ಗೌತಮಿ ತಡಿಮಲ್ಲ ಭಾರತೀಯ ಚಲನಚಿತ್ರ ರಂಗದ ನಟಿ. ಇವರು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದೂ, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇವರು ಕಿರುತೆರೆಯಲ್ಲೂ ನಟನೆ, ನಿರೂಪಣೆ ಮಾಡಿದ್ದೂ, ವಸ್ತ್ರ ವಿನ್ಯಾಸದಲ್ಲಿಯೂ ಪ್ರಸಿದ್ದರಾಗಿದ್ದಾರೆ. [೧][೨]
ಗೌತಮಿಯವರು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡದವೊಲೆಯಲ್ಲಿ ಜನಿಸಿದರು. ವಿಶಾಖಪಟ್ಟಣದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಗೀತಂ ವಿಶ್ವವಿದ್ಯಾಲಯಕ್ಕೆ ಸೇರಿದರು. ತಮ್ಮ ೧೭ನೇ ವಯಸ್ಸಿಗೆ ತೆಲುಗಿನ ದಯಮಾಯುಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. [೧][೩] ರಜನಿಕಾಂತ್ ಹಾಗೂ ಪ್ರಭು ನಟನೆಯ ಗುರುಶಿಷ್ಯನ್ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು.[೧] ೧೯೮೭ರಿಂದ ೧೯೯೮ರ ವರೆಗೆ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವರು ಅಂದಿನ ನಟಿಯರಾದ ಖುಷ್ಬು ಹಾಗೂ ಭಾನುಪ್ರಿಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಇವರು ನಟಿಸಿರುವ ಕೆಲವು ಪ್ರಮುಖ ಚಲನಚಿತ್ರಗಳೆಂದರೆ ಅಪೂರ್ವ ಸಗೊದರ್ಗಳ್, ರಾಜ ಚಿನ್ನ ರೋಜ, ತೇವರ್ ಮಗನ್, ಪನಕ್ಕರನ್, ಗುರು ಸಿಸ್ಯನ್, ಊರು ವಿಟ್ಟು ಊರು ವಂತು, ಧರ್ಮ ದುರೈ, ರಿಕ್ಷ ಮಾಮ ಹಾಗೂ ಮಣಿರತ್ನಂರವರ ಮೋಹನ್ ಲಾಲ್, ಪ್ರಕಾಶ್ ರಾಜ್, ಐಶ್ವರ್ಯ ರೈ, ಟಬು, ನಸ್ಸಾರ್ ಹಾಗೂ ರೇವತಿ ಅವರ ನಟನೆಯ ಇರುವರ್(೧೯೯೭).
ತಮಿಳಿನ ಪ್ರಮುಖ ನಟರಾದ ರಜನಿಕಾಂತ್, ಕಮಲಹಾಸನ್, ವಿಜಯಕಾಂತ್, ಪ್ರಭು ಗಣೇಶನ್, ಕಾರ್ತಿಕ್, ಅರ್ಜುನ್ ಸರ್ಜ, ಅರವಿಂದ್ ಸ್ವಾಮಿ, ಮುರಳಿ, ರಾಮ್ಕಿ, ರೆಹಮಾನ್, ಶರತ್ ಕುಮಾರ್ ಮುಂತಾದವರೊಂದಿಗೆ ನಟಿಸಿದ್ದಾರೆ. ಆದರೆ ಬಹಳಷ್ಟು ಚಿತ್ರಗಳಲ್ಲಿ ಸತ್ಯರಾಜ್ ಹಾಗೂ ರಾಮರಂಜನ್ ನಟಿಸಿದ್ದಾರೆ.
ಮಲಯಾಳಂನಲ್ಲೂ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದೂ ಅವುಗಳಲ್ಲಿ ಪ್ರಮುಖವೆಂದರೆ ಮೋಹನ್ ಲಾಲ್ ನಟನೆಯ ಹಿಸ್ ಹೈನೆಸ್ ಅಬ್ದುಲ್ಲಾ, ಮಮುಟ್ಟಿ ನಟನೆಯ ಧ್ರುವಂ ಹಾಗೂ ಅರವಿಂದ ಸ್ವಾಮಿ ನಟನೆಯ ಡ್ಯಾಡಿ.
ಗೌತಮಿ ನಟಿಸಿದ ಕನ್ನಡ ಚಿತ್ರಗಳು ಏಳು ಸುತ್ತಿನ ಕೋಟೆ, ಚಿಕ್ಕ್ಯೆಜಮಾನ್ರು ಹಾಗೂ ಚೆಲುವ .ಇವರು ನಟಿಸಿರುವ ಹಿಂದಿ ಚಿತ್ರಗಳು ಪ್ಯಾರ್ ಹುಅ ಚೋರಿ ಚೋರಿ, ಜನತ ಕಿ ಅದಾಲತ್, ಹೈವಾನ್, ಆದ್ಮಿ, ಅಪ್ಪು ರಾಜಾ, ತ್ರಿಮೂರ್ತಿ ಹಾಗೂ ಧಾಲ್.
ಇವರ ಇತ್ತೀಚಿನ ಚಿತ್ರವೆಂದರೆ ಕಮಲಹಾಸನ್ ನಟನೆಯ ಪಾಪನಾಸನಂ[೪]
ಗೌರತಮಿಯವರು ೧೯೯೮ರಲ್ಲಿ ಸಂದೀಪ್ ಭಾಟಿಯರೊಂದಿಗೆ ವಿವಾಹವಾಗುತ್ತಾರೆ. ಇವರಿಗೆ ೧೯೯೯ರಲ್ಲಿ ಹೆಣ್ಣು ಮಗು ಜನಿಸುತ್ತದೆ. ಆದರೆ ಅದೆ ವರ್ಷ ವಿಚ್ಛೇದನ ಹೊಂದುತ್ತಾರೆ. ಆ ನಂತರ ೨೦೦೫ರಿಂದ ಕಮಲಹಾಸನ್ ಅವರೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇರುತ್ತಾರೆ. ಇವರಿಬ್ಬರು ಅಪೂರ್ವ ಸಗೋದರ್ಗಳ್ ಚಿತ್ರದ ವೇಳೆ ಭೇಟಿಯಾಗಿರುತ್ತಾರೆ. ನವೆಂಬರ್ ೧, ೨೦೧೬ರಂದು, ಗೌತಮಿಯವರು ಕಮಲಹಾಸನ್ ಜೊತೆಗಿನ ಸಂಬಂಧ ಕೊನೆಗೊಳಿಸಿರುತ್ತಾರೆ. [೫][೬][೭][೮] ಗೌತಮಿಯವರು ತಮ್ಮ ೩೫ನೇ ವಯಸ್ಸಿಗೆ ಸ್ತನ ಕ್ಯಾನ್ಸರ್ ಗೆ ತುತ್ತಾಗಿ ನಂತರ ಅದರಿಂದ ಸಂಪೂರ್ಣ ಗುಣಮುಖರಾಗುತ್ತಾರೆ.[೯] [೧೦][೧೧][೧೨]
Year | Film | Role | Language | Notes |
---|---|---|---|---|
೧೯೮೭ | Dayamayudu | Telugu | ||
೧೯೮೭ | Gandhinagar Rendo Veedhi | Telugu | ||
೧೯೮೭ | Srinivasa Kalyanam | Saroja | Telugu | |
೧೯೮೭ | Elu Suttina Kote | Raani | Kannada | |
೧೯೮೮ | Bazar Rowdy | Telugu | ||
೧೯೮೮ | Saahasa Veera | Kannada | ||
೧೯೮೮ | Guru Sishyan | Geetha | Tamil | |
೧೯೮೮ | Enga Ooru Kavalkaran | Poovayi | Tamil | |
೧೯೮೮ | Kakki Sattai Potta Machan | Tamil | ||
೧೯೮೮ | Raththa Dhanam | Lakshmi | Tamil | |
೧೯೮೮ | Namma Oor Nayagan | Tamil | ||
೧೯೮೮ | Kalicharan | Tamil | ||
೧೯೮೮ | Puthiya Vaanam | Mary | Tamil | |
೧೯೮೯ | Vaai Kozhuppu | Radha | Tamil | |
೧೯೮೯ | Krishnagari Abbayi | Telugu | ||
೧೯೮೯ | Pillaikkaga | Tamil | ||
೧೯೮೯ | Pongi Varum Kaveri | Kaveri | Tamil | |
೧೯೮೯ | Enga Ooru Mappillai | Panjavarnam | Tamil | |
೧೯೮೯ | Apoorva Sagodharargal | Janaki | Tamil | |
೧೯೮೯ | En Thangai | Radha | Tamil | |
೧೯೮೯ | Raja Chinna Roja | Sumathi | Tamil | |
೧೯೮೯ | Naan Sonnathey Sattam | Tamil | ||
೧೯೮೯ | Rajanadai | Sumathi | Tamil | |
೧೯೮೯ | Dharmam Vellum | Tamil | ||
೧೯೮೯ | Penbuthi Munbuthi | Uma | Tamil | |
೧೯೮೯ | Naqaab | Gauri | Hindi | |
೧೯೯೦ | Panakkaran | Sumathi | Tamil | |
೧೯೯೦ | Vaazhkai Sakkaram | Kalyani | Tamil | |
೧೯೯೦ | Seetha | Tamil | ||
೧೯೯೦ | Ulagam Pirandhadhu Enakkaga | Tamil | ||
೧೯೯೦ | Sandhana Kaatru | Raasathi | Tamil | |
೧೯೯೦ | Adhisaya Manithan | Tamil | ||
೧೯೯೦ | Ooru Vittu Ooru Vandhu | Panchavarnam | Tamil | |
೧೯೯೦ | Velai Kidaichuduchu | Tamil | ||
೧೯೯೦ | Avasara Police 100 | Tamil | ||
೧೯೯೦ | Adi 18 | Tamil | ||
೧೯೯೦ | Kalathai Ventravan | Tamil | ||
೧೯೯೦ | Aggiramudu | Malli | Telugu | |
೧೯೯೦ | Bamma Maata Bangaru Baata | Telugu | ||
೧೯೯೦ | Namma Ooru Poovatha | Poovatha | Tamil | Tamil Nadu State Film Award Special Prize |
೧೯೯೦ | His Highness Abdullah | Radhika | Malayalam | |
೧೯೯೦ | Raja Kaiya Vacha | Vijaya | Tamil | |
೧೯೯೦ | Vazhnthu Kattuvom | Tamil | ||
೧೯೯೦ | Vidhyarambham | Bhanumathi | Malayalam | |
೧೯೯೧ |
Dharma Dorai | Parvathi Dharmadorai | Tamil | |
೧೯೯೧ | Theechatti Govindhan | Tamil | ||
೧೯೯೧ | Aboorva Naagam | Tamil | ||
೧೯೯೧ | Adhikari | Tamil | ||
೧೯೯೧ | Eshwari | Tamil | ||
೧೯೯೧ | Rudhra | Rudhra | Tamil | |
೧೯೯೧ | Kaaval Nilayam | Aarthi | Tamil | |
೧೯೯೧ | Nee Pathi Naan Pathi | Nivedha | Tamil | Filmfare Award for Best Actress – Tamil |
೧೯೯೧ | Chaithanya | Padmini | Telugu | |
೧೯೯೨ | Rickshaw Mama | Lakshmi | Tamil | |
೧೯೯೨ | Brahmachari | Malathi | Tamil | |
೧೯೯೨ | Sivanda Malar | Tamil | ||
೧೯೯೨ | Periya Gounder Ponnu | Manjula | Tamil | |
೧೯೯೨ | Thilagam | Thilagam | Tamil | |
೧೯೯೨ | Ponnuketha Purushan | Tamil | ||
೧೯೯೨ | Magudam | Thilagavathi | Tamil | |
೧೯೯೨ | Pattathu Raani | Usha | Tamil | |
೧೯೯೨ | Mapillai Vandhachu | Tamil | ||
೧೯೯೨ | Chikkejamanru | Kavita | Kannada | |
೧೯೯೨ | Thevar Magan | Banumathi | Tamil | |
೧೯೯೨ | Sendhoorapandi | Marikozhundhu | Tamil | |
೧೯೯೨ | Pyar Hua Chori Chori | Radha | Hindi | |
೧೯೯೨ | Ayalathe Adheham | Sulochana | Malayalam | |
೧೯೯೨ | Daddy | Ammu | Malayalam | |
೧೯೯೩ | Athma | Divya | Tamil | |
೧೯೯೩ | Gentleman | Tamil | Special Appearance In The Song Chikku Bukku Rayile | |
೧೯೯೩ | Chinna Kannamma | Gayathri | Tamil | |
೧೯೯೩ | Airport | uma | Tamil | |
೧೯೯೩ | Dear Brother | Telugu | ||
೧೯೯೩ | Sankalpam | Telugu | ||
೧೯೯೩ | Aadmi | Rekha Saxena | Hindi | |
೧೯೯೩ | Dhruvam | Mythili | Malayalam | |
೧೯೯೩ | Jackpot | Malayalam | ||
೧೯೯೩ | Aagneyam | Shoba Menon | Malayalam | |
೧೯೯೪ |
Anna | Telugu | ||
೧೯೯೪ | Oru Vasantha Geetham | Uma | Tamil | |
೧೯೯೪ | Sathyavan | Tamil | ||
೧೯೯೪ | Honest Raj | Abhinaya | Tamil | |
೧೯೯೪ | Nammavar | Vasanthi | Tamil | |
೧೯೯೪ | Janta Ki Adalat | Hindi | ||
೧೯೯೪ | Teesra Kaun? | As herself | Hindi | Guest Appearance |
೧೯೯೪ | Sukrutham | Malini | Malayalam | |
೧೯೯೪ | Chukkan | Gayathri | Malayalam | |
೧೯೯೪ | Palleturi Mogudu | Jothi | Telugu | |
೧೯೯೪ | Kuruthipunal | Sumithra | Tamil | |
೧೯೯೪ | Witness | Tamil | ||
೧೯೯೫ | Veer | Anu | Hindi | |
೧೯೯೫ | God and Gun | Sujatha Singh | Hindi | |
೧೯೯೫ | Trimurti | Jyoti | Hindi | |
೧೯೯೫ | Sakshyam | Sussena | Malayalam | |
೧೯೯೬ | Aayiram Naavulla Ananthan | Radhika | Malayalam | |
೧೯೯೬ | Cheluva | Priya | Kannada | |
೧೯೯೬ | Adirindayya Alludu | Telugu | Special Appearance | |
೧೯೯೭ | Iruvar | Ramani | Tamil | |
೧೯೯೭ | Chilakkotudu | Telugu | ||
೧೯೯೭ | Dhaal: The Battle of Law Against Law | Sneha Saxena | Hindi | |
೧೯೯೭ | Vaachalam | Radha | Malayalam | |
೧೯೯೮ | Iniyavale | Tamil | ||
೨೦೦೩ | Varum Varunnu Vannu | Samyuktha Varma | Malayalam | |
೨೦೦೬ | Sasanam | Visalakshi | Tamil | |
೨೦೧೫ |
Papanasam | Rani Suyambulingam | Tamil | Nominated, Filmfare Award for Best Actress – Tamil |
೨೦೧೬ | Manamantha | Gayathri | Telugu | |
೨೦೧೬ | Vismayam | Malayalam | ||
೨೦೧೭ | Untitled film with Prabhu (2017 film) | Tamil |