ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಖರಹರಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೨ನೇ ರಾಗ. ಅಸಂಪೂರ್ಣ ಮೇಳ ಪದ್ಧತಿಯ ಪ್ರಕಾರ ಶ್ರೀರಾಗವು ೨೨ನೇ ಮೇಳವಾಗಿತ್ತು. ಈ ಪದ್ಧತಿಯನ್ನು ಅನುಸರಿಸಿ ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು ಕೃತಿ ರಚಿಸಿರುವ ಕಾರಣ ಖರಹರಪ್ರಿಯ ರಾಗದಲ್ಲಿ ಇವರ ರಚನೆಗಳಿಲ್ಲ. ಈ ರಾಗಕ್ಕೆ ಮೊದಲು ಹರಪ್ರಿಯ ಎಂಬ ಹೆಸರಿತ್ತು. ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ ಖರ ಎಂಬ ಮುಂಪ್ರತ್ಯಯವನ್ನು ಸೇರಿಸಿ ಖರಹರಪ್ರಿಯ ಎಂಬ ಹೆಸರು ರೂಢಿಯಲ್ಲಿದೆ.ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಇದು ಕಾಫಿ ಥಾಟ್‍ಗೆ ಸಮಾನವಾಗಿದೆ.
ಇದು ನಾಲ್ಕನೆಯ ವೇದ ಚಕ್ರದ ನಾಲ್ಕನೆಯ ರಾಗವಾವಿದೆ.ಈ ರಾಗವನ್ನು ಎಲ್ಲ ಕಾಲದಲ್ಲಿಯೂ ಹಾಡಬಹುದಾಗಿದ್ದು, ರಂಜನಿಯ ರಾಗವಾಗಿದೆ.
ಇದರ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೧ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೨ ರಿ೨ ಸ
ಈ ರಾಗದಲ್ಲಿ ಅತ್ಯಂತ ಜನಪ್ರಿಯ ರಾಗಗಳಾದ ಅಭೇರಿ, ಅಭೋಗಿ, ಕಾನಡ, ಕಾಪಿ, ಮಧ್ಯಮಾವತಿ, ರೀತಿಗೌಳ, ಶುದ್ಧ ಧನ್ಯಾಸಿ, ಶ್ರೀರಂಜನಿ ಮತ್ತು ಶಿವರಂಜನಿ ಜನ್ಯವಾಗಿವೆ.
ಈ ರಾಗದಲ್ಲಿರುವ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ನೀ ಸಮಾನಮೆವರು | ತ್ಯಾಗರಾಜರು | ||
ಕೃತಿ | ಚಕ್ಕನಿ ರಾಜ ಮಾರ್ಗಮು | ತ್ಯಾಗರಾಜರು | ||
ಕೃತಿ | ಗಾನ ಸುಧಾ ರಸ | ಮೈಸೂರು ವಾಸುದೇವಾಚಾರ್ಯರು |
1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.