ಗಿರಿಜನ ಎಂದರೆ ಬೆಟ್ಟಗಳು, ಗುಡ್ಡಗಳು ಹಾಗೂ ಪರ್ವತಗಳಿದ್ದಲ್ಲಿ ವಾಸಿಸುವ ಜನರು. ಇದು ೩೦೦ ಮೀಟರ್‌ಗಿಂತ ಹೆಚ್ಚಿನ ಏರುಪೇರುಗಳಿರುವ ಎಲ್ಲ ನೆಲವನ್ನು ಮತ್ತು ೨೫೦೦ ಮೀಟರ್‌ಗಳಿಗಿಂತ ಎತ್ತರದ ಎಲ್ಲ ನೆಲವನ್ನು ಒಳಗೊಳ್ಳುತ್ತದೆ. ಹವಾಮಾನವು ಸಾಮಾನ್ಯವಾಗಿ ಕಠೋರವಾಗಿದ್ದು ದಿನ ಮತ್ತು ರಾತ್ರಿಯ ನಡುವೆ ಅತಿಯಾದ ಉಷ್ಣಾಂಶದ ಇಳಿತಗಳಿರುತ್ತವೆ. ಜೋರಾದ ಗಾಳಿ, ಕರಗುತ್ತಿರುವ ಹಿಮದಿಂದಾದ ನೀರಿನ ಹರಿವು ಹೆಚ್ಚಿನ ಮಟ್ಟದ ಕ್ಷರಣವನ್ನು ಹಾಗೂ ತೆಳು, ಫಲವತ್ತಲ್ಲದ ಮಣ್ಣಿಗೆ ಕಾರಣವಾಗುತ್ತವೆ. ವಾಯುಗುಣ ಬದಲಾವಣೆಯು ಬೆಟ್ಟದ ಪರಿಸರ ಮತ್ತು ಅಲ್ಲಿ ವಾಸಿಸುವ ಜನರ ಮೇಲೆ ಗಣನೀಯ ಪ್ರಮಾಣದ ಒತ್ತಡವನ್ನು ತರುವ ಸಾಧ್ಯತೆಯಿರುತ್ತದೆ.
ಬೆಟ್ಟ ಗುಡ್ಡ ಪ್ರದೇಶದಲ್ಲಿ ಜನರು ಸಾವಿರಾರು ವರ್ಷಗಳಿಂದ ಜೀವಿಸಿದ್ದಾರೆ ಮತ್ತು ಅದನ್ನು ಬಳಸಿದ್ದಾರೆ, ಮೊದಲು ಬೇಟೆಗಾರರಾಗಿ ಮತ್ತು ನಂತರ ರೈತರು ಹಾಗೂ ಕುರುಬರಾಗಿ. ವಿವಿಕ್ತ ಸಮುದಾಯಗಳು ಹಲವುವೇಳೆ ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ವೈವಿಧ್ಯಮಯವಾಗಿರುತ್ತವೆ. ಇಂದು ಸುಮಾರು 720 ಮಿಲಿಯನ್ ಜನರು, ಅಥವಾ ವಿಶ್ವದ ಜನಸಂಖ್ಯೆಯ 12% ಜನರು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ.
Beniston, Martin; Fox, Douglas G. (1995), "Impacts of Climate Change on Mountain Regions", Climate Change 1995: The IPCC Second Assessment Report(PDF), Cambridge University Press for Intergovernmental Panel on Climate Change, retrieved 2019-05-28