ಗಿರೀಶ್ ಭಾರದ್ವಾಜ್ (ಮೇ ೨, ೧೯೫೦, ಕರ್ನಾಟಕ), ಭಾರತದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ೧೨೫ ಕ್ಕಿಂತ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ ಸಮಾಜಸೇವಕ. ಇದಕ್ಕಾಗಿ ಅವರಿಗೆ ಸೇತು ಬಂಧು ಮತ್ತು ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ ಎಂದು ಹೆಸರು ಬಂದಿದೆ.. ಅವರಿಗೆ ೨೦೧೭ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. [೧] [೨] [೩] [೪]
ಭಾರದ್ವಾಜ್ ಅವರು ೨ ಮೇ ೧೯೫೦ ರಂದು ಕರ್ನಾಟಕದ ಸುಳ್ಯದಲ್ಲಿ ಜನಿಸಿದರು. ಅವರು ೧೯೭೩ ರಲ್ಲಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. [೫] [೬] ಅವರ ಪತ್ನಿಯ ಹೆಸರು ಉಷಾ. ಅವರಿಗೆ ಮೂವರು ಮಕ್ಕಳಿದ್ದಾರೆ.
ಅವರು ತಮ್ಮ ಮೊದಲ ಸೇತುವೆಯನ್ನು ೧೯೮೯ ರಲ್ಲಿ ದಕ್ಷಿಣ ಕನ್ನಡದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದರು. ಅವರು ಕೇರಳದಲ್ಲಿ ಸುಮಾರು ಮೂವತ್ತು ಸೇತುವೆಗಳನ್ನು ನಿರ್ಮಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಎರಡು ಸೇತುವೆಗಳನ್ನು ನಿರ್ಮಿಸಿದ್ದಾರೆ. ಅವರ ಉಳಿದ ಕೆಲಸಗಳು ಕರ್ನಾಟಕದ ವಿವಿಧ ಭಾಗಗಳಲ್ಲಿವೆ. [೭] [೮]