ಚತುರ್ಥಿ

ಚತುರ್ಥಿ ಅಥವಾ ಚೌತಿಯು ಹಿಂದೂ ಪಂಚಾಂಗದಲ್ಲಿನ ಯಾವುದೇ ಚಾಂದ್ರಮಾಸದ ನಾಲ್ಕನೇ ದಿನವಾಗಿರುತ್ತದೆ (ತಿಥಿ).

ಹಬ್ಬಗಳು

[ಬದಲಾಯಿಸಿ]
  • ಸಂಕಷ್ಟ ಚತುರ್ಥಿಯು ಹುಣ್ಣಿಮೆಯ ನಂತರದ ಕ್ಷೀಣಿಸುವ ಹಂತದ ನಾಲ್ಕನೆ ದಿನ.[] ಈ ಚತುರ್ಥಿಯು ಮಂಗಳವಾರದಂದು ಬಂದರೆ ಇದನ್ನು ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನದಂದು, ಭಕ್ತರು ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಉಪವಾಸವನ್ನು ರಾತ್ರಿ ಗಣೇಶನ ಪ್ರಾರ್ಥನೆಯ ನಂತರ ಚಂದ್ರನ ದರ್ಶನ ಮಾಡಿ ಮುರಿಯುತ್ತಾರೆ. ಈ ಮಂಗಳಕರ ದಿನದಂದು ಪ್ರಾರ್ಥಿಸಿದರೆ ತಮ್ಮ ಬಯಕೆಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ. ಜೊತೆಗೆ ಸಂಕಷ್ಟಿ ಎಂದರೆ ಕಷ್ಟದ ಸಮಯದಲ್ಲಿ ವಿಮೋಚನೆ ಎಂದಾಗಿದೆ. ಹಾಗಾಗಿ ಉಪವಾಸ ಮಾಡುವುದು ನಿಮ್ಮ ತೊಂದರೆಗಳನ್ನು ಕಡಿಮೆಮಾಡುತ್ತದೆ ಎಂದು ನಂಬಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Sankashtachaturthi vrat | Vowed Religious Observance". hindujagruti.org. 2012. Retrieved 20 December 2012. Chaturthi falling in the dark fortnight is known as 'Sankashti'.