ಗೋಲಿ ಸೋಡಾ (ಬಂಟಾ ಸೋಡಾ, ಗೋಟಿ ಸೋಡಾ, ಬಂಗಾಳಿಯಲಿ ಫ಼ೋಟಶ್ ಜಾಲ್ ಎಂದು ಪರಿಚಿತವಾಗಿದೆ) ಭಾರತದಲ್ಲಿ ಜನಪ್ರಿಯವಾಗಿರುವ ಕಾಡ್-ನೆಕ್ ಬಾಟಲಿಯಲ್ಲಿರುವ ಕಾರ್ಬನೀಕೃತ ನಿಂಬೆ ಅಥವಾ ಕಿತ್ತಳೆ ರುಚಿಯ ಅಮಾದಕ ಪಾನೀಯಕ್ಕೆ ಬಳಸಲಾಗುವ ಆಡುಮಾತಿನ ಪದವಾಗಿದೆ. ಗೋಲಿ ಸೋಡಾವನ್ನು ೧೯ನೇ ಶತಮಾನದ ಕೊನೆಯ ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ,[೧][೨] ಅಂದರೆ ಜನಪ್ರಿಯ ಕಾರ್ಬನೀಕೃತ ಪಾನೀಯಗಳು ಆಗಮಿಸುವ ಬಹಳ ಸಮಯ ಮೊದಲೇ. ಈ ಪಾನೀಯಕ್ಕೆ ಹಲವುವೇಳೆ ನಿಂಬೆ ರಸ, ಪುಡಿಮಾಡಿದ ಐಸ್, ಚಾಟ್ ಮಸಾಲಾ ಮತ್ತು ಕಾಲಾ ನಮಕ್ ಮಿಶ್ರಣಮಾಡಿ ಮಾರಾಟ ಮಾಡಲಾಗುತ್ತದೆ. ಇದು ಜನಪ್ರಿಯ ನಿಂಬೆ ಪಾನಕಗಳಾದ ಶಿಕಂಜಿ ಅಥವಾ ಜಲ್‍ಜೀರಾದ ಕಾರ್ಬನೀಕೃತ ಪರ್ಯಾಯವಾಗಿದೆ.
ಬಂಟಾ ಉತ್ತರ ಭಾರತದ ಉದ್ದಕ್ಕೆ ಜನಪ್ರಿಯವಾಗಿದೆ ವಿಶೇಷವಾಗಿ ರಾಜಧಾನಿ ದೆಹಲಿಯಲ್ಲಿ. ತಮಿಳು ನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪನ್ನೀರ್ ಸೋಡಾ ಎಂದು ಪರಿಚಿತವಾಗಿರುವ, ಗುಲಾಬಿ ಪರಿಮಳದ ರುಚಿ ಸೇರಿಸಿರುವ ಸ್ಥಳೀಯ ವೈವಿಧ್ಯವಿದೆ.[೩]