ಚಾಮಲಾಪುರ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿ ಇರುವ ಒಂದು ಹಳ್ಳಿ. ಮೈಸೂರು ನಗರದಿಂದ ರಸ್ತೆಯಲ್ಲಿ ಹೋದರೆ ಸುಮಾರು ಮೂವತ್ತು ಕಿಲೋಮೀಟರು.
ಈ ಊರಿನ ಹೆಸರರಿನ ಮೂಲದ ಬಗ್ಗೆ ಇಲ್ಲಿಯ ಜನರಿಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು "ಎಪಿಗ್ರಾಫಿಯ ಕರ್ನಾಟಕ"ದಲ್ಲಿ ಹುಡುಕಬಹುದು.
ಮೈಸೂರಿನ ಹುಣಸೂರು ರಸ್ತೆಯ ಪಕ್ಕದಲ್ಲಿ ಇರುವ ಬೋಗಾದಿ ಕಡೆ ಹೋಗಿ, ಅಲ್ಲಿಯ ಗದ್ದಿಗೆ ರಸ್ತೆಯಲ್ಲೆ ಸುಮಾರು ೨೫ ಕಿಲೋಮೀಟರು ಸಂಚಾರ ಮಾಡಿದರೆ, ನಮಗೆ ಸಿಗುವುದು ಹಾಲನಹಳ್ಳಿ. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ, ಎಡಕ್ಕೆ ತಿರುಗಿ ಸುಮಾರು ೫ ಕಿಲೋಮೀಟರು ಸಂಛರಿಸಿದರೆ ಚಾಮಲಾಪುರ ಸಿಗುತ್ತದೆ.
ಕರ್ನಾಟಕ ಸರ್ಕಾರವು ಈ ಫಲವತ್ತಾದ ಭೂಮಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಮುಂದಾಗಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ಇರುವ ವಿದ್ಯುತ್ ಕೊರತೆಯನ್ನು ನೀಗಿಸಬಹುದು ಎಂಬುದು ಸರ್ಕಾರದ ಸಮಜಾಯಿಷಿ. ಆದರೆ ಮೈಸೂರಿನ ನಾಗರೀಕರು, ಚಾಮಲಾಪುರದ ಜನರು, ಪರಿಸರವಾದಿಗಳು, ಮತ್ತು ಸುತ್ತಮುತ್ತಲಿನ ಜನರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದರಿಂದ ಸಾವಿರಾರು ರೈತರು ಭೂಮಿ ಕಳೆದುಕೊಳ್ಳುವುದಲ್ಲದೆ, ಸುತ್ತಲಿನ ೫೦ ಕಿ.ಮೀ. ಪರಿಸರ ಹಾಳಾಗುತ್ತದೆ ಎಂಬುದು ಅವರ ವಾದ. ನಾಗರಹೊಳೆ ಮತ್ತು ಕಬಿನಿ ನದಿಗಳು ಸಹ ಸ್ವಲ್ಪ ದೂರದಲ್ಲೆ ಇರುವುದರಿಂದ ಅಲ್ಲಿನ ನೈಸರ್ಗಿಕ ಪರಿಸರಕ್ಕೂ ಹಾನಿಯಾಗಲಿದೆ.