ಗೌತಮ್ ಗಂಭೀರ್

ಗೌತಮ್ ಗಂಭೀರ್
ಜನನ14 ನವೆಂಬರ್, 1981
ಇತರೆ ಹೆಸರುಗೌತಿ
ವೃತ್ತಿಅಂತಾರಾಷ್ಟ್ರೀಯ ಕ್ರಿಕೆಟಿಗ
ಸಕ್ರಿಯ ವರ್ಷಗಳು2003 - ಇಂದಿನ ತನಕ
ಸಂಗಾತಿನತಾಶ ಗಂಭೀರ್

ಗೌತಿ ಎಂಬ ಕಿರುಹೆಸರಿನಿಂದ ಕರೆಯಲ್ಪಡುವವರು, ನವದೆಹಲಿ ಮೂಲದ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರು. ಇವರು ಭಾರತ ತಂಡ ಅಲ್ಲದೇ ದೆಹಲಿ, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳನ್ನೂ ಪ್ರತಿನಿಧಿಸಿ, ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸತತ ಐದು ಟೆಸ್ಟ್ ಪಂದ್ಯಗಳಲ್ಲಿ ಐದು ಶತಕ ಹೊಡೆದ ವಿಶ್ವದ ನಾಲ್ಕು ಆಟಗಾರರಲ್ಲಿ ಒಬ್ಬರು ಹಾಗೂ ಏಕೈಕ ಭಾರತೀಯ ಆಟಗಾರರಾದ ಇವರಿಗೆ 2009 ಸಾಲಿನ ಐ.ಸೀ.ಸೀ. ಅತ್ಯುತ್ತಮ ಟೆಸ್ಟ್ ಆಟಗಾರ, ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಗೌತಮ್ ಗಂಭೀರ್ ಅವರು ದೀಪಕ್ ಗಂಭೀರ್ ಹಾಗೂ ಸೀಮಾ ಗಂಭೀರ್ ದಂಪತಿಗಳಿಗೆ 14 ಅಕ್ಟೋಬರ್, 1981 ರಂದು ದೆಹಲಿಯಲ್ಲಿ ಜನಿಸಿದರು.

ಮಾಡರ್ನ್ ಸ್ಕೂಲ್, ನವದೆಹಲಿಯಲ್ಲಿ ಶಾಲಾ ಶಿಕ್ಷಣ ಪಡೆದು, ಹಿಂದೂ ಕಾಲೇಜು, ದೆಹಲಿಯಲ್ಲಿ ಕಾಲೇಜು ಶಿಕ್ಷಣ ಪಡೆದರು. ತಮ್ಮ ಸೋದರಮಾವ ಗುಲಾಟಿ ಅವರ ಮನೆಯಲ್ಲೇ ವಾಸವಾಗಿದ್ದ ಗಂಭೀರ್ ಅವರು ಅವರನ್ನೇ ತಮ್ಮ ಮಾರ್ಗದರ್ಶಕರೆಂದು ಹೇಳಿಕೊಳ್ಳುತ್ತಾರೆ.

ವೃತ್ತಿಪರ ಜೀವನ

[ಬದಲಾಯಿಸಿ]

2002ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಜಿಂಬಾಬ್ವೆ ತಂಡದ ವಿರುದ್ಧ ಎರಡು ಸತತ ದ್ವಿಶತಕಗಳನ್ನು ಹೊಡೆದು ರಾಷ್ಟ್ರತಂಡಕ್ಕೆ ತಮ್ಮ ಪೈಪೋಟಿಯನ್ನು ಘೋಷಿಸಿಕೊಂಡ ಗಂಭೀರ್ ಅವರು 2003ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಏಕದಿನ ವೃತ್ತಿಯನ್ನು ಆರಂಭಿಸಿದರು. 2004ರಲ್ಲಿ ಅಸ್ತ್ರಲಿಯಾ ತಂಡದ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ತಮ್ಮ ಟೆಸ್ಟ್ ವೃತ್ತಿಯನ್ನು ಪ್ರಾರಂಭಿಸಿದರು.

2005-2007 ಅವಧಿಯಲ್ಲಿ ಸಾಧಾರಣ ಪ್ರದರ್ಶನಗಳನ್ನು ನೀಡುವ ಮೂಲಕ ಟೆಸ್ಟ್ ತಂಡದಿಂದ ಹೊರಬಿದ್ದ ಇವರು, ಏಕದಿನ ಪಂದ್ಯಗಳಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. 2007 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೇ ಇದ್ದುದ್ದು ಅವರ ವೃತ್ತಿಯ ಕೆಟ್ಟದಿನಗಳೆಂದೇ ಹೇಳಬಹುದು. ಆದರೆ ತಮ್ಮ ಛಲ ಹಾಗೂ ಆತ್ಮಸ್ಥೈರ್ಯದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ 2007 ಟಿ20 ವಿಶ್ವಕಪ್ ಮೂಲಕ ಮತ್ತೆ ತಮ್ಮ ಆಗಮನವನ್ನು ಘೋಷಿಸಿದ ಇವರು ತಮ್ಮ ಅತ್ಯಧ್ಬುತ ಬ್ಯಾಟಿಂಗ್ ಮೂಲಕ ಟೆಸ್ಟ್, ಏಕದಿನ ಹಾಗೂ ಟೆಸ್ಟ್, ಮೂರೂ ವಿಭಾಗಗಳಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿಹೋದರು.

2007 ಟಿ-20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಸ್, ಅದೇ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಅತಿ ಹೆಚ್ಚು ಮೊತ್ತ (75), 2008 ಕಾಮನವೆಲ್ತ್ ಸರಣಿ ಗೆಲುವಿನಲ್ಲಿ ಮಹತ್ತರ ಪಾತ್ರ ಹಾಗೂ ಭಾರತಕ್ಕೆ ಅತಿ ಹೆಚ್ಚು ರನ್ಸ್, 2008 ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅತಿ ಹೆಚ್ಚು ರನ್ಸ್, ಐದು ಟೆಸ್ಟ್‌ಗಳಲ್ಲಿ ಸತತ ಐದು ಶತಕಗಳು, ನ್ಯೂಜೀಲಾಂಡ್ ವಿರುದ್ಧ ಅತಿ ಹೆಚ್ಚು ಹೊತ್ತು ಹೋರಾಟ ನಡೆಸಿ ಪಂದ್ಯ ಉಳಿಸಿಕೊಂಡು 41 ವರ್ಷಗಳ ನಂತರ ಭಾರತ ನ್ಯೂಜೀಲಾಂಡ್ ನಲ್ಲಿ ಸರಣಿ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ, 2011 ವಿಶ್ವಕಪ್‌ನಲ್ಲಿ ಮಹತ್ತರ ಪಾತ್ರ, ವಿಶ್ವಕಪ್ ಫೈನಲ್ಸ್ ನಲ್ಲಿ ಅತಿ ಹೆಚ್ಚು ರನ್ಸ್(97), ಹೀಗೆ ಹಲವಾರು ಬಾರಿ ತಮ್ಮ ಬ್ಯಾಟಿಂಗ್ ಪ್ರದರ್ಶನಗಳ ಮೂಲಕ ಭಾರತ ತಂಡಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಪ್ರತಿಷ್ಟಿತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೊದಲ ಮೂರು ವರ್ಷಗಳು ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಆಡಿದ ಇವರು, ನಂತರದ ಆವೃತ್ತಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. 2012ರ ನಂತರ ಇವರು ಮತ್ತೆ ತಂಡದಿಂದ ಹೊರಬಿದ್ದಿದ್ದು ಪ್ರಸ್ತುತವಾಗಿ ದೆಹಲಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ದೇಶೀಯ ಕ್ರಿಕೆಟ್ ಆಡಿಕೊಂಡಿದ್ದಾರೆ.

ನಾಯಕತ್ವ

[ಬದಲಾಯಿಸಿ]

ಭಾರತ ತಂಡವನ್ನು ಆರು ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿರುವ ಇವರು ಆರೂ ಪಂದ್ಯಗಳಲ್ಲಿ ಜಯಭೇರಿಯನ್ನು ತಂದುಕೊಟ್ಟಿದ್ದಾರೆ. ನೂರು ಪ್ರತಿಶತ ಯಶಸ್ಸು ಇವರದ್ದಾಗಿದೆ. ಇಂಡಿಯನ್ ಪ್ರಿಮಿಎರ್ ಲೀಗ್‌ನಲ್ಲಿ ಎರಡು ಬಾರಿ ನಾಯಕರಾಗಿ ಯಶಸ್ಸು ಕಂಡಿರುವ ಮೂವರಲ್ಲಿ ಗಂಭೀರ್ ಕೂಡ ಒಬ್ಬರಾಗಿದ್ದಾರೆ (ಧೋನಿ, ರೋಹಿತ್ ಶರ್ಮ ಇನ್ನಿಬ್ಬರು)

ಪ್ರಶಸ್ತಿಗಳು ಮತ್ತು ದಾಖಲೆಗಳು

[ಬದಲಾಯಿಸಿ]
  • 2008 ಸಾಲಿನಲ್ಲಿ ಅತಿ ಹೆಚ್ಚು ಏಕದಿನ ರನ್ಸ್ ಹೊಡೆದ ಭಾರತೀಯ ಕ್ರಿಕೆಟಿಗ
  • 2008 ಸಾಲಿನಲ್ಲಿ ಅತಿಹೆಚ್ಚು ಏಕದಿನ ಶತಕ ಹೊಡೆದ ಭಾರತೀಯ ಕ್ರಿಕೆಟಿಗ
  • 2009 ಸಾಲಿನಲ್ಲಿ ಅತಿಹೆಚ್ಚು ಟೆಸ್ಟ್ ಶತಕಗಳನ್ನು ಹೊಡೆದ ಭಾರತೀಯ
  • 2009 ಸಾಲಿನ ಐ.ಸೀ.ಸೀ. ವಿಶ್ವದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ
  • 2009 ಸಾಲಿನ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ
  • 2009 ಸಾಲಿನ CEAT ವಿಶ್ವದ ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ