ಗಾಳಿಪಟ ಮುಂಗಾರು ಮಳೆಯ ಯಶಸ್ಸಿನ ನಂತರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿದ ಮೊದಲ ಚಿತ್ರ. ಚಿತ್ರದ ಭಾರೀ ತಾರಾಗಣದಿಂದಾಗಿ ಚಿತ್ರವು ನಿರ್ಮಾಣ ಹಂತದಲ್ಲೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿತ್ತು. ಮುಂಗಾರು ಮಳೆ ಖ್ಯಾತಿಯ ಗಣೇಶ್, ದಿಗಂತ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಮುಖ್ಯ ಪಾತ್ರದಲ್ಲಿ ಡೇಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ಜೊತೆ ಈ ಚಿತ್ರದಲ್ಲಿ ನಟಿಸಿದ್ದಾರೆ.
- ಗಣೇಶ್ - ಗಣೇಶ್ ಪಾತ್ರದಲ್ಲಿ * ದಿಗಂತ್ - ದಿಗಂತ್ ಪಾತ್ರದಲ್ಲಿ * ರಾಜೇಶ್ ಕೃಷ್ಣನ್ - ಕಿಟ್ಟ್ಯ್ ಪಾತ್ರದಲ್ಲಿ * ಡೇಸಿ ಬೋಪಣ್ಣ - ಸೌಮ್ಯಾ ಪಾತ್ರದಲ್ಲಿ * ನೀತು - ನೀತು ಪಾತ್ರದಲ್ಲಿ. * ಭಾವನ ರಾವ್ - ಪಾವನಿ ಪಾತ್ರದಲ್ಲಿ * ಅನಂತ್ ನಾಗ್ - ಕೋದಂಡರಾಮ ಪಾತ್ರದಲ್ಲಿ * ಪದ್ಮಜಾ ರಾವ್ - ಪದ್ಮಾ ಪಾತ್ರದಲ್ಲಿ