ಗುರ್ಜರಿ ಭಾರತೀಯ ಶಾಸ್ತ್ರೀಯ ಸಂಗೀತದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಒಂದು ರಾಗವಾಗಿದೆ. ರಾಗ ಗುರ್ಜರಿಗೆ ಭಾರತದ ಗುಜರಾತ್‌ನ ಹೆಸರನ್ನು ಇಡಲಾಗಿದೆ.[೧] ದಕ್ಷಿಣ ಭಾರತದಲ್ಲಿ, ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಇದನ್ನು ಶೇಖರಚಂದ್ರಿಕಾ ಎಂದು ಕರೆಯಲಾಗುತ್ತದೆ.
ಇಂದಿನ ಗುರ್ಜರಿ ರಾಗವು ಗುರ್ಜರ್ (ಅಥವಾ ಗುಜ್ಜಾರ್‌ಗಳಿಗೆ) ಜನಾಂಗದವರಲ್ಲಿ ಪ್ರಚಲಿತವಿದ್ದ ರಾಗವಾಗಿರಬಹುದು.[೨] ಇದನ್ನುಗುಜರಿ ತೋಡಿ ಎಂದೂ ಕರೆಯುತ್ತಾರೆ. ಇದು ತೋಡಿ ಥಾಟ್ ನ ರಾಗ.
ಶಾಡವ್-ಶಾಡವ್ ಜಾತಿಗೆ ಸೇರಿದೆ.
ಇದು ಕಾರುಣ್ಯ ಪ್ರಧಾನ ರಾಗ.ಮೂರೂ ಸ್ಥಾಯಿಗಳಲ್ಲಿ ಹಾಡಬಹುದಾಗಿದೆ.
ಇದು ದಿನದ ಎರಡನೇ ಪ್ರಹರದ ರಾಗ. (ಬೆಳಗಿನ ೯ ರಿಂದ ೧೨ ಗಂಟೆವರೆಗೆ.)