ಚಿರೋಟಿ

ಚಿರೋಟಿ ಪ್ರಧಾನವಾಗಿ ದಕ್ಷಿಣ ಭಾರತದಲ್ಲಿ ಕಾಣುವ ಒಂದು ಸವಿತಿನಿಸು. ಅದನ್ನು ಒಂದು ಡಿಜ಼ರ್ಟ್ ಆಗಿ ಹಬ್ಬ ಅಥವಾ ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ. ಅದನ್ನು ಮೈದಾದ ಕಣಕವನ್ನು ಪದರಗಳುಳ್ಳ ವೃತ್ತಾಕಾರಗಳಲ್ಲಿ ಲಟ್ಟಿಸಿ ಮತ್ತು ನಂತರ ತುಪ್ಪ ಅಥವಾ ರೀಫ಼ೈನ್ಡ್ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ.