ಖಾತೆ ಪುಸ್ತಕ (ಕಿರ್ದಿ ಪುಸ್ತಕ, ಲೆಕ್ಕದ ಪುಸ್ತಕ) ಲೆಕ್ಕದ ವಿತ್ತೀಯ ಏಕಮಾನದ ಲೆಕ್ಕದ ಪ್ರಕಾರದ ಅನುಸಾರವಾಗಿ ಅಳೆಯಲಾದ ಆರ್ಥಿಕ ವಹಿವಾಟುಗಳನ್ನು ದಾಖಲಿಸಲು ಮತ್ತು ಒಟ್ಟು ಮಾಡಲು ಇರುವ ಪ್ರಧಾನ ಪುಸ್ತಕ ಅಥವಾ ಗಣಕ ಕಡತವಾಗಿದೆ. ಇದರಲ್ಲಿ ಖರ್ಚುಗಳು ಹಾಗೂ ಜಮಾಗಳು ಪ್ರತ್ಯೇಕ ಲಂಬಸಾಲಿನಲ್ಲಿ ಇರುತ್ತವೆ ಮತ್ತು ಪ್ರತಿ ಲೆಕ್ಕಕ್ಕೆ ಆರಂಭಿಕ ವಿತ್ತೀಯ ಬಾಕಿ ಹಾಗೂ ಅಂತ್ಯದ ವಿತ್ತೀಯ ಬಾಕಿ ಇರುತ್ತದೆ.
ಖಾತೆ ಪುಸ್ತಕವು ದಿನಾಂಕದ ಪ್ರಕಾರ ಪ್ರತ್ಯೇಕ ವಹಿವಾಟುಗಳನ್ನು ಪಟ್ಟಿ ಮಾಡುವ ಆಧಾರವಾಗಿರುವ ದಿನಚರಿ ಪುಸ್ತಕಗಳಲ್ಲಿ ನಮೂದಾಗಿರುವ ಎಲ್ಲ ಮೊತ್ತಗಳ ಶಾಶ್ವತ ಸಾರಾಂಶವಾಗಿರುತ್ತದೆ. ಪ್ರತಿ ವಹಿವಾಟು ದಿನಚರಿ ಪುಸ್ತಕದಿಂದ ಒಂದು ಅಥವಾ ಹೆಚ್ಚು ಖಾತೆ ಪುಸ್ತಕಗಳಿಗೆ ಸಾಗುತ್ತದೆ. ಖಾತೆ ಪುಸ್ತಕಗಳಲ್ಲಿನ ಸಾರಾಂಶ ಮೊತ್ತಗಳಿಂದ ಒಂದು ಕಂಪನಿಯ ಹಣಕಾಸು ವಿವರಣೆಗಳನ್ನು ಸೃಷ್ಟಿಸಲಾಗುತ್ತದೆ.[೧]
ಖಾತೆ ಪುಸ್ತಕಗಳಲ್ಲಿ ಮಾರಾಟ ಖಾತೆ ಪುಸ್ತಕ (ಗ್ರಾಹಕರು ಕಂಪನಿಗೆ ಮಾಡುವ ವಹಿವಾಟುಗಳು), ಖರೀದಿ ಖಾತೆ ಪುಸ್ತಕ (ಕಂಪನಿಯು ಖರೀದಿಗಾಗಿ ಖರ್ಚುಮಾಡಿದ ಹಣ), ಮುಖ್ಯ ಖಾತೆ ಪುಸ್ತಕ (ಐದು ಮುಖ್ಯ ಲೆಕ್ಕದ ಪ್ರಕಾರಗಳನ್ನು ಪ್ರತಿನಿಧಿಸುತ್ತದೆ) ಸೇರಿವೆ.