ಚಿತೆಯು ಅಂತ್ಯಕ್ರಿಯೆಯ ವಿಧಿ ಅಥವಾ ಮರಣದಂಡನೆಯ ಭಾಗವಾಗಿ ಶವವನ್ನು ದಹಿಸಲು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಒಂದು ರಚನೆ. ಶವದಹನದ ರೂಪವಾಗಿ, ಶವವನ್ನು ಚಿತೆಯ ಮೇಲೆ ಅಥವಾ ಅದರ ಕೆಳಗೆ ಇಟ್ಟು, ನಂತರ ಬೆಂಕಿ ಹಚ್ಚಲಾಗುತ್ತದೆ.
ಚಿತೆಗಳನ್ನು ಕಟ್ಟಿಗೆ ಬಳಸಿ ನಿಪುಣತೆಯಿಂದ ನಿರ್ಮಿಸಲಾಗುತ್ತದೆ.[೧] ಚಿತೆಯ ರಚನಾಂಶಗಳನ್ನು ಇದ್ದಿಲು ವಿಶ್ಲೇಷಣೆಯ ಬಳಕೆಯ ಮೂಲಕ ನಿರ್ಧರಿಸಬಹುದು. ಇದ್ದಿಲು ವಿಶ್ಲೇಷಣೆಯು ಇಂಧನ ರಚನಾಂಶಗಳು ಮತ್ತು ಅಧ್ಯಯನಿಸಲಾಗುತ್ತಿರುವ ಇದ್ದಿಲಿನ ಸ್ಥಳೀಯ ಅರಣ್ಯವನ್ನು ತಿಳಿಯಲು ನೆರವಾಗುತ್ತದೆ.[೨]
ಸಾಂಪ್ರದಾಯಿಕವಾಗಿ, ಹಿಂದೂ ಮತ್ತು ಸಿಖ್ ಧರ್ಮಗಳಲ್ಲಿ ಚಿತೆಗಳನ್ನು ಮೃತರ ಶವದಹನಕ್ಕಾಗಿ ಬಳಸಲಾಗುತ್ತದೆ ಮತ್ತು ಈ ಅಭ್ಯಾಸವು ಹಲವು ಸಾವಿರ ವರ್ಷಗಳಷ್ಟು ಹಳೆಯದೆಂದು ಕಾಲನಿರ್ಧಾರ ಮಾಡಲಾಗಿದೆ. ಚಿತೆಗಳನ್ನು ವೈಕಿಂಗ್ ಹಾಗೂ ರೋಮನ್ ಸಂಸ್ಕೃತಿಯಲ್ಲಿಯೂ ಬಳಸಲಾಗಿತ್ತು.[೩]