![]() | ||||||||||||||||||||||||||||||||||||||||||||||||||||||||||||||||||
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಚೇತೇಶ್ವರ ಅರವಿಂದ ಪೂಜಾರ | |||||||||||||||||||||||||||||||||||||||||||||||||||||||||||||||||
ಹುಟ್ಟು | ರಾಜ್‌ಕೋಟ್, ಗುಜರಾತ್, ಭಾರತ | ೨೫ ಜನವರಿ ೧೯೮೮|||||||||||||||||||||||||||||||||||||||||||||||||||||||||||||||||
ಎತ್ತರ | ೧೮೦ cm | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಲೆಗ್ ಬ್ರೇಕ್ | |||||||||||||||||||||||||||||||||||||||||||||||||||||||||||||||||
ಪಾತ್ರ | Top-order batter | |||||||||||||||||||||||||||||||||||||||||||||||||||||||||||||||||
ಸಂಬಂಧಗಳು | ಅರವಿಂದ ಪೂಜಾರ (ತಂದೆ) | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೬೬) | ೯ ಅಕ್ಟೋಬರ್ ೨೦೧೦ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೨೨ ಡಿಸೆಂಬರ್ ೨೦೨೨ v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೯೮) | ೧ ಆಗಸ್ಟ್ ೨೦೧೩ v ಝಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೧೯ ಜೂನ್ ೨೦೧೪ v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೧೬ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೦೫ರಿಂದ | ಸೌರಾಷ್ಟ್ರ ಕ್ರಿಕೆಟ್ ತಂಡ (squad no. ೧೫) | |||||||||||||||||||||||||||||||||||||||||||||||||||||||||||||||||
೨೦೧೦ | ಕೊಲ್ಕತಾ ನೈಟ್ ರೈಡರ್ಸ್ (squad no. ೨೫) | |||||||||||||||||||||||||||||||||||||||||||||||||||||||||||||||||
೨೦೧೧-೨೦೧೩ | ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೩) | |||||||||||||||||||||||||||||||||||||||||||||||||||||||||||||||||
೨೦೧೪ | ಕಿಂಗ್ಸ್ ೧೧ ಪಂಜಾಬ್ (squad no. ೨೬೬) | |||||||||||||||||||||||||||||||||||||||||||||||||||||||||||||||||
೨೦೧೪ | ಡರ್ಬಿಶೈರ್ ಕೌಂಟಿ ಕ್ರಿಕೆಟ್ ಕ್ಲಬ್, ಇಂಗ್ಲೆಂಡ್ (squad no. ೯) | |||||||||||||||||||||||||||||||||||||||||||||||||||||||||||||||||
೨೦೧೫ | ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್, ಇಂಗ್ಲೆಂಡ್ (squad no. ೭೨) | |||||||||||||||||||||||||||||||||||||||||||||||||||||||||||||||||
೨೦೧೭ | ನಾಟಿಂಗ್ಹ್ಯಾಮ್ ಕೌಂಟಿ ಕ್ರಿಕೆಟ್ ಕ್ಲಬ್, ಇಂಗ್ಲೆಂಡ್ (squad no. ೩) | |||||||||||||||||||||||||||||||||||||||||||||||||||||||||||||||||
೨೦೧೮ | ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್, ಇಂಗ್ಲೆಂಡ್ (squad no. ೨೭) | |||||||||||||||||||||||||||||||||||||||||||||||||||||||||||||||||
೨೦೨೧ | ಚೆನ್ನೈ ಸೂಪರ್ ಕಿಂಗ್ಸ್ (squad no. ೨೫) | |||||||||||||||||||||||||||||||||||||||||||||||||||||||||||||||||
೨೦೨೨ | ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್, ಇಂಗ್ಲೆಂಡ್ (squad no. ೮) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: [೧], ೨೪ ಡಿಸೆಂಬರ್ ೨೦೨೨ |
ಚೇತೇಶ್ವರ ಅರವಿಂದ್ ಪೂಜಾರ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಲೆಗ್ ಬ್ರೇಕ್ ಬೌಲರ್. ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡದ ಪರವಾಗಿ ಆಡುತ್ತಾರೆ.
ಪೂಜಾರರವರು ಜನವರಿ ೨೫,೧೯೮೮ರಂದು ಗುಜರಾತ್ನ ರಾಜಕೋಟ್ನಲ್ಲಿ ಅರವಿಂದ ಪುಜಾರ ಹಾಗು ರೀಮಾ ಪುಜಾರ ದಂಪತಿಗೆ ಜನಿಸಿದರು.ಇವರು ತಮ್ಮ ೧೪ರ ವಯೋಮಿತಿ ತಂಡದಲ್ಲಿ ತ್ರಿಶತಕ ಬಾರಿಸಿದ್ದರು. ನಂತರ ೧೯ರ ವಯೋಮಿತಿ ತಂಡದಲ್ಲಿ ಆಡುವಾಗ ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು.[೧]
ಮಾರ್ಚ್ ೧೨, ೨೦೧೦ರಂದು ಮುಂಬೈನ ಡಾ. ಡಿ ವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಮೊದಲನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಐಪಿಎಲ್‍ನಲ್ಲಿ ೩೯೦ ರನ್‍ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಯಾವುದೇ ತಂಡಕ್ಕೆ ಆಡುತ್ತಿಲ್ಲ. ಹಾಗಾಗಿ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಯಾಕ್‍ಶೈರ್ಸ್ ತಂಡಕ್ಕೆ ಆಡುತ್ತಾರೆ. [೨][೩][೪]
ಅಕ್ಟೋಬರ್ ೦೨, ೨೦೧೦ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಪುಜಾರರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ೦೭ ಬೌಂಡರಿ ಸಹಿತ ಅರ್ಧ ಶತಕ ಬಾರಿಸಿದರು. ಆಗಸ್ಟ್ ೦೧, ೨೦೧೩ರಲ್ಲಿ ಜಿಂಬಾಬ್ವೆಯ ಬುಲಾವಯ್ಯೋದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೫][೬]