ಕ್ರಿಸ್ಟಲ್ ಡಿಸೋಜಾ | |
---|---|
Born | |
Nationality | ಭಾರತೀಯ |
Occupation | ನಟಿ |
Years active | ೨೦೦೭–ಪ್ರಸ್ತುತ |
Known for | ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ,ಬ್ರಹ್ಮರಾಕ್ಷಸ್ |
ಕ್ರಿಸ್ಟಲ್ ಡಿಸೋಜಾ ರವರು ಭಾರತೀಯ ದೂರದರ್ಶನ ನಟಿ.'ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ'ನಲ್ಲಿ ಜೀವಿಕಾ ವಧೇರ ಎಂಬ ಪಾತ್ರದಲ್ಲಿ,[೧]'ಏಕ್ ನಯೀ ಪೆಹೆಚಾನ್'ನಲ್ಲಿ ಸಾಕ್ಷಿ ಎಂಬ ಪಾತ್ರದಲ್ಲಿ,[೨][೩] ೨೦೧೬ ರಲ್ಲಿ ಝೀ ಟಿವಿಯ 'ಬ್ರಹ್ಮರಾಕ್ಷಸ್' ಧಾರವಾಹಿಯಲ್ಲಿ ರೈನಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕ್ರಿಸ್ಟಲ್ ಡಿಸೋಜಾ ರವರು ಮಾರ್ಚ್ ೧,೧೯೯೦ ರಲ್ಲಿ ಮುಂಬೈ ಯಲ್ಲಿ ಜನಿಸಿದರು.
ಕ್ರಿಸ್ಟಲ್ ಡಿಸೋಜಾ ಅವರು ತಮ್ಮ ವೃತ್ತಿ ಜೀವನವನ್ನು ೨೦೦೭ ರಲ್ಲಿ ಬಾಲಾಜಿ ಟೆಲಿಫಿಲ್ಮ್ಸ್ ನ 'ಕಹೆ ನಾ ಕಹೆ' ಧಾರವಾಹಿಯ ಮೂಲಕ ಪ್ರಾರಂಭಿಸಿದರು.ಇದರಲ್ಲಿ ಅವರು ಕಿಂಜಲ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು[೪].ನಂತರ 'ಕ್ಯಾ ದಿಲ್ ಮೆ ಹೇ'ನಲ್ಲಿ ತಮನ್ನಾ ಎಂಬ ಪಾತ್ರದಲ್ಲಿ ಅಭಿನಯಿಸಿದರು.೨೦೦೮ ರಲ್ಲಿ ಸ್ಟಾರ್ ಪ್ಲಸ್ ನ 'ಕಸ್ತೂರಿ'ಯಲ್ಲಿ ನವ್ನೀತ್ ಮತ್ತು 'ಕಿಸ್ ದೇಶ್ ಮೆ ಹೇ ಮೇರಾ ದಿಲ್'ನಲ್ಲಿ ವೀರಾ ಪಾತ್ರದಲ್ಲಿ ಕಾಣಿಸಿಕೊಂಡರು.೨೦೧೦ ರಲ್ಲಿ ಸೋನಿ ಟಿವಿಯ 'ಬಾತ್ ಹಮಾರಿ ಪಕ್ಕೀ ಹೇ'ನಲ್ಲಿ ತಾರಾ ಪಾತ್ರದಲ್ಲಿ ಕಾಣಿಸಿಕೊಂಡರು.ಸೋನಿ ಟಿವಿಯ 'ಆಹಾತ್'ನಲ್ಲಿ ಕಿರು ಪಾತ್ರವನ್ನು ಮಾಡಿದ್ದಾರೆ.೨೦೧೧ ರಲ್ಲಿ 'ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ'ನಲ್ಲಿ ಜೀವಿಕಾ ವಧೇರ ಪಾತ್ರದಲ್ಲಿ, ಡಿಸೆಂಬರ್ ೨೦೧೩ ರಲ್ಲಿ 'ಏಕ್ ನಯೀ ಪೆಹೆಚಾನ್'ನಲ್ಲಿ ಸಾಕ್ಷಿ ಪಾತ್ರ,೨೦೧೬ ರಲ್ಲಿ 'ಬ್ರಹ್ಮರಾಕ್ಷಸ್'ನಲ್ಲಿ ರೈನಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.೨೦೧೮ ರಲ್ಲಿ ಕಲರ್ಸ್ ಟಿವಿಯ 'ಬೇಲನ್ ವಾಲಿ ಬಹು'ನಲ್ಲಿ ರೂಪಾ ಪಾತ್ರದಲ್ಲಿ, ಅವರ ಅಭಿನಯಕ್ಕೆ, ಅತ್ಯುತ್ತಮ ನಟಿಗಾಗಿ ಗೋಲ್ಡ್ ಅವಾರ್ಡ್ಸ್ ಅನ್ನೂ ಗೆದ್ದರು[೫].
೨೦೧೭ ರಲ್ಲಿ ಟಾಪ್ ೨೦ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಕ್ರಿಸ್ಟಲ್ ರವರು ೫ನೇ ಸ್ಥಾನ ಪಡೆದಿದ್ದಾರೆ[೬].
ವರ್ಷ | ಹೆಸರು | ಪಾತ್ರ | ಚಾನೆಲ್ | Ref(s) |
---|---|---|---|---|
೨೦೦೭ | ಕಹೆ ನಾ ಕಹೆ | ಕಿಂಜಲ್ ಪಾಂಡೆ | ನೈನೆಕ್ಸ್ | |
೨೦೦೭–೨೦೦೮ | ಕ್ಯಾ ದಿಲ್ ಮೆ ಹೇ | ತಮನ್ನಾ ಪುಂಜ್ | ||
೨೦೦೮ | ಕಸ್ತೂರಿ | ನವ್ನೀತ್ ಚಾವ್ಲಾ | ಸ್ಟಾರ್ ಪ್ಲಸ್ | |
೨೦೦೮–೨೦೦೯ | ಕಿಸ್ ದೇಶ್ ಮೆ ಹೇ ಮೇರಾ ದಿಲ್ | ವೀರಾ ಜುನೇಜಾ | ||
೨೦೧೦ | ಬಾತ್ ಹಮಾರಿ ಪಕ್ಕೀ ಹೇ | ತಾರಾ | ಸೋನಿ ಟಿವಿ | [೭] |
ಆಹತ್ | ಯಾಮಿನಿ/ಮಲ್ಲಿಕಾ | |||
೨೦೧೧–೨೦೧೩ | ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ | ಜೀವಿಕಾ ಚೌದರಿ | ಸ್ಟಾರ್ ಪ್ಲಸ್ | [೮] |
೨೦೧೩–೨೦೧೪ | ಏಕ್ ನಯೀ ಪೆಹೆಚಾನ್ | ಸಾಕ್ಷಿ | ಸೋನಿ ಟಿವಿ | [೯] |
೨೦೧೬–೨೦೧೭ | ಬ್ರಹ್ಮರಾಕ್ಷಸ್-ಜಾಗ್ ಉಟಾ ಶೆಯ್ತಾನ್ | ರೈನಾ ಶರ್ಮಾ | ಝೀ ಟಿವಿ | |
೨೦೧೮ | ಬೇಲನ್ ವಾಲಿ ಬಹು | ರೂಪಾ | ಕಲರ್ಸ್ ಟಿವಿ |
ಕ್ರಿಸ್ಟಲ್ ರವರು ಕಾಲೇಜಿಗೆ ಹೋಗಿ ಅನೇಕ ರಂಗ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಇದರಿಂದ ಅವರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಾಯಿತು[೧೦].ಫೆಬ್ರವರಿ ೨೦೧೭ ರಲ್ಲಿ ಅವರು ಲಾಕ್ಮೇ ಫ್ಯಾಷನ್ ವೀಕ್ ನಲ್ಲಿ ಕಾಣಿಸಿಕೊಂಡರು[೧೧].೨೦೧೫, ೨೦೧೬ ಮತ್ತು ೨೦೧೭ ರಲ್ಲಿ ಕರಣ್ ಟಕರ್ ವಿರುದ್ಧ ಕಲರ್ಸ್ ಟಿವಿಯ ಮಿರ್ಚಿ ಟಾಪ್ ೨೦ ರಲ್ಲಿ ಕಾಣಿಸಿಕೊಂಡರು.
ಏಪ್ರಿಲ್ ೨೦೧೭ ರಲ್ಲಿ ಕ್ರಿಸ್ಟಲ್ ರವರು ತಮ್ಮದೇ ಆದ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.ಈ ಅಪ್ಲಿಕೇಶನ್ ನಲ್ಲಿ, ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಅವರೊಂದಿಗೆ ಸಂವಹನ ನಡೆಸಬಹುದಿತ್ತು ಹಾಗೂ ಅವರನ್ನು ಭೇಟಿಯಾಗಲು ಮತ್ತು ಸ್ವಾಗತಿಸಲು ಸಾಧ್ಯವಿತ್ತು[೧೨].
ವರ್ಷ | ಪ್ರಶಸ್ತಿ | ವರ್ಗ | ಪ್ರದರ್ಶನ | ಫಲಿತಾಂಶ | Reference |
---|---|---|---|---|---|
೨೦೧೨ | ಗೋಲ್ಡ್ ಪ್ರಶಸ್ತಿ | ಅತ್ಯಂತ ಫಿಟ್ ನಟಿ | — | ಗೆಲುವು | [೧೩] |
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ | ಅತ್ಯುತ್ತಮ ಡ್ರಾಮಾ ನಟಿ (ಜ್ಯೂರಿ) | ಏಕ್ ಹಜಾರೋಂ ಮೇ ಮೇರಿ ಬೆಹೆನಾ ಹೇ | Nominated | [೧೪] | |
೨೦೧೩ | ಕಲಾಕಾರ್ ಪ್ರಶಸ್ತಿ | ನೆಚ್ಚಿನ ಜೋಡಿ
(ಕರಣ್ ಟಕರ್ ಜೊತೆ) |
ಗೆಲುವು | ||
೨೦೧೪ | ಇಂಡಿಯನ್ ಟೆಲ್ಲಿ ಪ್ರಶಸ್ತಿ | ಅತ್ಯುತ್ತಮ ನಟಿ | ಏಕ್ ನಯೀ ಪೆಹೆಚಾನ್ | Nominated | |
ಗೋಲ್ಡ್ ಪ್ರಶಸ್ತಿ | ಅತ್ಯಂತ ಫಿಟ್ ನಟಿ | — | Nominated | ||
೨೦೧೫ | ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ | ಅತ್ಯಂತ ಸ್ಟೈಲಿಶ್ ನಟಿ | — | ಗೆಲುವು | |
೨೦೧೮ | ಗೋಲ್ಡ್ ಪ್ರಶಸ್ತಿ | ಸ್ಟೈಲ್ ದಿವಾ | — | Nominated | |
ಅತ್ಯಂತ ಫಿಟ್ ನಟಿ | — | Nominated | |||
ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ನಟಿ | ಬೇಲನ್ ವಾಲಿ ಬಹು | ಗೆಲುವು | [೧೫] | ||
೨೦೧೯ | ಲಯನ್ಸ್ ಗೋಲ್ಡ್ ಪ್ರಶಸ್ತಿ | ಅತ್ಯಂತ ಸ್ಟೈಲಿಶ್ ವ್ಯಕ್ತಿತ್ವ | — | Nominated |
{{cite web}}
: Cite has empty unknown parameter: |dead-url=
(help)
{{cite web}}
: Unknown parameter |deadurl=
ignored (help)