ಕ್ಷುದ್ರ ಅಗ್ನಿಮಂಥ

ಕ್ಷುದ್ರ ಅಗ್ನಿಮಂಥ
Scientific classification
ಸಾಮ್ರಾಜ್ಯ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. phlomidis
Binomial name
Clerodendrum phlomidis

ಕ್ಷುದ್ರ ಅಗ್ನಿಮಂಥ ಎನ್ನುವುದು ಲಾಮಿಯೇಸಿಯೆ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್(Clerodendrum phlomidis) ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಯುವ ಸಾಮಾನ್ಯವಾದ ದೊಡ್ಡ ಪೊದೆಸಸ್ಯವಾಗಿದೆ.

ಸಾಮಾನ್ಯ ಹೆಸರು

[ಬದಲಾಯಿಸಿ]
  • ಸಂಸ್ಕೃತ ಹೆಸರು: ಅಗ್ನಿಮಂತ
  • ಹಿಂದಿ ಹೆಸರು: ಉರ್ನಿ, ಅರ್ನಾ, ಅರ್ನಿ[]

ವಿವರಣೆ

[ಬದಲಾಯಿಸಿ]

ಈ ಮೂಲಿಕೆ ಲ್ಯಾಮಿಯೇಸಿಯೆ ಕುಟುಂಬಕ್ಕೆ ಸೇರಿದೆ. ಎಲೆಗಳು ಅಂಡಾಕಾರವಾಗಿರುತ್ತದೆ. ಹೂಗಳು ಸಣ್ಣದಾಗಿ ದುಂಡಗಿರುತ್ತವೆ. ಹೂವುಗಳು ಆಗಸ್ಟ್ ನಿಂದ ಫೆಬ್ರವರಿಯ ಸಮಯದಲ್ಲಿ ಅರಳುತ್ತವೆ. ಹೂವುಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬಹಳ ಪರಿಮಳಯುಕ್ತವಾಗಿವೆ.[]

ಉಪಯೋಗ

[ಬದಲಾಯಿಸಿ]
  1. ದಶಮೂಲ ಔಷಧಗಳಲ್ಲಿ ಇದನ್ನು ಬಳಸುತ್ತಾರೆ.
  2. ಎಲೆಗಳನ್ನು ಪುಡಿಮಾಡಿ ಬಾಹ್ಯ ಊತದ ಚಿಕಿತ್ಸೆಗೆ ಬಳಸುತ್ತಾರೆ.
  3. ಬೇರಿನ ಕಷಾಯವನ್ನು ಅಗ್ನಿಮಾಂದ್ಯ,ಅಜೀರ್ಣ ಮತ್ತು ವಾತವಿಕಾರಗಳಲ್ಲಿ ಬಳಸುತ್ತಾರೆ.

[][]

ಉಲ್ಲೇಖ

[ಬದಲಾಯಿಸಿ]