ಚೆಂದೋಡಿ ಲೀಲಾ - ಕನ್ನಡದ ರಂಗ ಕಲಾವಿದರಲ್ಲೊಬ್ಬರು ಮತ್ತು ಚಿತ್ರನಟಿಯರಲ್ಲೊಬ್ಬರು. ರಾಜ್ಯ ನಾಟಕ ಅಕೆಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಚಿಂದೋಡಿ ಲೇಲಾ ಅವರು ಹವ್ಯಾಸಿ ಮತ್ತು ವೃತ್ತಿಪರ ನಾಟಕರಂಗದಲ್ಲಿ ಸುಮಾರು ೪೦ ವರ್ಷಗಳಿಂದ ಸಕ್ರಿಯರಾಗಿದ್ದರು. ಹಿರಿಯ ರಂಗಭೂಮಿ ಕಲಾವಿದರಲ್ಲಿ ಇವರೊಬ್ಬ ಪ್ರಮುಖರು. ತಮ್ಮ ಕಂಚಿನ ಕಂಠಕ್ಕೆ ಹೆಸರುವಾಸಿಯಾಗಿದ್ಡರು.
'ಚಿಂದೋಡಿ ವೀರಪ್ಪ ಹಾಗೂ ಶಾಂತಮ್ಮ ಪರಿವಾರದ ೯ ಮಕ್ಕಳಲ್ಲಿ ಕೊನೆಯವರು. ನಾಟಕ ಅವರ ಪ್ರಮುಖ ವ್ರುತ್ತಿ ಹಾಗೂ ಜೀವನೋಪಾಯವಾಗಿತ್ತು. ೬೦ ವರ್ಷಗಳ ಕಾಲ ನಟನೆಮಾಡಿದ್ದರು. ಸಿನಿಮಾ ವಲಯದಲ್ಲೂ ೩೩ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕದ ಜನತೆಗೆ ಹಳ್ಳಿಹುಡಿಗಿಯೆಂದೇ ಪರಿಚಿತರು. ಇವರ 'ಪೋಲಿಸನ ಮಗಳು" ನಾಟಕ', ಬೆಂಗಳೂರಿನ 'ಗುಬ್ಬಿ ವೀರಣ್ಣ ರಂಗಮಂದಿರ' ದಲ್ಲಿ ಸತತವಾಗಿ ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿ, ದಾಖಲೆ ನಿರ್ಮಿಸಿದೆ.ಜನ್ಮ ದಾವಣಗೆರೆಯಲ್ಲಿ 1941ರಲ್ಲಿ. ತಂದೆ ಚಿಂದೋಡಿ ವೀರಪ್ಪ. ಪ್ರಖ್ಯಾತ ಗಾಯಕರು, ನಟರು. ತಾಯಿ ಶಾಂತಮ್ಮ ಗೃಹಿಣಿ. ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ಶ್ರೀಗುರು ಕರಿಬಸವ ರಾಜೇಂದ್ರ ನಾಟಕಮಂಡಲಿ (ಕೆ.ಬಿ.ಆರ್. ಡ್ರಾಮಾ ಕಂಪನಿ) ಅಭಿನಯಸುತ್ತಿದ್ದ ಗುಲೇಬಕಾವಲಿ, ಕಾಳಿದಾಸ, ಸಂಪೂರ್ಣ ರಾಮಾಯಣ, ಗುಣಸಾಗರಿ ಅತ್ಯಂತ ಜನಪ್ರಿಯ ನಾಟಕಗಳಾಗಿದ್ದವು.
ಇನ್ನೂ ಇಪ್ಪತ್ತರ ಹರೆಯದ ಮೊದಲೇ ಇವರ ಮತ್ತೊಂದು ಜನಪ್ರಿಯ ನಾಟಕ,'ಹಳ್ಳಿಹುಡುಗಿ' ಚಿತ್ರದಿಂದ ಆರಂಭವಾದ ಅವರ ನಟನಾ ಪ್ರಪಂಚ ೧೦,೦೦೦ ಪ್ರದರ್ಶನ ಕಂಡಿತ್ತು. ೧೯೬೦-೧೯೮೩ ರ ಸಮಯದಲ್ಲಿ ಅವರು ಅತ್ಯಂತ ಜನಪ್ರಿಯ ನಟಿಯಾಗಿದ್ದರು.
ಬೆಳಗಾವಿಯಲ್ಲಿ ಕನ್ನಡ ನಾಟಕಗಳ ಪ್ರದರ್ಶನಕ್ಕಾಗಿ ಮೀಸಲಾದ ರಂಗಮಂದಿರವನ್ನು ಸ್ಥಾಪಿಸಿದ್ದಾರೆ. ದಾವಣಗೆರೆಯಲ್ಲಿ ಚಿಂದೋಡಿ ಲೀಲಾ ಕಲಾಕ್ಷೇತ್ರಎಂಬ ರಂಗಮಂದಿರವನ್ನು ಸ್ಥಾಪಿಸಿದ್ದಾರೆ. ಅವರ ಅಂತಿಮ ದರ್ಶನವನ್ನು ಪಡೆಯಲು ಈ ಕಲಾಕ್ಷೇತ್ರದಲ್ಲಿಯೇ ಅವಕಾಶ ಕಲ್ಪಿಸಲಾಗಿತ್ತು.
ಪದ್ಮಶ್ರೀ 'ಚೆಂದೋಡಿ ಲೀಲ' (೭೨), ರವರವರು ಸ್ವಲ್ಪದಿನಗಳಿಂದ ಅಸ್ವಸ್ಥರಾಗಿದ್ದರು. ೨೧, ಗುರುವಾರ, ಜನವರಿ, ೨೦೧೦, ಗುರುವಾರ, 'ಹೃದಯಾಘಾತ'ದಿಂದ ಮರಣಿಸಿದರು. ಮೃತರ ಶರೀರವನ್ನು ಸಕಲ ಮರ್ಯಾದೆಗಳೊಂದಿಗೆ, ೨೩, ಜನವರಿ, ೨೦೧೦ ರಂದು 'ದಾವಣಗೆರೆ'ಯ ಬಳಿ ಸಮಾಧಿಮಾಡಲಾಯಿತು. ಲೀಲಾರವರು ಖ್ಯಾತ ನಟರಾದ, 'ಡಾ. ರಾಜಕುಮಾರ್', 'ಕಲ್ಯಾಣ ಕುಮಾರ್', 'ಬಿ.ಆರ್.ಪಂಥುಲು', 'ಶಂಕರ ಸಿಂಗ್', 'ಪಂಢರಿ ಬಾಯಿ', 'ಪುಟ್ಟಣ್ಣ ಕಣೆಗಾಲ್' ರವರ ಚಿತ್ರದಲ್ಲಿ ಹೆಸರುಮಾಡಿದ್ದರು.