ಚಂದಾ ಕೋಚರ್

ಚಂದ ಕೊಚ್ಚಾರ್
ಜನನ೧೯೬೧
ಜೋದಪುರ, ರಾಜಸ್ಥಾನ
ವೃತ್ತಿ(ಗಳು)ಸಿಇಒ ಮತ್ತು ಎಂ ಡಿ, ಐಸಿಐಸಿಐ ಬ್ಯಾಂಕ್
ಸಂಗಾತಿದೀಪಕ್ ಕೊಚ್ಚಾರ್

ಚಂದ ಕೊಚ್ಚಾರ್ ಅವರು ೧೯೬೧ರ ನವೆಂಬರ್ ೧೭ರಂದು ಹುಟ್ಟಿದರು.ಇವರು ರಾಜಸ್ಥಾನದ ಜೋದಪುರ ಎಂಬ ಪಟ್ಟಣದಲ್ಲಿ ಹುಟ್ಟಿದರು.

ಶಿಕ್ಷಣ

[ಬದಲಾಯಿಸಿ]

ಅವರು ತಮ್ಮ ಓದಿಗಾಗಿ ಜೈಪೂರಿಗೆ ತೆರಳಿದರು. ಸೇಂಟ್ ಏಂಜೆಲಾ ಸೋಫಿಯಾ ಶಾಲೆಯಲ್ಲಿ ತಮ್ಮ ಶಾಲೆಯ ಓದುವಿಕೆಯನ್ನು ಮುಗಿಸಿದರು. ನಂತರ ಇವರು ಮುಂಬಯಿಯಿನ ಜೈ ಹಿಂದ್ ಕಾಲೇಜರಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದುಕೊಂಡರು.ಅದಾದ ಮೇಲೆ ೧೯೮೧ರಲ್ಲಿ ಅವರು ವೆಚ್ಚ ಅಕೌಂಟೆನ್ಸಿ ಅಧ್ಯಯನವನ್ನು ಮಾಡಿ,ನಂತರ ಜಮ್ನಲಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ರಲ್ಲಿ ಮ್ಯಾನೇಜ್ಮೆಂಟ್ ಸ್ಟಡೀಸ್ ಮಾಸ್ಟರ್ಸ್ಪ ಪದವಿಯನ್ನು ಪಡೆಯಲು ಹೋದರು. ಅವರ ಮ್ಯಾನೇಜ್ಮೆಂಟ್ ಸ್ಟಡೀಸ್ ಎಕ್ಸಲೆನ್ಸ್ ಗೆ Wockhardt ಚಿನ್ನದ ಪದಕ ಮತ್ತು ವೆಚ್ಚ ಅಕೌಂಟೆನ್ಸಿಗೆ ಜೆ.ಎನ್ ಬೋಸ್ ಚಿನ್ನದ ಪದಕವನ್ನು ಪಡೆದ್ದಿದರು.

ವೃತ್ತಿ ಜೀವನ

[ಬದಲಾಯಿಸಿ]

೧೯೮೪ ರಂದು ಕೊಚ್ಚಾರ್ ಐ.ಸಿ.ಐ.ಸಿ.ಐ ಬ್ಯಾಂಕ್ ಗೆ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಸೇರಿಕೊಂಡರು. ಇವರು ಪ್ರಾಜೆಕ್ಟ್ ಅಪ್ರೇಸಲ್ ಮತ್ತು ಮಾನಿಟರಿಂಗ್ ಕೆಲಸಗಳನ್ನು ಮಾಡುತಿದ್ದರು. ಅವರು ಜವಳಿ,ಕಾಗದ ಮತ್ತು ಸಿಮೆಂಟ್ ಹಲವಾರು ಕೈಗಾರಿಕೆಗಳ ಯೋಜನೆಗಳನ್ನು ಮೌಲ್ಯ ನಿರ್ಣಯ ಮಾಡುವ ಕೆಲಸವನ್ನು ವಹಿಸಲಾಗಿತ್ತು. ೧೯೯೪ರಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಉತ್ತೇಜಿಸಿ,ತನ್ನ ನಂತರ ೧೯೯೬ರಲ್ಲಿ ಡೆಪುಟಿ ಜನರಲ್ ಮ್ಯಾನೇಜರ್ ಆಗಿ ಉತ್ತೇಜಿಸಿದರು.೨೦೦೭-೦೯ ರಲ್ಲಿ ಕೊಚ್ಚಾರ್ ಬ್ಯಾಂಕ್ ನ ಅಂತಾರಾಷ್ಟ್ರೀಯ ಮತ್ತು ಸಾಂಸ್ಥಿಕ ವ್ಯವಹಾರಗಳನ್ನು ನಿರ್ವಹಿಸಿದರು. ೧೯೯೯ರಲ್ಲಿ ಇವರು ತಂತ್ರ ಮತ್ತು ಕಾಮರ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ಈ ನಂತರ ಐಸಿಐಸಿಐ ಬ್ಯಾಂಕ್ ಹೆಚ್ಚಾಗಿ ತಂತ್ರಜ್ಞಾನ , ನಾವೀನ್ಯತೆ, ಪ್ರಕ್ರಿಯೆ ನಿರ್ವಹಣೆ ಮತ್ತು ಹಂಚಿಕೆ ಮತ್ತು ಪ್ರಮಾಣದ ವಿಸ್ತರಣೆ ಕೇಂದ್ರೀಕರಿಸಿದರು ಹಾಗು ಹೊಸ ಚಿಲ್ಲರೆ ವ್ಯಾಪಾರ ಆರಂಭಿಸಿದರು. ೨೦೦೧ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ೨೦೦೬ರಲ್ಲಿ ಉಪ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಿದರು. ೨೦೦೬-೨೦೦೭ ಅವರು ಬ್ಯಾಂಕಿನಲ್ಲಿ ಅಂತಾರಾಷ್ಟ್ರೀಯ ಮತ್ತು ಕಾರ್ಪೊರೇಟ್ ವ್ಯವಹಾರಗಳನ್ನು ನೋಡಿ ಕೊಳ್ಳುತ್ತಿದರು. ೨೦೦೭-೨೦೦೯ರವರಗೆ ಬ್ಯಾಂಕಿನ ಮುಖ್ಯ ಹಣಕಾಸಿನ ಅಧಿಕಾರಿ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ನಂತರ ೨೦೦೯ರಲ್ಲಿ ಕೊಚ್ಚಾರ್ ರವರನ್ನು ಬ್ಯಾಂಕ್ ನಿರ್ದೇಶಕ (ಎಂ.ಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಒ)ಯಾಗಿ ನೇಮಿಸಲಾಗಿತ್ತು, ಇವರು ಭಾರತ-ಜಪಾನ್ ಉದ್ಯಮ ಲೀಡರ್ಸ್ ಫೊರಮ್ ಮತ್ತು ಅಮೆರಿಕ-ಭಾರತ ಸಿಇಒ ವೇದಿಕೆಯ ಸದಸ್ಯರು.ಅಂತರರಾಷ್ಟ್ರೀಯ ಹಣಕಾಸು ಕಾನ್ಫರೆನ್ಸ್ ನ ಪ್ರಸ್ತುತ ಅಧ್ಯಕ್ಷರು,ಇವರು ಭಾರತೀಯ ಬ್ಯಾಂಕ್ಗಳ ಸಂಘ ಉಪ ಕಾರ್ಯಾಧ್ಯಕ್ಷೆ ಆಗಿದಾರೆ.ಇವರು ಭಾರತೀಯ ಕೌನ್ಸಿಲ್ ಮಂಡಳಿಯ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಹಾಗು ನ್ಯಾಷನಲ್ ಇನ್ಸ್ಟಿಟ್ಯೂಟ್ ಸೆಕ್ಯುರಿಟೀಸ್ ಮಾರ್ಕೆಟ್ಸ್ ಮತ್ತು ಇನ್ಸ್ಟಿಟ್ಯೂಟ್ ಇಂಟರ್ನ್ಯಾಷನಲ್ ಫೈನಾನ್ಸ್ ನಲ್ಲಿ ಸದಸ್ಯರಾಗಿದ್ದಾರೆ. ೨೦೧೧ರಲ್ಲಿ ಅವರು ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಸಹ ಅಧ್ಯಕ್ಷೆರಾಗಿದ್ದರು ಹಾಗು ಪ್ರಧಾನಿ ಕೌನ್ಸಿಲ್ ನ ಟ್ರೇಡ್ & ಇಂಡಸ್ಟ್ರಿ, ವಾಣಿಜ್ಯ ಮಂಡಳಿ ಮತ್ತು ಉನ್ನತ ಸಮಿತಿ ಮತ್ತು ಹಣಕಾಸು ಇನ್ಫ್ರಾಸ್ಟ್ರಕ್ಚರ್ ಮೇಲೆ ಸದಸ್ಯರಾಗಿದ್ದರು. ನಂತರ ಭಾರತ ಮತ್ತು ಹೊರದೇಶಗಳಲ್ಲಿ ಬ್ಯಾಂಕಿನ ವೈವಿಧ್ಯಮಯ ವಹಿವಾಟುಗಳ ಜವಾಬ್ದಾರಿಯನ್ನು ತೆಗೆದುಕೊಡರು. ತಮ್ಮ ಬ್ಯಾಂಕ್ ಕಾರ್ಯದ ಜೊತೆಗೆ ಅವರು ಭಾರತದ ಪ್ರಮುಖ ಖಾಸಗಿ ವಲಯದ ಜೀವನ ಮತ್ತು ಸಾಮಾನ್ಯ ವಿಮಾ ಕಂಪನಿಗಳು ಬ್ಯಾಂಕಿನ ಅಂಗಸಂಸ್ಥೆಗಳನ್ ನು ಬಹುತೇಕ ಮಂಡಳಿಗಳು ನೇತೃತ್ವವನ್ನು ಹೊಂದಿರುವರು. ಇವರು ಪ್ರಸ್ತುತ ಅಂತರರಾಷ್ಟ್ರೀಯ ಹಣಕಾಸು ಕಾನ್ಫರೆನ್ಸ ನ ಅಧ್ಯಕ್ಷರಾಗಿದ್ದಾರೆ.ಅವರು ಭಾರತೀಯ ಬ್ಯಾಂಕಗಳ ಸಂಘದ ಉಪ ಕಾರ್ಯಾಧ್ಯಕ್ಷೆ ಆಗಿರುವರು. ಕೊಚ್ಚಾರ್ ವಾಣಿಜ್ಯ ಹಾಗೂ ಕೈಗಾರಿಕೋದ್ಯಮದ ಪ್ರಧಾನಿ ಕೌನ್ಸಿಲ್ ನ ಸದಸ್ಯರಾಗಿರುವರು.[]

ಪ್ರಶಸ್ತಿಗಳು

[ಬದಲಾಯಿಸಿ]

೨೦೧೪ರಲ್ಲಿ ಕೆನಡಾ ದೇಶದ ಕಾರ್ಲೆಟನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಆ ವಿಶ್ವವಿದ್ಯಾಲಯ ಕೊಚ್ಚಾರ್ ರವರ ಆರ್ಥಿಕ ವಲಯದ ಪ್ರವರ್ತಕ ಕೆಲಸಗಳು,ಆರ್ಥಿಕ ಸಂಕಷ್ಟದ ಸಮಯದಲ್ಲಿ ಪರಿಣಾಮಕಾರಿ ನಾಯಕತ್ವವನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನಿಡಿದರು.ಅವರಿಗೆ ೨೦೧೧ದರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಯಿತು.ಕೊಚ್ಚಾರ್ ನಾಯಕತ್ವದಲ್ಲಿ , ಐಸಿಐಸಿಐ ಬ್ಯಾಂಕ್ ೨೦೦೧,೨೦೦೩,೨೦೦೪ ಮತ್ತು ೨೦೦೫ಗಳಲ್ಲಿ "ಭಾರತದಲ್ಲಿನ ಅತ್ಯುತ್ತಮ ರಿಟೇಲ್ ಬ್ಯಾಂಕ್ " ಪ್ರಶಸ್ತಿ ಸಿಕ್ಕಿದೆ.ಈ ಪ್ರಶಸ್ತಿಯನ್ನು ಏಷ್ಯನ್ ಬ್ಯಾಂಕರ್ ಅವರು ಕೊಟ್ಟರು. ೨೦೦೪ರಲ್ಲಿ ಇವರಿಗೆ ರಿಟೇಲ್ ಬ್ಯಾಂಕರ್ ವೈಯಕ್ತಿಕವಾಗಿ ಏಷ್ಯನ್ ಬ್ಯಾಂಕರ್ ಅವರು ಕೊಟ್ಟರು ಇಕನಾಮಿಕ್ ಟೈಮ್ಸ್ ಅವರು ಇವರಿಗೆ ಸ್ತ್ರೀ ಉದ್ಯಮಿ ಪಟ್ಟವನ್ನು ೨೦೦೫ರಲ್ಲಿ ನೀಡಿದರು. ೨೦೦೬ರಲ್ಲಿ ಇವರಿಗೆ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ನೀಡಿದರು. ೨೦೧೪ರಲ್ಲಿ ಅಸ್ಸೋಛಾಮ್ ಲೇಡೀಸ್ ಲೀಗ್ ಮುಂಬಯಿ ಮಹಿಳೆಯರ ದಶಕದ ಸಾಧಕ ಪ್ರಶಸ್ತಿಗೆ ಪಾತ್ರ ಆದರು. ೨೦೧೬ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿತ್ತು. ಭಾರತ ಸರ್ಕಾರವು ಇವರಿಗೆ ಇವರ ಬ್ಯಾಂಕಿಂಗ್ ವಲಯದ ಸೇವೆಗೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ನೀಡಿದರು. ೨೦೧೧ರಲ್ಲಿ ಇವರಿಗೆ ABLF ಮಹಿಳೆ ಪವರ್ ಪ್ರಶಸ್ತಿಯನ್ನು ಏಷ್ಯನ್ ಬ್ಯುಸಿನೆಸ್ ಲೀಡರ್ಶಿಪ್ ವೇದಿಕೆ ನೀಡಿದರು.

ಸಾಧನೆಗಳು

[ಬದಲಾಯಿಸಿ]

ಇವರು ಅತ್ಯಂತ ಉತ್ತಮ ಶಕ್ತಿಶಾಲಿ ಮಹಿಳೆಯೆಂದು ಕರೆಸಿಕೊಂಡರು. ೨೦೦೯ರಲ್ಲಿ ಅವರು ಫೋರ್ಬ್ಸ್ " ಪ್ರಪಂಚದ ಅತ್ಯಂತ 100 ಪ್ರಭಾವಿತ ಮಹಿಳೆಯರ ಪಟ್ಟಿಯಲ್ಲಿ 20 ಸಂಖ್ಯೆಯನ್ನು ಪಡೆದುಕೊಂಡರು. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯ ಹಿಂದೆ ಎರಡನೇ ಭಾರತೀಯಾಗಿದ್ದಾರೆ ಅನಂತರ ೨೦೧೫ರಲ್ಲಿ ಅವರು ೩೫ಸ್ಥಾನಕ್ಕೆ ಏರಿದರು. ೨೦೦೯ರಲ್ಲಿ ಆಕೆ ಫೋರ್ಬ್ಸ್ ನ ಪ್ರಕಾರ ಪ್ರಪಂಚದ ಅತ್ಯಂತ 100 ಪ್ರಭಾವಿತ ಮಹಿಳೆಯರಲ್ಲಿ ಇವರ ಹೆಸರು ಸೇರಿತ್ತು. ೨೦೧೧ರಲ್ಲಿ ಇವರು ಹೆಚ್ಚಿನ ಪ್ರಭಾವಶಾಲಿ ಮಹಿಳೆಯರ ಉದ್ಯಮ ಪಟ್ಟಿಯಲ್ಲಿ ಕಾಣಿಸಿಕೊಂಡರು. ಹಾಗು ಇದೇ ವರ್ಷದಲ್ಲಿ ಇವರು ಗ್ಲೋಬಲ್ ಫೈನಾನ್ಸ್ 50 ಅತ್ಯಂತ ಪ್ರಭಾವಿ ಜನರ ಪಟ್ಟಿಯಲ್ಲಿ ಇವರ ಹೆಸರು ಇತ್ತು. . ಅಕ್ಟೋಬರ್ 2014ರಲ್ಲಿ ಇವ ರ ಆರ್ಥಿಕ ವಲಯ, ಪ್ರವರ್ತಕ ಆರ್ಥಿಕ ಬಿಕ್ಕಟ್ಟು ಮತ್ತು ನಿಶ್ಚಿತಾರ್ಥ ವ್ಯವಹಾರ ಬೆಂಬಲದಲ್ಲಿ ನಾಯಕತ್ವ ಗುರುತಿಸಿ ಕಾರ್ಲೆಟನ್ ವಿಶ್ವವಿದ್ಯಾಲಯ , ಕೆನಡಾ ಗೌರವಾರ್ಥ ಡಾಕ್ಟರ್ ಕಾನೂನುಗಳನ್ನು ನೀಡಿ ಗೌರವಿಸಿದರು. ೨೦೧೬ರಲ್ಲಿ ಇಂದಿನ ಭಾರತ ಪ್ರೌಢ ಮತ್ತು ಮೈಟಿ ಪವರ್ ಪಟ್ಟಿಯಲ್ಲಿ ೪೦ನೇಯ ಸ್ಥಾನ ಪಡೆದರು. ಇದೆ ವರ್ಷದಲ್ಲಿ ಅವರು ಫೋರ್ಬ್ಸ್ ಏಷ್ಯಾದ ಪ್ರಕಾರ 50 ಪವರ್ ವ್ಯಾಪಾರ ಮಹಿಳೆಯರ ಪಟ್ಟಿಯಲ್ಲಿ ೨೨ನೇಯ ಸ್ಥಾನ ಪಡೆದರು.[][]

ವೈಯುಕ್ತಿಕ ಜೀವನ

[ಬದಲಾಯಿಸಿ]

ಅವರು ದೀಪಕ್ ಕೊಚ್ಚಾರ್ ಎಂಬ ಗಾಳಿ ಶಕ್ತಿ ವಾಣಿಜ್ಯೋದ್ಯಮಿಯರನ್ನು ಮದುವೆಯಾದರು. ಈಗ ಕೊಚ್ಚಾರ್ ಮುಂಬಯಿಯಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಆರತಿ ಮತ್ತು ಮಗ ಅರ್ಜುನ್.

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-10-04. Retrieved 2016-09-16.
  2. http://www.forbes.com/profile/chanda-kochhar/?list=power-women
  3. http://www.forbes.com/sites/forbespr/2016/04/07/forbes-honors-50-power-businesswomen-in-asia-2/#79c6a06a47de