ಚಂಡಕ ಆನೆ ಅಭಯಾರಣ್ಯವು (ಒಡಿಯಾ: ଚନ୍ଦକା ହାତୀ ଅଭୟାରଣ୍ୟ) ಭಾರತದ ಒಡಿಶಾ ರಾಜ್ಯದ ಕಟಕ್‍ನ ದಕ್ಷಿಣದ ಅಂಚಿನಲ್ಲಿ ಸ್ಥಿತವಾಗಿರುವ ವನ್ಯಜೀವಿ ಮೀಸಲು ಪ್ರದೇಶವಾಗಿದೆ. ಪೂರ್ವ ಘಟ್ಟಗಳ ಜೈವಿಕ ಪ್ರದೇಶದ ಖುರ್ದಾ ಎತ್ತರ ಪ್ರದೇಶದಲ್ಲಿ ಸ್ಥಿತವಾಗಿರುವ ಚಂಡಕ ಅರಣ್ಯವು ೧೭೫.೭೯ ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಇದನ್ನು ಡಿಸೆಂಬರ್ ೧೯೮೨ರಲ್ಲಿ ಆನೆ ಅಭಯಾರಣ್ಯವಾಗಿ ಹೆಸರಿಸಲಾಯಿತು.
ಭಾರತದ ಆನೆಯು ಈ ಆವಾಸಸ್ಥಾನದ ಪ್ರಮುಖ ಜೀವಿಯಾಗಿದ್ದು ಈ ಸ್ಥಳದ ಸಂಭಾವ್ಯ ಉತ್ಪನ್ನತೆಯ ಸೂಚಕವಾಗಿದೆ.[೧][೨] ಚಿರತೆಯು ಜೈವಿಕ ಪಿರಮಿಡ್‍ನ ಶಿಖರದಲ್ಲಿದೆ. ಚೀತಲ್, ಮಂಟ್‍ಜ್ಯಾಕ್, ಬರ್ಕ, ಕಾಡುಹಂದಿ, ಲಂಗೂರ್, ರೀಸಸ್ ಕೋತಿ, ಪುನುಗು ಬೆಕ್ಕು, ಸಾಮಾನ್ಯ ಮುಂಗುಸಿ, ಸಣ್ಣ ಮುಂಗಸಿ, ರಡಿ ಮುಂಗುಸಿ, ಚಿಪ್ಪುಹಂದಿ, ಕರಡಿ, ರಾಟಲ್, ತೋಳ ಮತ್ತು ಕತ್ತೆಕಿರುಬ ಈ ಪ್ರದೇಶದ ಇತರ ಸಸ್ತನಿ ಪ್ರಾಣಿಗಳಾಗಿವೆ.