ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಚಾರುಕೇಶಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತೈದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ತರಂಗಿಣಿ ಎಂದು ಹೆಸರಿಸಿದ್ದಾರೆ.[೧][೨] ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ಇದೇ ಹೆಸರಿನ ರಾಗವಿದೆ.
ಇದು ಐದನೆಯ "ಬನ" ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಇದು ಒಂದು ಸಂಪೂರ್ಣ ರಾಗವಾಗಿದೆ.ಇದು ಕೇಳುಗರಲ್ಲಿ ಭಕ್ತಿ ಮತ್ತು ಕಾರುಣ್ಯ ರಸವನ್ನು ಸ್ಪುರಿಸುವಂತಹ ರಾಗವಾಗಿದೆ.
ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು,ಪೂರ್ವಧನ್ಯಾಸಿ ತಕ್ಕಮಟ್ಟಿಗೆ ಬಳಕೆಯಲ್ಲಿದೆ.
ಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ಆಡಮೋಡಿ ಗಾಲಡೆ | ತ್ಯಾಗರಾಜರು | ||
ಕೃತಿ | ಕರುಣೈ ವರುಮೊ | ಪಾಪನಾಶಂ ಶಿವಂ | ||
ಕೃತಿ | ಇನ್ನುಂ ಎನ್ ಮನಂ | ಲಾಲ್‍ಗುಡಿ ಜಯರಾಮನ್ |
ಈ ರಾಗವು ಬಹಳ ಜನಪ್ರಿಯವಾಗಿದ್ದು, ಇನ್ನೂ ಹಲವಾರು ರಚನೆಗಳು ಜನಪ್ರಿಯವಾಗಿವೆ. ಹಲವಾರು ಭಾಷೆಗಳಲ್ಲಿ ನೂರಾರು ಚಿತ್ರಗೀತೆಗಳು ರಚನೆಯಾಗಿದ್ದು ಭಕ್ತಿಗೀತೆಗಳೂ ಸಾಕಷ್ಟು ಇವೆ.ಗಝಲ್ ಗಾಯನದಲ್ಲೂ ಬಳಕೆಯಲ್ಲಿದೆ.