ಗಿಲಿಯನ್ ಬೇವರ್‌ಸ್ಟಾಕ್ | |
---|---|
ಜನನ | ಗಿಲಿಯನ್ ಮೇರಿ ಬೇವರ್‌ಸ್ಟಾಕ್ ೧೫ ಜುಲೈ ೧೯೩೧ ಬೋರ್ನ್ ಎಂಡ್, ಬಕಿಂಗ್ಹ್ಯಾಮ್ಶೈರ್, ಇಂಗ್ಲೆಂಡ್ |
ಮರಣ | 24 June 2007 ಇಲ್ಕ್ಲೆ, ವೆಸ್ಟ್ ಯಾರ್ಕ್‌ಷೈರ್, ಇಂಗ್ಲೆಂಡ್ | (aged 75)
ವೃತ್ತಿ | ಬರಹಗಾರ್ತಿ |
ವಿದ್ಯಾಭ್ಯಾಸ | ಬೆನೆಂಡೆನ್ ಶಾಲೆ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯ |
ಬಾಳ ಸಂಗಾತಿ |
ಡೊನಾಲ್ಡ್ ಬೇವರ್‌ಸ್ಟಾಕ್
(m. ೧೯೫೭; died ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".) |
ಮಕ್ಕಳು | ೪ |
ಸಂಬಂಧಿಗಳು | ರೋಸ್ಮರಿ ಪೊಲಾಕ್ (ಮಲ-ಸಹೋದರಿ) |
ಗಿಲಿಯನ್ ಮೇರಿ ಬೇವರ್‌ಸ್ಟಾಕ್ (ಜನನ ಪೊಲಾಕ್; ೧೫ ಜುಲೈ ೧೯೩೧ - ೨೪ ಜೂನ್ ೨೦೦೭) ಒಬ್ಬ ಬ್ರಿಟಿಷ್ ಲೇಖಕ, ಕಾಲ್ಪನಿಕವಲ್ಲದ ಬರಹಗಾರ್ತಿ ಮತ್ತು ಆತ್ಮಚರಿತ್ರೆಕಾರ. ಗಿಲಿಯನ್ ಬೇವರ್‌ಸ್ಟಾಕ್ ಅವರು ಇಂಗ್ಲಿಷ್ ಕಾದಂಬರಿಕಾರ ಎನಿಡ್ ಬ್ಲೈಟನ್ ಮತ್ತು ಹಗ್ ಪೊಲಾಕ್ ಅವರ ಹಿರಿಯ ಮಗಳು. ಹಗ್ ಪೊಲಾಕ್ ಅವರು ಎನಿಡ್ ಬ್ಲೈಟನ್ ಅವರ ಮೊದಲ ಪತಿ.
ಗಿಲಿಯನ್ ಮೇರಿ ಪೊಲಾಕ್ ಅವರು ೧೫ ಜುಲೈ ೧೯೩೧ ರಂದು ಜನಿಸಿದರು. ಅವರು ಎನಿಡ್ ಬ್ಲೈಟನ್ (೧೮೯೭-೧೯೬೮) ಮತ್ತು ಮೇಜರ್ ಹಗ್ ಪೊಲಾಕ್ (೧೮೮೮-೧೯೭೧) ಅವರ ಮಗಳು. ೨೭ ಅಕ್ಟೋಬರ್ ೧೯೩೫ ರಂದು, ಅವರ ಕಿರಿಯ ಸಹೋದರಿ, ಇಮೋಜೆನ್ ಮೇರಿ ಪೊಲಾಕ್ ಅವರು ಜನಿಸಿದರು. ಅವರು ೧೨ ವರ್ಷದವಳಿದ್ದಾಗ ಮತ್ತು ಅವಳ ಸಹೋದರಿ ೮ ವರ್ಷದವಳಿದ್ದಾಗ, ಅವರ ಪೋಷಕರು ವಿಚ್ಛೇದನ ಪಡೆದರು. ಅವರ ತಾಯಿ ನಂತರ ಶಸ್ತ್ರಚಿಕಿತ್ಸಕ ಕೆನ್ನೆತ್ ಫ್ರೇಸರ್ ಡ್ಯಾರೆಲ್ ವಾಟರ್ಸ್ (೧೮೯೨-೧೯೬೭) ಅವರನ್ನು ವಿವಾಹವಾದರು. ಅವರ ತಂದೆ ಬರಹಗಾರ ಇಡಾ ಕ್ರೋವ್ ಅವರನ್ನು ವಿವಾಹವಾದರು. ನಂತರ ಅವರಿಗೆ ರೋಸ್ಮರಿ ಪೊಲಾಕ್ ಎಂಬ ಮಗಳು ಜನಿಸಿದಳು.[೧]
ಗಿಲಿಯನ್ ಪೊಲಾಕ್ ಅವರು ಆಗ್ನೇಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಬಾಲಕಿಯರ ಬೋರ್ಡಿಂಗ್ ಸ್ವತಂತ್ರ ಶಾಲೆಯಾದ ಬೆನೆಂಡೆನ್ ಸ್ಕೂಲ್‌ನಲ್ಲಿ ಶಿಕ್ಷಣವನ್ನು ಪಡೆದರು. ನಂತರ ಸ್ಕಾಟ್‌ಲ್ಯಾಂಡ್‌ನ ಫೈಫ್‌ನಲ್ಲಿರುವ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದರು.
ಬೇವರ್‌ಸ್ಟಾಕ್ ಅವರು ಇಲ್ಕ್ಲೆಯ ಮೂರ್‌ಫೀಲ್ಡ್ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.[೨]
೧೯೯೯ ರಲ್ಲಿ, ಮಕ್ಕಳ ಕಾಮಿಕ್ ಪುಸ್ತಕ ಬ್ಲೂ ಮೂನ್‌ನ ಹನ್ನೆರಡು ಆವೃತ್ತಿಗಳನ್ನು ತಯಾರಿಸಲು ಕಾಮಿಕ್ ಬರಹಗಾರ ಟಿಮ್ ಕ್ವಿನ್‌ನೊಂದಿಗೆ ಬೇವರ್‌ಸ್ಟಾಕ್ ಅವರು ಕ್ವಿಲ್ ಪಬ್ಲಿಕೇಷನ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಅವರು "ಸ್ಲೀಪಿಂಗ್ ಬ್ಯೂಟಿ" ಮತ್ತು "ಲಿಟಲ್ ರೆಡ್ ರೈಡಿಂಗ್ ಹುಡ್" ನಂತಹ ಕಾಲ್ಪನಿಕ ಕಥೆಗಳನ್ನು ಆಧರಿಸಿದ ಕಥೆಗಳ ಸರಣಿಯನ್ನು ಬರೆದಿದ್ದಾರೆ.[೩]
೧೯೫೭ ರಲ್ಲಿ, ಪೊಲಾಕ್ ಅವರು ಬಿಬಿಸಿ(BBC) ನಿರ್ಮಾಪಕ ಮತ್ತು ಕಾರ್ಯನಿರ್ವಾಹಕನಾದ ಡೊನಾಲ್ಡ್ ಬೇವರ್‌ಸ್ಟಾಕ್ ಅವರನ್ನು ಪಿಕ್ಕಾಡಿಲಿಯ ಸೇಂಟ್ ಜೇಮ್ಸ್ ಚರ್ಚ್‌ನಲ್ಲಿ ವಿವಾಹವಾದರು. ಅವರಿಬ್ಬರಿಗೆ ನಾಲ್ಕು ಜನ ಮಕ್ಕಳಿದ್ದರು: ಗ್ಲಿನ್ (ಬಿ. ೧೯೬೧, ಡಿ. ೧೯೮೩, ಕಾರು ಅಪಘಾತ), ಸಿಯಾನ್ (ಬಿ. ೧೯೫೮, ಡಿ. ೨೦೦೬, ಹೃದಯಾಘಾತ), ಸಾರಾ ಮತ್ತು ಓವೈನ್. ಅವರ ಪತಿಯ ಮರಣದ ನಂತರ, ಅವರು ಇಂಗ್ಲೆಂಡಿನ ಇಲ್ಕ್ಲಿಯಲ್ಲಿ ವಾಸಿಸುತ್ತಿದ್ದರು.
೨೪ ಜೂನ್ ೨೦೦೭ ರಂದು ಇಲ್ಕ್ಲಿಯಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ನಿಧನವನ್ನು ಹೊಂದಿದರು.[೬] ಬೇವರ್‌ಸ್ಟಾಕ್ ಅವರು ತನ್ನ ನಾಲ್ವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಮತ್ತು ಐದು ಮೊಮ್ಮಕ್ಕಳು ಗ್ಲಿಂಡ್ವರ್, ಡೊಮಿನಿಕ್, ಜೊಯಿ, ಅಲೆಕ್ ಮತ್ತು ಜಾರ್ಜಿನಾ ಜೊತೆ ವಾಸಿಸುತ್ತಿದ್ದರು.