ಚಿತ್ರಾಂಗದ

ಮಹಾಕಾವ್ಯ ಮಹಾಭಾರತದಲ್ಲಿ, ಚಿತ್ರಾಂಗದನು ಶಂತನು ಮತ್ತು ಸತ್ಯವತಿಯ ಹಿರಿಯ ಮಗ. ಅವನ ತಂದೆಯ ಮರಣದ ನಂತರ, ಆತನು ಹಸ್ತಿನಾಪುರದ ಸಿಂಹಾಸನವನ್ನು ಏರಿದನು, ಆದರೆ ಇದೇ ಹೆಸರಿನ ಗಂಧರ್ವನಿಂದ ಕೊಲ್ಲಲ್ಪಟ್ಟನು. ಚಿತ್ರಾಂಗದನು ಒಬ್ಬ ಮಹಾನ್ ಯೋದ್ಧನಾಗಿದ್ದನು ಮತ್ತು ಎಲ್ಲ ರಾಜರನ್ನು ಸೋಲಿಸಿದನು.