ಚಿತ್ರಕೋಟ್ ಜಲಪಾತ (ಹಿಂದಿ:चित्रकोट जलप्रपात) ಇಂದ್ರಾವತಿ ನದಿಯ ಮೇಲೆ ನಿರ್ಮಿತವಾದ ಒಂದು ನಿಸರ್ಗಿಕ ಜಲಪಾತವಾಗಿದೆ. ಇದು ಭಾರತದ ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯ ಜಗ್ದಾಲ್‍ಪುರ್‌ನ ಪಶ್ಚಿಮಕ್ಕೆ ಸುಮಾರು ೩೮ ಕಿಲೊಮೀಟರ್ (೨೪ ಮೈಲಿ) ದೂರದಲ್ಲಿ ಸ್ಥಿತವಾಗಿದೆ.
ಈ ಜಲಪಾತದ ಎತ್ತರ ಸುಮಾರು ೨೯ ಮೀಟರ್‌ನಷ್ಟಿದೆ (೯೫ ಅಡಿ).[೧][೨] ಇದು ಭಾರತದ ಅತಿ ಅಗಲದ ಜಲಪಾತವಾಗಿದ್ದು ಮಳೆಗಾಲದ ಅವಧಿಯಲ್ಲಿ ಸುಮಾರು ೩೦೦ ಮೀಟರ್ (೯೮೦ ಅಡಿ) ಅಗಲ ಮುಟ್ಟುತ್ತದೆ.[೩] ಇದರ ಅಗಲ ಮತ್ತು ಮಳೆಗಾಲದ ಅವಧಿಯಲ್ಲಿ ಇದರ ವ್ಯಾಪಕ ಕುದುರೆಲಾಳ ಆಕಾರದ ಕಾರಣದಿಂದ, ಇದನ್ನು ಹಲವುವೇಳೆ "ಭಾರತದ ನಯಾಗರ ಜಲಪಾತ" ಎಂದು ಕರೆಯಲಾಗುತ್ತದೆ.[೪]
ಶಿವನಿಗೆ ಸಮರ್ಪಿತವಾದ ಒಂದು ಸಣ್ಣ ಹಿಂದೂ ದೇವಸ್ಥಾನ ಮತ್ತು "ಪಾರ್ವತಿ ಗುಹೆಗಳು" ಎಂದು ಕರೆಯಲ್ಪಡುವ ಹಲವಾರು ನೈಸರ್ಗಿಕವಾಗಿ ಸೃಷ್ಟಿಯಾದ ಸುಂದರ ಗುಹೆಗಳು ಚಿತ್ರಕೋಟ್ ಜಲಪಾತದ ಎಡ ದಂಡೆಯ ಮೇಲೆ ಸ್ಥಿತವಾಗಿವೆ. ಜಗ್ದಾಲ್‍ಪುರ್‌ನ ಬಯಲು ಪ್ರದೇಶದಲ್ಲಿ ಹರಿಯುವಾದ ಇದರ ಅಡ್ಡಾದಿಡ್ಡಿ ಸ್ವರೂಪದ ಕಾರಣದಿಂದ ಈ ನದಿಯು ಜಲಪಾತದ ಪ್ರವಾಹಕ್ಕೆ ಎದುರಾಗಿ ನಿಧಾನವಾಗಿ ಹರಿಯುತ್ತದೆ. ನದಿ ಕಣಿವೆಯ ಈ ಹರವು ಬಹಳ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ.