Gudhi Padwa or Samvatsar Padvo | |
---|---|
A Gudhi is erected on Gudhi Padwa | |
ಆಚರಿಸಲಾಗುತ್ತದೆ | Marathi Hindus, Konkanis |
ರೀತಿ | Hindu lunar new year's Day |
ಆಚರಣೆಗಳು | 1 day |
ಆರಂಭ | Chaitra |
ದಿನಾಂಕ | March 22 |
೨೦೨೫ date | |
Related to | Hindu calendar |
ಗುಡಿ ಪಾಡ್ವ ಅಥವಾ ಗುಢಿ ಪಾಡ್ವ (ಮರಾಠಿ:गुढी पाडवाಇದನ್ನು ಸಾಮಾನ್ಯವಾಗಿ ಹೇಳುವಾಗ ಡಿ ಮತ್ತು ಢಿ ಅಕ್ಷರಗಳಿಂದಾಗಿ ವ್ಯತ್ಯಾಸ ಉಂಟಾಗುತ್ತದೆ) ಎಂಬುದು ಹಿಂದೂಗಳ ಪವಿತ್ರ ದಿನವಾದ ಚೈತ್ರ ಮಾಸದ ಶುಕ್ಲ ಪ್ರತಿಪದ[೧] ದ ಮರಾಠಿ ಹೆಸರು. ಇದನ್ನು ಚಾಂದ್ರಸೌರ ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ ಪ್ರಾರಂಭವನ್ನು ಸೂಚಿಸುವುದಕ್ಕಾಗಿ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಾಡ್ವ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಹಿಂದುಜಾಗೃತಿ [೧] ಎಂದು ಕೂಡಾ ಹೇಳುತ್ತಾರೆ.
ಭಾರತದ [೧] ಇತರೆ ಪ್ರದೇಶಗಳಲ್ಲಿ ಹಬ್ಬವನ್ನು ಆಚರಿಸುವ ಸಮಯಗಳು
ಪಾಡ್ವ ಎಂಬ ಶಬ್ಧವು ಸಂಸ್ಕೃತದ ಸೂರ್ಯಮಾನ ತಿಂಗಳಿನ ಮೊದಲನೆ ದಿನ ಪ್ರತಿಪದದಿಂದ ಬಂದದ್ದು[ಸೂಕ್ತ ಉಲ್ಲೇಖನ ಬೇಕು] ಅಂದರೆ ಅಮವಾಸ್ಯೆಯ ದಿನದ ನಂತರದ ಮೊದಲ ದಿನ. ಹಬ್ಬಕ್ಕೆ ಗುಢಿ ಎನ್ನುವ ಹೆಸರು ನೀಡಿ ಅದನ್ನು ಸೂಚಿಸಲಾಗಿದೆ. ಪಾಡ್ವ ಅಥವಾ ಪಡವೊ ಎಂಬ ಶಬ್ಧವು ದೀಪಾವಳಿಯ ಮೂರನೆಯ ದಿನವಾದ ಬಲಿಪ್ರತಿಪದವನ್ನು ಸೂಚಿಸುತ್ತದೆ [ಸೂಕ್ತ ಉಲ್ಲೇಖನ ಬೇಕು], ಇದು ಸುಗ್ಗಿ ಕಾಲದ ಕೊನೆಯಲ್ಲಿ ಬರುವ ಹಬ್ಬವಾಗಿದೆ.
ವರ್ಷದ ಮೊದಲ ತಿಂಗಳ ಮೊದಲ ದಿನವಾಗಿದ್ದು, ಗುಡಿ ಪಾಡ್ವವು ಮರಾಠಿ ಜನರ ಹೊಸವರ್ಷವೂ ಆಗಿದೆ.[ಸೂಕ್ತ ಉಲ್ಲೇಖನ ಬೇಕು]
ಭಾರತವು ಹೆಚ್ಚಾಗಿ ರೈತಾಪಿ ಸಮಾಜವಿರುವ ದೇಶವಾಗಿದೆ. ಇದರಿಂದಾಗಿ ಹಬ್ಬಗಳನ್ನು ಹೆಚ್ಚಾಗಿ ಬೆಳೆಯ ಕೊಯ್ಲು ಹಾಗೂ ಬಿತ್ತನೆ ಸಮಯದಲ್ಲಿ ಆಚರಿಸಲಾಗುತ್ತದೆ.of crops. ಈ ದಿನವು ವ್ಯವಸಾಯದ ಸುಗ್ಗಿಯ ಕೊನೆಯ ದಿನ ಹಾಗೂ ಹೊಸದರ ಪ್ರಾರಂಭದ ದಿನವಾಗಿರುತ್ತದೆ. ಸೂರ್ಯ ಕಾಲದ ಕೊನೆಯಲ್ಲಿ ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ.
ಗಿಡಿ ಪಾಡ್ವವು ಸೇಡ್-ಟೀನ್ ಮಹೂರ್ತಗಳಲ್ಲಿ ಒಂದಾಗಿದೆ (ಮರಾಠಿಯಿಂದ ಭಾಷಾಂತರವಾಗಿದೆ: ಭಾರತದ ಸೂರ್ಯಮಾನ ಕ್ಯಾಲೆಂಡರ್‌ನ 3 ಹಾಗೂ ಅರ್ಧ ಶುಭಕರವಾದ ದಿನವಾಗಿದೆ). ಪೂರ್ಣ ಪಟ್ಟಿಯು ಕೆಳಕಂಡಂತಿದೆ
ಯುದ್ಧದಲ್ಲಿ ಹುನಾರರನ್ನು ಸೋಲಿಸಿದ ನಂತರದ ಶಾಲಿವಾಹನ ಕ್ಯಾಲೆಂಡರ್‌ನ ಪ್ರಾರಂಭವನ್ನು ಕೂಡ ಇದು ನೆನಪಿಸುತ್ತದೆ.[೩]
ಬ್ರಹ್ಮ ಪುರಾಣದ ಪ್ರಕಾರ ಮಹಾ ಜಲಪ್ರಳಯದ ನಂತರ ಪ್ರಪಂಚವನ್ನು ಸೃಷ್ಟಿಸಿದ ಬ್ರಹ್ಮ ಪ್ರಾರಂಭದ ದಿನವನ್ನು ಸೂಚಿಸುವುದಕ್ಕಾಗಿ ಇದನ್ನು ಸೃಷ್ಟಿಸಿದನೆನ್ನಲಾಗಿದೆ[೩].
ಈ ದಿನದಂದು ಸೂರ್ಯನು ಭೂಮಧ್ಯರೇಖೆ ಹಾಗೂ ನಡು ಹಗಲಿನ ರೇಖೆಗಳ ಮಧ್ಯದಲ್ಲಿರುತ್ತಾನೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ವಸಂತ ಋತು ಅಥವಾ ಸುಗ್ಗಿ ಕಾಲದ ಪ್ರಾರಂಭವಾಗಿದೆ[೩].
ಗುಡಿ ಪಾಡ್ವದಂದು ಸಾಂಪ್ರದಾಯಿಕ ಮಹಾರಾಷ್ಟ್ರ ಜನರ ಮನೆಗಳಲ್ಲಿ ಕಿಟಕಿಗಳ ಹೊರತೆ ನೇತು ಹಾಕಿರುವ ಗುಡಿಗಳನ್ನು ಕಾಣಬಹುದು. ಗುಡಿ ಎಂದರೆ ಹಸಿರು ಅಥವಾ ಹಳದಿ ಬಣ್ಣದ ಜರಿ ಹೊಂದಿರುವ ಬಟ್ಟೆಯನ್ನು ಉದ್ದನೆಯ ಕೋಲಿಗೆ ಸಿಕ್ಕಿಸಿ ಅದಕ್ಕೆ ಕಬ್ಬು, ಹಾಗೂ ಬೇವಿನ ಎಲೆಗಳನ್ನು ಸಿಕ್ಕಿಸಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು], ಮಾವಿನ ತಳಿರನ್ನು ಹಾಕಿ ಕೆಂಪು ಹೂವುಗಳ ಹಾರವನ್ನೂ ಹಾಕಲಾಗುತ್ತದೆ. ಬೆಳ್ಳಿಯ ಅಥವಾ ತಾಮ್ರದ ಬಿಂದಿಗೆಯನ್ನು ಬೋರಲು ಮಾಡಿ ಅದರ ಮೇಲೆ ಹಾಕಲಾಗುತ್ತದೆ. ಈ ಗುಡಿಯನ್ನು ಮನೆಯ ಹೊರಗೆ ಕಿಟಕಿಯ ಮೇಲೆ ಅಥವಾ ಮನೆಯ ಮೇಲ್ಭಾಗದಲ್ಲಿ ಎಲ್ಲರಿಗೂ ಕಾಣಿಸುವಂತೆ ಹಾಕಲಾಗುತ್ತದೆ.
ಗುಡಿಯನ್ನು ಹೀಗೆ ಹಾಕುವುದರ ಹಿಂದೆ ಕೆಲವು ಮಹತ್ವಗಳಿವೆ, ಅವೆಂದರೆ
ಗುಡಿಯನ್ನು ಮನೆಯ ಮುಖ್ಯದ್ವಾರದ ಬಲಭಾಗದಲ್ಲಿ ಸ್ಥಾಪಿಸಲಾಗುತ್ತದೆ. ಬಲಭಾಗವು ಚೈತನ್ಯದ ಸಂಕೇತವಾಗಿರುತ್ತದೆ.[೧]
ಹಬ್ಬದ ದಿನದಂದು, ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಹಸುವಿನ ಸಗಣಿಯಿಂದ ಸಾರಿಸಲಾಗುತ್ತದೆ. ನಗರಗಳಲ್ಲಿಯೂ ಕೂಡಾ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಹೆಂಗಸರು ಮತ್ತು ಮಕ್ಕಳು ರಂಗೋಲಿ ಚಿತ್ತಾರಗಳನ್ನು ಮನೆಯ ಮುಂಭಾಗದಲ್ಲಿ ಬಿಡಿಸಿ ಬಣ್ಣಗಳನ್ನು ತುಂಬುತ್ತಾರೆ. ಹಬ್ಬದ ಎಲ್ಲರೂ ಹೊಸಬಟ್ಟೆಗಳನ್ನು ಧರಿಸಿ ಕುಟುಂಬದವರೆಲ್ಲಾ ಒಟ್ಟಾಗಿ ಸೇರುತ್ತಾರೆ.
ಸಾಂಪ್ರದಾಯಿಕವಾಗಿ, ಕುಟುಂಬಗಳು ಬೇವಿನ ಮರದ ಎಲೆಗಳನ್ನು ತಿನ್ನುವುದರ ಮೂಲಕ ಹಬ್ಬದ ಆಚರಣೆಯನ್ನು ಪ್ರಾರಂಭಿಸಬೇಕಾಗುತ್ತದೆ. ಕೆಲವುಬಾರಿ, ಬೇವಿನ ಎಲೆಯನ್ನು ಬೆಲ್ಲದೊಂದಿಂಗೆ ಹಾಗೂ ಹುಣಸೆ ಹಣ್ಣಿನೊಂದಿಗೆ ಬೆರೆಸಿ ತಿನ್ನುವ ಆಚರಣೆ ಇದೆ. ಕುಟುಂಬದ ಎಲ್ಲಾ ಸದಸ್ಯರುಗಳು ಮೊದಲಿಗೆ ಈ ಮಿಶ್ರಣವನ್ನು ತಿಂದರೆ ದೇಹದ ರೋಗ ನಿರೋಧಕ ವ್ಯವಸ್ಥೆಯು ಸುಧಾರಿಸಿ ಖಾಯಿಲೆಗಳೊಂದಿಗೆ ಹೋರಾಡುವುದೆಂಬ ನಂಬಿಕೆ ಇದೆ.
ಮಹಾರಾಷ್ಟ್ರದ ಕುಟುಂಬಗಳು ಶ್ರೀಖಂಡ ಹಾಗೂ ಪೂರಿಯನ್ನು ಈ ದಿನದಂದು ತಯಾರಿಸುತ್ತಾರೆ. ಕೊಂಕಣಿ ಜನರು ಕನಾಂಗಚಿ ಖೀರ್ ತಯಾರಿಸುತ್ತಾರೆ, ಇದು ಸಿಹಿ ಗೆಣಸು, ತೆಂಗಿನಕಾಯಿ ಹಾಲು, ಬೆಲ್ಲ, ಅಕ್ಕಿ ಹಿಟ್ಟು ಇತ್ಯಾದಿಗಳು ಹಾಗೂ ಸಣ್ಣಗಳಿಂದ ತಯಾರಿಸುವ ಪಾಯಸ ವಾಗಿದೆ.
{{cite book}}
: |volume=
has extra text (help)