ಗಿರಿಜಾ ಲೋಕೇಶ್

ಗಿರಿಜಾ ಲೋಕೇಶ್ ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟಿ. ಕಾಕನ ಕೋಟೆ(೧೯೭೭), ದಾಹ(೧೯೭೯), ಭುಜಂಗಯ್ಯನ ದಶಾವತಾರ(೧೯೯೧) ಮತ್ತು ಯಾರಿಗೂ ಹೇಳ್ಬೇಡಿ(೧೯೯೪) ಮುಂತಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಸ್ಮರಣೀಯ ಅಭಿನಯ ನೀಡಿದ ಗಿರಿಜಾ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ರಂಗಭೂಮಿ ಕಲಾವಿದೆಯಾಗಿರುವ ಗಿರಿಜಾ ಪ್ರಭಾತ್ ಶಿಶುವಿಹಾರ, ರಂಗಸಂಪದ, ನಟರಂಗ ಮುಂತಾದ ಜನಪ್ರಿಯ ತಂಡಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡವಲ್ಲದೇ ಉರ್ದು, ತಮಿಳು, ತೆಲುಗು, ಮಲಯಾಳಂ ನಾಟಕಗಳಲ್ಲೂ ನಟಿಸಿದ್ದಾರೆ. ಗಿರಿಜಾ ಅಭಿನಯದ ಕಿರುತೆರೆ ಧಾರಾವಾಹಿಗಳ ಸಂಖ್ಯೆ ೩೦೦ ದಾಟುತ್ತದೆ. ವೈಶಾಲಿ ಕಾಸರವಳ್ಳಿ ನಿರ್ದೇಶನದ ಮುತ್ತಿನ ತೋರಣ ಗಿರಿಜಾ ಅವರ ಪ್ರತಿಭೆಯನ್ನು ಒರೆಗೆ ಹಚ್ಚಿದ ಧಾರಾವಾಹಿ. ಭುಜಂಗಯ್ಯನ ದಶಾವತಾರ ಮತ್ತು ಸಿದ್ಲಿಂಗು ಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ[].

ಗಿರಿಜಾ ಅವರ ಪತಿ ಕನ್ನಡದ ಮೇರುನಟ ದಿವಂಗತ ಲೋಕೇಶ್. ಪ್ರಖ್ಯಾತ ಕಿರುತೆರೆ ಮತ್ತು ಚಲನಚಿತ್ರ ನಟ ಸೃಜನ್ ಲೋಕೇಶ್ ಮತ್ತು ನಟಿ ಪೂಜಾ ಲೋಕೇಶ್ ಈ ದಂಪತಿಯ ಮಕ್ಕಳು[].

ಉಲ್ಲೇಖಗಳು

[ಬದಲಾಯಿಸಿ]
  1. "ಮಮ್ಮಿ ನಂಬರ್ 1". ಪ್ರಜಾವಾಣಿ.
  2. "ನಮ್ಮ 'ಪರಸಂಗದ ಗೆಂಡೆತಿಮ್ಮ' ಲೋಕೇಶ್ ನೆನಪು". ವೆಬ್ ದುನಿಯಾ.