ಚೆಕ್ರೊವೊಲು ಸ್ವುರೊ

ಚೆಕ್ರೊವೊಲು ಸ್ವುರೊ

ನಾಗಾಲ್ಯಾಂಡಿನ ಫೆಕ್ ಜಿಲ್ಲೆಯ ಡುಲ್ಹಾಮಿ ಗ್ರಾಮದಲ್ಲಿ ೧೯೮೨ ನವೆಂಬರ್ ೨೧ ರಲ್ಲಿ ಜನಿಸುತ್ತಾರೆ. ಸ್ವಾರೊ ನಾಗಾಲ್ಯಾಂಡಿನ ದಿಮಾಪುರದಲ್ಲಿ ವಾಸಿಸುತ್ತಿದ್ದರು. ಇವರು ಎನ್ ಎ ಪಿ ಯಲ್ಲಿನ ಸಶಸ್ತ್ರ ಪೋಲಿಸ್ ಉಪವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವದ ಅತ್ಯಂತ ಹಳೆಯ ಕ್ರೀಡೆಯಾದ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಒಂದಾದ ಬಿಲ್ಲುಗಾರಿಕೆಗೆ ಕೈ ಹಾಕಿದರು. ಹದಿಮೂರನೇ ವಯಸ್ಸಿನಲ್ಲಿ ಅವರು ಬಿಲ್ಲು ಮತ್ತು ಬಾಣವನ್ನು ಎತ್ತಿಕೊಂಡರು. ಫೆಕ್ ಜಿಲ್ಲೆಯ ಡುಲ್ಹಾಮಿ ಗ್ರಾಮದ ಯುವತಿ ದೇಶದ ಅತ್ಯುತ್ತಮ ಬಿಲ್ಲುಗಾರರಲ್ಲಿ ಒಬ್ಬರಾಗಿ ವಿಕಸನಗೊಂಡಿದ್ದಾರೆ.

ಇವರು ಅಕ್ಕನನ್ನು ಚಿಕ್ಕಂದಿನಿಂದಲು ನೋಡಿಕೊಂಡು ಬೆಳೆದಿದ್ದಾರೆ. ಇವರಿಗೆ ಈ ಕ್ರೀಡೆಯನ್ನು ಕಲಿಯಲು ಅಕ್ಕನೇ ಸ್ಪೂರ್ತಿ ಮತ್ತು ಮಾರ್ಗದರ್ಶಕಿ ಹಾಗೂ ಶಕ್ತಿಯಾಗಿದ್ದರು. ಇವರ ಅಕ್ಕ ವೆಸೊಜೋಲು ಎಸ್ ವಾಡಿಯಾ ಮಾಜಿ ರಾಷ್ಟ್ರೀಯ ಬಿಲ್ಲುಗಾರ್ತಿಯಾಗಿದ್ದರು. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದಾರೆ. ಈ ಸಮಯದಲ್ಲಿ ಅವರು ಅನೇಕ ಪದಕಗಳನ್ನು ಗೆದ್ದಿದ್ದಾರೆ. ೨೦೧೨ ರ ಲಂಡನ್ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ವುರೊ ಭಾರತವನ್ನು ಪ್ರತಿನಿಧಿಸಿದ್ದರು. ೬೪ ವರ್ಷಗಳ ಕಾಯುವಿಕೆಯ ನಂತರ ತ್ರಿವರ್ಣವನ್ನು ರಾಜ್ಯದಿಂದ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸಿದ ಎರಡನೇ ಕ್ರೀಡಾಪಟುವಾದರು.

ಒಬ್ಬ ಭಾರತೀಯ ಬಿಲ್ಲುಗಾರ್ತಿಯಾಗಿದ್ದಾರೆ. ದಕ್ಷಿಣ ಕೊರಿಯಾದ ಬುಸಾನ್ ಮತ್ತು ಕುತಾರ್ ನ ದೋಹಾದಲ್ಲಿ ನಡೆದ ೨೦೦೨ರ ಏಷ್ಯನ್ ಕ್ರೀಡಾಕೂಟ ಮತ್ತು ೨೦೦೬ ರ ಏಷ್ಯನ್ ಕ್ರೀಡಾಕೂಟದಲ್ಲಿ [] ಬಿಲ್ಲುಗಾರಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಇಟಲಿಯ ಟುರಿನ್ ನಲ್ಲಿ ನಡೆದ ೨೦೧೧ ರ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್[]ನಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಸದಸ್ಯರಾಗಿದ್ದರು. ಟುರಿನ್ ನಲ್ಲಿ ನಡೆದ ೨೦೧೧ರ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ೨೦೧೨ರ ಬೇಸಿಗೆ ಒಲಂಪಿಕ್ಸ್ ಗೆ ಮಹಿಳಾ ವೈಯಕ್ತಿಕ ಮತ್ತು ತಂಡದ ಬಿಲ್ಲುಗಾರಿಕೆಯಲ್ಲಿ ಸಾಧನೆ ಮಾಡಿದರು. ಚೆಕ್ರವೊಲು ಸ್ವುರೊ ಅವರ ಸ್ಥಿರತೆ, ಶಿಸ್ತು, ಬದ್ಧತೆ, ಸಮರ್ಪಣೆ ಮತ್ತು ಅವರ ವೃತ್ತಿಯ ಪ್ರಾಮಾಣಿಕತೆಯು ಉದಯೋನ್ಮುಖ ಕ್ರೀಡಾಪಟುಗಳಿಗೆ ಅನುಸರಿಸಲು ಹೊಸ ಹಾದಿಯನ್ನು ಸುಗಮಗೊಳಿಸಿದೆ. ಅವರ ಸಾಧನೆಗಳು ನಾಗಾಲ್ಯಾಂಡ್ ಮತ್ತು ಇತರೆಡೆಗೆ ಅನೇಕ ಕ್ರೀಡಾಪಟುಗಳಿಗೆ ಉತ್ತಮ ಉದಾಹರಣೆಯಾಗಿದೆ.

ಪ್ರಶಸ್ತಿಗಳು

[ಬದಲಾಯಿಸಿ]

ಅರ್ಜುನ ಪ್ರಶಸ್ತಿ (೨೦೧೩)[]

ಸ್ವುರೊ ಬಿಲ್ಲುಗಾರಿಕೆಯ ಸಾಧನೆಗಳು

  • ೨೦೦೧ ೧೨ ನೇ ಏಷ್ಯನ್ ಆರ್ಚರಿ ಚಾಂಪಿಯನ್ ಶಿಪ್ -ಹಾಂಗ್ ಕಾಂಗ್.
  • ೨೦೦೨ ೨ ನೇ ಏಷ್ಯನ್ ಆರ್ಚರಿ ಚಾಂಪಿಯನ್ ಶಿಪ್ - ಚೀನಾ.
  • ೨೦೦೨ ೧೪ ನೇ ಏಷ್ಯನ್ ಗೇಮ್ಸ್ - ಭೂಸಾನ್, ಕೊರಿಯಾ.
  • ೨೦೦೩ ೧೩ ನೇ ಏಷ್ಯನ್ ಆರ್ಚರಿ ಚಾಂಪಿಯನ್ ಶಿಪ್ - ಮ್ಯಾನ್ಮಾರ್.
  • ೨೦೦೫ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ಮ್ಯಾಡ್ರಿಡ್. - ಸ್ಪೇನ್.
  • ೨೦೦೫ ಏಷ್ಯನ್ ಆರ್ಚರಿ ಚಾಂಪಿಯನ್ ಶಿಪ್ - ನವದೆಹಲಿ, ಭಾರತ.
  • ೨೦೦೬ ಕಾಮನ್ ವೆಲ್ತ್ ಆರ್ಚರಿ ಚಾಂಪ್ - ಭಾರತ , ಚಿನ್ನದ ಪದಕ.
  • ೨೦೦೬ ಏಷ್ಯನ್ ಗೇಮ್ಸ್ - ದೋಹಾ, ಕತಾರ್.
  • ೨೦೦೭ ೧೫ನೇ ಏಷ್ಯನ್ ಆರ್ಚರಿ ಚಾಂಪಿಯನ್ ಶಿಪ್ -ಚೀನಾ.
  • ೨೦೦೭ ವಿಶ್ವಕಪ್ ಹಂತ ೪.
  • ೨೦೧೧ ವಿಶ್ವ ಕಪ್ ಹಂತ ೨ , ಅಂಟಲ್ ಟರ್ಕಿ, ಕಂಚು ಪದಕ.
  • ೨೦೦೯ ೧೬ನೇ ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ಡೋವರ್ , ಗ್ರೇಟ್ ಬ್ರಿಟನ್ ಕಂಚು.
  • ೨೦೧೧ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ -ಟುರಿನ್ ,ಇಟಲಿ, ಬೆಳ್ಳಿ.
  • ೨೦೧೨ ಮಹಿಳಾ ವೈಯಕ್ತಿಕ ಮತ್ತು ತಂಡದ ಬಿಲ್ಲುಗಾರಿಕೆಗಲ್ಲಿ ಬೇಸಿಗೆ ಒಲಂಪಿಕ್ಸ್.

ಹೀಗೆ ಅವರು ಅನೇಕ ಪಂದ್ಯಗಳಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://extranet.worldarchery.org/documents/index.php/Events/World_Ranking/16_BANGKOK_ASIA-CUP/InvitationPackage.pdf
  2. "ಆರ್ಕೈವ್ ನಕಲು". Archived from the original on 2020-01-26. Retrieved 2020-01-26.
  3. https://web.archive.org/web/20131004215725/http://mittalchampionstrust.com/archery/chekrovolu-swuro/