ಟೊರಾಂಟೋ ನಗರದ ಅತಿ ಆಕರ್ಷಣೆಯ ತಾಣಗಳಲ್ಲಿ ಸೇರ್ಪಡೆಯಾಗಿದೆ. ಎಡ್ವರ್ಡಿಯನ್ ಕಾಲದ ಒಂದು ಸುಂದರ ಶೈಲಿಯ ಈ ಭವ್ಯ ಕ್ಯಾಸಲ್, ಬಹಳ ದುಬಾರಿ ವೆಚ್ಛದ ಅರಮನೆಯಾಗಿ ಪರಿಣಮಿಸಿತು. ಈ ಕ್ಯಾಸಲ್ ನಿರ್ಮಿಸಲು ಆಗಿನ ಕಾಲದ ಬಹಳ ಶ್ರೀಮಂತ ಉದ್ಯಮಿ, ಹೆನ್ರಿ ಪೆಲ್ಲಟ್ ಆಶಿಸಿ ಅದನ್ನು ಅರ್ರ್ಧದಷ್ಟು ಕಟ್ಟಿ ತನ್ನ ಪ್ರೀತಿಯ ಮಡದಿಯ ಜೊತೆ ವಾಸ್ತವ್ಯಹೂಡಿದರೂ, ಅದು ರ್ಪೂರ್ಣಗೊಳಿಸುವ ಮೊದಲೇ ದಿವಾಳಿಯಾಗಿ ಅದರ ಸಹವಾಸವನ್ನು ಕೈಬಿಡಬೇಕಾಯಿತು.