫೦೦,೦೦೦ ಮೊತ್ತಕ್ಕೆ ಖರೀದಿಸಿತು, ಶೇನ್ ವಾರ್ನೆ ಹರಾಜಾದ ಮೊತ್ತಕ್ಕಿಂತ $೫೦,೦೦೦ ಅಧಿಕ ಮೊತ್ತಕ್ಕೆ ಇವರು ಹರಾಜಾದರು, ಇವರದು ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್ ಹಾಗು ಮೈಕಲ್ ಹಸ್ಸಿಗಿಂತ ಅಧಿಕ ಮೊತ್ತವಾಗಿತ್ತು.[೬೨] ಇಂತಹ ಸ್ಪಷ್ಟವಾದ ವ್ಯತ್ಯಾಸಕ್ಕೆ ಭಾಗಶಃ ಕಾರಣವೆಂದರೆ, ಆಸ್ಟ್ರೇಲಿಯಾ ಟೆಸ್ಟ್ ತಂಡದ ಆಟಗಾರರ ಮೇಲೆ ಅಂತರರಾಷ್ಟ್ರೀಯ ಭಾಗವಹಿಸುವಿಕೆಯು ಆಳಬಹುದಾದ ಸಾಧ್ಯತೆ, ಇಲ್ಲದೆ ಹೋದಲ್ಲಿ ಪಂದ್ಯಾವಳಿಯ ಮೊದಲೆರಡು ವರ್ಷಗಳು. ಬೆಂಗಳೂರು ತಂಡದ 'ಐಕಾನ್' ಆಟಗಾರ ರಾಹುಲ್ ದ್ರಾವಿಡ್, ವೈಟ್ ರ ಸೇರ್ಪಡೆಯನ್ನು ಒಂದು ಉತ್ತೇಜಕ ಸೇರ್ಪಡೆಯೆಂದು ವಿವರಿಸುತ್ತಾರೆ, "ವೈಟ್ ಒಬ್ಬ ಉತ್ತೇಜಕ ಟ್ವೆಂಟಿ೨೦ ಆಟಗಾರ ಹಾಗು ಆಸ್ಟ್ರೇಲಿಯಾದಲ್ಲಿ ಅವರು ಹುಟ್ಟುಹಾಕಿದ ದಾಖಲೆಯು[ಟ್ವೆಂಟಿ 20ಯಲ್ಲಿ ಎರಡು ಶತಕಗಳು] ಅಸಾಧಾರಣವಾಗಿದೆ" ಎಂದು ಹೇಳುತ್ತಾರೆ.[೬೩] ಅವರಿಗೆ ನೀಡಿದ ಮೊತ್ತದ ಹೊರತಾಗಿಯೂ, ವೈಟ್ ತಮ್ಮ ಏಕೈಕ IPL ಕ್ರೀಡಾಋತುವಿನಲ್ಲಿ ಭಾರಿ ನೀರಸ ಪ್ರದರ್ಶನ ನೀಡಿದರು. ಅವರು ಇಡಿ ಪಂದ್ಯಾವಳಿಯಲ್ಲಿ ಕೇವಲ ೧೧೪ ರನ್ ಗಳಿಸಿದರು, ಇದು ಪಂದ್ಯಾವಳಿಯಲ್ಲಿ ಅಗ್ರ ರನ್ ಗಳಿಕೆದಾರ ಹಾಗು ಅವರ ಆಸ್ಟ್ರೇಲಿಯನ್ ತಂಡದ ಸಹ ಆಟಗಾರ ಶಾನ್ ಮಾರ್ಷ್ ಗಿಂತ ೫೦೦ ರನ್ ಗಳಷ್ಟು ಕಡಿಮೆಯಿತ್ತು.[೬೪]
೨೦೦೮ರ ವೆಸ್ಟ್ ಇಂಡಿಸ್ ಪ್ರವಾಸಕ್ಕಾಗಿ, ವೈಟ್ ರನ್ನು ಆಸ್ಟ್ರೇಲಿಯನ್ ODI ಹಾಗು ಟ್ವೆಂಟಿ೨೦ ತಂಡಗಳಿಗೆ ಮತ್ತೊಮ್ಮೆ ಆಯ್ಕೆ ಮಾಡಲಾಯಿತು.[೬೫] ಅವರು, ಮಳೆಯ ಕಾರಣದಿಂದ ೧೧ ಓವರ್ ಗಳಿಗೆ ಸೀಮಿತಗೊಂಡ ಟ್ವೆಂಟಿ೨೦ ಪಂದ್ಯದಲ್ಲಿ ಆರು ಬಾಲ್ ಗಳಿಗೆ ೧೦ ರನ್ ಗಳನ್ನು ಗಳಿಸಿದರು, ಜೊತೆಗೆ ಯೂನಿವರ್ಸಿಟಿ ಆಫ್ ವೆಸ್ಟ್ ಇಂಡಿಸ್ ವೈಸ್-ಚ್ಯಾನ್ಸಲರ್'ಸ್ XI ವಿರುದ್ಧದ ೫೦ ಓವರ್ ಗಳ ಪಂದ್ಯದಲ್ಲಿ ೩೪ ರನ್ ಗಳನ್ನು ಗಳಿಸಿದರೂ, ಎಂಟು ಓವರ್ ಗಳನ್ನು ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯಲಿಲ್ಲ.[೬೬] ಅವರ ವೃತ್ತಿಜೀವನದ ಈ ಹಂತದಲ್ಲಿ, ವೈಟ್ ರನ್ನು ಸಾಧಾರಣವಾಗಿ ಸ್ವಲ್ಪಮಟ್ಟಿಗೆ ಬೌಲಿಂಗ್ ಮಾಡುವ ಮಧ್ಯಮ-ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ತಮ್ಮ ತಂಡದಲ್ಲಿ ಮುಂಚೂಣಿ ಸ್ಪಿನ್ನರ್ ಆಗಿ ಅವರಿಗೆ ಸ್ಥಾನ ಕಲ್ಪಿಸಿಕೊಟ್ಟರು. "ಈ ಪ್ರವಾಸಕ್ಕಾಗಿ ವೈಟ್ ರನ್ನು ನಿಸ್ಸಂಶಯವಾಗಿ ಒಬ್ಬ ಸ್ಪಿನ್ನರ್ ರನ್ನಾಗಿ ಆಯ್ಕೆ ಮಾಡಲಾಯಿತು. ನಾವು ಅವರನ್ನು ವಿವಿಧ ಪರಿಸ್ಥಿತಿಗಳಿಗೆ ಗುರಿಪಡಿಸಬೇಕು, ಹಾಗು ಅವರ ಮೇಲೆ ಮತ್ತಷ್ಟು ಹೆಚ್ಚಿನ ಒತ್ತಡ ಹೇರಬೇಕು. ಸರಣಿಯಲ್ಲಿ ಅವರು ನಮ್ಮ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವರೆಂದು ಆಶಿಸುತ್ತೇವೆ."[೬೭] ಪಾಂಟಿಂಗ್ ರ ಹೇಳಿಕೆಯ ಹೊರತಾಗಿಯೂ, ಮೊದಲ ODIನಲ್ಲಿ ನಾಲ್ಕನೇ ಬದಲಿ ಬೌಲರ್ ಆಗಿ ವೈಟ್ ಗೆ ಅವಕಾಶ ನೀಡಿದರು, ಮೊದಲ ಬೌಲರ್ ಆಗಿ ನಿಧಾನ ಗತಿಯ ಲೆಫ್ಟ್-ಆರ್ಮ್ ಸ್ಪಿನ್ನರ್ ಮೈಕಲ್ ಕ್ಲಾರ್ಕ್ ಗೆ ಅವಕಾಶ ನೀಡಿದರು.[೬೮] ಯಾವುದೇ ತಡೆಗಳಿಲ್ಲದೆ ವೈಟ್ ಆರು ಓವರ್ ಗಳಲ್ಲಿ ೩೨ ರನ್ ಗಳನ್ನು ನೀಡಿದರು, ಹಾಗು ಎರಡನೇ ಪಂದ್ಯದಲ್ಲಿ ಬೌಲಿಂಗ್ ಮಾಡಲಿಲ್ಲ, ಪಂದ್ಯದಲ್ಲಿ ಅರ್ಧ-ಶತಕ ಹಾಗು ಮೂರು ವಿಕೆಟ್ ಗಳನ್ನು ಗಳಿಸಿದ್ದಕ್ಕಾಗಿ ಕ್ಲಾರ್ಕ್ ರನ್ನು ಪಂದ್ಯ ಪುರುಷೋತ್ತಮ ಎಂದು ಘೋಷಿಸಲಾಯಿತು. ಒಂದು ಬಾಲ್ ಗೆ ಒಂದು ರನ್ ನಂತೆ ವೈಟ್ ೪೦* ರನ್ ಗಳನ್ನು ಬೇಗನೆ ಗಳಿಸಿದರೂ, ಆಂಡ್ರ್ಯೂ ಸೈಮಂಡ್ಸ್ ತಂಡಕ್ಕೆ ಮರಳಿದ್ದರಿಂದಾಗಿ, ಕಡೆಯ ಮೂರು ODIಗಳಲ್ಲಿ ವೈಟ್ ತಮ್ಮ ತಂಡದಿಂದ ಮತ್ತೊಮ್ಮೆ ಹೊರಗುಳಿಯಬೇಕಾಯಿತು.[೬೯]
ಮೀನು ಹಿಡಿಯುವ ನೆಪದಿಂದ ತಂಡದ ಸಭೆಯಲ್ಲಿ ಭಾಗವಹಿಸದಿರುವ ಕಾರಣಕ್ಕೆ ೨೦೦೮-೦೯ರ ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ಸೈಮಂಡ್ಸ್ ರನ್ನು ತಂಡದಿಂದ ಕೈಬಿಡಲಾಯಿತು, ಇದು ವೈಟ್ ಗೆ ಮತ್ತೊಮ್ಮೆ ODI ತಂಡದಲ್ಲಿ ಸ್ಥಾನ ನೀಡಿತು.[೭೦] ಆದಾಗ್ಯೂ, ತಂಡದ ತಾತ್ಕಾಲಿಕ ನಾಯಕ ಕ್ಲಾರ್ಕ್, ವಿಕ್ಟೋರಿಯಾ ತಂಡದ ನಾಯಕನೆದುರು ತನ್ನನ್ನು ತಾನು ಹಾಜರುಪಡಿಸಿಕೊಳ್ಳುವ ಮೂಲಕ ಪಾಂಟಿಂಗ್ ರ ಕಾರ್ಯವನ್ನು ಪ್ರತಿಬಿಂಬಿಸುತ್ತಾರೆ, ವೈಟ್, ತಾವು ಬೌಲ್ ಮಾಡಿದ ೧೦ಬಾಲ್ ಗಳಲ್ಲಿ ಐದು ರನ್ ನೀಡಿ ಮೂರು ವಿಕೆಟ್ ಗಳನ್ನು ಗಳಿಸುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು.[೭೧] ಪಂದ್ಯದ ನಂತರ, ವೈಟ್, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉಂಟಾಗುವ ಒತ್ತಡಗಳನ್ನು ನಿರ್ವಹಿಸುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕೆಂದು ಒಪ್ಪಿಕೊಂಡರು, ಆದರೆ ಸಕಾರಾತ್ಮಕವಾಗಿ, "ಕೆಲವು ವಿಕೆಟ್ ಗಳನ್ನು ಪಡೆಯುವುದು ಸಂತೋಷದ ವಿಷಯವೇ ಆದರೂ, ಅದೇ ರೀತಿ ರನ್ ಗಳನ್ನು ಗಳಿಸಿದ್ದರೆ ಮತ್ತಷ್ಟು ಸಂತೋಷವಾಗುತ್ತಿತ್ತು" ಎಂದು ನುಡಿದರು.[೭೦] ಎರಡನೇ ಪಂದ್ಯದಲ್ಲಿ ಅವರು ಮತ್ತೆರಡು ವಿಕೆಟ್ ಕಬಳಿಸಿದರು ಹಾಗು, ಮೂರನೇ ಪಂದ್ಯದಲ್ಲಿ ಬೌಲಿಂಗ್ ಅವಕಾಶ ದೊರೆಯದಿದ್ದರೂ, ಸರಣಿಯನ್ನು ಸರಾಸರಿ ೧೦ರೊಳಗೆ ಪೂರ್ಣಗೊಳಿಸಿದರು.[೭೨]
ಭಾರತ ಆತಿಥೇಯ ನೀಡಿದ ತ್ರಿಕೋನ ಸರಣಿಯಲ್ಲಿ ನ್ಯೂಜಿಲೆಂಡ್ A ಹಾಗು ಭಾರತ A ತಂಡದ ವಿರುದ್ಧ ಸೆಣೆಸಲು ಅವರನ್ನು ಆಸ್ಟ್ರೇಲಿಯಾ A ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಈ ನಾಯಕತ್ವದ ಜವಾಬ್ದಾರಿಯು ವೈಟ್ ಗೆ ಸಾಕಷ್ಟು ಓವರ್ ಗಳಲ್ಲಿ ಬೌಲ್ ಮಾಡುವ ಅವಕಾಶ ಒದಗಿಸಿಕೊಟ್ಟಿತು, ಒಟ್ಟಾರೆಯಾಗಿ ಅವರು ೩೦ ಓವರ್ ಗಳಿಗೆ ಬೌಲಿಂಗ್ ಮಾಡಿ, ಪಂದ್ಯಾವಳಿಯಲ್ಲಿ ಎಂಟು ವಿಕೆಟ್ ಕಬಳಿಸಿದರು, ಈ ನಿಟ್ಟಿನಲ್ಲಿ ಅವರು ಪಿಯುಶ್ ಚಾವ್ಲಾರ ನಂತರದ ಸ್ಥಾನ ಗಳಿಸಿದರು.[೭೩] ಅವರು ಐದನೇ ಅತ್ಯಧಿಕ ಬ್ಯಾಟಿಂಗ್ ಸರಾಸರಿಯೊಂದಿಗೆ ತಮ್ಮ ಆಲ್-ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸುವುದರ ಜೊತೆಗೆ ತಮ್ಮ ತಂಡವನ್ನು ಫೈನಲ್ ಗೆ ಮುನ್ನಡೆಸಿದರು,[೭೪] ಸರಣಿಯಲ್ಲಿ ಇವರ ತಂಡವು ೧೫೬ ರನ್ ಗಳಿಂದ ಭಾರತ A ತಂಡವನ್ನು ಮಣಿಸಿತು.[೭೫]
ಶಿಸ್ತು ಉಲ್ಲಂಘನೆಯ ಕಾರಣದಿಂದಾಗಿ ಭಾರತ ಪ್ರವಾಸದಲ್ಲಿ ಸೈಮಂಡ್ಸ್ ರನ್ನು ತಂಡದಿಂದ ಕೈಬಿಟ್ಟಾಗ, ವಿಕ್ಟೋರಿಯಾದ ತಂಡದ ವೈಟ್ ರ ತರಬೇತುದಾರ ಗ್ರೆಗ್ ಶಿಪ್ಪರ್ಡ್, ವ್ಯಾಟ್ಸನ್ ರ ಬದಲಿಗೆ ವೈಟ್ ರಿಗೆ ತಂಡದಲ್ಲಿ ಸ್ಥಾನ ನೀಡಬೇಕಿತ್ತೆಂದು ಅಭಿಪ್ರಾಯಪಡುತ್ತಾರೆ, ಅವರ ಪ್ರಕಾರ ಈ ಲೆಗ್-ಸ್ಪಿನ್ನರ್ "ಸೈಮಂಡ್ಸ್ ರಿಂದ ತೆರವುಗೊಂಡಿದ್ದ ಆಕ್ರಮಣಕಾರಿ ಬೌಲಿಂಗ್ ಗೆ ಇವರು ಸೂಕ್ತವಾಗಿದ್ದರು - ಅವರೊಬ್ಬ ಹೊಡೆತಗಳಿಗೆ ಪ್ರತಿಯಾಗಿ ಪರಿಣಾಮಕಾರಿ ಆಟ ಆಡುವ ಮಹಾನ್ ಆಟಗಾರ".[೭೬] ವಿಕ್ಟೋರಿಯನ್ ತಂಡದ ಅವರ ಸಹ ಆಟಗಾರ-ಲೆಗ್ ಸ್ಪಿನ್ನರ್ ಬ್ರಯ್ಸ್ ಮ್ಯಾಕ್ಗೈನ್, ಗಾಯದ ಕಾರಣದಿಂದಾಗಿ ಪ್ರವಾಸವನ್ನು ಮೊಟಕುಗೊಳಿಸುತ್ತಾರೆ, ಶಿಪ್ಪರ್ಡ್ ರ ಪ್ರಕಾರ ಅರ್ಹರಾಗಿದ್ದ ವೈಟ್ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗುತ್ತಾರೆ, ಆದಾಗ್ಯೂ ಇವರನ್ನು ಒಬ್ಬ ಅನುಭವಿ ಬೌಲರ್ ಎಂದು ಹೆಸರಿಗೆ ಮಾತ್ರ ಆಯ್ಕೆ ಮಾಡಲಾಗಿರುತ್ತದೆ. ಪ್ರವಾಸಿ ತಂಡದಲ್ಲಿದ್ದ ಮತ್ತೊಬ್ಬ ಸ್ಪಿನ್ನರ್ ಜೇಸನ್ ಕ್ರೆಜ್ಜ, ಬೋರ್ಡ್ ಪ್ರೆಸಿಡೆಂಟ್'ಸ್ XI ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ೧೯೯ ರನ್ ಗಳನ್ನು ನೀಡಿದಾಗ, ತಂಡಕ್ಕೆ ವೈಟ್ ರ ಸೇರ್ಪಡೆಯು ಒಂದು ಸುರಕ್ಷಿತ ಆಯ್ಕೆಯೆಂದು ಪರಿಗಣಿಸಲಾಯಿತು, ಆದಾಗ್ಯೂ, ಪಾಂಟಿಂಗ್, ವಿಕೆಟ್ ಪಡೆಯದೇ ಪಂದ್ಯಗಳನ್ನು ಆಡಿದ ನಂತರವೂ ಕ್ರೆಜ್ಜರಿಗೆ ಸಾರ್ವಜನಿಕವಾಗಿ ಅನುಮೋದನೆ ನೀಡುತ್ತಾರೆ.[೭೭] ಪಾಂಟಿಂಗ್ ರ ಸ್ಪಷ್ಟವಾದ ಬೆಂಬಲದ ಹೊರತಾಗಿಯೂ, ವೈಟ್ ಗೆ ಮನ್ನಣೆ ನೀಡಲಾಗುತ್ತದೆ, ಹಾಗು ತಮ್ಮ ಟೆಸ್ಟ್ ಕ್ಯಾಪ್ ನ್ನು ಪಡೆದ ೪೦೨ನೇ ಆಸ್ಟ್ರೇಲಿಯನ್ ಆಟಗಾರನೆನಿಸಿಕೊಳ್ಳುತ್ತಾರೆ. ಸಾಧಾರಣವಾಗಿ ಫಸ್ಟ್-ಕ್ಲಾಸ್ ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಆಗಿ ಆಡಿದ್ದರ ಹೊರತಾಗಿಯೂ ಎಂಟನೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಇವರನ್ನು ಆಯ್ಕೆ ಮಾಡಲಾಗುತ್ತದೆ, ಸಾಮಾನ್ಯವಾಗಿ ಇದು ಒಬ್ಬ ಅನುಭವಿ ಬೌಲರ್ ನ ಸ್ಥಾನವಾಗಿರುತ್ತದೆ.
ಸಚಿನ್ ತೆಂಡೂಲ್ಕರ್ ರ ಏಕೈಕ ವಿಕೆಟ್ ನ್ನು ವೈಟ್ ಕಬಳಿಸಿದ ಮೊದಲ ಟೆಸ್ಟ್ ಪಂದ್ಯಾವಳಿಯ ಕೊನೆಯಲ್ಲಿ, ಪಾಂಟಿಂಗ್ "ಅವರು ಚಿಮ್ಮುತ್ತಾ ಬಂದು, ತಮ್ಮ ಬೌಲಿಂಗ್ ನಲ್ಲಿ ಪುಟಿಯುತ್ತಾರೆ. ಅವರು ಯಾವುದೇ ವಿಕೆಟ್ ಗಳನ್ನು ಪಡೆಯದಿದ್ದರೂ ಸಹ, ಅವರ ಆಟದ ಮೂಲಕ ನನ್ನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ."[೭೮] ಎರಡನೇ ಟೆಸ್ಟ್ ನ ಮೂಲಕ ವೈಟ್ ರ ಆಟದಲ್ಲಿ ಸುಧಾರಣೆ ಕಂಡಿತು, ಪಂದ್ಯದಲ್ಲಿ ಅವರು ಎರಡು ವಿಕೆಟ್ ಗಳನ್ನು ಗಳಿಸುತ್ತಾರೆ, ಆದರೆ ಕಡೆ ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ನ್ನು ಪಡೆದರು. ಪಾಂಟಿಂಗ್, ವೈಟ್ ರನ್ನು ಸಾರ್ವಜನಿಕವಾಗಿ ಶ್ಲಾಘಿಸಿದರೂ, ಅವರು ಮತ್ತೊಮ್ಮೆ ಕ್ಲಾರ್ಕ್ ರ ಅರೆಕಾಲಿಕ ಸ್ಪಿನ್ ಮಾಂತ್ರಿಕತೆಯನ್ನು, ವೈಟ್ ರ ಬೌಲಿಂಗ್ ಗೆ ಬದಲಾಗಿ ಸರಣಿಯುದ್ದಕ್ಕೂ ಹೆಚ್ಚು ಬಳಸಿಕೊಳ್ಳಲು ನಿರ್ಧರಿಸಿದರು. ಪ್ರವಾಸದಲ್ಲಿ ವೈಟ್ ರ ಐದು ವಿಕೆಟ್ ಗಳು ಬಹುತೇಕ ೭೦ರ ಬೌಲಿಂಗ್ ಸರಾಸರಿಯಲ್ಲಿ ಕಂಡುಬಂದವು, ಹಾಗು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ತಂಡದಲ್ಲಿ ಆಂಡ್ರ್ಯೂ ಸೈಮಂಡ್ಸ್ ರ ಸೇರ್ಪಡೆಯೊಂದಿಗೆ, ತಂಡದಲ್ಲಿ ವೈಟ್ ಗೆ ಯಾವುದೇ ಸ್ಥಾನ ದೊರೆಯಲಿಲ್ಲ.[೭೯]
ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಟೆಸ್ಟ್ ಪಂದ್ಯಾವಳಿಗಳಲ್ಲಿ ಆಡಲು ತಂಡಕ್ಕೆ ಸೇರ್ಪಡೆಯಾಗದಿದ್ದರೂ ಸಹ, ವೈಟ್ ರನ್ನು ಸ್ವದೇಶದಲ್ಲಿ ನಡೆಯಲಿದ್ದ ODI ಹಾಗು ಟ್ವೆಂಟಿ೨೦ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಆಯ್ಕೆ ಮಾಡಲಾಯಿತು, ಹಾಗು ಅವರು "ನಾನು ತಂಡದಲ್ಲಿ ಭಾಗಿಯಾಗಿರುವುದು ಒಂದು ಒಳ್ಳೆಯ ಭಾವನೆಗಳನ್ನು ಉಂಟು ಮಾಡುತ್ತಿದೆಯೆಂದು" ಅವರು ಪ್ರಕಟಿಸಿದರು.[೮೦] ವೈಟ್ ಟ್ವೆಂಟಿ೨೦ ಪಂದ್ಯಾವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾ, ಮೊದಲ ಪಂದ್ಯದಲ್ಲಿ ಕೇವಲ ಏಳು ರನ್ ಗಳನ್ನು ಗಳಿಸಿ ನೀರಸ ಪ್ರದರ್ಶನ ನೀಡಿ, ಎರಡನೇ ಪಂದ್ಯದಲ್ಲಿ ೧೮ ಬಾಲುಗಳಲ್ಲಿ ೪೦* ರನ್ ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಮೊತ್ತಕ್ಕಿಂತ ಆಸ್ಟ್ರೇಲಿಯಾ ತಂಡದ ಮೊತ್ತವನ್ನು ಹೆಚ್ಚಿಸಿದರು.[೮೧] ಅವರು ODI ಸರಣಿಯಲ್ಲಿ ಸುಸ್ಥಿರ ಸ್ಥಾನ ಪಡೆದರು, ಇದರಲ್ಲಿ ಅವರನ್ನು ಮತ್ತೊಮ್ಮೆ ಮಧ್ಯಮ-ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಹಾಗು ತಾತ್ಕಾಲಿಕ ಸ್ಪಿನ್ನರ್ ಆಗಿ ಸ್ಥಾನ ನೀಡಲಾಯಿತು. ನ್ಯೂಜಿಲೆಂಡ್ ವಿರುದ್ಧದ ಏಕ-ದಿನ ಸರಣಿಯಲ್ಲಿ ಅವರನ್ನು ಉಳಿಸಿಕೊಳ್ಳಲಾಯಿತು, ಆದರೆ ಪಂದ್ಯದಲ್ಲಿ ಸೀಮಿತ ಭಾಗಿತ್ವವನ್ನು ಪಡೆದರು, ತಮ್ಮ ಎರಡು ಇನ್ನಿಂಗ್ಸ್ ಗಳಿಂದ ೨೭ ರನ್ ಗಳನ್ನು ಗಳಿಸಿದರು,[೮೨] ಆದಾಗ್ಯೂ ಏಳು ಓವರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಗಳನ್ನು ಕಬಳಿಸಿದರು.[೮೩]
ಟೆಸ್ಟ್ ತಂಡದಲ್ಲಿ ಅವರು ಸೇರ್ಪಡೆಗೊಳ್ಳದ ಕಾರಣ ಅವರು ವಿಕ್ಟೋರಿಯಾ ತಂಡಕ್ಕೆ ಹಿಂದಿರುಗಿ, ಫೋರ್ಡ್ ರೇಂಜರ್ ಕಪ್ ಅಂತಿಮ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾದರು, ತಂಡವು ೧೨ ರನ್ ಗಳಿಂದ ಕ್ವೀನ್ಸ್ ಲ್ಯಾಂಡ್ ತಂಡಕ್ಕೆ ಶರಣಾಯಿತು.[೮೪] ತಾಸ್ಮೇನಿಯಾ ಹಾಗು ಕ್ವೀನ್ಸ್ ಲ್ಯಾಂಡ್ ನಡುವಿನ ಪಂದ್ಯವು ಡ್ರಾ ಆದ ಕಾರಣದಿಂದ, ಮತ್ತೊಂದು ಅಂತಿಮ ಪಂದ್ಯವು ಕ್ವೀನ್ಸ್ ಲ್ಯಾಂಡ್- ವಿಕ್ಟೋರಿಯಾ ತಂಡದ ನಡುವೆ ನಡೆಯುತ್ತದೆ, ಇದು ಶೆಫ್ಫೀಲ್ಡ್ ಶೀಲ್ಡ್(ಈ ಹಿಂದೆ ಪುರಾ ಕಪ್ ಎಂದು ಪರಿಚಿತವಾಗಿತ್ತು) ಗಾಗಿ ನಡೆದ ಪಂದ್ಯ. ಕ್ವೀನ್ಸ್ ಲ್ಯಾಂಡ್ ತಂಡವು ಸಮಗ್ರವಾಗಿ ಉತ್ತಮ ಪ್ರದರ್ಶನ ತೋರಿದರೂ, ವೈಟ್ ಗಳಿಸಿದ ೧೩೫ ಹಾಗು ೬೧ ರನ್ ಗಳಿಂದಾಗಿ ೨೦೦೩-೦೪ರ ನಂತರ ಮೊದಲ ಬಾರಿ ಚ್ಯಾಂಪಿಯನ್ ಶಿಪ್ ಪಟ್ಟಕ್ಕೆ ತಂಡವು ಮುನ್ನಡೆಯಿತು.[೮೫]
ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ೨೦ ಪಂದ್ಯಕ್ಕಾಗಿ ವೈಟ್ ಆಸ್ಟ್ರೇಲಿಯಾ ತಂಡದಲ್ಲೇ ಉಳಿಯುತ್ತಾರೆ, ಆದರೆ ತಂಡದ ODI ಪಂದ್ಯಗಳಲ್ಲಿ ಭಾಗಿಯಾಗುವುದಿಲ್ಲ, ಹಾಗು ನಂತರದಲ್ಲಿ ICC ವರ್ಲ್ಡ್ ಟ್ವೆಂಟಿ೨೦ ತಂಡಕ್ಕೆ ಆಯ್ಕೆಯಾಗುವುದಿಲ್ಲ. ಆದಾಗ್ಯೂ, 'ಮದ್ಯಪಾನ-ಸೇವನೆ ಸಂಬಂಧಿತ ವಿಷಯದಲ್ಲಿ' ಸೈಮಂಡ್ಸ್ ಪಂದ್ಯಾವಳಿಯಿಂದ ಹೊರಬಿದ್ದಾಗ, ವೈಟ್ ರನ್ನು ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಯಿತು.[೮೬] ಆಸ್ಟ್ರೇಲಿಯಾ ತಂಡವು, ಪಂದ್ಯಾವಳಿಯ ಗ್ರೂಪ್-ಸ್ಟೇಜ್ ಹಂತದಿಂದ ಹೊರಬಿದ್ದಿತು, ಎರಡೂ ಪಂದ್ಯಾವಳಿಗಳಲ್ಲಿ ವೈಟ್ ಆಡಲಿಲ್ಲ, ಕ್ರಿಸಿನ್ಫೋ ನ ಬ್ರೈಡನ್ ಕೊವರ್ಡೇಲ್, "ಟೆಸ್ಟ್ ಹಾಗು ೫೦-ಓವರ್ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಆಟಗಾರರು, ಮೂರು ಗಂಟೆಗಳ ಪಂದ್ಯದಲ್ಲೂ ಸಹ ಅದೇ ರೀತಿಯ ಪ್ರದರ್ಶನ ನೀಡುತ್ತಾರೆ" ಎಂಬ ಆಸ್ಟ್ರೇಲಿಯಾ ತಂಡದ ಅಭಿಪ್ರಾಯವನ್ನು ಕಟುವಾಗಿ ಟೀಕಿಸಿದರು.[೮೭] ವೈಟ್, ಆಸ್ಟ್ರೇಲಿಯಾ A ತಂಡದ ನಾಯಕನಾಗಿ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಹಿಂದಿರುಗಿದರು. ಜೊತೆಗೆ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ಟ್ವೆಂಟಿ೨೦ ಪಂದ್ಯದಲ್ಲಿ ೭೩* ರನ್ ಗಳನ್ನು ಕಲೆಹಾಕುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.[೮೮]
ಏಕ-ದಿನ ಪಂದ್ಯಗಳಿಗಾಗಿ ಇಂಗ್ಲೆಂಡ್ ಪ್ರವಾಸ ತಂಡ, ಹಾಗು ಚ್ಯಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾದ ತಂಡ ಎರಡರಲ್ಲೂ ಇವರು ಆಯ್ಕೆಯಾದರು, ವೈಟ್ ಒಬ್ಬ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಸ್ಥಾನ ಪಡೆದರು. ಇಂಗ್ಲೆಂಡ್ ನಲ್ಲಿ ಮಳೆ ಅಡ್ಡಿಪಡಿಸಿದ ಟ್ವೆಂಟಿ೨೦ ಪಂದ್ಯದಲ್ಲಿ, ೫೫ ರನ್ ಗಳನ್ನು ಗಳಿಸುವ ಮೂಲಕ ಟ್ವೆಂಟಿ೨೦ ಅಂತರರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಿದರು, ಹಾಗು ಎರಡು-ಪೇಸ್ಡ್ ಪಿಚ್ ನ ಕಳಪೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ ಏಕೈಕ ಆಟಗಾರ.[೮೯] ODI ಸರಣಿಯಲ್ಲಿ, ಪಾಂಟಿಂಗ್ ರ ಅನುಪಸ್ಥಿತಿಯಲ್ಲಿ ವೈಟ್ ಮೂರನೇ ಸ್ಥಾನಕ್ಕೇರಿದರು, ಹಾಗು ಮೂರನೇ ಪಂದ್ಯದಲ್ಲಿ ಮೊದಲ ಅಂತರರಾಷ್ಟ್ರೀಯ ಶತಕ ಬಾರಿಸುವ ಮೊದಲು ಎರಡು ಪಂದ್ಯಗಳಲ್ಲಿ ಕ್ರಮವಾಗಿ ೫೩ ಹಾಗು ೪೨ ರನ್ ಗಳನ್ನು ಗಳಿಸಿದರು. ಅವರು ಕಡೆ ಪಂದ್ಯದಲ್ಲಿ ಗಳಿಸಿದ ೧೦೫ ಬಾಲುಗಳಿಗೆ ೧೨೪ ರನ್ ಗಳು ಅವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು,ತಂಡಕ್ಕೆ ಪಾಂಟಿಂಗ್ ಹಿಂದಿರುಗಿದ ನಂತರ ಅವರ ಬ್ಯಾಟಿಂಗ್ ಕ್ರಮಾಂಕವು ಕುಸಿಯಿತು.[೯೦] ಅವರು ಸರಣಿಯ ಉಳಿದ ನಾಲ್ಕು ಪಂದ್ಯಗಳನ್ನು ಆಡಿದರಾದರೂ, ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು, ಜೊತೆಗೆ ODIನಲ್ಲಿ ಆಸ್ಟ್ರೇಲಿಯಾ ತಂಡದ ಅಗ್ರ ರನ್ ಗಳಿಕೆದಾರನಾಗಿ ಪ್ರವಾಸವನ್ನು ಪೂರ್ಣಗೊಳಿಸಿದರು.[೯೧]
ಆಗ ೨೦೦೯ರ ಚ್ಯಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ವೈಟ್ ಉಪಸ್ಥಿತರಿದ್ದರು, ಅಂತಿಮ ಪಂದ್ಯಕ್ಕಾಗಿ ತಮ್ಮ ಉತ್ತಮ ಪ್ರದರ್ಶನವನ್ನೂ ಉಳಿಸಿಕೊಂಡರು, ನಾಲ್ಕನೇ ಸ್ಥಾನಕ್ಕೆ ಬಡತಿ ಹೊಂದಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ೬೨ ರನ್ ಗಳನ್ನು ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡವು ೬/೨ರಿಂದ ಆರು ವಿಕೆಟ್ ಸುಲಭ ಜಯ ಸಾಧಿಸಲು ನೆರವಾದರು.[೯೨] ಅದರ ಮುಂದಿನ ಭಾರತದ ವಿರುದ್ಧದ ODI ಸರಣಿಯಲ್ಲಿ ಮೈಕಲ್ ಕ್ಲಾರ್ಕ್ ಹಾಗು ಬ್ರಾಡ್ ಹಾಡಿನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ, ವೈಟ್ ನಾಲ್ಕನೇ ಸ್ಥಾನದಲ್ಲೇ ಉಳಿದರು, ಜೊತೆಗೆ ೫ ಸಿಕ್ಸರ್ ಗಳನ್ನು ಒಳಗೊಂಡಂತೆ ೩೩ ಬಾಲ್ ಗಳಲ್ಲಿ ಗಮನಾರ್ಹ ೫೭ ರನ್ ಗಳನ್ನು ಮಾಡುವ ಮೂಲಕ ಮೂರು ಅರ್ಧ-ಶತಕಗಳನ್ನು ಬಾರಿಸಿದರು.[೯೩] ತಮ್ಮ ವೃತ್ತಿಜೀವನದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡದ ಒಳಕ್ಕೂ-ಹೊರಕ್ಕೂ ಸ್ಥಾನ ಪಡೆಯುತ್ತಿದ್ದ ವೈಟ್, "ನಾನು ತಿಳಿದಿರುವಂತೆ ನಾನು ಬ್ಯಾಟಿಂಗ್ ಮಾಡುತ್ತಿರುವುದೇ ನನ್ನ ಉತ್ತಮ ಸ್ಥಾನ" ಎಂದು ಹೇಳುತ್ತಾರೆ,[೯೪] ಈ ಹೇಳಿಕೆಯ ನಂತರ ಆ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಅವರು ನೀಡಿದ ೧೮ ಪ್ರದರ್ಶನಗಳಲ್ಲಿ ಸರಾಸರಿ ೪೧.೭೧ರಷ್ಟನ್ನು ಗಳಿಸಿದರು.[೯೪] ವೈಟ್ ಗೆ ಒಬ್ಬ ಬೌಲರ್ ಗಿಂತ ಹೆಚ್ಚಾಗಿ ಬ್ಯಾಟ್ಸ್‌ಮನ್ ಆಗಿ ಜವಾಬ್ದಾರಿಯನ್ನು ವಹಿಸಲಾಯಿತು; ೨೦೦೯ರ ಕ್ರೀಡಾಋತುವಿನುದ್ದಕ್ಕೂ, ಏಕ ದಿನ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೇವಲ ಮೂರು ಬಾಲ್ ಗಳ ಬೌಲಿಂಗ್ ಮಾಡಿದರು.[೯೫]
ಅಂತರರಾಷ್ಟ್ರೀಯ ಟ್ವೆಂಟಿ೨೦ ಕ್ರಿಕೆಟ್ ನಿಂದ ರಿಕಿ ಪಾಂಟಿಂಗ್ ನಿವೃತ್ತರಾದಾಗ, ವಿಕ್ಟೋರಿಯಾ ತಂಡದ ತರಬೇತುದಾರ ಗ್ರೆಗ್ ಶಿಪ್ಪರ್ಡ್ ಮುಂದಾಳತ್ವದಲ್ಲಿ, ವೈಟ್ ರನ್ನು ನಾಯಕನನ್ನಾಗಿ ಮಾಡಬೇಕೆಂದು ಕೆಲವು ಕೋರಿಕೆಗಳು ಬಂದವು. ಈ ಕೋರಿಕೆಗಳ ಹೊರತಾಗಿಯೂ, ವೈಟ್, ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಉಪ-ನಾಯಕ ಮೈಕಲ್ ಕ್ಲಾರ್ಕ್ ಗೆ ಬೆಂಬಲ ಸೂಚಿಸಿದರು.[೯೬] ಅಂತಿಮವಾಗಿ ವೈಟ್ ರನ್ನು ಕ್ಲಾರ್ಕ್ ರ ಉಪ-ನಾಯಕನನ್ನಾಗಿ ಆಯ್ಕೆ ಮಾಡಲಾಯಿತು, ಆದಾಗ್ಯೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕ್ಲಾರ್ಕ್ ರ ಬಗ್ಗೆ ಆಯ್ಕೆ ಸಮಿತಿಗೆ ಚಿಂತೆ ಇದ್ದೇ ಇತ್ತು, ಹಾಗು ಟ್ವೆಂಟಿ೨೦ ಪಂದ್ಯಾವಳಿಯಲ್ಲಿ ಫಾರ್ಮ್ ನ್ನು ಉಳಿಸಿಕೊಳ್ಳುವ ಅವರ ಹೋರಾಟದಿಂದಾಗಿ, ವೈಟ್ ರನ್ನು ಮತ್ತೊಮ್ಮೆ ನಾಯಕನ ಪಟ್ಟಕ್ಕೆ ಏರಿಸಬೇಕೆಂಬ ಕರೆಗಳು ಹೆಚ್ಚಾದವು, ಆದರೂ ವೈಟ್ ಮತ್ತೊಮ್ಮೆ ಕ್ಲಾರ್ಕ್ ಗೆ ಬೆಂಬಲ ನೀಡುತ್ತಾರೆ, "ಮೈಕಲ್ ಉತ್ತಮವಾಗಿ ನಿರ್ವಹಣೆ ಮಾಡಲಿದ್ದಾರೆ ಹಾಗು ನಾನು ಅವರೊಂದಿಗೆ ಸಹಕರಿಸಲು ಕಾತರನಾಗಿದ್ದೇನೆ. ನಾನು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು[ಆಸ್ಟ್ರೇಲಿಯಾ] ಬಹಳ ಸಣ್ಣವನಿದ್ದೇನೆ, ಹಾಗು ಈ ಹಂತದಲ್ಲಿ ಅಷ್ಟೇನೂ ಅನುಭವವನ್ನೂ ಪಡೆದಿಲ್ಲ, ಈ ರೀತಿಯಾಗಿ ನಾನು ಅವರಿಂದ ಬಹಳಷ್ಟು ವಿಷಯಗಳನ್ನು ಕಲಿಯಬಹುದು."[೯೭]
ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ODI ತಂಡಕ್ಕೆ ಕ್ಲಾರ್ಕ್ ರ ಮರಳುವಿಕೆಯಿಂದಾಗಿ, ಮತ್ತೊಮ್ಮೆ ವೈಟ್ ರ ಸ್ಥಾನ ಕುಸಿಯಿತು, ಆದಾಗ್ಯೂ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ, ತಮ್ಮ ಮೊದಲ ಪಂದ್ಯದಲ್ಲಿ ಎರಡನೇ ಅಂತರರಾಷ್ಟ್ರೀಯ ಶತಕ ಬಾರಿಸಿದರು, ಆಸ್ಟ್ರೇಲಿಯಾ ತಂಡವು ಜಯಗಳಿಸಲು ೮೮ ಬಾಲ್ ಗಳಲ್ಲಿ ೧೦೫ ರನ್ ಗಳನ್ನು ಬಾರಿಸಿದರು.[೯೮] ಆ ಸರಣಿಯಲ್ಲಿ ವೈಟ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದರು, ಎರಡನೇ ಪಂದ್ಯದಲ್ಲಿ ಅರ್ಧ-ಶತಕ ಹಾಗು ಇತರ ಪಂದ್ಯಗಳಲ್ಲಿ ತಕ್ಕಮಟ್ಟಿಗಿನ ರನ್ ಗಳನ್ನು ಗಳಿಸಿದರು, ಹಾಗು ಆಸ್ಟ್ರೇಲಿಯಾ ತಂಡವು ೫–೦ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.
ನಾಲ್ಕನೇ ಕ್ರೀಡಾಋತುವಿನಲ್ಲಿ, ವೈಟ್ ರನ್ನು ಡೆಕ್ಕನ್ ಚಾರ್ಜರ್ಸ್ ತಂಡವು US$೧.೧ ದಶಲಕ್ಷಕ್ಕೆ ಖರೀದಿ ಮಾಡಿದೆ.
ಟ್ವೆಂಟಿ೨೦ ಅಂತರರಾಷ್ಟ್ರೀಯ ಪಂದ್ಯಾವಳಿಯಿಂದ ಮೈಕಲ್ ಕ್ಲಾರ್ಕ್ಗೆ ನಿವೃತ್ತಿಹೊಂದಿದಾಗ, ವೈಟ್ ರನ್ನು ೨೦೧೦-೧೧ ರ ಆಶಸ್ ಸರಣಿಗಳ ನಂತರ ಇಂಗ್ಲೆಂಡ್ ನ ವಿರುದ್ಧ ಆಡಲಾದ ಟ್ವೆಂಟಿ೨೦ ಅಂತರರಾಷ್ಟ್ರೀಯ ಸರಣಿಗಳ ೨-ಪಂದ್ಯಗಳ ನಾಯಕನನ್ನಾಗಿ ಹೆಸರಿಸಲಾಯಿತು.
ಅನಂತರ ಮುಂದೆ ಇಂಗ್ಲೆಂಡ್ ನ ವಿರುದ್ಧ ಆಡಲಾದ ಏಕದಿನ ಸರಣಿಗಳ ೭-ಪಂದ್ಯಗಳಲ್ಲಿ ವೈಟ್ ರನ್ನು ಕ್ಲಾರ್ಕ್ಗೆಯ ಉಪನಾಯಕನನ್ನಾಗಿ ಮಾಡಲಾಯಿತು. ಅಂತಿಮ ODI ಪಂದ್ಯಕ್ಕೆ ಕ್ಲಾರ್ಕ್ಗೆ ವಿರಾಮ ತೆಗೆದುಕೊಂಡಾಗ, ವೈಟ್ ರನ್ನು ತಂಡದ ನಾಯಕನೆಂದು ಹೆಸರಿಸಲಾಯಿತು. ಇವರು, ಶೇನ್ ವಾರ್ನ್ ರ ನಂತರ ಆಸ್ಟ್ರೇಲಿಯಾ ODI ತಂಡದ ನಾಯಕರಾದ ಮೊದಲ ವಿಕ್ಟೋರಿಯನ್ ಆಗಿದ್ದಾರೆ.
ಕ್ರಮ ಸಂಖ್ಯೆ. | ಸ್ಕೋರ್ (ಗಳಿಸಿದ ರನ್) | ಎದುರಾಳಿ | ಬ್ಯಾಂಟಿಂಗ್ ಕ್ರಮಾಂಕ | ಇನ್ನಿಂಗ್ಸ್ | ಪ್ರತಿ ಚೆಂಡಿಗೆ ರನ್ ಪ್ರಮಾಣ | ಸ್ಥಳ | ಸ್ವದೇಶ/ವಿದೇಶ/ತಟಸ್ಥ ಸ್ಥಳ | ದಿನಾಂಕ | ಫಲಿತಾಂಶ | ||
---|---|---|---|---|---|---|---|---|---|---|---|
1 | 53 | ![]() |
೩ | ೧ | ೭೪.೬೪ | ಲಂಡನ್ ನ ದಿ ಒವಲ್ ನಲ್ಲಿ | ವಿದೇಶ | 4 September 2009 | ಗೆದ್ದುಕೊಂಡರು[೯೯] | ||
೨ | 105 | ![]() |
೩ | ೨ | ೮೪.೬೭ | ಸೌತ್ ಆಂಪ್ಟನ್ ನ ದಿ ರೋಸ್ ಬೌಲ್ | ವಿದೇಶ | 9 September 2009 | ಗೆದ್ದುಕೊಂಡರು[೧೦೦] | ||
೩ | 62 | ![]() |
೪ | ೨ | ೬೦.೭೮ | ಸೆಂಚ್ಯೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್, | ತಟಸ್ಥ ಸ್ಥಳ | 5 October 2009 | ಗೆದ್ದುಕೊಂಡರು[೧೦೧] | ||
೪ | 51 | ![]() |
೪ | ೧ | ೭೫.೦೦ | ವಡೋದರಾ ದ ರಿಲಯನ್ಸ್ ಸ್ಟೇಡಿಯಂ, | ವಿದೇಶ | 25 October 2009 | ಗೆದ್ದುಕೊಂಡರು[೧೦೨] | ||
೫ | 62 | ![]() |
೪ | ೧ | ೮೭.೩೨ | ಮೊಹಾಲಿ ಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, | ವಿದೇಶ | 2 November 2009 | ಗೆದ್ದುಕೊಂಡರು[೧೦೩] | ||
೬ | 57 | ![]() |
೪ | ೧ | ೧೭೨.೭೨ | ಹೈದ್ರಾಬಾದ್ ನ ರಾಜೀವ್ ಗಾಂಧೀ ಇಂಟರ್ನ್ಯಾಷನಲ್ ಸ್ಟೇಡಿಯಂ, | ವಿದೇಶ | 5 November 2009 | ಗೆದ್ದುಕೊಂಡರು[೧೦೪] | ||
೭ | 105 | ![]() |
೫ | ೨ | ೧೧೯.೩೧ | ಬ್ರಿಸ್ಬೇನ್ ನ ದಿ ಗಬ್ಬಾ, | ಸ್ವದೇಶ | 22 January 2010 | ಗೆದ್ದುಕೊಂಡರು[೧೦೫] | ||
೮ | 55 | ![]() |
೫ | ೧ | ೯೪.೮೨ | ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್, | ಸ್ವದೇಶ | 24 January 2010 | ಗೆದ್ದುಕೊಂಡರು[೧೦೬] | ||
೯ | 63 | ![]() |
೪ | ೧ | ೮೦.೭೬ | ಬ್ರಿಸ್ಬೇನ್ ನ ದಿ ಗಬ್ಬಾ, | ಸ್ವದೇಶ | 14 February 2010 | ಗೆದ್ದುಕೊಂಡರು[೧೦೭] | ||
೧೦ | 54 | ![]() |
೫ | ೧ | ೯೦.೦೦ | ಆಕ್ಲೆಂಡ್ ನ ಈಡನ್ ಪಾರ್ಕ್, | ವಿದೇಶ | 6 March 2010 | ಗೆದ್ದುಕೊಂಡರು[೧೦೮] | ||
೧೧ | 50* | ![]() |
೪ | ೨ | ೮೭.೭೧ | ಆಕ್ಲೆಂಡ್ ನ ಈಡನ್ ಪಾರ್ಕ್, | ವಿದೇಶ | 11 March 2010 | ಗೆದ್ದುಕೊಂಡರು[೧೦೯] | ||
೧೨ | 86* | ![]() |
೫ | ೧ | ೮೭.೭೫ | ಕಾರ್ಡಿಫ್ ನ ಸೋಫಿಯಾ ಗಾರ್ಡನ್ಸ್, | ವಿದೇಶ | 24 June 2010 | ಸೋತರು[೧೧೦] | ||
೧೩ | 89* | ![]() |
೫ | ೧ | ೧೮೧.೬೩ | ವಿಶಾಖಪಟ್ಟಣಂ ನ ACA-VDCA ಸ್ಟೇಡಿಯಂ, | ವಿದೇಶ | 20 October 2010 | ಸೋತರು[೧೧೧] |
ಕ್ರಮಸಂಖ್ಯೆ. | ಸ್ಕೋರ್(ಗಳಿಸಿದ ರನ್) | ಎದುರಾಳಿ | ಕ್ರಮಾಂಕ | ಇನ್ನಿಂಗ್ಸ್ | ಪ್ರತಿ ಚೆಂಡಿಗೆ ರನ್ ಪ್ರಮಾಣ | ಸ್ಥಳ | ಸ್ವದೇಶ/ವಿದೇಶ/ತಟಸ್ಥ ಸ್ಥಳ | ದಿನಾಂಕ | ಫಲಿತಾಂಶ | ||
---|---|---|---|---|---|---|---|---|---|---|---|
1 | 55 | ![]() |
೫ | ೧ | ೧೫೨.೭೭ | ಮ್ಯಾಂಚೆಸ್ಟರ್ ನ ಓಲ್ಡ್ ಟ್ರ್ಯಾಫೋರ್ಡ್, | ವಿದೇಶ | 30 August 2009 | ಯಾವುದೇ ಫಲಿತಾಂಶ ವಿಲ್ಲ[೯೯] | ||
೨ | 64* | ![]() |
೫ | ೨ | ೨೪೬.೧೫ | ಕ್ರೈಸ್ಟ್ ಚರ್ಚ್ ನ AMI ಸ್ಟೇಡಿಯಂ, | ವಿದೇಶ | 28 February 2010 | ಸಮನಾಗಿದ್ದು[೧೦೦] | ||
೩ | 85* | ![]() |
೬ | ೧ | ೧೭೩.೪೬ | ಬ್ರಿಡ್ಜ್‌ಟೌನ್ ನ ಕೆನ್ಸಿಂಗ್ಟನ್ ಓವಲ್, | ತಟಸ್ಥ ಸ್ಥಳ | 9 May 2010 | ಗೆದ್ದುಕೊಂಡರು[೧೦೧] |
{{cite web}}
: Check date values in: |accessdate=
and |date=
(help)
{{cite web}}
: Check date values in: |accessdate=
and |date=
(help)
{{cite web}}
: Check date values in: |accessdate=
and |date=
(help)
<ref>
tag; name "c1" defined multiple times with different content
<ref>
tag; name "c2" defined multiple times with different content
<ref>
tag; name "c3" defined multiple times with different content