ಗರುಡ ಗಮನ ವೃಷಭ ವಾಹನ -ಇದು ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಬರೆದು ನಿರ್ದೇಶಿಸಿದ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಲನಚಿತ್ರವಾಗಿದೆ.[೧][೨][೩] ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ರವಿ ರೈ ಕಳಸ ಮತ್ತು ವಚನ ಶೆಟ್ಟಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ [೪] ಜೊತೆಗೆ ರಿಷಬ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.[೫][೬] ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಸಂಕಲನ ಮತ್ತು ಛಾಯಾಗ್ರಹಣ ಪ್ರವೀಣ್ ಶ್ರೀಯಾನ್ ಅವರದ್ದು. ಚಲನಚಿತ್ರವನ್ನು ರಕ್ಷಿತ್ ಶೆಟ್ಟಿಯವರ ಪರಮವಾ ಪಿಕ್ಚರ್ಸ್ ಪ್ರಸ್ತುತಪಡಿಸಿದೆ.[೭][೮][೯]
ಆಧುನಿಕ ಮಂಗಳೂರಿನ ಕರಾವಳಿ ಮತ್ತು ಸಾಂಸ್ಕೃತಿಕ ನಗರಿ ಮಂಗಳಾದೇವಿಯ ಹಿನ್ನೆಲೆಯಲ್ಲಿ ಹೊಂದಿಸಲಾದ ಗರುಡ ಗಮನ ವೃಷಬ ವಾಹನವು ಇಬ್ಬರು ಪುರುಷರ ಕಥೆಯಾಗಿದೆ: "ಹರಿ" ಮತ್ತು ಅವನ ಆತ್ಮ ಸಂಗಾತಿಯಾದ "ಶಿವ" ಅವರು ಮಂಗಳೂರಿನ ಕುಖ್ಯಾತ ದರೋಡೆಕೋರರಾಗುತ್ತಾರೆ. ದುರಾಶೆ, ರಾಜಕೀಯ ಮತ್ತು ಅವರ ಸ್ವಂತ ಅಹಂಕಾರಗಳು ಅವರ ವರ್ಷಗಳ ಸ್ನೇಹವನ್ನು ಪರೀಕ್ಷಿಸುತ್ತವೆ.